Health Tips : ಕ್ಯಾನ್ಸರ್ ಆರಂಭಿಕ ಲಕ್ಷಣವಿದು.. ಸುಲಭವಾಗಿ ಪತ್ತೆ ಮಾಡಿ

ಕ್ಯಾನ್ಸರ್ ಅಪಾಯಕಾರಿ ರೋಗ. ಅದನ್ನು ನಿರ್ಲಕ್ಷ್ಯ ಮಾಡಿದ್ರೆ ಸಾವು ನಿಶ್ಚಿತ. ಹಾಗಂತ ಅದ್ರ ಲಕ್ಷಣ ಪತ್ತೆ ಮಾಡೋದು ಸುಲಭವಲ್ಲ. ಆದ್ರೆ ಕೆಲ ಕ್ಯಾನ್ಸರ್ ಲಕ್ಷಣವನ್ನು ನೀವು ಆರಂಭದಲ್ಲಿ ಸುಲಭವಾಗಿ ಪತ್ತೆ ಮಾಡ್ಬಹುದು. ಅದು ಹೇಗೆ ಎಂಬುದರ ವಿವರ ಇಲ್ಲಿದೆ.
 

Dr Told Easy Way How To Spot The Early Warning Signs Of Cancer roo

ಕ್ಯಾನ್ಸರ್ ಗಂಭೀರ ಖಾಯಿಲೆಗಳಲ್ಲಿ ಒಂದು. ಪ್ರಾರಂಭದಲ್ಲಿ ಅದು ಸುಲಭವಾಗಿ ಪತ್ತೆ ಆಗೋದಿಲ್ಲ. ಕೊನೆ ಹಂತದಲ್ಲಿ ಅದರ ಲಕ್ಷಣಗಳು ಕಾಣಿಸಿಕೊಳ್ಳುವ ಮೂಲಕ ಸಾವಿಗೆ ಕಾರಣವಾಗುತ್ತದೆ.  ಕ್ಯಾನ್ಸರ್‌  ತಡೆಗಟ್ಟಲು ಮತ್ತು ಉತ್ತಮ ಚಿಕಿತ್ಸೆಗಾಗಿ ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಅತ್ಯಗತ್ಯವಿದೆ. 

ಕ್ಯಾನ್ಸರ್ (Cancer) ನ ಕೆಲ ಲಕ್ಷಣಗಳು ಸಾಮಾನ್ಯವಾಗಿರುತ್ತದೆ. ಜನರು ಅದನ್ನು ಗಂಭೀರವಾಗಿ ಪರಿಗಣಿಸೋದಿಲ್ಲ.  ಅದನ್ನು ನಿರ್ಲಕ್ಷ್ಯಿಸುವ ಕಾರಣ ಸಮಸ್ಯೆ ದೊಡ್ಡದಾಗುತ್ತದೆ. ಕ್ಯಾನ್ಸರ್ ಆರಂಭದಲ್ಲಿ ಬಹುತೇಕ ಒಂದು ಲಕ್ಷಣ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಅದ್ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.

ಹಾರ್ಟ್ ಅಟ್ಯಾಕ್ ಸಾವಿನ ಪ್ರಮಾಣ ತಗ್ಗಿಸಲು ಹೊಸ ಯೋಜನೆ : ಏನಿದು AED ಟ್ರೀಟ್ಮೆಂಟ್..?

ಕ್ಯಾನ್ಸರ್ ನ ಮೊದಲ ಲಕ್ಷಣ ಯಾವುದು :  ಕ್ಯಾನ್ಸರ್ ನಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕು, ಆರಂಭದಲ್ಲಿಯೇ ಅದನ್ನು ಪತ್ತೆ ಮಾಡ್ಬೇಕು ಎಂದಾದ್ರೆ ನೀವು ಬೆಳಿಗ್ಗೆ ಎದ್ದಾಗ ನಿಮ್ಮ ತಲೆದಿಂಬು (pillow) ಮತ್ತು ಹಾಸಿಗೆಯನ್ನು ಚೆಕ್ ಮಾಡಿ ಎನ್ನುತ್ತಾರೆ ತಜ್ಞರು. ಒಂದ್ವೇಳೆ ತಲೆ ದಿಂಬಿನ ಮೇಲೆ ಅಥವಾ ಹಾಸಿಗೆ ಮೇಲೆ ಬೆವರಿ (Sweat) ನ ಕುರುಹುಗಳು ಕಂಡು ಬಂದಲ್ಲಿ ಇದು ಕ್ಯಾನ್ಸರ್ ಲಕ್ಷಣವಾಗಿರಬಹುದು. ಪ್ರತಿ ನಿತ್ಯ ನಿಮ್ಮ ತಲೆ ದಿಂಬು, ಹಾಸಿಗೆ ಒದ್ದೆಯಾಗಿದ್ರೆ, ಬೆವರಿನ ಕುರುಹು ಇದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ.  

ರಾತ್ರಿ ಬೆವರುವುದು ಈ ಕ್ಯಾನ್ಸರ್‌ನ ಲಕ್ಷಣ : ರಾತ್ರಿ ನಿದ್ರೆಯಲ್ಲಿ ಅನೇಕರು ಬೆವರುತ್ತಾರೆ. ತಜ್ಞರ ಪ್ರಕಾರ ಇದು ಕೆಲ ಕ್ಯಾನ್ಸರ್ ಲಕ್ಷಣವಾಗಿದೆ. ಕಾರ್ಸಿನಾಯ್ಡ್ ಗೆಡ್ಡೆಗಳು, ಲ್ಯುಕೇಮಿಯಾ, ಲಿಂಫೋಮಾ, ಮೂಳೆ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಮತ್ತು ಮೆಸೊಥೆಲಿಯೋಮಾ ಕ್ಯಾನ್ಸರ್ ಆರಂಭದಲ್ಲಿ ಈ ಬೆವರಿನ ಲಕ್ಷಣ ಕಾಣಿಸಿಕೊಳ್ಳುತ್ತದೆ. 

Health Tips: ಡಯಾಬಿಟಿಸ್ ರೋಗಿಗಳು ಸಕ್ಕರೆಯ ಬದಲು ಬೆಲ್ಲ ತಿನ್ನಬಹುದಾ?

ಕ್ಯಾನ್ಸರ್ ಹಾಗೂ ಬೆವರಿಗೆ ಇರುವ ಸಂಬಂಧವೇನು? :  ಕ್ಯಾನ್ಸರ್ ಆರಂಭದಲ್ಲಿ ಏಕೆ ಬೆವರು ಕಾಣಿಸಿಕೊಳ್ಳಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ವೈದ್ಯರು ಉತ್ತರ ನೀಡಿದ್ದಾರೆ. ದೇಹವು ಕ್ಯಾನ್ಸರ್ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿರುತ್ತದೆ. ಆಗ ಬೆವರು ಕಾಣಿಸಿಕೊಳ್ಳುತ್ತದೆ. ಹಾರ್ಮೋನ್ ಮಟ್ಟದಲ್ಲಿ ಆಗುವ ಬದಲಾವಣೆಗಳು ಸಹ ದೇಹ ಬೆವರಲು ಒಂದು ಕಾರಣವಾಗಿರಬಹುದು. ಕ್ಯಾನ್ಸರ್ ದೇವನ್ನು ಬಿಸಿಗೊಳಿಸುತ್ತದೆ. ಇದ್ರ ವಿರುದ್ಧ ಹೋರಾಡಲು ಪ್ರಯತ್ನಿಸುವ ನಮ್ಮ ದೇಹ ತಣ್ಣಗಾಗುವ ಪ್ರಯತ್ನ ಮಾಡುತ್ತದೆ. ಆಗ ನಮ್ಮ ದೇಹವು ಅತಿಯಾಗಿ ಬೆವರುತ್ತದೆ.  ಕೀಮೋಥೆರಪಿ, ಹಾರ್ಮೋನ್  ಔಷಧಿಗಳು ಮತ್ತು ಮಾರ್ಫಿನ್‌ನಂತಹ ಕ್ಯಾನ್ಸರ್ ಚಿಕಿತ್ಸೆಗಳು ರಾತ್ರಿ ಬೆವರುವಿಕೆಗೆ ಕಾರಣವಾಗಬಹುದು.

ಕ್ಯಾನ್ಸರ್ ನಿಂದ ಮಾತ್ರವಲ್ಲ ಈ ಕಾರಣಕ್ಕೂ ರಾತ್ರಿ ಬೆವರುತ್ತೆ ದೇಹ : ನಿಮ್ಮ ದೇಹ ರಾತ್ರಿ ಬೆವರುತ್ತಿದ್ದರೆ ಅದಕ್ಕೆ ಕ್ಯಾನ್ಸರ್ ಮಾತ್ರ ಕಾರಣವಾಗಿರಬೇಕೆಂದೇನಿಲ್ಲ. ಬೇರೆ ಕಾರಣಕ್ಕೂ ದೇಹ ಬೆವರುತ್ತದೆ. ತಜ್ಞರ ಪ್ರಕಾರ, ಪೆರಿಮೆನೋಪಾಸ್ ಮತ್ತು ಮೆನೋಪಾಸ್ ಸಮಯದಲ್ಲಿ ಹಾರ್ಮೋನ್ ಮಟ್ಟದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆಗ ದೇಹ ಬೆವರಲು ಶುರುವಾಗುತ್ತದೆ. ಗರ್ಭಿಣಿಯರಿಗೆ ಕೂಡ ಈ ಬೆವರಿನ ಸಮಸ್ಯೆ ಕಾಡೋದಿದೆ. ಟಿಬಿಯಂತಹ ಕೆಲವು ಬ್ಯಾಕ್ಟೀರಿಯಾದ ಸೋಂಕುಗಳು, ಕಡಿಮೆ ರಕ್ತದೊತ್ತಡ ಅಥವಾ ಹೈಪೊಗ್ಲಿಸಿಮಿಯಾ ಸಂದರ್ಭದಲ್ಲೂ ಈ ಸಮಸ್ಯೆ ಕಾಡುತ್ತದೆ.  ಹೈಪರ್ ಥೈರಾಯ್ಡ್ ಸಮಸ್ಯೆ ನಿಮಗಿದ್ದಲ್ಲಿ ನೀವು ರಾತ್ರಿ ಬೆವರಬಹುದು. ಕೆಲವು ಮಾನಸಿಕ ಒತ್ತಡ, ಉದ್ವೇಗ, ಚಿಂತೆಗೂ ಬೆವರುವುದಿದೆ.  

ಬೆವರುವ ಸಮಸ್ಯೆ ಕಾಣಿಸಿಕೊಂಡ್ರೆ ಏನು ಮಾಡ್ಬೇಕು? :  ರಾತ್ರಿ ಮಲಗಿದಾಗ ನೀವು ಅತಿಯಾಗಿ ಬೆವರುತ್ತಿದ್ದರೆ, ನಿಮಗೆ ಕ್ಯಾನ್ಸರ್ ಇದೆ ಎಂಬ ನಿರ್ಣಯಕ್ಕೆ ಬರಬೇಡಿ. ನಿಮ್ಮಲ್ಲಿ ಉಂಟಾಗುವ ಭಯ ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡ್ಬಹುದು. ಮೊದಲು ವೈದ್ಯರನ್ನು ಭೇಟಿಯಾಗಿ. ಯಾವ ಕಾರಣಕ್ಕೆ ರಾತ್ರಿ ನೀವು ಬೆವರುತ್ತಿದ್ದೀರಿ ಎಂಬುದನ್ನು ಪತ್ತೆ ಮಾಡಿ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಿರಿ.  
 

Latest Videos
Follow Us:
Download App:
  • android
  • ios