15 ದಿನಕ್ಕೊಮ್ಮೆ ಉಪವಾಸ ಮಾಡಿದರೆ ಆಗುವ ಲಾಭಗಳನ್ನು ರಿವೀಲ್ ಮಾಡಿದ ಡಾ. ಗೌರಿ!

ಆಗಾಗ ಉಪವಾಸ ಮಾಡುವುದರಿಂದ ಆಗುವ ಲಾಭಗಳನ್ನು ಹಂಚಿಕೊಂಡ ಡಾಕ್ಟರ್ ಗೌರಿ. ಗರಕೆ ಹುಲ್ಲು ಮತ್ತು ಅಗಸೆ ಸೊಪ್ಪು ತುಂಬಾನೇ ಮುಖ್ಯ..... 
 

Dr. Gowri Subramanya reveals about the health benefit of fasting every 15 days vcs

ಫಾಸ್ಟ್‌ ಫಾರ್ವರ್ಡ್‌ ಪ್ರಪಂಚದಲ್ಲಿ ಪ್ರತಿಯೊಬ್ಬರು ಶಾರ್ಟ್‌ ಕಟ್ ಹುಡುಕಿಕೊಳ್ಳುತ್ತಾರೆ. ಬ್ಯುಸಿ ಇದ್ದೀನಿ ಎಂದು 10-15 ನಿಮಿಷಗಳಲ್ಲಿ ತಯಾರಿ ಆಗುವ ಮಾಡರ್ನ್‌ ಆಹಾರಗಳನ್ನು ಸೇವಿಸಿ ಖುಷಿ ಪಡುತ್ತಿದ್ದಾರೆ ಆದರೆ ಇದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಹಿಂದಿನ ಕಾಲದಲ್ಲಿ ಮನೆ ಊಟ ಸೇವಿಸುತ್ತಿದ್ದರೂ 15 ದಿನಕ್ಕೊಮ್ಮೆ ಏಕಾದಶಿ ಹೆಸರಿನಲ್ಲಿ ಉಪವಾಸ ಮಾಡುತ್ತಿದ್ದರು. ಇದರಿಂದ ಆಗುತ್ತಿದ್ದ ಉಪಯೋಗಳು ಏನು? ಯಾಕೆ ನಮ್ಮ ದೇಹಕ್ಕೆ ಉಪವಾಸ ತುಂಬಾ ಮುಖ್ಯ ಎಂದು ಇಲ್ಲಿ ಹೇಳಲಾಗಿದೆ.  

'ಪ್ರತಿಯೊಬ್ಬರು 15 ದಿನಕ್ಕೊಮ್ಮೆ ಉಪವಾಸ ಮಾಡಬೇಕು. ನಮ್ಮ ಪದ್ಧತಿಯಲ್ಲಿ ಏಕಾದಶಿ ಎಂದು ಮಾಡಿಟ್ಟಿದ್ದಾರೆ ಇದನ್ನು ಪಾಲಿಸಿದರೆ ನಮಗೆ ಪುಣ್ಯ ಲಭಿಸುತ್ತದೆ ಮೋಕ್ಷಕ್ಕೆ ದಾರಿ ಆಗುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಈ ರೀತಿ ಯಾಕೆ ಹೇಳಿದ್ದರು....ಏಕೆಂದರೆ ನಾವು ಇರುವಷ್ಟು ದಿನ ಆರೋಗ್ಯವಾಗಿ ಇರಬೇಕು ಎಂದು. ಪ್ರತಿ ದಿನ ಕೆಲಸ ಮಾಡುತ್ತೀವಿ ಹೀಗಾಗಿ ವಾರಕ್ಕೆ ಒಂದು ದಿನ ರಜೆ ಬೇಕೇ ಬೇಕು ಆದರೆ ನಮ್ಮೊಳಗೆ ಇರುವ ಹಾರ್ಟ್, ಮೆದುಳು ಯಾವತ್ತಾದರೂ ರೆಸ್ಟ್‌ ಕೇಳಿದ್ಯಾ? ನಾವು ಹುಟ್ಟಿದ ನಿಮಿಷದಿಂದ ಸಾಯುವವರೆಗೂ ದೇಹದ ಒಳಗೆ ಇರುವ ಅಂಗಾಂಗಗಳು ಅದರ ಕೆಲಸವನ್ನು ನಾನ್ ಸ್ಟಾಪ್ ಮಾಡುತ್ತಿರುತ್ತದೆ. ಆದರೆ ಜೀರ್ಣಕ್ರಿಯೆಗೆ ಬ್ರೇಕ್ ಕೊಡಬೇಕು...ಬ್ರೇಕ್ ಕೊಡುವುದರಿಂದ ಆಗಲೇ ಉತ್ಪತ್ತಿ  ಆಗಿ ಶೇಖರಣೆ ಆಗಿರುವ ಕೊಬ್ಬು ಅದನ್ನು ಅದೇ ಉಪಯೋಗಿಸಿಕೊಂಡು ಮತ್ತಷ್ಟು ಕೆಲಸ ಮಾಡಲು ಶುರು ಮಾಡಿ ಕರಗಲು ಶುರು ಮಾಡುತ್ತದೆ' ಎಂದು ಜಸ್ಟ್‌ ಕ್ಯೂರಿಯಸ್‌ ರ್ಯಾಪಿಡ್ ರಶ್ಮಿ ಕಾರ್ಯಕ್ರಮದಲ್ಲಿ ಡಾಕ್ಟರ್ ಗೌರಿ ಸುಬ್ರಹ್ಮಣ್ಯ ಮಾತನಾಡಿದ್ದಾರೆ.

ತಾವರೆ ಬೀಜದ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ, ತೂಕ ಇಳಿಕೆಗೆ ಬೆಸ್ಟ್‌

'ಕೊಬ್ಬು ಕರಗುವುದರಿಂದ ಶಕ್ತಿ ಉತ್ಪತ್ತಿಯಾಗುತ್ತದೆ. ನಮ್ಮ ಪ್ರಕೃತಿಯಲ್ಲಿ ಇರುವ ಪ್ರತಿ ಸಸ್ಯ ಎಲ್ಲಾ ರೀತಿ ಔಷದಿಗಳನ್ನು ಹೊಂದಿರುತ್ತದೆ. ಪ್ರತಿಯೊಂದನ್ನು ಒಂದೊಂದು ದಿನ ತಿನ್ನಬೇಕು...ಉದಾಹರಣೆಗೆ ಗರಿಕೆ ಹುಲ್ಲಿನಲ್ಲಿ ಸುಮಾರು 100 ಕಾಯಿಲೆಗಳನ್ನು ವಾಸಿ ಮಾಡಬಹುದು, ಒಂದು ದರ್ಬೆ ಹುಲ್ಲಿನಿಂದ ಸಾಕಷ್ಟು ಸಮಸ್ಯೆಗನ್ನು ಸರಿ ಮಾಡಬಹುದು. ಏಕಾದಶಿ ಮುಗಿಸಿದ ಮಾರನೆ ದಿನ ಅಗಸೆ ಸೊಪ್ಪು ತಿನ್ನುತ್ತಿದ್ದರು ಏಕೆಂದರೆ ಒಂದು ದಿನದ ಬಿಟ್ಟು ಹೆಚ್ಚಾಗಿ ತಿನ್ನಲು ಶುರು ಮಾಡಿದಾಗ ವಾಯು ಉತ್ಪತ್ತಿ ಆಗುತ್ತದೆ ಅಲ್ಲದೆ ಜೀರ್ಣಕ್ರಿಯೆಗೆ ಸಮಸ್ಯೆ ಆಗುತ್ತದೆ' ಎಂದು ಡಾಕ್ಟರ್ ಗೌರಿ ಹೇಳಿದ್ದಾರೆ. 

ಉಪವಾಸ ಮಾಡ್ತಿದ್ರೂ ಕೊಬ್ಬು ಹೆಚ್ಚಾಗ್ತಿದ್ರೆ ಈ 7 ಪಾನೀಯ ಕುಡಿಯಿರಿ!

ಡಾ. ಗೌರಿ ಮಾತನಾಡಿರುವ ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಲು ನಿಮ್ಮ ಟಿಪ್ಸ್‌ ಸಹಾಯವಾಗಲಿದೆ ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios