Lifestyle
ಮಧ್ಯಂತರ ಉಪವಾಸದಲ್ಲಿ ಸುಲಭವಾಗಿ ಕೊಬ್ಬು ಕಡಿಮೆ ಮಾಡಬಹುದು. ಇದಕ್ಕಾಗಿ ಯಾವ ಪಾನೀಯಗಳನ್ನು ಸೇವಿಸಬೇಕು?
ಗ್ರೀನ್ ಟೀ ಸೇವಿಸುವುದರಿಂದ ನೀವು ಸುಲಭವಾಗಿ ಕೊಬ್ಬು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿರುವ ಕ್ಯಾಟೆಚಿನ್ ಮತ್ತು ಕೆಫೀನ್ ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಹಾಲು ಮತ್ತು ಸಕ್ಕರೆ ಇಲ್ಲದ ಬ್ಲಾಕ್ ಕಾಫಿ ಸೇವಿಸುವುದರಿಂದಲೂ ನೀವು ಕೊಬ್ಬು ಕಡಿಮೆ ಮಾಡಿಕೊಳ್ಳಬಹುದು. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ.
ನಿಂಬೆ ರಸದಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿರುವ ವಿಷ ದೂರವಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಶುಂಠಿ, ತುಳಸಿ, ಕ್ಯಾಮೊಮೈಲ್ ನಂತಹ ಹರ್ಬಲ್ ಟೀಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಒತ್ತಡ ಕಡಿಮೆಯಾಗಿ ನೀವು ಸುಲಭವಾಗಿ ಬರುವು ಕಡಿಮೆ ಮಾಡಿಕೊಳ್ಳಬಹುದು.
ಎಳನೀರಿನಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಎಲೆಕ್ಟ್ರೋಲೈಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ನಿಮ್ಮ ಹಸಿವನ್ನು ಕಡಿಮೆ ಮಾಡಿ ಅತಿಯಾಗಿ ತಿನ್ನುವುದನ್ನು ತಡೆದು ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ.