ಹಲ್ಲುನೋವಿಗೆ ಮನೆ 7 ಮನೆಮದ್ದುಗಳು; ತಕ್ಷಣ ಸಿಗಲಿದೆ ಪರಿಹಾರ!
ಹಲ್ಲುನೋವು ಹಲವು ಕಾರಣಗಳಿಂದ ಬರಬಹುದು. ನಿರಂತರ ನೋವು ಇದ್ದರೆ ವೈದ್ಯರನ್ನು ಭೇಟಿ ಮಾಡಿ. ಹಲ್ಲುನೋವು ನಿವಾರಣೆಗೆ ಕೆಲವು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ.

ಹಲ್ಲುನೋವು ಹಲವು ಕಾರಣಗಳಿಂದ ಬರಬಹುದು. ನಿರಂತರ ನೋವು ಇದ್ದರೆ ವೈದ್ಯರನ್ನು ಭೇಟಿ ಮಾಡಿ. ಹಲ್ಲುನೋವು ನಿವಾರಣೆಗೆ ಕೆಲವು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ. ಈ ಮನೆ ಮದ್ದುಗಳನ್ನು ಉಪಯೋಗಿಸುವ ಮೂಲಕ ನೀವು ತಕ್ಷಣಕ್ಕೆ ಹಲ್ಲು ನೋವಿನಿಂದ ಉಪಶಮನ ಪಡೆಯಬಹುದು.
ಜನರು ದೇಹದ ಆರೈಕೆ ಮಾಡ್ಕೋತಾರೆ ಆದರೆ ಹಲ್ಲುಗಳನ್ನ ಮರೀತಾರೆ. ಅವುಗಳನ್ನ ನಿರ್ಲಕ್ಷ್ಯ ಮಾಡಿದ್ರೆ ಹಲ್ಲುಗಳು ಜುಮ್ಮೆನಿಸೋಕೆ ಹಾಗೂ ತಡೆಯಲಾರದ ನೋವು ಬರೋಕೆ ಶುರುವಾಗುತ್ತದೆ. ಮಕ್ಕಳಿಗೆ ಅಥವಾ ನಿಮಗೆ ಹಲ್ಲುನೋವು ಇದ್ರೆ ವೈದ್ಯರನ್ನ ಭೇಟಿ ಮಾಡಿ. ಅದಕ್ಕಿಂತ ಮೊದಲು ಈ ಮನೆಮದ್ದುಗಳನ್ನ ಪ್ರಯತ್ನಿಸಿ. ಇವುಗಳಿಂದ ತತಕ್ಷಣ ನೋವು ಕಡಿಮೆಯಾಗುತ್ತದೆ.
1. ಉಪ್ಪು ನೀರು: ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದ್ರೆ ಹಲ್ಲುನೋವು ಕಡಿಮೆಯಾಗುತ್ತೆ. ಉಪ್ಪಿನ ಉರಿಯೂತ ನಿವಾರಕ ಗುಣಗಳು ಹಲ್ಲುನೋವಿಗೆ ಆರಾಮ ನೀಡುತ್ತೆ. ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ.
2. ಐಸ್ ಮಸಾಜ್: ನಿಮ್ಮ ಬಾಯಿಯಲ್ಲಿ ನೋವು ಕಾಣಿಸಿಕೊಂಡಿರುವ ಹಲ್ಲಿನ ಭಾಗದಲ್ಲಿ ಐಸ್ ಹಚ್ಚಿದರೆ ನಿಮಗೆ ಸ್ವಲ್ಪ ಆರಾಮವೆನಿಸುತ್ತದೆ. ಸುಮಾರು 15-20 ನಿಮಿಷಗಳ ಕಾಲ ಇಟ್ಟು ಮಸಾಜ್ ಮಾಡಿದರೆ ತಾತ್ಕಾಲಿಕ ಉಪಶಮನ ಸಿಗುತ್ತದೆ.
3. ಅರಿಶಿನ: ನೋವಿರೋ ಹಲ್ಲಿಗೆ ಅರಿಶಿನದ ನೀರು ಹಚ್ಚಿದ್ರೆ ಆರಾಮ ಸಿಗುತ್ತೆ. ಅರಿಶಿನದ ಉರಿಯೂತ ನಿವಾರಕ ಗುಣಗಳು ಇದಕ್ಕೆ ಸಹಾಯ ಮಾಡುತ್ತದೆ.
4. ಟೀ ಬ್ಯಾಗ್: ತಣ್ಣನೆಯ ಟೀ ಬ್ಯಾಗ್ (ಗ್ರೀನ್ ಟೀ ಮಾಡಲು ಉಪಯೋಗಿಸುವ ಟೀ ಬ್ಯಾಗ್) ಹಚ್ಚಿದರೆ ಹಲ್ಲುನೋವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.
5. ಲವಂಗ: ಹಲ್ಲುನೋವಿಗೆ ಲವಂಗವನ್ನು ಸ್ವಲ್ಪ ಹೊತ್ತು ಒತ್ತರಿಸಿ ಇಟ್ಟುಕೊಂಡರೆ ನೋವು ಕಡಿಮೆಯಾಗುತ್ತದೆ.
5. ಜೇನುತುಪ್ಪ: ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ತುಂಬಿರೋ ಜೇನುತುಪ್ಪವನ್ನ ಬಿಸಿ ನೀರಿಗೆ ಹಾಕಿ ಬಾಯಿ ಮುಕ್ಕಳಿಸಿದ್ರೆ ಹಲ್ಲುನೋವು ಕಡಿಮೆಯಾಗುತ್ತದೆ.
7. ಪೇರಲೆ ಎಲೆಗಳು: ಪೇರಲೆ ಎಲೆಗಳನ್ನ ಅಗಿದ್ರೆ ಹಲ್ಲುನೋವು ಕಡಿಮೆಯಾಗುತ್ತದೆ.