Asianet Suvarna News Asianet Suvarna News

Health Tips: ರನ್ನಿಂಗ್ ಮಾಡಿದ ತಕ್ಷಣ ಮಾಡ್ಬೇಡಿ ಈ ಕೆಲಸ

ಇಡೀ ದೇಹಕ್ಕೆ ವ್ಯಾಯಾಮ ನೀಡುವ ಕೆಲಸವನ್ನು ರನ್ನಿಂಗ್ ಮಾಡುತ್ತದೆ. ರನ್ನಿಂಗ್ ನಿಂದ ಅನೇಕ ಪ್ರಯೋಜನವಿದೆ. ಆದ್ರೆ ಇದ್ರ ಪ್ರಯೋಜನ ಸಂಪೂರ್ಣ ನಮಗೆ ಸಿಗ್ಬೇಕೆಂದ್ರೆ ಓಟ ಮುಗಿಸಿ ಮನೆಗೆ ಬಂದ ತಕ್ಷಣ ಕೆಲ ಕೆಲಸ ಮಾಡಬಾರದು.
 

Dont Make These Mistakes Even After Running
Author
Bangalore, First Published Jun 18, 2022, 4:07 PM IST

ಇತ್ತೀಚಿನ ದಿನಗಳಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು, ಆರೋಗ್ಯ (Health ) ಕಾಪಾಡಿಕೊಳ್ಳಲು ಜನರು ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಕೆಲವರು ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ವ್ಯಾಯಾಮ (Exercise), ಜಿಮ್, ಯೋಗ ಸೇರಿದಂತೆ ಅನೇಕ ರೀತಿಯ ವರ್ಕ್ ಔಟ್ (Work out) ಮಾಡ್ತಾರೆ. ಇಡೀ ದೇಹಕ್ಕೆ ವ್ಯಾಯಾಮ ಬೇಕು ಎನ್ನುವವರು ರನ್ನಿಂಗ್ ಆಯ್ಕೆ ಮಾಡಿಕೊಳ್ಳಬಹುದು. ರನ್ನಿಂಗ್ ನಿಮ್ಮ ದೇಹಕ್ಕೆ ಶಕ್ತಿ ತುಂಬುವುದಲ್ಲದೆ, ದೇಹಕ್ಕೆ ಆಕಾರ ನೀಡುತ್ತದೆ. ರನ್ನಿಂಗ್ ಮೂಲಕ ನೀವು ಸುಲಭವಾಗಿ ಕ್ಯಾಲೊರಿ ಬರ್ನ್ ಮಾಡಬಹುದು. ಆದರೆ ಕೆಲವರು ಪ್ರತಿ ದಿನ ರನ್ನಿಂಗ್ ಮಾಡ್ತಿರುತ್ತಾರೆ. ಆದ್ರೆ ಎಷ್ಟೇ ಬೆವರಿಳಿದ್ರೂ ತೂಕ ಕಡಿಮೆಯಾಗಿರುವುದಿಲ್ಲ. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ರನ್ನಿಂಗ್ ವೇಳೆ ಮಾಡುವ ತಪ್ಪುಗಳು. ಸುಮ್ಮನೆ ಓಡಿದ್ರೆ ಆಗ್ಲಿಲ್ಲ. ಓಡುವ ಮೊದಲು ಅದ್ರ ಬಗ್ಗೆ ತಿಳಿದಿರಬೇಕು. ಓಟದ ನಂತ್ರ ಏನು ಮಾಡ್ಬಾರದು ಎಂಬುದನ್ನು ಕೂಡ ಅರಿತಿರಬೇಕು. ಇಂದು ನಾವು ರನ್ನಿಂಗ್ ನಂತ್ರ ಏನು ಮಾಡ್ಬಾರದು ಎಂಬುದನ್ನು ಹೇಳ್ತೇವೆ.

ರನ್ನಿಂಗ್ ನಂತ್ರ ಏನು ಮಾಡ್ಬೇಕು ಗೊತ್ತಾ? :
ನೀರಿನ ಜೊತೆ ದ್ರವ ಆಹಾರ ಸೇವನೆ :
ರನ್ನಿಂಗ್ ನಂತ್ರ ದೇಹ ಬೆವರುತ್ತದೆ. ಇದ್ರಿಂದಾಗಿ ದೇಹದಲ್ಲಿರುವ ನೀರಿನಾಂಶ ಕಡಿಮೆಯಾಗಿರುತ್ತದೆ. ಬಹುತೇಕರು ದೇಹವನ್ನು ಪುನರ್ಜಲೀಕರಣಗೊಳಿಸಲು ನೀರು ಸೇವನೆ ಮಾಡ್ತಾರೆ. ಆದ್ರೆ ದೇಹಕ್ಕೆ ನೀರು ಮಾತ್ರ ಸಾಲೋದಿಲ್ಲ. ನೀವು ದ್ರವ ಆಹಾರವನ್ನು ಸೇವನೆ ಮಾಡ್ಬೇಕಾಗುತ್ತದೆ. ಹಾಗೆಯೇ ಎಳೆ ನೀರನ್ನು ಕುಡಿಯುವುದು ಬಹಳ ಮುಖ್ಯ. ನೀವು ಜ್ಯೂಸ್ ಕೂಡ ಕುಡಿಯಬಹುದು.

Weight Loss: ಜಿಮ್‌ಗೆ ಹೋಗೋದೇನೂ ಬೇಡ, ಮನೆಯಲ್ಲೇ ಹೀಗೆ ತೂಕ ಇಳಿಸ್ಕೊಳ್ಳಿ

ದೇಹಕ್ಕೆ ವಿಶ್ರಾಂತಿ ನೀಡಿ : ಅನೇಕರು ರನ್ನಿಂಗ್ ನಂತ್ರ ದೇಹಕ್ಕೆ ವಿಶ್ರಾಂತಿ ನೀಡುವುದಿಲ್ಲ. ಓಡಿದ ದೇಹ ಸುಸ್ತಾಗಿರುತ್ತದೆ. ಅದಕ್ಕೆ ವಿಶ್ರಾಂತಿ ಅಗತ್ಯವಿರುತ್ತದೆ. ರಾತ್ರಿ 7 – 8 ಗಂಟೆಗಳ ಕಾಲ ನಿದ್ರೆ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. 

ಪ್ರತಿ ದಿನ ರನ್ನಿಂಗ್  : ಹಾಗೆಯೇ ಪ್ರತಿ ದಿನ ರನ್ನಿಂಗ್ ಮಾಡ್ಬಾರದು. ಇದ್ರಿಂದ ದೇಹ ಹೆಚ್ಚು ದಣಿಯುತ್ತದೆ. ನೀವು ಒಂದು ದಿನ ಬಿಟ್ಟು ಒಂದು ದಿನ ರನ್ನಿಂಗ್ ಮಾಡ್ಬಹುದು. ಇಲ್ಲವೆ ನೀವು ಪ್ರತಿ ದಿನ ವ್ಯಾಯಾಮದ ವಿಧಾನವನ್ನು ಬದಲಿಸಬಹುದು.

ಆಹಾರ ಸೇವನೆ : ದೇಹ ಆರೋಗ್ಯವಾಗಿರಬೇಕು, ತೂಕ ಇಳಿಯಬೇಕು ಎನ್ನುವ ಕಾರಣಕ್ಕೆ ಜನರು ರನ್ನಿಂಗ್ ಮಾಡ್ತಾರೆ. ರನ್ನಿಂಗ್ ನಂತ್ರ ಮನೆಗೆ ಬಂದು ನೀರು ಅಥವಾ ನಿಂಬೆ ಹಣ್ಣಿನ ಪಾನಕ ಕುಡಿದು ಮನೆಯಿಂದ ಹೊರಗೆ ಹೋಗ್ತಾರೆ. ಆದ್ರೆ ಇದು ತಪ್ಪು. ರನ್ನಿಂಗ್ ನಂತ್ರ ದೇಹಕ್ಕೆ ಶಕ್ತಿ ಬೇಕಾಗುತ್ತದೆ. ರನ್ನಿಂಗ್  ನಂತರ ಪ್ರೋಟೀನ್ ಭರಿತ ಸ್ಮೂಥಿ ಅಥವಾ ಆರೋಗ್ಯಕರ ತಿಂಡಿಗಳನ್ನು ತೆಗೆದುಕೊಳ್ಳಬೇಕು.

ಲಿಫ್ಟ್‌ ಬಳಸೋದು ಬಿಡಿ, ಮೆಟ್ಟಿಲು ಹತ್ತೋದ್ರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

ಸ್ನಾನ : ರನ್ನಿಂಗ್ ಮುಗಿಸಿ ಬಂದ ತಕ್ಷಣ ಸ್ನಾನ ಮಾಡಬಾರದು. ದೇಹ ಬಿಸಿಯಾಗಿರುವ ಕಾರಣ ವಿಶ್ರಾಂತಿ ನೀಡ್ಬೇಕು. ಕನಿಷ್ಠ 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು. ರನ್ನಿಂಗ್ ಮಾಡಿ ಬಂದ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಬಾರದು. ಸನ್ ಬರ್ನ್ ಆಗ್ತಿದ್ದರೆ ನೀವು ಸ್ನಾನ ಮಾಡುವ ನೀರಿಗೆ ಚಿಟಕಿಯಷ್ಟು ಅಡುಗೆ ಸೋಡ ಹಾಕ್ಬಹುದು. ಅಡುಗೆ ಸೋಡ ಬೆರೆಸಿದ ನೀರಿನಿಂದ ಮುಖ ತೊಳೆದುಕೊಂಡ್ರೆ ಸನ್ ಬರ್ನ್ ಸಮಸ್ಯೆ ಇರುವುದಿಲ್ಲ. 

ಸುಸ್ತಾಗುವ ಕೆಲಸ : ದೀರ್ಘ ಓಟದ ನಂತರ ತಕ್ಷಣವೇ ಯಾವುದೇ ರೀತಿಯ ಭಾರವಾದ ವಸ್ತುಗಳನ್ನು ಎತ್ತಬಾರದು. ಹಾಗೆಯೇ ದೇಹಕ್ಕೆ ಸುಸ್ತು ನೀಡುವ ಕೆಲಸವನ್ನು ತಪ್ಪಿಸಬೇಕು. ರನ್ನಿಂಗ್ ಮಾಡಿದ ತಕ್ಷಣ ಸ್ವಲ್ಪ ಸಮಯದವರೆಗೆ ಸಾಮಾನ್ಯ ವಾತಾವರಣದಲ್ಲಿ ವಿಶ್ರಾಂತಿ ಪಡೆಯಬೇಕು. ರನ್ನಿಂಗ್ ಮಾಡಿದ ತಕ್ಷಣ ಭಾರವಾದ ವಸ್ತುಗಳನ್ನು ಎತ್ತಿದ್ರೆ ಸ್ನಾಯು ಸೆಳೆತ, ಆಯಾಸ ಮತ್ತು ಇತರ ಹಲವು ಸಮಸ್ಯೆ ಕಾಡುತ್ತದೆ. 

 

Dont Make These Mistakes Even After Running

 

Follow Us:
Download App:
  • android
  • ios