ಮನೆಯೊಳಗೆ ಬರುವ ಇರುವೆಗಳನ್ನು ತಡೆಯಲು ಪರಿಣಾಮಕಾರಿ ಮನೆಮದ್ದುಗಳನ್ನು ತಿಳಿಯಿರಿ. ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿರಿಸಲು ಸರಳ ಹಾಗೂ ನೈಸರ್ಗಿಕ ಉಪಾಯಗಳನ್ನು ಅನುಸರಿಸಿ. ವಿನೆಗರ್, ಚಾಕ್ ಪೌಡರ್, ಎಡಿಬಲ್ ಎಲೆಗಳು ಮುಂತಾದ ಸಾಮಗ್ರಿಗಳ ಬಳಕೆಯಿಂದ ಇರುವೆಗಳನ್ನು ದೂರವಿಡಿ.

ಬಹಳಷ್ಟು ಸಲ ಬೇಡವಾದ ಅತಿಥಿಗಳು ಸೀಳು ಬಿಟ್ಟ ಮನೆಯ ಕಿಟಕಿ, ಬಾಗಿಲುಗಳಿಂದ ಬರುತ್ತಲೇ ಇರುತ್ತವೆ. ಇರುವೆ(Ant)ಗಳಿಗೆ ಆಹಾರವೆಂದರೆ ಬಹಳ ಆಕರ್ಷಣೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಮನೆಗೆ ಪ್ರವೇಶಿಸಿ ಆಹಾರಗಳನ್ನ ತಿನ್ನುತ್ತವೆ. ಹೀಗಾಗಿ ಮನೆಯಲ್ಲಿನ ಆಹಾರವನ್ನ ಸುರಕ್ಷಿತವಾಗಿರುವುದು ಬಹಳ ಮುಖ್ಯವಾಗುತ್ತದೆ.ಕೆಲವೊಮ್ಮೆ ಇರುವೆಗಳು(Ant) ಆಹಾರಕ್ಕೆ ಮುತ್ತಿಗೆ ಹಾಕಿದರೆ ಆ ಆಹಾರ ಕೆಡುವುದಂತೂ ಗ್ಯಾರಂಟಿ. ಇರುವೆಗಳಿಂದ ಆಹಾರವನ್ನು ರಕ್ಷಿಸಿಡಲು ನೀವು ಯಾವುದೇ ರಾಸಾಯನಿಕವನ್ನು ಸಿಂಪಡಿಸಲು ಇಷ್ಟಪಡುವುದಿಲ್ಲ ಎಂದರೆ ಇಲ್ಲಿನ ಕೆಲವೊಂದು ಟಿಪ್ಸ್‌ಗಳನ್ನ ಫಾಲೋವ್‌ ಮಾಡಿ ನೋಡಿ.

ಎಡಿಬಲ್ ಎಲೆಗಳು( Edible leaves)(ಪಾಲಕ್, ಲೆಟಿಸ್, ಮತ್ತು ಕೇಲ್) ಇರುವೆಗಳು ತಮ್ಮ ತೂಕದ 50 ಪಟ್ಟು ತೂಕವನ್ನು ಎತ್ತಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಅವು ದೊಡ್ಡ ಎಲೆಯನ್ನು ಎತ್ತಿಕೊಂಡು ಒಯ್ಯುತ್ತವೆ, ಈ ಎಲೆಗಳಲ್ಲಿ ಔಷದೀಯ ಗುಣಗಳಿದ್ದು ಅವುಗಳ ಪರಿಮಳದಿಂದ ಇರುವೆಗಳಿಗೆ ಸಮಸ್ಯೆ ಆಗುವುದರಿಂದ ಆಹಾರದ ಬಳಿಗೆ ಬರುವುದಿಲ್ಲ. ನೀವು ಆಹಾರದ ಬುಡದಲ್ಲಿ ಈ ಎಲೆಗಳನ್ನ ಇಡುವುದರಿಂದ ಎಲೆಯ ವಾಸನೆಗೆ ಇರುವಗಳು ಬರುವುದು ಕಡಿಮೆಯಾಗುತ್ತದೆ.

ಸೋಪ್ ನೀರಿನ ದ್ರಾವಣ (Soapy water solution)
ಈ ದ್ರಾವಣ ಇರುವೆಗಳಿಂದ ಮುಕ್ತಿ ಕಂಡುಕೊಳ್ಳಲು ಅತ್ಯಂತ ಸುಲಭ ಮಾರ್ಗವಾಗಿದೆ. ಎರಡು ಚಮಚ ಸೋಪ್ ದ್ರಾವಣವನ್ನು ನೀರಿನಲ್ಲಿ ಮಿಶ್ರಣಗೊಳಿಸಿ ಒಂದು ಬಾಟಲ್ ನಲ್ಲಿ ತುಂಬಿಸಿಡಿ ಅದರ ಮಿಶ್ರಣವನ್ನು ಕಿಟಕಿ ಬಾಗಿಲುಗಳು ಹಾಗೂ ಎಲ್ಲೆಲ್ಲಿ ಬಿರುಕುಗಳಿವೆಯೋ ಅಲ್ಲಲ್ಲಿ ಸಿಂಪಡಿಸಿ ಆದರೆ ಅದನ್ನ ಒರೆಸ ಬೇಡಿ ಈ ದ್ರಾವಣ ಆಹಾರದ ವಾಸನೆಯನ್ನು ಹೋಗಲಾಡಿಸುತ್ತದೆ. ಈ ಕಾರಣದಿಂದ ಇರುವೆಗಳು ಆಹಾರದ ತನಕ ತಲುಪಲು ಸಾಧ್ಯವಾಗುವುದಿಲ್ಲ.

ಚಾಕ್ ಮತ್ತು ಬೇಬಿ ಪೌಡರ್ (Chalk and baby powder)
ಇರುವೆ(Ant)ಗಳ ತೊಂದರೆಯಿಂದ ರಕ್ಷಿಸಿಕೊಳ್ಳುವ ಅತ್ಯಂತ ಹಳೆಯ ಉಪಾಯವಿದು. ಚಾಕ್ ಪೌಡರ್ ಅಥವಾ ತಾಳ್ಕಂ ಪೌಡರ್ ಇರುವೆಗಳನ್ನು ದೂರ ಇರಿಸುವ ನೈಸರ್ಗಿಕ ವಿಧಾನವಾಗಿದೆ. ಬೇಬಿ ಪೌಡರ್ ಇದು ಇರುವೆಗಳನ್ನು ಓಡಿಸಲು ನೆರವಾಗುತ್ತದೆ. ಇರುವೆಗಳ ಮೇಲಿಂದ ಮೇಲೆ ಬರುತ್ತಿದ್ದರೆ ನೀವು ಆ ಜಾಗದ ಮೇಲೆ ಇದನ್ನು ಹಾಕಬಹುದು. ಇದರಿಂದ ಇರುವೆಗಳು ಮನೆಗೆ ಬರುವುದು ಕಡಿಮೆಯಾಗುತ್ತದೆ ಜೊತೆಗೆ ಆಹಾರಗಳನ್ನ ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು.

ಏರ್ ಟೈಟ್ ಡಬ್ಬಿಗಳನ್ನು ಬಳಸಿ 
ಆಹಾರ ವಸ್ತುಗಳನ್ನ ಏರ್ ಟೈಟ್ ಡಬ್ಬಿ ಗಳಲ್ಲಿ ಈಡುವುದರಿಂದ ನೀವು ಆಹಾರಗಳನ್ನು ತಾಜಾ ಆಗಿರಿಸಬಹುದು. ಜೊತೆಗೆ ನೊಣ ಮತ್ತು ಇರುವೆಯಂತಹ ಕ್ರಿಮಿ ಕೀಟಗಳಿಂದ ಆಹಾರವನ್ನು ರಕ್ಷಿಸಬಹುದು ಒಂದು ದೊಡ್ಡ ಹರಿಯಾಣದಲ್ಲಿ ನೀರು ಹಾಕಿಟ್ಟು ಅದರ ನಡು ಭಾಗದಲ್ಲಿ ಇಡೀ ಒಂದು ಡಬ್ಬಿಗಳನ್ನೇ ಇಡುತ್ತಿದ್ದರಂತೆ, ಇದರಿಂದ ಆಹಾರ ಸಂಕ್ಷಿಸಿಡಬಹುದು.

ವಿನಿಗರ್ (Vinegar ) ಇದನ್ನ ಆಹಾರದಲ್ಲಿ ಬಳಸಲಾಗುತ್ತದೆ ಎಂಬ ಸಂಗತಿ ನಿಮಗೆ ಗೊತ್ತೇ ಇದೆ ?ತನ್ನ ಹುಳಿ ಗುಣದಿಂದಾಗಿ ವಿನೆಗರ್ (Vinegar ) ಇರುವೆಗಳನ್ನ ನಿವಾರಿಸುವಲ್ಲಿ ನೆರವಾಗುತ್ತದೆ. ಇದರ ವಾಸನೆಯ ಕಾರಣದಿಂದ ಇರುವೆಗಳು ಅದರ ಹತ್ತಿರಕ್ಕೆ ಕೂಡ ಸುಳಿಯುವುದಿಲ್ಲ. ಅದರ ಬಳಕೆಯಿಂದ ಮನೆ ಇರುವೆ ಮುಕ್ತವಾಗಿರುತ್ತದೆ. ಆಹಾರದ ತುಣುಕುಗಳ ಸುತ್ತ ಇರುವೆಗಳು ಮುತ್ತಿಕೊಳ್ಳುತ್ತವೆ ಆ ಜಾಗದಲ್ಲಿ ಇನ್ನಷ್ಟು ಇರುವೆಗಳು ಸೇರಿಕೊಂಡು ಮನೆ ಕಸದ ತೊಟ್ಟಿಯ ತರಹ ಗೋಚರಿಸುತ್ತದೆ ಹಾಗಾಗಿ ಆಹಾರದ ಸುತ್ತ ಮುತ್ತ ವಿನೆಗರ್‌ ಹಾಕುವುದರಿಂದ ಇರುವೆಗಳು ಆಹಾರದ ಸುತ್ತ ಬರುವುದಿಲ್ಲ. ಯಾವುದಾದರೂ ಆಹಾರ ತುಣುಕು ನೆಲದ ಮೇಲೆ ಬಿದ್ದಾಗ ತೆಗೆದುಹಾಕಿ. ನಿಮಗೆ ಯಾವುದೇ ಉಪಾಯ ನೂರಕ್ಕೆ ನೂರರಷ್ಟು ಪಲಕಾರಿ ಅನ್ನಿಸದೆ ಇದ್ದರೂ ನಿರಾಶರಾಗದಿರಿ ಏಕೆಂದರೆ ಇರುವೆಗಳು ಸಾಮಾನ್ಯವಾಗಿ ಹವಾಮಾನ ಬದಲಾವಣೆಯ ಕಾರಣದಿಂದ ಮನೆ ಒಳಗೆ ಪ್ರವೇಶಿಸುತ್ತವೆ. ಯಾವುದೇ ಉಪಾಯದಿಂದ ಇರುವೆಗಳು ಹೋಗದೆ ಇದ್ದರೆ ಅವು ತಾನಾಗಿಯೇ ಹೊರಟು ಹೋಗುವುದನ್ನು ಕಾಯಬೇಕಾಗುತ್ತದೆ;