ಐದು ವರ್ಷ ಸ್ನಾನ ಮಾಡದಿರಲು ಇಂಥ ಕಾರಣ ನೀಡಿದ ವೈದ್ಯ!
ಪ್ರತಿ ದಿನ ಸ್ನಾನ ಮಾಡಿದ್ರೆ ಸ್ವಚ್ಛವಾಗಿರ್ತೇವೆ, ಆರೋಗ್ಯವಾಗಿರ್ತೇವೆ ಅಂತ ನಾವು ಭಾವಿಸಿದ್ದೇವೆ. ಆದ್ರೆ ನಮ್ಮ ಕಲ್ಪನೆ ತಪ್ಪು, ಸ್ನಾನಕ್ಕೂ, ನೈರ್ಮಲ್ಯಕ್ಕೂ ಸಂಬಂಧ ಇಲ್ಲ ಅಂತಿದ್ದಾರೆ ಈ ವೈದ್ಯರು.

ದಿನಕ್ಕೆ ಎರಡು ಬಾರಿ ಸ್ನಾನ (Bath) ಮಾಡೋರಿದ್ದಾರೆ. ಅಂಥವರಿಗೆ ಒಂದೆರಡು ದಿನ ಸ್ನಾನ ಮಾಡಿಲ್ಲ ಅಂದ್ರೆ ಮೈ ತುರಿಕೆ ಶುರು ಆಗುತ್ತೆ. ಇನ್ನು ವಾರಗಟ್ಟಲೆ ಸ್ನಾನ ಮಾಡದೆ ಹೋದ್ರೆ ಮೈನಿಂದ ವಾಸನೆ ಬರಲು ಶುರುವಾಗುತ್ತೆ. ಆದ್ರೆ ಇಲ್ಲೊಬ್ಬ ವೈದ್ಯ ಬರೋಬ್ಬರಿ ಐದು ವರ್ಷ ಸ್ನಾನವನ್ನೇ ಮಾಡಿಲ್ಲ. ಆತ ಸ್ನಾನ ಮಾಡದೆ ಇರಲು ಕೆಲ ಕಾರಣಗಳನ್ನು ನೀಡಿದ್ದಾನೆ. ಅಲ್ಲದೆ ಐದು ವರ್ಷ ಸ್ನಾನ ಮಾಡದ ಕಾರಣ ಏನೆಲ್ಲ ಬದಲಾವಣೆ ಆಯ್ತು ಎಂಬುದನ್ನು ಹೇಳಿದ್ದಾನೆ.
ಐದು ವರ್ಷ ಸ್ನಾನ ಮಾಡದೆ ಇದ್ದ ವೈದ್ಯ : ಆರೋಗ್ಯ ತಜ್ಞ (health expert) ಡಾ. ಜೇಮ್ಸ್ ಹ್ಯಾಂಬ್ಲಿನ್ (James Hamblin) ಐದು ವರ್ಷಗಳ ಕಾಲ ಸ್ನಾನ ಮಾಡಲಿಲ್ಲ. ಅವರು ತಮ್ಮ ಅನುಭವವನ್ನು 2020 ರಲ್ಲಿ ಪ್ರಕಟವಾದ ತಮ್ಮ ಕ್ಲೀನ್: ದಿ ನ್ಯೂ ಸೈನ್ಸ್ ಆಫ್ ಸ್ಕಿನ್ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಐದು ವರ್ಷಗಳ ಕಾಲ ಸ್ನಾನ ಮಾಡದ ಡಾಕ್ಟರ್ ಜೇಮ್ಸ್ ಹ್ಯಾಂಬ್ಲಿನ್ ಅವರ ದೇಹದಿಂದ ವಾಸನೆ ಬರ್ತಾ ಇರಲಿಲ್ಲವ ಎಂಬ ಪ್ರಶ್ನೆ ನಿಮ್ಮನ್ನು ಕಾಡ್ಬಹುದು. ಅದಕ್ಕೆ ವೈದ್ಯರು ಉತ್ತರ ನೀಡಿದ್ದಾರೆ. ಅವರು ನಿಯಮಿತವಾಗಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು. ಅಗತ್ಯ ಎನ್ನಿಸಿದಾಗ ಕೂದಲನ್ನು ಒದ್ದೆ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ದೇಹದ ಮೇಲೆ ಅತಿಯಾದ ಕೊಳೆ ಕಂಡಾಗ ಅದನ್ನು ನೀರಿನಿಂದ ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು. ಆದ್ರೆ ಸ್ನಾನ ಮಾಡ್ತಿರಲಿಲ್ಲ.
ಇದು ಮಹಿಳೆಯರಿಗೆ ಮಾತ್ರ, PCOS ಇದ್ದರೆ ಇದನ್ನು ಮುಟ್ಟಬೇಡಿ
ಸ್ನಾನ ಮಾಡಿದ್ರೆ ಏನಾಗುತ್ತೆ? : ಐದು ವರ್ಷ ಸ್ನಾನ ಮಾಡದೆ ಅದ್ರ ಬಗ್ಗೆ ಅನುಭವ ಪಡೆದಿರುವ ಡಾಕ್ಟರ್ ಹ್ಯಾಂಬ್ಲಿನ್, ನಾವು ಸ್ನಾನ ಮಾಡುವಾಗ ನಮ್ಮ ಚರ್ಮದಲ್ಲಿರುವ ಎಣ್ಣೆ ಅಂಶ ಮತ್ತು ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ ಎನ್ನುತ್ತಾರೆ. ಬಿಸಿನೀರು ಮತ್ತು ಸೋಪ್ ಬಳಸಿ ಸ್ನಾನ ಮಾಡಿದಾಗ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆ ಅಂಶಕ್ಕೆ ಹಾನಿಯಾಗುತ್ತದೆ. ಇದ್ರಿಂದ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಚರ್ಮದ ಮೇಲಿರುವ ಸೂಕ್ಷ್ಮ ಜೀವಿಗಳು ದೇಹದ ಆಂತರಿಕ ಮತ್ತು ಬಾಹ್ಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಪದೇ ಪದೇ ಸ್ನಾನ ಮಾಡಿದಾಗ ಸಮತೋಲನ ಹದಗೆಡುತ್ತದೆ. ಹೆಚ್ಚು ಸ್ನಾನ ಮಾಡುವುದರಿಂದ ಚರ್ಮ ಒಣಗುತ್ತದೆ. ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದಿದ್ದಾರೆ.
ಸ್ನಾನ ಹಾಗೂ ನೈರ್ಮಲ್ಯದ ಬಗ್ಗೆ ಅವರು ಹೇಳಿದ್ದೇನು? : ಸ್ನಾನ ಮಾಡಿದ್ರೆ ಮಾತ್ರ ಸ್ವಚ್ಛತೆ ಕಾಪಾಡಿಕೊಂಡಂತೆ ಎಂಬ ನಮ್ಮ ನಂಬಿಕೆ ಸುಳ್ಳು ಎಂದು ಅವರು ಹೇಳಿದ್ದಾರೆ. ಅವರ ಪ್ರಕಾರ ನೈರ್ಮಲ್ಯ ಸ್ನಾನದಿಂದ ಮಾತ್ರ ಬರುವುದಿಲ್ಲ. ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸಿದ್ರೆ ಸಾಕು. ಇದ್ರಿಂದ ರೋಗಗಳು ಬರದಂತೆ ತಡೆಯಬಹುದು. ಸ್ನಾನ ತಾಜಾತನ ಮತ್ತು ಸೌಂದರ್ಯದ ಜೊತೆ ಸಂಬಂಧ ಹೊಂದಿದೆ. ಆರೋಗ್ಯವಾಗಿರಬೇಕು ಎನ್ನುವ ಕಾರಣ ನೀಡಿ ನೀವು ಪ್ರತಿ ದಿನ ಸ್ನಾನ ಮಾಡುವ ಅಗತ್ಯವಿಲ್ಲ. ನಾವು ಆರೋಗ್ಯವಾಗಿರಬೇಕು ಎಂದ್ರೆ ಕೈ ಸ್ವಚ್ಛಗೊಳಿಸಿದ್ರೆ ಸಾಕು ಎಂದು ಅವರು ಹೇಳಿದ್ದಾರೆ.
ಮಧುಮೇಹ ಬಗ್ಗೆ ಎಚ್ಚರ: ನಿಮ್ಮಲ್ಲಿ ಈ ರೀತಿ ಲಕ್ಷಣಗಳು ಕಂಡುಬಂದ್ರೆ ಚೆಕ್ ಮಾಡಿಸಿ!
ಡಾ. ಹ್ಯಾಂಬ್ಲಿನ್ ಮಾತ್ರವಲ್ಲ ಅನೇಕರು ಸೋಪ್ ಮತ್ತು ಜೆಲ್ ಬಳಸಿ ಸ್ನಾನ ಮಾಡುವುದರಿಂದ ಸೂಕ್ಷ್ಮ ಜೀವಿಗಳ ನಾಶವಾಗುತ್ತದೆ ಎಂಬುದನ್ನು ದೃಢಪಡಿಸಿದ್ದಾರೆ. ಆದ್ರೆ ಪ್ರತಿ ನಿತ್ಯ ಸ್ನಾನ ಅವರವರ ದೇಹ ಪ್ರಕೃತಿಗೆ ಬಿಟ್ಟಿದ್ದು. ನಿಮ್ಮ ದೇಹದ ಅಗತ್ಯತೆಗೆ ಅನುಗುಣವಾಗಿ ನೀವು ಸ್ನಾನ ಮಾಡುವುದು ಉತ್ತರ ಎಂಬುದು ವಿಜ್ಞಾನಿಗಳ ಸಲಹೆ. ಆದ್ರೆ ಕೆಮಿಕಲ್ ಸೋಪ್ ಬಳಸದಂತೆ ಅವರು ಸಲಹೆ ನೀಡುತ್ತಾರೆ.