Asianet Suvarna News Asianet Suvarna News

Health Tips: ಈ ಸರಳ ವಿಧಾನದಿಂದ ನಿಮ್ಮ ಹೃದಯದ ಆರೋಗ್ಯವ ಸ್ವಯಂ ಪರೀಕ್ಷಿಸಿಕೊಳ್ಳಿ

ಹೃದಯಾಘಾತದ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವ ಅವಶ್ಯಕತೆ ಈಗಿದೆ. ಪ್ರತಿ ದಿನ ಆಸ್ಪತ್ರೆಗೆ ಹೋಗ್ಬೇಕೆಂದೇನಿಲ್ಲ. ಮನೆಯಲ್ಲೇ ನೀವು ನಿಮ್ಮ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಬಹುದು. 
 

Do These Four Simple Heart Tests At Home roo
Author
First Published Feb 21, 2024, 1:14 PM IST

ನಾವು ಆರೋಗ್ಯವಂತರಾಗಿರಲು ಹೃದಯದ ಆರೋಗ್ಯ ಬಹಳ ಮುಖ್ಯ. ಹೃದಯದ ಬಡಿತದಲ್ಲಿ ಕೊಂಚ ಏರುಪೇರಾದರೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಇಂದಿನ ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದ ಹೃದಯ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ತೊಂದರೆಯಾಗುತ್ತಿದೆ. ಇದರಿಂದ ಹಲವು ರೀತಿಯ ಹೃದಯದ ಖಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.

ಹೃದಯ (Heart) ದ ಬಡಿತದಿಂದ ನಮ್ಮ ಇಡೀ ದೇಹಕ್ಕೆ ರಕ್ತ (Blood) ತಲುಪುತ್ತದೆ. ಇದರಿಂದಲೇ ಶರೀರಕ್ಕೆ ಆಮ್ಲಜನಕ (Oxygen), ಪೋಷಕಾಂಶಗಳ ಪೂರೈಕೆಯಾಗುತ್ತದೆ. ಹೃದಯ ಬಡಿತದಲ್ಲಿ ಏರುಪೇರಾದಾಗ ಹೃದಯದ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಮಸ್ಯೆಗಳು ಯಾವಾಗ ಎದುರಾಗುತ್ತವೆ, ಅದರ ಲಕ್ಷಣಗಳೇನು ಎನ್ನುವುದರ ಕುರಿತು ನಮಗೆ ತಿಳಿದಿರುವುದಿಲ್ಲ. ನಮ್ಮ ಹೃದಯ ಆರೋಗ್ಯವಂತವಾಗಿದೆಯಾ ಎನ್ನುವುದು ಕೂಡ ನಮಗೆ ತಿಳಿದಿರುವುದಿಲ್ಲ. ಸಮಸ್ಯೆಗಳು ಎದುರಾದ ನಂತರವೇ ನಾವು ವೈದ್ಯರ ಬಳಿ ಪರೀಕ್ಷೆ ಮಾಡಿಸುತ್ತೇವೆ. ಇಂತಹ ಕೆಲವು ಹೃದಯದ ಸಮಸ್ಯೆಗಳನ್ನು ಅಥವಾ ನಮ್ಮ ಹೃದಯದ ಆರೋಗ್ಯ ಹೇಗಿದೆ ಎನ್ನುವುದನ್ನು ನಾವು ಮನೆಯಲ್ಲಿಯೇ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳಬಹುದು. ಅಂತಹ ಕೆಲವು ಸುಲಭ ವಿಧಾನಗಳು ಇಲ್ಲಿವೆ.

ತಾಯಿಯಾದ ನಂತರವೂ ನಿಮ್ಮ ಲೈಂಗಿಕ ಜೀವನ ಎಂಜಾಯ್ ಮಾಡಲು ಇಲ್ಲಿವೆ ಟಿಪ್ಸ್!

ನಿಮ್ಮ ಹೃದಯದ ಸಮಸ್ಯೆಗಳನ್ನು ನೀವೇ ತಿಳಿದುಕೊಳ್ಳಿ : 

ವಿಶ್ರಾಂತಿಯ ಸಮಯದಲ್ಲಿ ಹೃದಯಬಡಿತ ಪರೀಕ್ಷೆ :  ನಾವು ವಿಶ್ರಾಂತಿ ಸ್ಥಿತಿಯಲ್ಲಿದ್ದಾಗ ಅಥವಾ ಕೆಲಸ ಮಾಡುತ್ತಿರುವಾಗ ಹೀಗೆ ಬೇರೆ ಬೇರೆ ಪರಿಸ್ಥಿತಿಯಲ್ಲಿ ಹೃದಯ ಬಡಿತ ಬೇರೆ ಬೇರೆಯಾಗೇ ಇರುತ್ತದೆ. ಸಾಮಾನ್ಯವಾಗಿ ಒಂದು ನಿಮಿಷಕ್ಕೆ ಒಬ್ಬ ವ್ಯಕ್ತಿಯ ಹೃದಯ ಬಡಿತ 60 – 100ರ ನಡುವೆ ಇರುತ್ತದೆ. ಹೀಗಿರುವಾಗ ನೀವು ನಿಮ್ಮ ಹೃದಯದ ಬಡಿತದ ವೇಗವನ್ನು ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ನೀವು ವಿಶ್ರಾಂತಿ ಸ್ಥಿತಿಯಲ್ಲಿ ಕುಳಿತು ಮಣಿಕಟ್ಟಿನ ನಾಡಿಯನ್ನು ಲಘುವಾಗಿ ಹಿಡಿದು ಹಾರ್ಡ್ ಬೀಟ್ ಅನ್ನು ಎಣಿಸಿ. ನಿಮ್ಮ ಹೃದಯದ ಬಡಿತ 100 ಕ್ಕಿಂತ ಹೆಚ್ಚಿದ್ದರೆ ನೀವು ಹೃದಯದ ತೊಂದರೆಯನ್ನು ಹೊಂದಿದ್ದೀರಿ ಎಂದರ್ಥ.

ದೈಹಿಕ ಚಟುವಟಿಕೆಯ ಸಮಯದಲ್ಲಿ ಹೃದಯದ ಪರೀಕ್ಷೆ : ನೀವು ಓಡುತ್ತಿರುವಾಗ, ಈಜುತ್ತಿರುವಾಗ, ಮೆಟ್ಟಿಲು ಹತ್ತಿದ ನಂತರ ನಿಮ್ಮ ಹೃದಯದ ಬಡಿತವನ್ನು ಪರೀಕ್ಷಿಸಿ. ಸಾಮಾನ್ಯ ಸ್ಥಿತಿಗಿಂತ ಇದು ವೇಗವಾಗಿರುತ್ತದೆ. ಮೊದಲಿನಂತೆ ಐದು ನಿಮಿಷ ವ್ಯಾಯಾಮ ಮಾಡಿ ನಂತ್ರ ಮಣಿಕಟ್ಟನ್ನು ಹಿಡಿದು 60 ಸೆಕೆಂಡುಗಳ ಕಾಲ ಹೃದಯ ಬಡಿತ ಪರೀಕ್ಷೆ ಮಾಡಿಕೊಳ್ಳಿ. ಉದಾಹರಣೆಗೆ ಒಬ್ಬ ವ್ಯಕ್ತಿಗೆ 30 ವರ್ಷವಾಗಿದೆ ಎಂದಾದರೆ ಆ ವ್ಯಕ್ತಿಯ ವಯಸ್ಸನ್ನು 220ರಿಂದ ಕಳೆಯಿರಿ. ನಂತರ ಅದರಲ್ಲಿ 85 ಪ್ರತಿಶತವನ್ನು ಕಂಡುಹಿಡಿಯಿರಿ. (220-30=190. 190ರ 85 ಪ್ರತಿಶತ ಅಂದರೆ 161.5 ಆಗಿರುತ್ತದೆ). ಇದಕ್ಕಿಂತ ಹೃದಯಬಡಿತ ವೇಗವಾಗಿದ್ದರೆ ಅಪಾಯವಿದೆ ಎಂದರ್ಥ.

ರಕ್ತದೊತ್ತಡ ತಪಾಸಣೆ (Testing of Blood Pressure) :  ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಮನೆಯಲ್ಲೇ ರಕ್ತದೊತ್ತಡದ ಪರೀಕ್ಷೆಯ ಯಂತ್ರವನ್ನು ಹೊಂದಿರುತ್ತಾರೆ. ದೀರ್ಘಕಾಲದವರೆಗೆ ನಿಮ್ಮ ರತಕ್ತದೊತ್ತಡ 120/80 ಕ್ಕಿಂತ ಹೆಚ್ಚಿದ್ದರೆ ನೀವು ರಕ್ತದೊತ್ತಡ ಸಮಸ್ಯೆಯನ್ನು ಹೊಂದಿರಬಹುದು. ಇದರಿಂದ ಮುಂದೆ ಹೃದಯದ ಸಮಸ್ಯೆಗಳು ಉಂಟಾಗಬಹುದು.

ಕಠಿಣ ಕೆಲಸ ಮಾಡುವಾಗ ಹೃದಯಬಡಿತ (Heart Beat) : ಕಠಿಣ ಕೆಲಸ ಮಾಡುವಾಗ ನಿಮಗೆ ಬೇಗನೆ ದಣಿವಾಗುತ್ತಿದ್ದರೆ ಅಥವಾ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತಿದ್ದರೆ ಅದು ಹೃದಯದ ಖಾಯಿಲೆಯ ಲಕ್ಷಣವಾಗಿರಬಹುದು.

ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆಯಿಂದ ಕಿಡ್ನಿ, ಲಿವರ್‌ಗೆ ಹಾನಿ; ಅಧ್ಯಯನ

ಈ ಮುನ್ನೆಚ್ಚರಿಕೆ ವಹಿಸಿ : ಕೆಲವು ಸುಲಭ ವಿಧಾನಗಳಿಂದ ನೀವು ಮನೆಯಲ್ಲೇ ಹೃದಯದ ಆರೋಗ್ಯವನ್ನು (Heart Health) ಪರೀಕ್ಷಿಸಿಕೊಳ್ಳಬಹುದು. ಎಲ್ಲ ವಿಧಾನಗಳೂ ನಿಮ್ಮ ಖಾಯಿಲೆಯನ್ನು ದೃಢೀಕರಿಸಲು ಸಾಧ್ಯವಿಲ್ಲ. ಹಾಗಾಗಿ ಸ್ವಯಂ ಪರೀಕ್ಷೆಯ (Self Test) ನಂತರ ಹೃದ್ರೋಗವನ್ನು ನಿಖರವಾಗಿ ಹೇಳಲಾಗುವುದಿಲ್ಲ. ಹಾಗಾಗಿ ಫಲಿತಾಂಶವು ಸಾಮಾನ್ಯವಾಗಿರದಿದ್ದರೆ ಅಥವಾ ಆಯಾಸ, ಕಠಿಣ ಪರಿಶ್ರಮದಿಂದ ದೌರ್ಬಲ್ಯ, ಬಿಪಿ ಅಧಿಕವಾಗಿದ್ದರೆ ತಕ್ಷಣ ವೈದ್ಯರ ಬಳಿಗೆ ಹೋಗಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.

Follow Us:
Download App:
  • android
  • ios