Asianet Suvarna News Asianet Suvarna News

ಕುಡಿಯೋದೇ ತಪ್ಪು, ಅಲ್ಲದೇ ಜೊತೆಗೆ ಇವನ್ನು ತಿನ್ನೋದಂತೂ ಮಹಾ ತಪ್ಪು

ಮದ್ಯಪಾನದೊಂದಿಗೆ ಸೇವಿಸಲೇಬಾರದ ಕೆಲವು ತಿನಿಸುಗಳಿವೆ. ಆದರೆ, ಸಾಮಾನ್ಯವಾಗಿ ಮದ್ಯಪಾನದೊಂದಿಗೆ ಅವುಗಳನ್ನೇ ಜನ ಸೇವಿಸುವುದು ಕಂಡುಬರುತ್ತದೆ. ಆದರೆ, ಅವುಗಳಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪಿಜ್ಜಾ, ಬರ್ಗರ್, ಫ್ರೈಸ್ ನಂತಹ ಆಹಾರಗಳನ್ನು ಸೇವಿಸಲೇಬಾರದು ಎನ್ನುವುದು ತಿಳಿದಿರಿ.
 

Do not eat these foods with alcohol
Author
First Published Nov 4, 2022, 5:51 PM IST

ಬಿಯರ್, ವೈನ್ ಇತ್ಯಾದಿ ಪಾನೀಯಗಳನ್ನು ಸೇವಿಸುವ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಏನಾದರೂ ಕುರುಕಲು ತಿಂಡಿಗಳನ್ನು ಬಯಸುತ್ತಾರೆ. ಶೇಂಗಾ ಅಥವಾ ಚಿಪ್ಸ್ ಸೇರಿದಂತೆ ಕರಿದ ಪದಾರ್ಥಗಳಿಗೆ ಈ ಸಮಯದಲ್ಲಿ ಆದ್ಯತೆ. ಆದರೆ, ಸೋಡಿಯಂ ಅಂಶ ಹೆಚ್ಚಾಗಿರುವ ಕೊಬ್ಬಿನಂಶದಿಂದ ಕೂಡಿರುವ ಆಹಾರಗಳನ್ನು ಈ ಸಮಯದಲ್ಲಿ ಖಂಡಿತವಾಗಿ ತಿನ್ನಬಾರದು. ಇದು ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಆಲ್ಕೋಹಾಲ್ ಸೇವಿಸುವ ಮಹಿಳೆಯರು ಸಹ ಇಂತಹ ಆಹಾರಗಳನ್ನು ಧಾರಾಳವಾಗಿ ಸೇವನೆ ಮಾಡುತ್ತಾರೆ. ಇದು ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಮದ್ಯಪಾನದೊಂದಿಗೆ ತಪ್ಪು ಆಹಾರ ಸೇವನೆ ಮಾಡಿದರೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಪಿಜ್ಜಾ, ಚಿಕನ್, ಫ್ರೈಸ್ ನಂಥವು ಮದ್ಯಪಾನದೊಂದಿಗೆ ಸೇವಿಸಲೇಬಾರದ ತಿಂಡಿಗಳು. ಹಾಗೆ ನೋಡಿದರೆ, ಮದ್ಯಪಾನವೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರೊಂದಿಗೆ ಕೆಟ್ಟ ಆಹಾರವೂ ಹೊಟ್ಟೆ ಸೇರಿದರೆ ಹಾನಿ ಹೆಚ್ಚು. ಹೊಟ್ಟೆ ಮತ್ತು ಕರುಳಿನ ಮೇಲೆ ಇದರ ಪರಿಣಾಮ ಉಂಟಾಗುತ್ತದೆ. ಒಂದೊಮ್ಮೆ ನಿಮಗೆ ಆಸಿಡಿಟಿ, ಗ್ಯಾಸ್ ನಂತಹ ಸಮಸ್ಯೆ ಇದ್ದರಂತೂ ಸಮಸ್ಯೆಯೂ ಅಧಿಕವಾಗುತ್ತದೆ. ಯಾವ ರೀತಿಯ ಆಹಾರವನ್ನು ಮದ್ಯಪಾನದೊಂದಿಗೆ ಸೇವಿಸಬಾರದು ಎನ್ನುವುದನ್ನು ತಿಳಿದುಕೊಂಡು ಅದರ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಿ.

•    ಪೋರ್ಕ್ ಮತ್ತು ಚೀಸ್ (Pork and Cheese)
ಮದ್ಯಪಾನದೊಂದಿಗೆ (Alcohol) ಅಥವಾ ಬಳಿಕ ಪೋರ್ಕ್ ಮತ್ತು ಚೀಸ್ ಅನ್ನು ಖಂಡಿತವಾಗಿ ತಿನ್ನಬಾರದು. ಒಂದೊಮ್ಮೆ ನಿಮಗೆ ಹಸಿವೆ (Hungry) ಆಗಿದ್ದರೆ ಪ್ರೊಟೀನ್ (Protein) ಮತ್ತು ನಾರಿನಂಶ (Fibre) ಇರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ.

Alcoholic Drinks: ಆಲ್ಕೋಹಾಲಿಕ್‌ ಡ್ರಿಂಕ್‌ ನಿಂದ ಎಷ್ಟೆಲ್ಲ ಲಾಭ, ಸೀಮಿತ ಪ್ರಮಾಣ ಬೇಕಷ್ಟೆ

•    ಬ್ರೆಡ್ ಮತ್ತು ಕೇಕ್ (Bread and Cake)
ಕೇಕ್, ಪೇಸ್ಟ್ರಿ, ಬ್ರೆಡ್ ಸೇರಿದಂತೆ ಬ್ರೆಡ್ ನಿಂದ ಮಾಡಿರುವ ಯಾವುದೇ ಬೇಕರಿ ಪದಾರ್ಥ ಈ ಸಮಯದಲ್ಲಿ ಒಳ್ಳೆಯದಲ್ಲ. ಏಕೆಂದರೆ, ಮದ್ಯದಲ್ಲಿ ಯೀಸ್ಟ್  (Yeast) ಇರುತ್ತದೆ. ಈ ಎಲ್ಲ ಪದಾರ್ಥಗಳಲ್ಲೂ ಯೀಸ್ಟ್ ಇರುತ್ತದೆ. ಎರಡೂ ಸೇರಿದಾಗ ಯೀಸ್ಟ್ ಅಂಶ ಹೊಟ್ಟೆಗೆ ಹೆಚ್ಚಾಗುತ್ತದೆ. ಆಗ ಹೊಟ್ಟೆ ಹಾಳಾಗುತ್ತದೆ. 

•    ಡೇರಿ ಪದಾರ್ಥ (Dairy Products)
ಹೊಟ್ಟೆ ಅತಿಯಾಗಿ ಭಾರವಾಗದಿರಲು ಡೇರಿ ಉತ್ಪನ್ನಗಳನ್ನು ಖಂಡಿತವಾಗಿ ಸೇವನೆ ಮಾಡಬಾರದು. ಮದ್ಯಪಾನದ ಬಳಿಕ ಡೇರಿ ಉತ್ಪನ್ನಗಳಾದ ಹಾಲು, ಮೊಸರು, ಚೀಸ್, ತುಪ್ಪ ಇವುಗಳನ್ನು ತಿನ್ನಬಾರದು. ಇದರಿಂದ ದೇಹದಲ್ಲಿ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. 

Quit Addiction: ಆಲ್ಕೋಹಾಲ್ ಬಿಡೋ ಮುನ್ನ, ತುಸು ಇರಲಿ ಗಮನ

•    ಸೋಡಿಯಂಯುಕ್ತ (High Sodium) ಆಹಾರದಿಂದ ದೂರವಿರಿ
ಮದ್ಯಪಾನ ಮಾಡುವ ಸಮಯದಲ್ಲಿ ಬಹುತೇಕ ಜನ ಸೋಡಿಯಂಯುಕ್ತ ಆಹಾರ ಪದಾರ್ಥಗಳನ್ನೇ ಸೇವನೆ ಮಾಡುತ್ತಾರೆ. ಅದರಲ್ಲೂ ಅಪರೂಪಕ್ಕೆ ಪಾರ್ಟಿಗೆಂದು ಸೇವನೆ ಮಾಡುವವರು ಹೆಚ್ಚು ಉಪ್ಪಿನಿಂದ ಕೂಡಿರುವ ಕರಿದ ಸ್ನ್ಯಾಕ್ಸ್ (Snacks) ತಿನ್ನುತ್ತಾರೆ. ಇದರಿಂದ ಜೀರ್ಣಾಂಗವ್ಯೂಹ (Digestion System) ತೀವ್ರವಾಗಿ ಬಾಧಿತವಾಗುತ್ತದೆ. ಉಪ್ಪಿನ ಕಾರಣದಿಂದ ಹೆಚ್ಚು ಬಾಯಾರಿಕೆ ಆಗುತ್ತದೆ. ಆಗ ಹೆಚ್ಚು ಮದ್ಯಪಾನ ಮಾಡುವ ಅಪಾಯವೂ ಹೆಚ್ಚುತ್ತದೆ. ಜಠರ, ಕರುಳಿನ ಮೇಲೆ ಪ್ರಭಾವವುಂಟಾಗುತ್ತದೆ. 

•    ಕ್ಯಾಂಡಿಯಂತಹ (Candy) ಸಿಹಿ ತಿನಿಸು ಬೇಡ
ಉಪ್ಪಿನಂತೆಯೇ ಸಿಹಿ (Sweet) ತಿನಿಸುಗಳನ್ನು ಸಹ ಮದ್ಯಪಾನದೊಂದಿಗೆ ಸೇವನೆ ಮಾಡಬಾರದು. ಇದರಿಂದಲೂ ಬಾಯಾರಿಕೆ ಉಂಟಾಗಿ ಹೆಚ್ಚು ಮದ್ಯ ಸೇವನೆ ಮಾಡುವಂತಾಗುತ್ತದೆ. ಬಹಳಷ್ಟು ಜನ ಹೆಚ್ಚು ಮದ್ಯಪಾನ ಮಾಡುವುದು ಇದೇ ಕಾರಣಕ್ಕಾಗಿ. ಮದ್ಯ ಸೇವನೆ ಮಾಡಿದ ಕೆಲ ಸಮಯದವರೆಗೂ ಸಿಹಿ ತಿನ್ನಬಾರದು. 

ಯಾವ ತಿನಿಸು ಸರಿ?
ಮದ್ಯಪಾನ ಮಾಡುವ ಸಮಯದಲ್ಲಿ ಕೆಲವು ಹಣ್ಣು (Fruits), ತರಕಾರಿ (Vegetables) ಸೇವನೆ ಮಾಡಬಹುದು. ಸೌತೆಕಾಯಿ, ಕ್ಯಾರೆಟ್, ಈರುಳ್ಳಿ ತಿನ್ನಬಹುದು. ಹಾಗೆಯೇ, ಸೇಬು, ಕಿತ್ತಳೆ ಹಣ್ಣುಗಳನ್ನು ತಿನ್ನಬಹುದು. ನೆನೆಸಿದ ಶೇಂಗಾ ಕೂಡ ಉತ್ತಮ. 

 
 

Follow Us:
Download App:
  • android
  • ios