Asianet Suvarna News Asianet Suvarna News

Alcoholic Drinks: ಆಲ್ಕೋಹಾಲಿಕ್‌ ಡ್ರಿಂಕ್‌ ನಿಂದ ಎಷ್ಟೆಲ್ಲ ಲಾಭ, ಸೀಮಿತ ಪ್ರಮಾಣ ಬೇಕಷ್ಟೆ

ಆಲ್ಕೋಹಾಲಿಕ್‌ ಡ್ರಿಂಕ್‌ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪೂರಕವಾಗಿವೆ. ಆದರೆ, ಇವುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬಾರದು. ರೆಡ್‌ ವೈನ್‌, ಬಿಯರ್‌ ಹಾಗೂ ಜಿನ್‌ ನಲ್ಲಿರುವ ಕನಿಷ್ಠ ಆಲ್ಕೋಹಾಲಿಕ್‌ ಅಂಶದಿಂದಾಗಿ ಜೀರ್ಣಕ್ರಿಯೆ ಬಲಗೊಳ್ಳುವ ಜತೆಗೆ ಹಲವಾರು ಅನುಕೂಲಗಳಿವೆ. 
 

Alcoholic drinks have goo effect on health
Author
First Published Sep 25, 2022, 4:09 PM IST

ಆಲ್ಕೋಹಾಲ್‌ ಅಂಶ ಇರುವ ಪಾನೀಯಗಳ ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಲ್ಲರ ಭಾವನೆ. ಹಾಗೆಯೇ, ಬಿಯರ್‌, ವೈನ್‌ ನಂಥ ಪಾನೀಯಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಪೂರಕ ಎನ್ನುವ ಅಭಿಪ್ರಾಯವೂ ಸಾಕಷ್ಟು ಜನರಲ್ಲಿದೆ. ಅಸಲಿಗೆ ಇದು ಸತ್ಯ. ಸಾಮಾನ್ಯವಾಗಿ ಕುಡಿಯವವರು ಏನು ಮಾಡುತ್ತಾರೆಂದರೆ, ನಿರ್ದಿಷ್ಟ ಅಳತೆ ಮೀರಿ ಕುಡಿಯುತ್ತಾರೆ. ಹೀಗಾಗಿ ಅವು ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಅಧ್ಯಯನಗಳ ಪ್ರಕಾರ, ರೆಡ್‌ ವೈನ್‌ ರಕ್ತನಾಳಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದರೆ ಅಚ್ಚರಿಯಾದೀತು. ಅಷ್ಟೇ ಅಲ್ಲ, ಕೆಲವು ಹಣ್ಣುಗಳ ಜ್ಯೂಸ್‌, ಟೀ, ಕಾಫಿಗಳನ್ನೂ ಸಹ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಭಾರೀ ಲಾಭವಾಗುತ್ತದೆ. ನೀವು ಕೇಳಿರಬಹುದು, ಆಲ್ಕೋಹಾಲಿಕ್‌ ಡ್ರಿಂಕ್‌ ಲಿವರ್‌ ಅನ್ನು ಹಾಳು ಮಾಡುತ್ತದೆ ಎಂದು. ಆದರೆ, ಇವೇ ಆಲ್ಕೋಹಾಲಿಕ್‌ ಡ್ರಿಂಕ್‌ ಗಳು ಲಿವರ್‌ ಅನ್ನು ಸದೃಢವನ್ನಾಗಿಯೂ ಮಾಡಬಲ್ಲವು. ಬಿಯರ್‌ ಮತ್ತು ವೈನ್‌ ನಲ್ಲಿರುವ ಕಡಿಮೆ ಪ್ರಮಾಣದ ಆಲ್ಕೋಹಾಲ್‌ ಜೀರ್ಣಕ್ರಿಯೆಯನ್ನು ಬಲಪಡಿಸುತ್ತವೆ. ಹೃದಯ ರೋಗಗಳು ಉಂಟಾಗದಂತೆ ಪ್ರಭಾವ ಬೀರುತ್ತವೆ. ಹಾಗಿದ್ದರೆ ಯಾವ ಯಾವ ಡ್ರಿಂಕ್‌ ಏನು ಪರಿಣಾಮ ಬೀರುತ್ತವೆ ಎಂದು ನೋಡಿಕೊಳ್ಳಿ.

•    ರೆಡ್‌ ವೈನ್‌ (Red Wine)
ರೆಡ್‌ ವೈನ್‌ ನಲ್ಲಿರುವ ರೆಸವೆರಟ್ರೊಲ್‌ (Resveratrol) ಎನ್ನುವ ಅಂಶವು ರಕ್ತನಾಳಗಳಲ್ಲಿ (Blood Vessel) ಉಂಟಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ.  ಹಾಗೆಯೇ, ರಕ್ತನಾಳಗಳು ಸಂಕುಚಿತವಾಗದಂತೆಯೂ ಅದು ನೋಡಿಕೊಳ್ಳುತ್ತದೆ. ಇನ್ನೂ ವಿಶೇಷವೆಂದರೆ, ಅಧಿಕ ಕೊಬ್ಬಿನ (High Cholesterol) ಸಮಸ್ಯೆಯನ್ನು ಕಡಿಮೆ ಮಾಡಿ, ಉತ್ತಮ ಕೊಬ್ಬಿನ ಅಂಶವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಕ್ಯಾನ್ಸರ್‌ (Cancer) ಅನ್ನು ನಿರೋಧಿಸುವ ಗುಣವನ್ನೂ ಇದು ಹೊಂದಿದೆ. ರೆಸವೆರಟ್ರೊಲ್‌ ಎಂದರೆ ಒಂದು ರೀತಿಯ ರಾಸಾಯನಿಕವಾಗಿದ್ದು, ಇದನ್ನು ಔಷಧಗಳಲ್ಲೂ (Medicine) ಬಳಕೆ ಮಾಡಲಾಗುತ್ತದೆ. ಇದು ಪಿಸ್ತಾ (Pista), ಅಂಗೂರ, ರೆಡ್‌ ಮತ್ತು ವೈಟ್‌ ವೈನ್‌ (White Wine), ಬ್ಲೂಬೆರಿ, ಕಡಲೆ, ಕೋಕೋ (Coco) ಮತ್ತು ಡಾರ್ಕ್‌ ಚಾಕೋಲೇಟ್‌ ಗಳಲ್ಲೂ ಇರುತ್ತದೆ.
 
•    ಬಿಯರ್‌ (Beer)
ಹಲವು ಅಧ್ಯಯನಗಳ ಪ್ರಕಾರ, ಬಿಯರ್‌ ನಲ್ಲಿ ಮರೆವು (Dementia) ಸಮಸ್ಯೆಯನ್ನು ದೂರವಿರಿಸುತ್ತದೆ. ಮಿದುಳಿನ (Brain) ಜಾಲದಲ್ಲಿ ವಯಸ್ಸಾದಂತೆ ಉಂಟಾಗುವ ಸಮಸ್ಯೆಯನ್ನು ದೂರವಿಡುತ್ತದೆ. ಬಿಯರ್‌ ನಲ್ಲಿರುವ ಕಡಿಮೆ ಪ್ರಮಾಣದ ಆಲ್ಕೋಹಾಲ್‌ ಮಿದುಳಿನ ಮೇಲೆ ಉತ್ತಮ ಪರಿಣಾಮವನ್ನೇ ಬೀರುತ್ತದೆ. ಬಿಯರ್‌ ನಿಂದ ಹೃದಯಕ್ಕೆ (Heart) ಸಂಬಂಧಿಸಿದ ರೋಗಗಳೂ ದೂರವಾಗುತ್ತವೆ. ಇದರ ಸೀಮಿತ ಪ್ರಮಾಣದ ಸೇವನೆಯಿಂದ ಮಹಿಳೆಯರಲ್ಲಿ ಮೆನೋಪಾಸ್‌ (Menopause) ನಂತರ ಮೂಳೆಗಳು ಸದೃಢವಾಗುತ್ತವೆ. ಕೆಲವು ಬಿಯರ್‌ ಗಳಲ್ಲಿ ಕ್ಯಾಲರಿ (Calory) ಹೆಚ್ಚಿರುತ್ತದೆ. ಅವುಗಳ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. 

ಇದನ್ನೂ ಓದಿ: ಸಂಜೆ ಕಾಫಿ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆಯೇ?

•    ಜಿನ್‌ ಮತ್ತು ಸೋಡಾ (Gin and Soda) ಕಾಕ್‌ ಟೇಲ್‌
ಜಿನ್‌ ಮತ್ತು ಸೋಡಾ ಬೆರೆಸಿ ಮಾಡುವ ಒಂದು ರೀತಿಯ ಕಾಕ್‌ ಟೇಲ್‌ ನೆಗಡಿ, ಜ್ವರ, ಕೆಮ್ಮನ್ನು ದೂರವಿಡಲು ಸಹಕಾರಿ ಆಗುತ್ತದೆ ಎಂದರೆ ಅಚ್ಚರಿ ಆಗಬಹುದು. ದೇಹದ ನೋವನ್ನು (Body Pain) ತೆಗೆದುಹಾಕುತ್ತದೆ. ಇದು ಹೊಟ್ಟೆಯ (Stomach) ಆರೋಗ್ಯಕ್ಕೂ ಪೂರಕ. ಇದು ಆಹಾರವನ್ನು ವಿಭಜಿಸಿ ಜೀರ್ಣಕ್ರಿಯೆಗೆ (Digest) ಸಹಾಯ ಮಾಡುವ ಎಂಜೈಮುಗಳ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ದೇಹದಲ್ಲಿರುವ ಅನೇಕ ರೀತಿಯ ಕಿರಿಕಿರಿಯನ್ನೂ ದೂರವಿಡಬಲ್ಲದು.

ಇದನ್ನೂ ಓದಿ: Health Tips in Kannada: ಪ್ರಪಂಚದಲ್ಲಿದೆ ಅಚ್ಚರಿ ಹುಟ್ಟಿಸುವ ಥೆರಪಿ

ಆಲ್ಕೋಹಾಲಿಕ್‌ ಡ್ರಿಂಕ್‌ ಸೇವನೆ ಮಾಡುವಾಗ ಎಚ್ಚರ
ರೆಡ್‌ ವೈನ್‌, ಬಿಯರ್‌, ಜಿನ್-ಸೋಡಾ ಆರೋಗ್ಯಕ್ಕೆ ಉತ್ತಮ ಎಂದ ಮಾತ್ರಕ್ಕೆ ಇವುಗಳನ್ನು ಬೇಕಾಬಿಟ್ಟಿ ಸೇವನೆ ಮಾಡಬಾರದು. ಇದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ಆಲ್ಕೋಹಾಲಿಕ್‌ ಡ್ರಿಂಕ್ಸ್‌ ಗಳ ಅಧಿಕ ಸೇವನೆಯಿಂದ ಹಲವು ಗಂಭೀರ ಸಮಸ್ಯೆಗಳು ಆರಂಭವಾಗುತ್ತವೆ. ತಜ್ಞರ ಪ್ರಕಾರ, ಮಹಿಳೆಯರು ದೇಹಾರೋಗ್ಯಕ್ಕಾಗಿ ದಿನಕ್ಕೆ 150 ಎಂಎಲ್‌ ಅಂದರೆ ಚಿಕ್ಕ ಗ್ಲಾಸ್‌ ನಷ್ಟು ಆಲ್ಕೋಹಾಲ್‌ ಸೇವನೆ ಮಾಡಬಹುದು. ಪುರುಷರು 300 ಎಂಎಲ್‌ ನಷ್ಟು ಸೇವನೆ ಮಾಡಬಹುದು. ಈ ಪ್ರಮಾಣ (Level) ಮೀರಬಾರದು. ಮೀರಿದರೆ, ಸಮಸ್ಯೆ ಗ್ಯಾರೆಂಟಿ. 
  

Follow Us:
Download App:
  • android
  • ios