ಮಧುಮೇಹ ಇರುವವರಿಗೆ ದೀರ್ಘಾವಧಿಯ ಕೋವಿಡ್ ಅಪಾಯ ಹೆಚ್ಚು, ಅಧ್ಯಯನದ ಹೊಸ ವಿಶ್ಲೇಷಣೆ
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಹಾಗೆ ಕೊರೋನಾ (Corona) ಕಾಟ ಮತ್ತೆ ಶುರುವಾಗಿದೆ. ಮಂಕಿಪಾಕ್ಸ್ (Monkeypox), ಟೊಮೇಟೋ ಫ್ಲೂ ನಡುವೆನೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಮಧ್ಯೆ ಮಧುಮೇಹ (Diabetes0 ಇರುವವರಿಗೆ ದೀರ್ಘಾವಧಿಯ ಕೋವಿಡ್ ಅಪಾಯ ಹೆಚ್ಚು, ಅಧ್ಯಯನದ (Study) ಹೊಸ ವಿಶ್ಲೇಷಣೆ ಕಂಡು ಹಿಡಿದಿದೆ.
ಕೊರೋನಾ ವೈರಸ್ (Corona virus) ಕಳೆದೆರಡು ವರ್ಷಗಳಳಿಂದ ಜನಜೀವನವನ್ನು ಹೈರಾಣಾಗಿಸಿದೆ. ಸೋಂಕು ತಗುಲಿ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಸೋಂಕಿನಿಂದ ಗುಣಮುಖರಾದ ಅದೆಷ್ಟೋ ಮಂದಿ ಈಗಲೂ ಹಲವು ಆರೋಗ್ಯ ಸಮಸ್ಯೆ (Health problem)ಗಳಿಂದ ಬಳಲುತ್ತಿದ್ದಾರೆ. ಇನ್ನೇನು ಕೊರೋನಾ ಕಡಿಮೆಯಾಯ್ತು ಎಂದು ಜನರು ನಿರಾಳವಾಗುತ್ತಿರುವಾಗ್ಲೇ ಮತ್ತೆ ಕೋವಿಡ್ ಕಾಟ ಹೆಚ್ಚಿದೆ. ಈ ಮಧ್ಯೆ ಅಧ್ಯಯನ ತಂಡ ಆತಂಕಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದೆ. ಮಧುಮೇಹ (Diabetes)ವು ದೀರ್ಘವಾದ ಕೋವಿಡ್ (Long covid) ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನಗಳ ಹೊಸ ವಿಶ್ಲೇಷಣೆಗಳು ಸೂಚಿಸುತ್ತವೆ.
ಕೋವಿಡ್ -19 (Covid-19) ರೋಗಿಗಳಲ್ಲಿ ಮಧುಮೇಹ (Diabetes) ಹೊಂದಿರುವವರು ಆಸ್ಪತ್ರೆಗೆ ದಾಖಲಾಗಿ ಏಳು ದಿನಗಳಲ್ಲಿ ಸಾಯಬಹುದು. ಮತ್ತು 5 ರಲ್ಲಿ 1 ರೋಗಿಗೆ ಟ್ಯೂಬ್ ಬೇಕಾಗಬಹುದು ಮತ್ತು ವೆಂಟಿಲೇಟರ್ ಅಗತ್ಯವಿರಬಹುದು ಎಂದು ಈ ಹಿಂದೆ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ತಜ್ಞರು ಹೇಳಿದ್ದರು. ಫ್ರಾನ್ಸ್‌ನ ನಾಂಟೆಸ್ ವಿಶ್ವವಿದ್ಯಾಲಯದ ಸಂಶೋಧಕರು 2020 ರ ಮಾರ್ಚ್ 10ರಿಂದ 31 ರ ನಡುವೆ 53 ಫ್ರೆಂಚ್ ಆಸ್ಪತ್ರೆಗಳಿಗೆ ದಾಖಲಾದ 1,317 ಕೋವಿಡ್ 19 ರೋಗಿಗಳ ಡೇಟಾವನ್ನು ವಿಶ್ಲೇಷಿಸಿ ಈ ಮಾಹಿತಿಯನ್ನು ತಿಳಿಸಿದ್ದರು.
ದೇಶಾದ್ಯಂತ ಕೊರೋನಾ ಹೆಚ್ಚಳ, ಒಂದೇ ದಿನ 8000ಕ್ಕೂ ಹೆಚ್ಚು ಕೇಸ್ !
ಈ ರೋಗಿಗಳಲ್ಲಿ ಹೆಚ್ಚಿನವರು ಅಂದರೆ ಸುಮಾರು 90 ಪ್ರತಿಶತದಷ್ಟು ಜನರು ಟೈಪ್ 2 ಡಯಾಬಿಟಿಸ್ ಹೊಂದಿದ್ದರೆ, ಕೇವಲ 3 ಪ್ರತಿಶತದಷ್ಟು ಜನರು ಟೈಪ್ 3 ಡಯಾಬಿಟಿಸ್ ಹೊಂದಿದ್ದಾರೆ ಮತ್ತು ಉಳಿದ ಪ್ರಕರಣಗಳಲ್ಲಿ ಇತರ ರೀತಿಯ ಮಧುಮೇಹವಿದೆ ಎಂದು ತಿಳಿದುಬಂದಿತ್ತು. ಸದ್ಯ ಹೊಸ ಅಧ್ಯಯನದ ತಂಡವೂ ಈ ಮಾಹಿತಿಯನ್ನು ದೃಢಪಡಿಸಿದೆ.
ಕೋವಿಡ್-19 ಚೇತರಿಕೆಯ ನಂತರ ಕನಿಷ್ಠ ನಾಲ್ಕು ವಾರಗಳವರೆಗೆ ಜನರನ್ನು ಪತ್ತೆಹಚ್ಚಿದ ಅಧ್ಯಯನಗಳನ್ನು ಸಂಶೋಧಕರು ಪರಿಶೀಲಿಸಿದ್ದಾರೆ, ಯಾವ ವ್ಯಕ್ತಿಗಳು ಮೆದುಳಿನ ಮಂಜು, ಚರ್ಮದ ಪರಿಸ್ಥಿತಿಗಳು, ಖಿನ್ನತೆ ಮತ್ತು ಉಸಿರಾಟದ ತೊಂದರೆಯಂತಹ ದೀರ್ಘ ಕೋವಿಡ್‌ಗೆ ಸಂಬಂಧಿಸಿದ ನಿರಂತರ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ಗಮನಿಸಲಾಯಿತು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್‌ನ ವಾರ್ಷಿಕ ವೈಜ್ಞಾನಿಕ ಸೆಷನ್ಸ್‌ನ ಪ್ರಕಾರ, ಮೂರು ಅಧ್ಯಯನಗಳಲ್ಲಿ, ಮಧುಮೇಹವಿಲ್ಲದ ಜನರಿಗೆ ಹೋಲಿಸಿದರೆ ಮಧುಮೇಹ ಹೊಂದಿರುವ ಜನರು ದೀರ್ಘ ಕೋವಿಡ್ ಸಮಸ್ಯೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚಾಗಿದೆ.
ಸೋಂಕು ತಗುಲಿ ವರ್ಷ ಕಳೆದರೂ ನಾಲ್ಕರಲ್ಲಿ ಒಬ್ಬ ಕೋವಿಡ್ ರೋಗಿ ಮಾತ್ರ ಸಂಪೂರ್ಣ ಚೇತರಿಕೆ: ಯುಕೆ ಅಧ್ಯಯನ
ದೀರ್ಘಾವಧಿಯ ಕೋವಿಡ್‌ಗೆ ಮಧುಮೇಹವು ಪ್ರಬಲ ಅಪಾಯಕಾರಿ ಅಂಶವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಅವರ ಸಂಶೋಧನೆಗಳು ಪ್ರಾಥಮಿಕವಾಗಿವೆ. ಏಕೆಂದರೆ ಅಧ್ಯಯನಗಳು ವಿಭಿನ್ನ ವಿಧಾನಗಳು, ದೀರ್ಘಕೋವಿಡ್‌ನ ವ್ಯಾಖ್ಯಾನಗಳು ಮತ್ತು ಅನುಸರಣಾ ಸಮಯವನ್ನು ಬಳಸಿದವು. ದೀರ್ಘಾವಧಿಯ ಕೋವಿಡ್‌ಗೆ ಮಧುಮೇಹವು ನಿಜವಾಗಿಯೂ ಅಪಾಯಕಾರಿ ಅಂಶವಾಗಿದೆಯೇ ಎಂದು ನಿರ್ಧರಿಸಲು ಉತ್ತಮ ಗುಣಮಟ್ಟದ ಅಧ್ಯಯನಗಳು ಅಗತ್ಯವಿದೆ ಎಂದು ತಿಳಿದುಬಂದಿದೆ.
ಡಯಾಬೆಟೊಲೊಜಿಯಾ ಜರ್ನಲ್ನಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಮಧುಮೇಹ ಹೊಂದಿರುವ ಕೋವಿಡ್ ರೋಗಿಗಳಲ್ಲಿ ಮೂರನೇ ಎರಡರಷ್ಟು ಪುರುಷರು ಮತ್ತು ಎಲ್ಲರೂ ಸರಾಸರಿ 70 ವರ್ಷ ವಯಸ್ಸಿನವರಾಗಿದ್ದರು. ರಕ್ತದಲ್ಲಿನ ಸಕ್ಕರೆ ನಿಯಂತ್ರಣವು ರೋಗಿಯ ಫಲಿತಾಂಶದ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ ಎಂದು ಸಂಶೋಧಕರು ಕಂಡುಕೊಂಡರು, ಆದರೆ ಮಧುಮೇಹ ತೊಂದರೆಗಳು ಮತ್ತು ವೃದ್ಧಾಪ್ಯವು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಮಾಹಿತಿಯನ್ನು ಸಂಶೋಧನೆ ಬಹಿರಂಗಗೊಳಿಸಿದೆ.
ದೀರ್ಘ ಕೋವಿಡ್ ಸೋಂಕಿನ ಪ್ರಭಾವ ಮಹಿಳೆಯರ ಆರೋಗ್ಯದ ಮೇಲೆಯೇ ಅಧಿಕ
47 ಪ್ರತಿಶತದಷ್ಟು ಜನರಿಗೆ ಕಣ್ಣು, ಮೂತ್ರಪಿಂಡ ಮತ್ತು ನರಗಳಲ್ಲಿ ತೊಂದರೆಗಳಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಆದರೆ 41 ಪ್ರತಿಶತ ರೋಗಿಗಳಿಗೆ ಹೃದಯ, ಮೆದುಳು ಮತ್ತು ಕಾಲು ಸಮಸ್ಯೆಗಳಿವೆ. 5 ರಲ್ಲಿ 1 ರೋಗಿಗೆ ಏಳನೇ ದಿನಕ್ಕೆ ನಾಳ ಮಾಡಬೇಕಾಗಿತ್ತು ಮತ್ತು ತೀವ್ರ ನಿಗಾದಲ್ಲಿ ವೆಂಟಿಲೇಟರ್‌ಗಳ ಮೇಲೆ ಇಡಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಹೊತ್ತಿಗೆ 10 ರಲ್ಲಿ ಓರ್ವ ಸಾವನ್ನಪ್ಪಿದರು ಮತ್ತು 18 ಪ್ರತಿಶತದಷ್ಟು ಜನರು ಚೇತರಿಸಿಕೊಂಡು ಮನೆಗೆ ಮರಳಿದರು ಎಂದು ಸಂಶೋಧನೆ ತಿಳಿಸಿದೆ.