ದೇಶಾದ್ಯಂತ ಕೊರೋನಾ ಹೆಚ್ಚಳ, ಒಂದೇ ದಿನ 8000ಕ್ಕೂ ಹೆಚ್ಚು ಕೇಸ್‌ !

ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಹಾಗೆ ಕೊರೋನಾ (Corona) ಕಾಟ ಮತ್ತೆ ಶುರುವಾಗಿದೆ. ಮಂಕಿಪಾಕ್ಸ್ (Monkeypox), ಟೊಮೇಟೋ ಫ್ಲೂ ನಡುವೆನೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. 7000 ಆಸುಪಾಸಿನಲ್ಲಿದ್ದ ಕೇಸ್ ಶುಕ್ರವಾರ 8000 ದಾಟಿದೆ. 24 ಗಂಟೆಗಳಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

India Reports 8,329 Fresh Covid-19 Cases, 10 Deaths In 24 Hours Vin

ಎರಡು ವರ್ಷಗಳ ಕಾಲ ಜನರನ್ನು ಹೈರಾಣಾಗಿಸಿದ್ದ ಮಹಾಮಾರಿ ಕೊರೋನಾ ವೈರಸ್‌ (Corona virus) ಇನ್ನೇನು ಕಡಿಮೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ದೇಶಾದ್ಯಂತ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯದ (Central Health ministry) ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 8,329 ಹೊಸ ಕೊರೊನಾ ವೈರಸ್ ಪ್ರಕರಣಗಳು ಮತ್ತು 10 ಸಾವುಗಳು ವರದಿಯಾಗಿವೆ. ಇದು ಮೂರು ತಿಂಗಳ ಅವಧಿಯಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಕಳೆದ 24 ಗಂಟೆಗಳಲ್ಲಿ 4,103 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 40,370 ಕ್ಕೆ ತೆಗೆದುಕೊಂಡಿದೆ.

ಕೊರೋನಾ ಅಲೆ ಭೀತಿಯ ನಡುವೆ ದೇಶದಲ್ಲಿ ಕೊರೋನಾ ಮತ್ತಷ್ಟುಅಬ್ಬರಿಸಿದೆ. ಶುಕ್ರವಾರ ಮಹಾರಾಷ್ಟ್ರದಾದ್ಯಂತ 3,081 ಹೊಸ ಕೋವಿಡ್ -19 ಪ್ರಕರಣಗಳು ಕಂಡುಬಂದಿದ್ದು, 1,956 ಸೋಂಕುಗಳು ಮುಂಬೈನಲ್ಲಿ ಪತ್ತೆಯಾಗಿವೆ. ಜನವರಿ 23 ರಿಂದ ಮೊದಲ ಬಾರಿಗೆ, ಮುಂಬೈ ಶುಕ್ರವಾರ ಕೋವಿಡ್ -19 ಪ್ರಕರಣಗಳನ್ನು 1,956 ಕ್ಕೆ ದಾಖಲಿಸಿದೆ. ಇದು ಶೇಕಡಾ 15 ರಷ್ಟು ಏರಿಕೆಯಾಗಿದೆ, ಏಕೆಂದರೆ ನಗರದಲ್ಲಿ ಒಂದು ದಿನ ಮೊದಲು 1,702 ಪ್ರಕರಣಗಳು ವರದಿಯಾಗಿವೆ.

Covid Crisis: ಬೆಂಗ್ಳೂರಲ್ಲಿ ಕೊರೋನಾ ಹೆಚ್ಚಳ: ಪ್ರತಿದಿನ 300ಕ್ಕೂ ಅಧಿಕ ಕೇಸ್

ಪರೀಕ್ಷಾ ಧನಾತ್ಮಕತೆಯ ದರ ನಡೆಸಿದ ಒಟ್ಟು ಪರೀಕ್ಷೆಗಳಲ್ಲಿ ಧನಾತ್ಮಕ ಪ್ರಕರಣಗಳ ಸಂಖ್ಯೆ - ಶುಕ್ರವಾರ ನಗರದಲ್ಲಿ 12.74 ಶೇಕಡಾವನ್ನು ತಲುಪಿದೆ. ಬುಧವಾರ 5,233 ಪ್ರಕರಣಗಳು ವರದಿಯಾಗಿದೆ. ಒಂದೇ ದಿನ 5000ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗಿದ್ದು 93 ದಿನದಲ್ಲಿ (3 ತಿಂಗಳಲ್ಲಿ) ಇದೇ ಮೊದಲು ಎಂದು ಕೇಂದ್ರ ಸರ್ಕಾರ ಹೇಳಿದೆ. 

ಕರ್ನಾಟಕ (Karnataka)ದಲ್ಲೂ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳ
 ರಾಜ್ಯದಲ್ಲೂ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 525 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,55,309ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾದಿಂದ ನಿನ್ನೆ  ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ 40066 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 

ರಾಜ್ಯದಲ್ಲಿ ನಿನ್ನೆ  228 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 39,12,024ಕ್ಕೆ ಏರಿಕೆಯಾಗಿದೆ. ಇನ್ನು 3117 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ಬೆಂಗಳೂರಿನಲ್ಲಿ 494 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,177 ಆಗಿದ್ದು, ಅದರಲ್ಲಿ ಬೆಂಗಳೂರು ಗರಿಷ್ಠ 3,061 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ದೇಶದಲ್ಲಿ ಕೊರೋನಾ ಮಧ್ಯೆನೇ ನೊರೋ ವೈರಸ್ ಆತಂಕ, ಇದು ಕೋವಿಡ್‌ನಂತೆಯೇ ಮಾರಣಾಂತಿಕವೇ ?

ಮಂಕಿಪಾಕ್ಸ್‌ ಬಗ್ಗೆ ನಿಗಾ
ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿ ಪಾಕ್ಸ್‌ (Monkeypox0 ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿಲ್ಲ. ಆದರೆ, ಈ ರೋಗದ ಲಕ್ಷಣಗಳ ಬಗ್ಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಇಂತಹ ರೋಗ ಲಕ್ಷಣದ ಪ್ರಕರಣ ಕಂಡು ಬಂದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ರವಾನಿಸಿ ಹೆಚ್ಚಿನ ಚಿಕಿತ್ಸೆಗೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಮಂಕಿ ಪಾಕ್ಸ್‌ ರೋಗ ಚಿಕಿತ್ಸೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios