Kannada

ಜೀರ್ಣಕ್ರಿಯೆ ಸಮಸ್ಯೆ ಇದ್ದರೆ

ಸಿಹಿ ಗೆಣಸಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತೆ. ಹಾಗಾಗಿ, ಇದನ್ನು ಅತಿಯಾಗಿ ತಿಂದರೆ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
Kannada

ಕಿಡ್ನಿ ಸಮಸ್ಯೆ ಇರುವವರು

ಸಿಹಿ ಗೆಣಸಿನಲ್ಲಿ ಕಿಡ್ನಿ ಕಲ್ಲುಗಳಿಗೆ ಕಾರಣವಾಗುವ ಆಕ್ಸಲೇಟ್ ಅಂಶವಿದೆ. ಅಷ್ಟೇ ಅಲ್ಲ, ಇದರಲ್ಲಿ ಪೊಟ್ಯಾಶಿಯಂ ಕೂಡ ಹೆಚ್ಚಾಗಿರೋದ್ರಿಂದ ಕಿಡ್ನಿ ಸಮಸ್ಯೆ ಇರುವವರು ಇದನ್ನು ತಿನ್ನದೇ ಇರುವುದು ಉತ್ತಮ.
Image credits: Getty
Kannada

ಮಧುಮೇಹಿಗಳು ಗಮನಿಸಿ

ಸಿಹಿ ಗೆಣಸಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುತ್ತೆ. ಹೀಗಾಗಿ, ಸಕ್ಕರೆ ಕಾಯಿಲೆ ಇರುವವರು ಇದನ್ನು ಮಿತವಾಗಿ ಸೇವಿಸಬೇಕು. ಇಲ್ಲದಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗಬಹುದು.
Image credits: Getty
Kannada

ರಕ್ತದೊತ್ತಡ ಸಮಸ್ಯೆ ಇದ್ದರೆ

ಸಿಹಿ ಗೆಣಸಿನಲ್ಲಿ ಪೊಟ್ಯಾಶಿಯಂ ಅಧಿಕವಾಗಿದೆ. ಹಾಗಾಗಿ, ರಕ್ತದೊತ್ತಡ (ಬಿಪಿ) ಸಮಸ್ಯೆ ಇರುವವರು ಅಥವಾ ಅದಕ್ಕಾಗಿ ಔಷಧಿ ತೆಗೆದುಕೊಳ್ಳುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
Image credits: Getty
Kannada

ತೂಕ ಇಳಿಸಬೇಕೆಂದಿದ್ದರೆ

ಸಿಹಿ ಗೆಣಸಿನಲ್ಲಿ ಕ್ಯಾಲೋರಿಗಳು ಹೆಚ್ಚಾಗಿವೆ. ಇದು ದೇಹದ ತೂಕವನ್ನು ಹೆಚ್ಚಿಸಬಹುದು. ಹಾಗಾಗಿ, ತೂಕ ಇಳಿಸಿಕೊಳ್ಳಬೇಕು ಅಂದುಕೊಂಡವರು ಇದನ್ನು ತಿನ್ನದಿರುವುದು ಒಳ್ಳೆಯದು.
Image credits: pinterest
Kannada

ಥೈರಾಯ್ಡ್ ಸಮಸ್ಯೆ

ಸಿಹಿ ಗೆಣಸಿನಲ್ಲಿ ಥೈರಾಯ್ಡ್ ವಿರೋಧಿ ಗುಣಗಳಿವೆ. ಇದು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ, ಈ ಸಮಸ್ಯೆ ಇರುವವರು ಇದನ್ನು ಮಿತವಾಗಿ ಸೇವಿಸಿ.
Image credits: Getty
Kannada

ಅಲರ್ಜಿ ಸಮಸ್ಯೆ ಇದ್ದರೆ

ಕೆಲವರಿಗೆ ಸಿಹಿ ಗೆಣಸು ಅಲರ್ಜಿಯನ್ನು ಉಂಟುಮಾಡಬಹುದು. ಇದನ್ನು ತಿಂದ ನಂತರ ಚರ್ಮ ಕೆಂಪಾಗುವುದು, ತುರಿಕೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ, ತಕ್ಷಣವೇ ತಿನ್ನುವುದನ್ನು ನಿಲ್ಲಿಸಿ.
Image credits: social media
Kannada

ವಿಟಮಿನ್ ಎ ಅಧಿಕವಾದರೆ

ಸಿಹಿ ಗೆಣಸಿನಲ್ಲಿರುವ ಬೀಟಾ-ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ತಲೆನೋವು, ವಾಂತಿ ಮತ್ತು ಲಿವರ್ ಸಮಸ್ಯೆಗಳು ಉಂಟಾಗಬಹುದು.
Image credits: Meta AI

ದಿನಾ ಸೋಂಪು ಕಾಳು ತಿಂದರೆ ಸಿಗುತ್ತೆ ಈ 7 ಅದ್ಭುತ ಪ್ರಯೋಜನಗಳು

ಕರುಳಿನ ಆರೋಗ್ಯ ಸುಧಾರಿಸುವ 6 ಅದ್ಭುತ ಪಾನೀಯಗಳು

ದಿಢೀರ್ ಅಂತ ತೂಕ ಇಳೀತಿದ್ಯಾ? ಎಚ್ಚರ ಈ 5 ಅಪಾಯಕಾರಿ ಕಾಯಿಲೆಗಳೇ ಕಾರಣವಿರಬಹುದು!

ಅಷ್ಟೇ ತಾನೇ ಎಂದು ನೀವು ಮಾಡೋ ಈ ಸಣ್ಣ ತಪ್ಪುಗಳು ಜೀವನವನ್ನೇ ಹಾಳು ಮಾಡುತ್ತೆ