Asianet Suvarna News Asianet Suvarna News

ಒಂಟಿತನ, ಏನೋ ಕಳೆದುಕೊಂಡಂಗೆ ಆಗ್ತಿದೆ ಅಂದ್ರೆ ಅಪ್ಪಿಕೊಳ್ಳಿ! ಇದ್ರಿಂದ್ ಆಗೋ ಲಾಭ ಒಂದೆರಡಲ್ಲ

ಮಾನಸಿಕ ರೋಗಕ್ಕೆ ಚಿಕಿತ್ಸಾ ವಿಧಾನಗಳ ಭಿನ್ನವಾಗಿರುತ್ತವೆ. ನೀವು ಔಷಧಿ – ಮಾತ್ರೆಯಿಂದ ಮಾತ್ರವಲ್ಲ ಮಾತು, ಸ್ಪರ್ಶದಿಂದಲೂ ರೋಗವನ್ನು ಗುಣಪಡಿಸಬಹುದು. ಒಂದೇ ಒಂದು ಸ್ಪರ್ಶ ಇಡೀ ವಾರ ನಿಮ್ಮನ್ನು ಸಂತೋಷವಾಗಿಡುತ್ತದೆ. 
 

Cuddle Therapy Helps Reduce Stress And Loneliness roo
Author
First Published May 8, 2024, 12:29 PM IST

ಬೇಸರವಾದಾಗ, ಒತ್ತಡಕ್ಕೆ ಒಳಗಾದಾಗ ಜನರಿಗೆ ಭರವಸೆ ನೀಡುವ ವ್ಯಕ್ತಿಯ ಆಸರೆಯ ಅವಶ್ಯಕತೆ ಇರುತ್ತದೆ. ಜನರು ಮತ್ತೆ ಹಿಂದಿನಂತಾಗಲು, ತಮ್ಮ ನೋವನ್ನು ಹಂಚಿಕೊಂಡು ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳಲು ಹಾಗೆ ಸ್ನೇಹದಿಂದ ವರ್ತಿಸಲು ಅವರಿಗೆ ಸ್ಪರ್ಶ ಸಹಾಯ ಮಾಡಬಲ್ಲದು. ಆಪ್ತರೊಬ್ಬರು ನೋವಿನಲ್ಲಿದ್ದಾಗ ಒಂದು ಅಡಿ ಅಂತರದಲ್ಲಿ ನಿಂತು, ಏನಾಗಲ್ಲ ನಾನಿದ್ದೇನೆ ಅನ್ನೋದು ಬೇರೆ, ಅವರ ಬಳಿ ಹೋಗಿ ಅವರನ್ನು ಸ್ಪರ್ಶಿಸಿ ಇಲ್ಲವೆ ಅಪ್ಪಿಕೊಂಡು ಧೈರ್ಯ ತುಂಬುವುದೇ ಬೇರೆ. ನೀವು ಅವರನ್ನು ಸ್ಪರ್ಶಿಸಿ, ಧೈರ್ಯ ತುಂಬಿದಾಗ ಅವರ ನೋವು ಕಡಿಮೆ ಆಗದೆ ಇದ್ದರೂ ಮನಸ್ಸಿಗೊಂದು ನೆಮ್ಮದಿ ಸಿಗುತ್ತದೆ. ನಾವಿಂದು ತಬ್ಬಿಕೊಳ್ಳುವ ಅಥವಾ ಅಪ್ಪಿಕೊಳ್ಳುವ ಥೆರಪಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.  

ತಪ್ಪಿಕೊಳ್ಳುವ ಥೆರಪಿ (Cuddle Therapy) ಎಂದರೇನು? : ಆರಾಮ ಮತ್ತು ಸಂಪರ್ಕವನ್ನು ಒದಗಿಸಲು ದೈಹಿಕ ಸ್ಪರ್ಶ (Touch) ವನ್ನು ಬಳಸುವ ಕ್ರಿಯೆಯಾಗಿದೆ. ತರಬೇತಿ ಪಡೆದ ತಜ್ಞರು ಅಪ್ಪಿಕೊಳ್ಳುವ ಮೂಲಕ ರೋಗಿಗಳಿಗೆ ಚಿಕಿತ್ಸೆ (Treatment) ನೀಡುತ್ತಾರೆ. ಒಂಟಿತನ (Lonliness) ಅನುಭವಿಸುವ ಅಥವಾ ಒತ್ತಡಕ್ಕೆ (Stress) ಒಳಗಾದ ಜನರು ಭರವಸೆ ಸ್ಪರ್ಶವನ್ನು ಬಯಸುತ್ತಾರೆ. ಇನ್ಸ್ಟಾಗ್ರಾಮ್ (Instagram) ನಲ್ಲಿ ಹಗ್ ಥೆರಪಿಸ್ಟ್ ಚೈತ್ರಾ, ಈ ಥೆರಪಿ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೇಸಿಗೆಯಲ್ಲಿ ಚಿಕನ್ ಎಷ್ಟು ಸೇಫ್‌? ಚಿಕನ್ ಶವರ್ಮಾ ತಿಂದ 19 ವರ್ಷದ ತರುಣ ಸಾವು, ಐವರು ಅಸ್ವಸ್ಥ

ಅಪ್ಪುಗೆ ಥೆರಪಿಯಿಂದಾಗುವ ಲಾಭವೇನು? : ಈ ಥೆರಪಿಯಲ್ಲಿ ನಕಾರಾತ್ಮಕ ಭಾವನೆ (Negaitve Feelings) ಸಕಾರಾತ್ಮಕವಾಗಿ ಬದಲಾಗುತ್ತದೆ. ನಾವು ಯಾರನ್ನಾದ್ರೂ ಹಗ್ ಮಾಡಿದಾಗ ಅವರು ರಿಲ್ಯಾಕ್ಸ್ ಫೀಲ್ ಆಗ್ತಾರೆ. ಅವರ ಟೆನ್ಷನ್ (Tension) ಕಡಿಮೆಯಾಗಿ ಅವರು ಶಾಂತತೆಯನ್ನು (Tranquility) ಅನುಭವಿಸುತ್ತಾರೆ. ಅಮ್ಮ ತನ್ನ ಮಗುವನ್ನು ಅಪ್ಪಿಕೊಂಡಾಗ ಪ್ರತಿಯೊಂದು ಮಗು ಕೂಡ ಸುರಕ್ಷಿತ ಭಾವನೆಯನ್ನು (Secured Feeling) ಅನುಭವಿಸುತ್ತದೆ. ಅಮ್ಮನ ಅಪ್ಪಿಗೆ ಅದಕ್ಕೆ ನೆಮ್ಮದಿ ನೀಡುತ್ತದೆ. ಅದೇ ರೀತಿ, ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಅಪ್ಪಿಕೊಂಡಾಗ ನೆಮ್ಮದಿ (Peace of Mind) ಸಿಗುತ್ತದೆ. ಈ ಅಪ್ಪುಗೆ ಥೆರಪಿ ಅವರ ಆಲೋಚನಾ ಗತಿಯನ್ನು ಬದಲಿಸುತ್ತದೆ ಎನ್ನುತ್ತಾರೆ ಚೈತ್ರಾ. 

ನಾವು ಯಾವುದೇ ವ್ಯಕ್ತಿಯನ್ನು ಅಪ್ಪಿಕೊಂಡಾಗ ಆಕ್ಸಿಟೋಸಿನ್, ಸಿರೊಟೋನಿನ್ ಮತ್ತು ಡೋಪಮೈನ್‌ (Dopamine) ಬಿಡುಗಡೆಯಾಗುತ್ತದೆ. ನಿಯಮಿತ ಅಪ್ಪುಗೆಯು ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಒತ್ತಡ (Stress), ಖಿನ್ನತೆಯನ್ನು (Depression) ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುತ್ತದೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೆ (Heart Health) ಪ್ರಯೋಜನಕಾರಿ.  ಏಕೆಂದರೆ ಅಪ್ಪಿಕೊಳ್ಳುವುದು ರಕ್ತದೊತ್ತಡವನ್ನು (Blood Pressure) ಕಡಿಮೆ ಮಾಡುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಬರೀ ಸ್ಪರ್ಶದ (Touch) ಕ್ಷಣದಲ್ಲಿ ಮಾತ್ರ ನಮಗೆ ಇದ್ರಿಂದ ಪ್ರಯೋಜನ ಸಿಗುವುದಿಲ್ಲ. ವ್ಯಕ್ತಿಯು ಹೋದ ನಂತರವೂ ಅದರ ಪರಿಣಾಮವು ನಮ್ಮೊಂದಿಗೆ ಉಳಿಯುತ್ತದೆ. ಅಂದರೆ ನಾನು ಸೋಮವಾರ ಸ್ನೇಹಿತನನ್ನು ಭೇಟಿಯಾದೆ, ಇಡೀ ವಾರ ನೀವು ಇದ್ರ ಪರಿಣಾಮ ನೋಡಬಹುದು. 

ಅಪ್ಪುಗೆ ಥೆರಪಿ ಹೇಗಿರುತ್ತದೆ? : ಈ ಥೆರಪಿ ಸಾಮಾನ್ಯವಾಗಿ ಕೆಲವು ವಿಶ್ರಾಂತಿ ವ್ಯಾಯಾಮಗಳು (Relaxed Exercise) ಮತ್ತು ಉಸಿರಾಟದ ವ್ಯಾಯಾಮದೊಂದಿಗೆ (Breathing Exertcise) ಪ್ರಾರಂಭವಾಗುತ್ತದೆ. ಇದು ವಿಶ್ರಾಂತಿ ಪಡೆಯಲು ಮತ್ತು ಅಪರಿಚಿತರನ್ನು ಅಪ್ಪಿಕೊಳ್ಳಲು ಕಾಡುವ ಹೆದರಿಕೆ ಅಥವಾ ಉದ್ವೇಗವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಥೆರಪಿಗೆ ನಂಬಿಕೆ ಮುಖ್ಯ. ಥೆರಪಿಸ್ಟ್ (Therapist) ಈ ಸಮಯದಲ್ಲಿ ನಿಮ್ಮ ಭಾವನೆಯನ್ನು ಹೊರಹಾಕುವಂತೆ ಒತ್ತಾಯಿಸುತ್ತಾರೆ. ರೋಗಿಗಳು ಥೆರಪಿಸ್ಟ್ ಮಡಿಲಿನಲ್ಲಿ ಮಲಗಿ ಇಲ್ಲವೆ ಅವರ ಭುಜಕ್ಕೆ ತಮ್ಮ ತಲೆಯಿಟ್ಟು ನೆಮ್ಮದಿ ಪಡೆಯುತ್ತಾರೆ. ತಮ್ಮ ನೋವನ್ನು ಹಂಚಿಕೊಳ್ಳುತ್ತಾರೆ.

ಕೋವಿಶೀಲ್ಡ್‌ ಆತಂಕದ ನಡುವೆ, ಜಾಗತಿಕವಾಗಿ ಕೋವಿಡ್ ಲಸಿಕೆ ಹಿಂಪಡೆಯುತ್ತಿರುವ ಅಸ್ಟ್ರಾಜೆನೆಕಾ ಕಂಪೆನಿ!

ಹಗ್ ಥೆರಪಿ (Hug Therapy) ಅವಶ್ಯಕತೆ ನಿಮಗಿದೆಯೇ? : ನೀವು ಸ್ವಾಭಾವಿಕವಾಗಿ ಸ್ಪರ್ಶವನ್ನು ಬಯಸುತ್ತಿದ್ದು, ನಿಮಗೆ ಅಗತ್ಯವಿರುವಷ್ಟು ಸ್ಪರ್ಶ ಸಿಗ್ತಿಲ್ಲ ಎಂದಾದಾಗ  ನೀವು ಕಡ್ಲ್ ಥೆರಪಿ ಸಹಾಯ ಪಡೆಯಬಹುದು. ಇದು ವಿಶೇಷವಾದ ಚಿಕಿತ್ಸೆ. 

Latest Videos
Follow Us:
Download App:
  • android
  • ios