ಕೊರೋನಾ ಕಾಲ: ಯುವಜನರ ಮಾನಸಿಕ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ
ಯುವ ಮನಸುಗಳನ್ನು ಕಾಡಿದ ಕೊರೋನಾ ಮಹಾಮಾರಿ | ಯುವಜನರ ಮಾನಸಿಕ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ
ಕೊರೋನಾ ಕಾಲ ಜನರ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಿದೆ. ಲಾಕ್ಡೌನ್ನಿಂದ ಮನೆಯ ನಾಲ್ಕು ಗೋಡೆ ಮಧ್ಯೆ ಉಳಿದದ್ದಲ್ಲದೆ ಇಂದಿಗೂ ಸ್ವಚ್ಛಂದ ಓಡಾಟ ಕಷ್ಟವೇ. ಈ ಕೊರೋನಾ ಮಹಾಮಾರಿ ಯುವಜನರ ಮಾನಸಿಕ ಆರೋಗ್ಯದ ಮೇಲೆ ಭಾರೀ ಕೆಟ್ಟ ಪರಿಣಾಮ ಬೀರಿದೆ.
ಮುಖ್ಯವಾಗಿ ಯುವಜನರು ಡಿಪ್ರೆಷನ್ಗೆ ಒಳಗಾಗುತ್ತಿದ್ದು, ಇದರಿಂದ ಮಾನಸಿಕ ಆರೋಗ್ಯ ಹದೆಗೆಡುತ್ತಿರುವುದಾಗಿ ಇತ್ತೀಚಿನ ಅಧ್ಯಯನ ತಿಳಿಸಿದೆ.
ಅಬ್ಬಬ್ಬಾ...! ನೀವು ವರ್ಕ್ ಫ್ರಂ ಹೋಂ ಮಾಡ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ!
ಸೈಕಿಯಾಟ್ರಿ ರಿಸರ್ಚ್ ಎಂಬ ಮ್ಯಾಗಝಿನ್ನಲ್ಲಿ ಪ್ರಕಟವಾದ ಅಧ್ಯಯನ ವರದಿ ಇಂತಹ ಒಂದು ವಿಚಾರವನ್ನು ಬಹಿರಂಗಪಡಿಸಿದೆ. ಇದಲ್ಲದೆ ಯುವಜನರಲ್ಲಿ ಮದ್ಯ ಸೇವಿಸುವ ಪ್ರಮಾಣ ಕಡಿಮೆಯಾಗಿದೆ.
ಈ ವಿಶಿಷ್ಟ ಅಧ್ಯಯನದ ಸಮಯದಲ್ಲಿ ಸರ್ರೆ ವಿಶ್ವವಿದ್ಯಾಲಯದ ಸಂಶೋಧಕರು 259 ಯುವಜನರನ್ನು ಸಾಂಕ್ರಾಮಿಕ ಪೂರ್ವ ಮತ್ತು ಆರಂಭಿಕ ಲಾಕ್‌ಡೌನ್ ಕ್ರಮಗಳ ಮಧ್ಯೆ ಅವರ ಖಿನ್ನತೆ, ಆತಂಕ, ಯೋಗಕ್ಷೇಮ, ಆಲ್ಕೊಹಾಲ್ ಬಳಕೆ ಮತ್ತು ನಿದ್ರೆಯ ಪ್ರಮಾಣದ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.
ಊಟವಾದ ತಕ್ಷಣ ಸ್ನಾನ ಮಾಡಬಾರದು ಎಂದೇಕೆ ಹೇಳುತ್ತಾರೆ ಹಿರಿಯರು?
COVID-19 ಸಾಂಕ್ರಾಮಿಕ ರೋಗದಿಂದಾಗಿ ಈ ಯುವ ವಯಸ್ಕರ ಮಾನಸಿಕ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಜನರ ಖಿನ್ನತೆಯಲ್ಲಿ ಗಮನಾರ್ಹ ಏರಿಕೆ ಮತ್ತು ಲಾಕ್‌ಡೌನ್ ಸಮಯದಲ್ಲಿ ಒಟ್ಟಾರೆ ಯೋಗಕ್ಷೇಮ ಕಡಿಮೆಯಾಗಿದೆ.