ಅಬ್ಬಬ್ಬಾ...! ನೀವು ವರ್ಕ್ ಫ್ರಂ ಹೋಂ ಮಾಡ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ!

First Published Mar 26, 2021, 4:50 PM IST

ಕೊರೋನಾದಿಂದಾಗಿ ಕಳೆದ ವರ್ಷ ಜನರು ಲಾಕ್‌ಡೌನ್ ಎದುರಿಸಬೇಕಾಯ್ತು. ಹಲವಾರು ತಿಂಗಳು ವಿಶ್ವದ ಅನೇಕ ರಾಷ್ಟ್ರಗಳು ಸಂಪೂರ್ಣವಾಗಿ ಬಂದ್ ಆದವು. ಜನರು ಮನೆಯಲ್ಲಿ ಕೈದಿಗಳಂತೆ ಬದುಕಿದರು. ಕೇವಲ ಅಗತ್ಯ ಕೆಲಸವಿದ್ದರಷ್ಟೇ ಮನೆಯಿಂದ ಹೊರ ಹೋಗಲು ಅನುಮತಿ ಇತ್ತು. ಆದರೆ ಕೆಲ ಸಮಯದ ಬಳಿಕ ಈ ಲಾಕ್‌ಡೌನ್ ತೆರವುಗೊಳಿಸಲಾಯ್ತು ಹಾಗೂ ಜನರು ಹೊರಗೆ ಹೋಗಲಾರಂಭಿಸಿದರು. 2021 ರ ಆರಂಭದಲ್ಲಿ ಲಸಿಕೆ ಬಂತು ಹಾಗೂ ಸದ್ಯ ಲಸಿಕೆ ಅಭಿಯಾನದಡಿ ಜನರು ಲಸಿಕೆ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಮತ್ತೊಮ್ಮೆ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಲಾರಂಭಿಸಿದರು. ಹೀಗಿರುವಾಗ ಮತ್ತೆ ಲಾಕ್‌ಡೌನ್ ಹೇರುವ ಮಾತುಗಳು ಜೋರಾಗಿವೆ. ಆದರೆ ಈ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಜನರು ಎದುರಿಸಿದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಸ್ಥೂಲಕಾಯ. ಮನೆಯಲ್ಲೇ ಇದ್ದ ಪರಿಣಾಮ ಜನರು ಬಲು ಬೇಗ ದಪ್ಪಗಾದರು. ಹೀಗಿರುವಾಗ ಅಮೆರಿಕದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದ್ದು, ಪ್ರತಿ ಹತ್ತು ದಿನಕ್ಕೊಮ್ಮೆ ಜನರ ತೂಕ ಹೆಚ್ಚಾಗುತ್ತಿದೆ ಎಂಬ ವಿಚಾರ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದೂ ತಿಳಿಸಿದ್ದಾರೆ.