Asianet Suvarna News Asianet Suvarna News

ಭಾರತದ ಕೊರೋನಾ ಔಷಧ ಸಂಶೋಧನೆಗೆ ರಷ್ಯಾ, ಉತ್ತರ ಕೊರಿಯಾ ಹ್ಯಾಕರ್ಸ್ ಕಾಟ..!

ಭಾರತದಲ್ಲಿ ಸಂಶೋಧಕರು ಕೊರೋನಾ ಔಷಧ ತಯಾರಿಸೋಕೆ ಪರದಾಡಿಕೊಂಡಿದ್ದರೆ, ಅತ್ತ ರಷ್ಯಾ, ಉತ್ತರ ಕೊರಿಯಾದ ಹ್ಯಾಕರ್ಸ್‌ ನಮ್ಮ ಔಷಧವನ್ನು ಕದಿಯೋ ಪ್ರಯತ್ನ ಮಾಡ್ತಿದ್ದಾರೆ

COVID vaccine researchers in India hit by hackers from Russia and North Korea says Microsoft dpl
Author
Bangalore, First Published Nov 17, 2020, 8:21 PM IST

ಕೊರೋನಾ ಔಷಧ ಸಂಶೋಧನೆಯಲ್ಲಿ ತೊಡಗಿರುವ ಪ್ರಮುಖ 7 ಕಂಪನಿಯ ಮಾಹಿತಿಯನ್ನು ಕದಿಯಲು ರಷ್ಯಾ, ಉತ್ತರ ಕೊರಿಯಾ ಪ್ರಯತ್ನಿಸುತ್ತಿದೆ. ಈಗ ಟಾರ್ಗೆಟ್ ಆಗಿರುವ ಕಂಪನಿಗಳು ಭಾರತ, ಕೆನಡಾ, ಫ್ರಾನ್ಸ್, ದಕ್ಷಿಣ ಕೊರಿಯ, ಅಮೆರಿಕಕ್ಕೆ ಸೇರಿದವುಗಳಾಗಿದೆ. ಭಾರತದ ಕೊರೋನಾ ಔಷಧ ಸಂಶೋಧನೆ ಹ್ಯಾಕ್ ಮಾಡೋಕೆ ರಷ್ಯಾ, ನಾರ್ತ್ ಕೊರಿಯಾ ಪ್ರಯತ್ನಿಸುತ್ತಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ಕೊರೋನಾ ಸಂದರ್ಭದಲ್ಲಿ ಔಷಧಿ ಕಂಡುಹಿಡಿಯಲು ಹಗಲಿರುಳು ಕೆಲಸ ಮಾಡುತ್ತಿರುವ ಕಂಪನಿಗಳು ಹ್ಯಾಕಿಂಗ್ ತಡೆಯಲು ಕಾನೂನು ತನ್ನಿ ಎಂದು ಒತ್ತಾಯಿಸುತ್ತಿವೆ. ಔಷಧ ತಯಾರಿಸೋ ಸವಾಲಿನ ಜೊತೆ ಹ್ಯಾಕಿಂಗ್ ಸಮಸ್ಯೆಯನ್ನು ಎದುರಿಸೋ ತಲೆ ನೋವು ಎದುರಿಸುತ್ತಿದ್ದಾರೆ ಸಂಶೋಧಕರು.

ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗದ ನಡುವೆ ಭಾರತ್ ಬಯೋಕೆಟ್‌ನಿಂದ ಮತ್ತೊಂದು ಸಿಹಿ ಸುದ್ದಿ!

ಈ ಲಸಿಕೆ ತಯಾರಕರು, ಕ್ಲಿನಿಕಲ್ ಪ್ರಯೋಗಗಳ ವಿವಿಧ ಹಂತಗಳಲ್ಲಿ ಕೋವಿಡ್ 19 ಲಸಿಕೆ ಹೊಂದಿದ್ದು ಪರೀಕ್ಷೆಗಳನ್ನೂ ನಡೆಸಿವೆ ಎಂಬುದನ್ನು ಮೈಕ್ರೋಸಾಫ್ಟ್ ಗಮನಿಸಿದೆ. ಟಾರ್ಗೆಟ್ ಆಗಿರುವ ಕಂಪನಿಗಳು ಕೋವಿಡ್ 19 ಸಂಬಂಧಿಸಿ ಇತರ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿ ಹೂಡಿಕೆ ಮಾಡಿವೆ.

ಸ್ಟ್ರಾಂಷಿಯಂ ಲಾಗಿನ್ ಡೀಟೆಲ್ಸ್ ಕದಿಯುವ ಪ್ರಯತ್ನ ಮಾಡಿದೆ.  ನೇಮಕಾತಿದಾರರಂತೆ ಬಿಂಬಿಸಿಕೊಂಡು ಸಂದೇಶಗಳನ್ನು ಕಳುಹಿಸಿ ವಿಶ್ವ ಆರೋಗ್ಯ ಸಂಸ್ಥೆಗಳು ಎಂದು ಹೇಳಿಕೊಂಡು COVID-19 ಸಂಶೋಧಕರಿಗೆ ಆಮಿಷಗಳನ್ನು ಒಡ್ಡಲಾಗುಗುತ್ತಿರುವುದು ತಿಳಿದುಬಂದಿದೆ.

Fact Check: ಕೊರೋನಾ ಸೋಂಕಿತರು ಐಸೋಲೇಶನ್‌ಗೆ ಒಳಪಡುವ ಅಗತ್ಯವಿಲ್ಲ ಎಂದಿತಾ WHO?

ಕಂಪನಿಯ ಪ್ರಕಾರ, ಮೈಕ್ರೋಸಾಫ್ಟ್‌ನಿಂದ ನಿರ್ಮಿಸಲಾದ ಭದ್ರತಾ ಟೆಕ್ನಾಲಜಿ ಮೂಲಕ ಈ ಹೆಚ್ಚಿನ ದಾಳಿಗಳನ್ನು ನಿರ್ಬಂಧಿಸಲಾಗಿದೆ. ಆರೋಗ್ಯ ಕಂಪನಿಗಳನ್ನು ಸೈಬರ್‌ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್‌ನ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳನ್ನು ಗುರಿಯಾಗಿಸಲು ransomware ದಾಳಿಯನ್ನು ಬಳಸಿದ್ದಾರೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

Follow Us:
Download App:
  • android
  • ios