ಹೈದರಾಬಾದ್(ನ.17):  ಕೊರೋನಾ ವೈರಸ್ ವಿರುದ್ಧ ಹೋರಾಡಲು ಹಲವು ಫಾರ್ಮಸಿಗಳು, ಸಂಶೋಧನಾ ಕೇಂದ್ರಗಳು ಲಸಿಕೆ ಅಭಿವೃದ್ಧಿ ಪಡಿಸಿ ಪ್ರಯೋಗ ನಡೆಸುತ್ತಿದೆ. ಆರಂಭಿಕ ಹಂತದ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದೆ. ಇದೀಗ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಲಸಿಕೆ 2 ಹಂತದ ಪ್ರಯೋಗ ಯಶಸ್ವಿಯಾಗಿ ಮುಗಿಸಿ ಇದೀಗ 3ನೇ ಹಂತದ ಪ್ರಯೋಗ ನಡೆಸುತ್ತಿದೆ.

ಕೊರೋನಾ ವಿರುದ್ಧ ಹೋರಾಟದಲ್ಲಿ remdesivir ಯಶಸ್ವಿ; ಬೆಂಗಳೂರು ವೈದ್ಯರ ಅಧ್ಯಯನ!.

3ನೇ ಹಂತದ ಪ್ರಯೋಗಕ್ಕೆ ಕೋವ್ಯಾಕ್ಸಿನ್ ಕಾಲಿಟ್ಟಿದೆ. ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ.  BSL3 ಉತ್ಪಾದನೆ ಹೊಂದಿರುವ ವಿಶ್ವದ ಏಕೈಕ ಕಂಪನಿ ಭಾರತ್ ಬಯೋಟೆಕ್ ಆಗಿದೆ. 3ನೇ ಪ್ರಾಯೋಗಿತ ಹಂತದಲ್ಲಿ 26,000 ಸ್ವಯಂ ಪ್ರೇರಿತರಿಗೆ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಹೇಳಿದ್ದಾರೆ.

ಭಾರತೀಯರಿಗೆ ಸಿಗಲಿದೆ ತಿಂಗಳಲ್ಲಿ ಕೋವಿಡ್ ಲಸಿಕೆ? ಯಾವುದದು..?.

ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗದ ನಡುವೆ ಕೃಷ್ಣ ಎಲ್ಲಾ ಮತ್ತೊಂದ ಸಿಹಿ ಸುದ್ದಿ ನೀಡಿದ್ದಾರೆ. ಕೊರೋನಾ ವೈರಸ್‌ಗೆ ಭಾರತ್ ಬಯೋಟೆಕ್ ಕಟ್ಟಿದ ಮೂಗಿಗೆ ನೀಡುವ ನೇಸಲ್ ಡ್ರಾಪ್ ರೀತಿಯ ಡ್ರಾಪ್ ಔಷದವನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದ್ದೇವೆ ಎಂದು ಕೃಷ್ಣ ಎಲ್ಲಾ ಹೇಳಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ICMR(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಜೊತೆ ಅಭಿವೃದ್ದಿ ಪಡಿಸಿದೆ. ಅಕ್ಟೋಬರ್ 2 ರಂದು DCGI(ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) 3ನೇ ಹಂತದ ಪ್ರಯೋಗ ಮಾಡಲು ಭಾರತ್ ಬಯೋಟೆಕ್ ಸಂಸ್ಥೆಗೆ ಅನುಮತಿ ನೀಡಿತ್ತು.