Asianet Suvarna News Asianet Suvarna News

ಕೊರೋನಾ ಬಂತು: ಡಿಜಿಟಲ್‌ ಆಗೋಕೆ ಇದು ಸರಿಯಾದ ಟೈಮು!

ಇರಾನ್‌ನಲ್ಲಿ ಒಂದು ಸೂಚನೆಯನ್ನು ಸರಕಾರ ಹೊರಡಿಸಿದೆ: ಹಣದ ವಹಿವಾಟು ಕಡಿಮೆ ಮಾಡಿ. ಡಿಜಿಟಲ್‌ ಪೇಮೆಂಟ್‌ ಹೆಚ್ಚು ಮಾಡಿ. ಅಂದರೆ, ಕರೆನ್ಸಿ ನೋಟುಗಳನ್ನು ಹೆಚ್ಚು ಬಳಸಬೇಡಿ ಅಂತ ಅರ್ಥ. ಸಣ್ಣ ಮುಖಬೆಲೆಯ ನೋಟುಗಳು ಒಂದು ದಿನದಲ್ಲೇ ಹತ್ತಾರು ಜನರ ಕೈ ಬದಲಾಯಿಸುತ್ತವೆ. ಇದರಲ್ಲಿ ಯಾರೋ ಒಬ್ಬರ ಕೈಯಲ್ಲಿ ಕೊರೊನಾವೈರಸ್‌ ವೈರಸ್‌ಗಳು ಇಲ್ಲವೆಂದು ಹೇಳುವುದು ಹೇಗೆ?

Corona Virus might spread via currency make digital payment
Author
Bengaluru, First Published Mar 6, 2020, 5:40 PM IST

ನಿಮಗೊಂದು ಕತೆ ಹೇಳ್ತೀನಿ. ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ನಿಪಾ ವೈರಸ್‌ ಬಂತು. ಮೊದಲು ಒಬ್ಬ ಹಳ್ಳಿಯ ಮನುಷ್ಯನಲ್ಲಿ ಅದು ಪತ್ತೆಯಾಯ್ತು. ಅದು ಬಂದದ್ದು ಬಾವಲಿಯಿಂದ ಎಂಬುದು ಗೊತ್ತಾದ್ದು ಎಷ್ಟೋ ದಿನಗಳ ಅಧ್ಯಯನದ ನಂತರ. ಆದರೆ ಇದು ಗೊತ್ತಾಗೋ ಅಷ್ಟರಲ್ಲಿ ಸುಮಾರು ಮಂದಿಗೆ ಅದು ಹರಡಿತ್ತು. ಎರಡನೇ ಪೇಷೆಂಟ್‌ಗೆ‌ ನಿಪಾ ಜ್ವರ ಬಂದದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. ಆತನಿಗೂ ಮೊದಲು ಜ್ವರ ಬಂದ ಪೇಷೆಂಟ್‌ಗೂ ಮಧ್ಯದಲ್ಲಿ ಇನ್ನೊಬ್ಬನಿದ್ದ. ಆತನ ಮೂಲಕ ಹಣದ ವ್ಯವಹಾರ ನಡೆಯುತ್ತಿತ್ತು. ಹೀಗೆ ಮೊದಲಿನವನಿಂದ ಮಧ್ಯವರ್ತಿಯ ಮೂಲಕ ಬಂದ ಹಣ ಕೈ ಬದಲಿಸಿ ಎರಡನೇ ವ್ಯಕ್ತಿಯ ಕೈ ಸೇರಿತು. ಎರಡನೇ ವ್ಯಕ್ತಿಗೂ ಜ್ವರ ಬಂತು. ಆತನಿಗೆ ವೈರಸ್‌ ಹರಡಲು ಆ ಹಣದ ವ್ಯವಹಾರವಲ್ಲದೆ ಬೇರೆ ಚಾನ್ಸೇ ಇರಲಿಲ್ಲ. ವೈರಸ್‌ನ ನಂಟು ಯಾರಿಗೆಲ್ಲ ಹರಡಿದೆ ಎಂಬುದರ ಹಿಂದೆ ಬಿದ್ದ ವೈದ್ಯಕೀಯ ಅನ್ವೇಷಕರ ತಂಡದವರಿಗೆ ಈ ಹಣದ ಕಟ್ಟಿನ ಕೈ ಬದಲಾವಣೆಯಲ್ಲಿ ವೈರಸ್‌ ಹರಡಿರುವ ಸಾಧ್ಯತೆಯೇ ಹೆಚ್ಚಾಗಿ ಕಂಡುಬಂತು.

ನಮಸ್ಕಾರ ಮಾಡಿ ಕೊರೋನಾ ದಿಂದ ಬಚಾವ್ ಆಗಿ ಅಂತಿದ್ದಾರೆ ಸಲ್ಮಾನ್ ಖಾನ್...

ಈಗ ಕೊರೊನಾವೈರಸ್‌ ಸಂದರ್ಭದಲ್ಲೂ ಈ ಆತಂಕ ಕಂಡುಬರುತ್ತಾ ಇದೆ. ಇಟೆಲಿಯಲ್ಲಿ ನೂರು ಮಂದಿಗೂ ಹೆಚ್ಚು ಈಗಾಗಲೇ ಸತ್ತಿದ್ದಾರೆ. ಇರಾನ್‌ನಲ್ಲೂ ನೂರಕ್ಕೂ ಅಧಿಕ ಮಂದಿ ಸತ್ತಿದ್ದಾರೆ. ಇರಾನ್‌ನಲ್ಲಿ ಒಂದು ಸೂಚನೆಯನ್ನು ಸರಕಾರ ಹೊರಡಿಸಿದೆ: ಹಣದ ವಹಿವಾಟು ಕಡಿಮೆ ಮಾಡಿ. ಡಿಜಿಟಲ್‌ ಪೇಮೆಂಟ್‌ ಹೆಚ್ಚು ಮಾಡಿ. ಅಂದರೆ, ಕರೆನ್ಸಿ ನೋಟುಗಳನ್ನು ಹೆಚ್ಚು ಬಳಸಬೇಡಿ ಅಂತ ಅರ್ಥ. ಸಣ್ಣ ಮುಖಬೆಲೆಯ ನೋಟುಗಳು ಒಂದು ದಿನದಲ್ಲೇ ಹತ್ತಾರು ಜನರ ಕೈ ಬದಲಾಯಿಸುತ್ತವೆ. ಇವರಲ್ಲಿ ಎಲ್ಲರ ಕೈಗಳೂ ಶುದ್ಧವಾಗಿರುತ್ತವೆ ಎಂದು ಹೇಳುವುದು ಹೇಗೆ? ಅಥವಾ ಇದರಲ್ಲಿ ಯಾರೋ ಒಬ್ಬರ ಕೈಯಲ್ಲಿ ಕೊರೊನಾವೈರಸ್‌ ವೈರಸ್‌ಗಳು ಇಲ್ಲವೆಂದು ಹೇಳುವುದು ಹೇಗೆ? ನಿಪಾ ವೈರಸ್‌ ಹರಡಿದಂತೆ ಕೊರೊನಾವೈರಸ್‌ ಕೂಡ ಹರಡಬಹುದು. ಹೀಗಾಗಿ ಭಾರತದಲ್ಲೂ ಕರೆನ್ಸಿ ನೋಟುಗಳ ವಹಿವಾಟನ್ನು ಸಾಧ್ಯವಾದಷ್ಟೂ ದೂರವಿಡುವುದು, ಡಿಜಿಟಲ್‌ ಪೇಮೆಂಟ್‌ ಮಾಡುವುದು ಈಗ ಉತ್ತಮ. ಈ ಬಗ್ಗೆ ಭಾರತ ಸರಕಾರ ಕೂಡ ಸದ್ಯದಲ್ಲೇ ಪ್ರಕಟಣೆ ಹೊರಡಿಸಬಹುದು ಎಂಬ ನಿರೀಕ್ಷೆ ಇದೆ. ಇನ್ನು ಭಾರತದಲ್ಲಂತೂ ನೋಟುಗಳ ಕತೆ ಕೇಳುವುದೇ ಬೇಡ. ಹರಿದು ಚಿಂದಿಯಾಗಿರುತ್ತವೆ. ಮೀನು ಮಾರುಕಟ್ಟೆಯಲ್ಲಿ ಓಡಾಡುವ ನೋಟುಗಳು ಮೀನಿನದೇ ವಾಸನೆ ಹೊತ್ತಿರುತ್ತವೆ. ಪ್ರತಿಯೊಬ್ಬನ ಕೈಯಲ್ಲೂ ಓಡಾಡುವಾಗ ಅವರ ಕೈಯ ಕೊಳೆ ಸೇರಿಕೊಳ್ಳುತ್ತದೆ. ಕೆಲವು ನೋಟುಗಳ ಮೇಲೆ ವರ್ಷಾಂತರಗಳ ಕೊಳೆ ಸೇರಿಕೊಂಡಿರುತ್ತದೆ. ಇದನ್ನು ಮುಟ್ಟುವುದೇ ಅಸಹ್ಯ ಎನಿಸುತ್ತದೆ. ಅವುಗಳನ್ನು ಮುಟ್ಟುವುದೇ ರೋಗಕಾರಕ. ಇಂಥವುಗಳಿಂದ ದೂರವಿದ್ದು ಡಿಜಿಟಲ್‌ ಪೇಮೆಂಟ್‌ ಮಾಡುವುದು ಸುರಕ್ಷಿತ. ಇದು ಡಿಜಿಟಲ್‌ ಇಂಡಿಯಾಗೂ ನಾವು ನೀಡುವ ಕೊಡುಗೆ.

ಕೊರೋನಾ ಬಂದ ಕೂಡ್ಲೇ ಸಾಯೋಲ್ಲ: ಹೀಗ್ ಮಾಡಿದ್ರೆ ರೋಗ ಬರೋದೇ ಇಲ್ಲ.....

ಬಹುತೇಕ ಈಗ ಎಲ್ಲ ದೇಶಗಳೂ ಕರೆನ್ಸಿ ನೋಟುಗಳನ್ನು ದೂರ ಇಟ್ಟಿವೆ. ಚೀನಾದಲ್ಲೂ ಕೂಡ, ಕೊರೊನಾವೈರಸ್‌ ಹಬ್ಬತೊಡಗಿದಾಗ, ವೈರಸ್‌ ಹರಡಬಹುದಾದಾ ನಾನಾ ಸಂಗತಿಗಳನ್ನು ಚೀನಾ ಸರಕಾರ ಪಟ್ಟಿ ಮಾಡಿ ಬಿಡುಗಡೆ ಮಾಡಿತ್ತು. ಮಾರುಕಟ್ಟೆಯಲ್ಲಿ ಮಾಂಸ ತೆಗೆದುಕೊಳ್ಳಬೇಡಿ; ಮಾರುಕಟ್ಟೆಯಲ್ಲಿ ಯಾವುದನ್ನೇ ತೆಗೆದುಕೊಳ್ಳಬೇಕಾದರೂ ಕೈಗೆ ಗ್ಲೌಸ್‌ ಧರಿಸಿಕೊಳ್ಳಿ; ಪರಸ್ಪರ ಶೇಕ್‌ಹ್ಯಾಂಡ್‌ ಅನಿವಾರ್ಯವಾದರೆ ಮಾತ್ರ ಮಾಡಿ; ತಣ್ಣಗಿನ ಲೋಹದ ವಸ್ತುಗಳ ಮೈಮೇಲೆ ವೈರಸ್‌ಗಳು ಹೆಚ್ಚು ಕಾಲ ಉಳಿಯಬಹುದು, ಆದ್ದರಿಂದ ಅವುಗಳ ಬಗ್ಗೆಯೂ ಎಚ್ಚರ. ಕರೆನ್ಸಿ ನೋಟುಗಳನ್ನು ಪಡೆಯುವಾಗ ಹುಷಾರು. ದಿನಕ್ಕೆ ಹಲವು ಬಾರಿ ಕೈ ತೊಳೆದುಕೊಳ್ಳಿ; ಸ್ಯಾನಿಟೈಸರ್‌ ಹಚ್ಚಿಕೊಳ್ಳಿ- ಹೀಗೆ ಹಲವು ನಿಯಮಗಳು.

ನೋಟಿನಿಂದಲೂ ಹರಡಬಹುದು ಕರೋನಾ

ಮೊನ್ನೆ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ಕೂಡ ಹೀಗೆ ಹೇಳಿದ್ದಾರೆ- ಈಗ ಶೇಕ್‌ಹ್ಯಾಂಡ್‌ ಮಾಡುವುದಕ್ಕಿಂತಲೂ ಭಾರತೀಯರ ಶೈಲಿಯಲ್ಲಿ ಕೈ ಮುಗಿದು ನಮಸ್ಕಾರ ಮಾಡುವುದು ಒಳ್ಳೆಯದು ಅಂತ. ಅದನ್ನು ಈಗ ಇಸ್ರೇಲ್‌ನಲ್ಲಿ ಅನುಸರಿಸುತ್ತಿದ್ದಾರೆ.

Follow Us:
Download App:
  • android
  • ios