ಸಲ್ಮಾನ್ ಖಾನ್ ಅಂದರೆ ಖದರಿಗೆ ಮತ್ತೊಂದು ಹೆಸರು. ಐವತ್ತನಾಲ್ಕು ವರ್ಷದ ಈ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಗೆ ನಮ್ ದೇಶ ಮಾತ್ರವಲ್ಲ, ವಿದೇಶದಲ್ಲೂ ಸಾಕಷ್ಟು ಜನ ಫ್ಯಾನ್ ಗಳಿದ್ದಾರೆ. ಅದರಲ್ಲೂ ಬಾಂಬೆಯಲ್ಲಿ ಹೆಚ್ಚಿನವರು ಉಳಿದೆಲ್ಲ ಸ್ಟಾರ್ ಗಳಿಗಿಂತ ಹೆಚ್ಚಾಗಿ ಸಲ್ಮಾನ್ ಖಾನ್ ಗೇ ಜೈ ಅಂತಾರೆ. ಸಲ್ಮಾನ್ ಖಾನ್ ಸಾಮಾನ್ಯ ಜನರ ಜೊತೆಗೆ ಬೆರೆಯುವುದು, ಮಾಸ್ ಗೆ ಇಷ್ಟವಾಗುವಂಥಾ ಸಿನಿಮಾ ಮಾಡೋದು ಇದಕ್ಕೆ ಕಾರಣ ಇರಬಹುದು. ಮುಂಬೈಯಲ್ಲಿ ಇವತ್ತಿಗೂ ಸಲ್ಮಾನ್ ಖಾನ್ ಬರ್ತಿದ್ದಾರೆ ಅಂದರೆ ಜನ ಮುಗಿಬಿದ್ದು ಬರುತ್ತಾರೆ. ಇಲ್ಲಿನ ಮತ್ಯಾವ ಸ್ಟಾರ್ ಗೂ ಈ ಮಟ್ಟದ ಜನಪ್ರಿಯತೆ ಇಲ್ಲ.

ಕೊರೋನಾ ಬಂದ ಕೂಡ್ಲೇ ಸಾಯೋಲ್ಲ: ಹೀಗ್ ಮಾಡಿದ್ರೆ ರೋಗ ಬರೋದೇ ಇಲ್ಲ......

ಸಲ್ಮಾನ್ ಸೋಷಲ್ ಮೀಡಿಯಾದಲ್ಲೂ ಸಖತ್ ಫೇಮಸ್. ಅವರಿಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಇನ್ ಸ್ಟಾಗ್ರಾಂ ಒಂದರಲ್ಲೇ ಸುಮಾರು ಮೂರು ಕೋಟಿಗೂ ಅಧಿಕ ಜನ ಸಲ್ಲೂಭಾಯ್ ನ ಫಾಲೋ ಮಾಡ್ತಾರೆ. ಅವರು ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡುವ ಹೆಚ್ಚಿನ ಪೋಸ್ಟ್ ಗಳಿಗೆ ಲಕ್ಷಾಂತರ ಜನ ಸ್ಪಂದಿಸುತ್ತಾರೆ. 

ಸದ್ಯಕ್ಕೀಗ ಸಲ್ಮಾನ್ ಖಾನ್ ಜನತೆಗೆ ಒಂದು ಕರೆ ಕೊಟ್ಟಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿ ಬಗ್ಗೆ ಪಾಠ ಮಾಡಿದ್ದಾರೆ. ಜಗತ್ತಿನಾದ್ಯಂತ ಹಬ್ಬುತ್ತಿರುವ ಕೊರೋನಾ ನಮ್ಮ ಭಾರತಕ್ಕೂ ಬಂದಿರುವ ಹಿನ್ನೆಲೆಯಲ್ಲಿ ಈ ಸ್ಟಾರ್ ನಟ ಇಂಥದ್ದೊಂದು ಟೈಮ್ ಲೀ ಡೈಲಾಗ್ ಹೊಡೆದಿದ್ದಾರೆ. ಅವರ ಈ ಪೋಸ್ಟ್ ಅನ್ನು ಇಪ್ಪತ್ತೆರಡು ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. 

 ಜಿಮ್ ನಲ್ಲಿ ತಮ್ಮ ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸುತ್ತಾ ಎರಡೂ ಕೈ ಜೋಡಿಸಿ ಮುಗಿದಿರುವ ಸಲ್ಲೂ ಭಾಯ್ ಫೋಟೋವೂ ಅವರ ಸ್ಟೇಟ್‌ಮೆಂಟ್ ಜೊತೆಗೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ದಬಾಂಗ್ ಹೀರೋ ಏನಂತ ಬರೆದಿದ್ದಾರೆ ಅಂತ ಕೇಳ್ತೀರಾ?

 

ಕರೋನಾ ಭೀತಿ; ಕೈ ಕುಲುಕೋಕಿಂತ ನಮಸ್ತೇಯೇ ವಾಸಿ ಅಂತಿವೆ ವಿದೇಶಗಳು...
 

‘ಕೈ ಮುಗಿದು ನಮಸ್ಕಾರ ಸಲಾಂ ಹೇಳುವುದು ನಮ್ಮ ಸಂಸ್ಕೃತಿ. ಈಗ ಅದನ್ನು ಪಾಲಿಸೋಣ. ಕೊರೋನಾದಿಂದ ದೂರ ಇರೋಣ. ಕೊರೋನಾ ದೂರ ಹೋದ ಮೇಲೆ ಮೊದಲಿನಂತೆ ಶೇಕ್ ಹ್ಯಾಂಡ್‌ ಮಾಡಲು, ತಬ್ಬಿಕೊಳ್ಳಲು ಅಡ್ಡಿಯಿಲ್ಲ’ ಅಂತ ಸ್ಟೇಟ್ ಮೆಂಟ್ ನೀಡಿದ್ದಾರೆ. ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ಭರಪೂರ ಮೆಚ್ಚುಗೆ ಹರಿದುಬಂದಿದೆ. 
 

‘ಸರಿಯಾಗಿ ಹೇಳಿದ್ರಿ’, ‘ನಿಮ್ಮ ಮಾತಿಗೆ ನಮ್ಮ ಸಹಮತವಿದೆ’ ಎಂದೆಲ್ಲ ಅವರ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಈ ಮೂಲಕ ಸಲ್ಮಾನ್ ಜನರಿಂದ ಬೆನ್ನುತಟ್ಟಿಸಿಕೊಂಡಿದ್ದಾರೆ.
 

ನಮ್ಮಲ್ಲಿ ಈಗ ಬಹಳ ಜನಪ್ರಿಯವಾಗ್ತಿರೋದು ನಮಸ್ಕಾರದ ಸಂಸ್ಕೃತಿ. ಕೊರೋನಾ ಹಿನ್ನೆಲೆಯಲ್ಲಿ ಇತರೇ ದೇಶಗಳ ಜನರೂ ಇದೀಗ ನಮ್ಮ ಸಂಸ್ಕೃತಿ ಪಾಲಿಸಲು ಮುಂದಾಗುತ್ತಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಜನ ಸಾಮಾನ್ಯರಿಗೆ ಭಾರತದ ಮಾದರಿಯಲ್ಲಿ ನಮಸ್ಕರಿಸುವುದನ್ನು ಪಾಲಿಸಿ ಅಂತ ಕರೆ ನೀಡಿದ್ದಾರೆ. ಈ ಕೊರೋನಾದಿಂದಾಗ ನಮ್ಮ ಸಂಸ್ಕೃತಿಯ ‘ನಮಸ್ಕಾರ’ ವಿಶ್ವಾದ್ಯಂತ ಗೌರವಕ್ಕೆ ಪಾತ್ರವಾಗುತ್ತಿದೆ. ಕೊರೋನಾ ಸೋಂಕು ಶೇಕ್ ಹ್ಯಾಂಡ್ ಮಾಡೋದ್ರಿಂದಲೂ ಹರಡುವ ಸಾಧ್ಯತೆ ಇದೆ. ಇದರ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯಂತೆ ಚುಂಬಿಸುವುದರಿಂದ, ತಬ್ಬಿಕೊಳ್ಳೋದರಿಂದಲೂ ಬರಬಹುದು. ಈಗಾಗಲೇ ನಮ್ಮ ದೇಶದಲ್ಲಿ ಮೂವತ್ತರಷ್ಟು ಜನರನ್ನು ಕೊರೋನಾ ಸೋಂಕಿತರೆಂದು ಗುರುತಿಸಲಾಗಿದೆ. ದೆಹಲಿಯ ಶಾಲೆಗಳಿಗೆ ಮಾರ್ಚ್ ೩೦ರ ವರೆಗೆ ರಜೆ ನೀಡಲಾಗಿದೆ. ಎಲ್ಲೆಡೆ ಕೊರೋನಾದ್ದೇ ಮಾತು. ವಿಶ್ವಾದ್ಯಂತವೂ ಕೊರೋನಾ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉಸಿರಿನ ಮುಖಾಂತರವೂ ಬರಬಹುದಾದ ಈ ಮಾರಣಾಂತಿಕ ಸೋಂಕಿನ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. 
 

ನಮ್ಮ ನಮಸ್ಕಾರ ಪದ್ಧತಿಯಲ್ಲಿ ವ್ಯಕ್ತಿಯನ್ನು ಸ್ಪರ್ಶಿಸದೇ ದೂರದಲ್ಲೇ ನಿಂತು ಹೃದಯಪೂರ್ವಕವಾಗಿ ನಮಸ್ಕರಿಸುವ ಕಾರಣ ಇನ್ನೊಬ್ಬ ವ್ಯಕ್ತಿಯ ಸೋಂಕುಗಳು ತಗುಲುವ ಸಾಧ್ಯತೆಯೇ ಇಲ್ಲ. ಈ ಎಲ್ಲ ಕಾರಣಗಳಿಗೆ ನಮ್ಮ  ನಮಸ್ಕಾರಕ್ಕೆ ಜಗತ್ತೇ ತಲೆಬಾಗಿದೆ.