ಹಾರ್ವರ್ಡ್ ವಿಜ್ಞಾನಿಗಳ ಸಂಶೋಧನೆ ಯಶಸ್ವಿ, 'ಇನ್ನು ಮುಂದೆ ಜಗತ್ತಲ್ಲಿ ಅಜ್ಜ-ಅಜ್ಜಿ ಆಗೋರೇ ಇಲ್ಲ'!
ಹಾರ್ವರ್ಡ್ ವಿವಿಯ ವಿಜ್ಞಾನಿಗಳು ಕೊನೆಗ ತಮ್ಮ ದಶಕಗಳ ಕಾಲದ ಸಂಶೋಧನೆಯಲ್ಲಿ ಯಶಸ್ಸು ಕಂಡಿದ್ದಾರೆ. 6 ಡ್ರಗ್‌ಗಳ ಕಾಕ್‌ಟೇಲ್‌ನಿಂದ ರಿವರ್ಸ್ ಏಜಿಂಗ್ ಸಾಧಿಸಬಹುದು ಎಂದು ಹೇಳಿದ್ದು, ನಾಲ್ಕೇ ದಿನದಲ್ಲಿ ನಿಮ್ಮ ವಯಸ್ಸು 3 ವರ್ಷ ಕಡಿಮೆ ಆದಂತೆ ಕಾಣುತ್ತದೆ ಎಂದಿದ್ದಾರೆ.
ನ್ಯೂಯಾರ್ಕ್ (ಜು.17): ಬಹುಶಃ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಅಜ್ಜ-ಅಜ್ಜಿ ಇರೋರೇ ಕಡಿಮೆಯಾಗಬಹುದು. ಅಂಥದ್ದೊಂದು ಮಹಾ ಸಂಶೋಧನೆಯನ್ನು ಹಾರ್ವರ್ಡ್ ವಿವಿಯ ವಿಜ್ಞಾನಿಗಳು ಮಾಡಿದ್ದಾರೆ. ವಯಸ್ಸು ಕಳೆದಂತೆ ಚರ್ಮು ಸುಕ್ಕುಗಟ್ಟಿ ಮುದುಕ-ಮುದುಕಿಯರಾಗೋದು ಇನ್ನು ಅನುಮಾನ. ಹಾರ್ವರ್ಡ್ ವಿವಿಯ ವಿಜ್ಞಾನಿಗಳು 6 ಡ್ರಗ್‌ನ ಕಾಕ್‌ಟೇಲ್‌ಅನ್ನು ಸಂಶೋಧನೆ ಮಾಡಿದ್ದು, ಇದರಿಂದ ರಿವರ್ಸ್ ಏಜಿಂಗ್ ಸಾಧ್ಯ ಎಂದು ಹೇಳಿದೆ. ರಿವರ್ಸ್ ಏಜಿಂಗ್ ಎಂದರೆ, ವೃದ್ಧರನ್ನು ಪುನರ್ಯೌವನಗೊಳಿಸುವ ಪ್ರಕ್ರಿಯೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, 'ಏಜಿಂಗ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವಾದ 'ಸೆಲ್ಯುಲಾರ್ ವಯಸ್ಸನ್ನು ಹಿಮ್ಮೆಟ್ಟಿಸಲು ರಾಸಾಯನಿಕವಾಗಿ ಪ್ರೇರಿತ ಮರು-ಪ್ರೋಗ್ರಾಮಿಂಗ್' ನಲ್ಲಿ ಇದು ಬಹಿರಂಗಗೊಂಡಿದೆ. ಅಧ್ಯಯನದ ಪ್ರಕಾರ ಈ 6 ರಾಸಾಯನಿಕಗಳನ್ನು ಬೆರೆಸಿ ‘ಫೌಂಟೇನ್ ಆಫ್ ಯೂತ್’ ಎಂಬ ಹೆಸರಿನ ಔಷಧವನ್ನು ತಯಾರಿಸಲಾಗುತ್ತಿದ್ದು, ಇದು ವಯಸ್ಸನ್ನು ಕಡಿಮೆ ಮಾಡುತ್ತದೆ ಮತ್ತು ತ್ವಚೆಯನ್ನು ಮೊದಲಿನಂತೆಯೇ ಯೌವನವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. 6 ರಾಸಾಯನಿಕಗಳ ಮಿಶ್ರಣವನ್ನು ರಾಸಾಯನಿಕ ಕಾಕ್‌ಟೇಲ್ ಎಂದು ಸದ್ಯಕ್ಕೆ ಕರೆಯಲಾಗುತ್ತಿದೆ.
ವಿಜ್ಞಾನಿಗಳ ಪ್ರಕಾರ, ಈ ಕಾಕ್‌ಟೇಲ್ ಮಾನವನ ಚರ್ಮದ ಜೀವಕೋಶಗಳಲ್ಲಿನ ವಯಸ್ಸಾದ ಪ್ರಕ್ರಿಯೆಯನ್ನು ಒಂದು ವಾರದಲ್ಲಿ ಹಲವಾರು ವರ್ಷಗಳವರೆಗೆ ಹಿಮ್ಮೆಟ್ಟಿಸುತ್ತದೆ. 4 ದಿನಗಳ ಚಿಕಿತ್ಸೆಯನ್ನು ಪಡೆದುಕೊಂಡರೆ, 3 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ವಿಜ್ಞಾನಿ: ಅಧ್ಯಯನದ ನೇತೃತ್ವದ ವಿಜ್ಞಾನಿ ಡೇವಿಡ್ ಸಿಂಕ್ಲೇರ್ ಅವರು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಹಿಂದಿನ ಸಂಶೋಧನೆಯಲ್ಲಿ, ಜೀನ್ ಥೆರಪಿ ಮೂಲಕ ಭ್ರೂಣದ ಜೀನ್ ಅನ್ನು ಸಕ್ರಿಯಗೊಳಿಸುವ ಮೂಲಕ ವಯಸ್ಸನ್ನು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. ಇದೀಗ ಹೊಸ ಸಂಶೋಧನೆಯಲ್ಲಿ ಕೆಮಿಕಲ್ ಕಾಕ್‌ಟೇಲ್‌ನಿಂದಲೂ ಇದು ಸಾಧ್ಯ ಎಂದು ಕಂಡು ಬಂದಿದೆ. ಇಡೀ ದೇಹವನ್ನು ಪುನರ್ಯೌವನಗೊಳಿಸುವತ್ತ ಇದು ಯಶಸ್ವಿ ಹೆಜ್ಜೆಯಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ.
ಇಲಿಗಳ ಮೇಲೆ ಪ್ರಯೋಗ ಯಶಸ್ವಿ, ಶೀಘ್ರದಲ್ಲಿ ಮಾನವನ ಮೇಲೆ ಪ್ರಯೋಗ:ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧಕರು ಇಲಿಗಳ ಮೇಲೆ ಈ ಪ್ರಯೋಗ ಮಾಡಿದ್ದಾರೆ. ಡೈಲಿ ಮೇಲ್ ವರದಿಯ ಪ್ರಕಾರ, ರಾಸಾಯನಿಕ ಕಾಕ್‌ಟೇಲ್ ಅನ್ನು ಇಲಿಗಳೊಂದಿಗೆ ಮಾನವ ಜೀವಕೋಶಗಳ ಮೇಲೆ ಪರೀಕ್ಷಿಸಲಾಯಿತು. ಎಲ್ಲಾ ಆರು ರಾಸಾಯನಿಕಗಳು ರಿವರ್ಸ್ ಏಜಿಂಗ್ ಕಾರಣವಾಗುತ್ತವೆ ಎಂದು ಫಲಿತಾಂಶಗಳು ತೋರಿಸಿವೆ. ಮಾನವರು ಮತ್ತು ಇಲಿಗಳ ಪ್ರತಿಲೇಖನದ ಗಡಿಯಾರಗಳ ಮೂಲಕ ವಯಸ್ಸಿನ ಈ ಬದಲಾವಣೆಗಳನ್ನು ಪತ್ತೆಹಚ್ಚಲಾಗಿದೆ. ಈ ಗಡಿಯಾರವು ಜೈವಿಕ ವಯಸ್ಸನ್ನು ನಿರ್ಧರಿಸಲು ಜೀನ್ ಅಭಿವ್ಯಕ್ತಿ ಡೇಟಾವನ್ನು ಬಳಸುತ್ತದೆ. ಅದೇ ಸಮಯದಲ್ಲಿ, ಈ ರಾಸಾಯನಿಕ ಕಾಕ್‌ಟೇಲ್‌ನ ಮಾನವ ಪ್ರಯೋಗವನ್ನು ಮುಂದಿನ ವರ್ಷ ಮಾಡಲಾಗುತ್ತದೆ.
ಪರ್ಫೆಕ್ಟ್ ಫಿಗರ್‌ಗಾಗಿ ಫೋಟೋ ಎಡಿಟ್ ಮಾಡಿದ ಜಾನ್ವಿ ಕಪೂರ್ ಟ್ರೋಲ್!
ವಿಜ್ಞಾನಿ ಡೇವಿಡ್ ಸಿಂಕ್ಲೇರ್ ಪ್ರಕಾರ, 6 ರಾಸಾಯನಿಕಗಳ ಮಿಶ್ರಣದಿಂದ ತಯಾರಿಸಿದ ಔಷಧವು ದುರ್ಬಲ ದೃಷ್ಟಿಯನ್ನೂ ಸುಧಾರಿಸುತ್ತದೆ. ಅಲ್ಲದೆ, ಈ ಔಷಧವು ವಯಸ್ಸಿಗೆ ಸಂಬಂಧಿಸಿದ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. 'ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಗುಣಪಡಿಸುವ ಸಾಮರ್ಥ್ಯವಿರುವ ಪ್ರತಿಯೊಂದು ರಾಸಾಯನಿಕದಲ್ಲಿ 5-7 ಏಜೆಂಟ್‌ಗಳಿವೆ. ಇಲಿಗಳ ಆಪ್ಟಿಕ್ ನರಗಳು, ಮೆದುಳಿನ ಅಂಗಾಂಶ, ಮೂತ್ರಪಿಂಡಗಳು ಮತ್ತು ಸ್ನಾಯುಗಳ ಮೇಲಿನ ಅಧ್ಯಯನಗಳು ಈ ರಾಸಾಯನಿಕಗಳು ಅವುಗಳ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ಅವುಗಳ ಜೀವಿತಾವಧಿಯನ್ನು ವಿಸ್ತರಿಸುತ್ತವೆ ಎಂದು ಬಹಿರಂಗಪಡಿಸಿದೆ' ಎಂದು ಸಿಂಕ್ಲೇರ್ ಹೇಳಿದ್ದಾರೆ.
ಸ್ಲಿಮ್ ಆಗಿರುವ ರಮ್ಯಾ ಕನ್ನಡಿ ಮುಂದೆ ಮಸ್ತ್ ಡಾನ್ಸ್; 'ಕ್ವೀನ್ ಈಸ್ ಬ್ಯಾಕ್' ಎಂದ ಫ್ಯಾನ್ಸ್
ಸಿಂಕ್ಲೇರ್ ಹೇಳುವ ಪ್ರಕಾರ ಏಜಿಂಗ್ ಅಥವಾ ವಯಸ್ಸಾಗೋದು ಎರಡೂ ರೀತಿಯ ಪ್ರಕ್ರಿಯೆ. ಇದನ್ನು ಹೆಚ್ಚು ಮಾಡಲೂ ಬಹುದು, ಕಡಿಮೆ ಮಾಡಲೂಬಹುದು. ಜೀವಕೋಶಗಳು ನಿಧಾನವಾದಾಗ ವಯಸ್ಸಿನಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂದು ಇಲ್ಲಿಯವರೆಗೆ ನಂಬಲಾಗಿತ್ತು, ಆದರೆ ಅದು ಹಾಗಲ್ಲ. ಪ್ರಯೋಗಾಲಯದಲ್ಲಿ ಇಲಿಗಳ ಮೇಲಿನ ಈ ಪ್ರಯೋಗದಲ್ಲಿ, ವಯಸ್ಸನ್ನು ಕಡಿಮೆ ಮಾಡುವ ಮೂಲಕ, ಅದನ್ನು ಯೌವನಗೊಳಿಸಬಹುದು ಎಂದು ಸ್ಪಷ್ಟವಾಗಿ ತೋರಿಸಲಾಗಿದೆ. ವಯಸ್ಸು ಹಿಂದಕ್ಕೆ ಹೋಗುವುದಷ್ಟೇ ಅಲ್ಲ, ಅದನ್ನು ಮುಂದಕ್ಕೆ ಕೂಡ ಕೊಂಡೊಯ್ಯಬಹುದು, ಅಂದರೆ ಸಮಯಕ್ಕಿಂತ ಮುಂಚೆಯೇ ದೊಡ್ಡವನಾಗಬಹುದು ಅಥವಾ ವಯಸ್ಸಾಗಬಹುದು ಎಂಬ ಆಘಾತಕಾರಿ ವಿಷಯವೂ ಕಂಡುಬಂದಿದೆ.