Asianet Suvarna News Asianet Suvarna News

ರೀಲ್ ಅಲ್ಲ ರಿಯಲ್ ಗಜನಿ..! 30 ನಿಮಿಷದ ನಂತರ ಹೆಂಡತಿಯ ಮುಖವೂ ನೆನಪಿರುವುದಿಲ್ಲ !

ಕೆಲವೇ ವಾರಗಳ ಹಿಂದೆ ನಡೆದ ಘಟನೆ ಮರೆತುಹೋದರೂ (Forget) ನಾವು ಎಷ್ಟೊಂದು ಹಿಂಸೆ, ಕಿರಿಕಿರಿ ಅನುಭವಿಸುತ್ತೇವೆ ಅಲ್ವಾ ? ಅದನ್ನು ನೆನಪಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನ (Try) ಪಡುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ 30 ನಿಮಿಷಗಳಿಗೊಮ್ಮೆ ಮೆಮೊರಿ ಲಾಸ್ (Memory Loss) ಆಗುತ್ತೆ. ಅವರ ಸ್ಥಿತಿ ಹೇಗಿರಬೇಡ. 

Clive Wearing, The Man With the 30 Second Memory Vin
Author
Bengaluru, First Published May 19, 2022, 4:52 PM IST

ತಮಿಳಿನಲ್ಲಿ ಸೂರ್ಯ ಅಭಿನಯದ ಗಜನಿ (Gajani) ಚಿತ್ರವನ್ನು ನೀವು ನೋಡಿರಬಹುದು. ಈ ಚಿತ್ರದಲ್ಲಿ ಹೀರೊ ಐದು ನಿಮಿಷಕ್ಕೊಮ್ಮೆ ತಮ್ಮ ನೆನಪಿನ ಶಕ್ತಿ (Memory power)ಯನ್ನು ಕಳೆದುಕೊಳ್ಳುತ್ತಾನೆ. ಐದು ನಿಮಿಷದ ಮೊದಲು ಪರಿಚಯವಿದ್ದವರು ಐದು ನಿಮಿಷ ಕಳೆದರೆ ಅವನಿಗೆ ಸಂಪೂರ್ಣ ಅಪರಿಚಿತ. ಕೊನೆಗೆ ಹೀರೋ ನೆನಪಾದಾಗಲ್ಲೆಲ್ಲಾ ಹೆಸರು, ನಂಬರನ್ನು ಪುಸ್ತಕದಲ್ಲಿ ಬರೆದಿಡಲು ಆರಂಭಿಸುತ್ತಾನೆ. ಸಿನಿಮಾ ಐದು ನಿಮಿಷಕ್ಕೆ ಎಲ್ಲವನ್ನೂ ಮರೆತು ನೆನಪಿನ ಶಕ್ತಿ ಇಲ್ಲದೆ ಹೋದರೆ ಏನಾಗಬಹುದು ಎಂಬ ಭಯಾನಕತೆಯನ್ನು ತೋರಿಸುತ್ತದೆ.  ಆದರೆ ಇಂತಹದೊಂದು ಖಾಯಿಲೆ (Disease) ನಿಜ ಜೀವನದಲ್ಲಿ ಇದ್ದರೆ ಏನಾಗಬಹುದು ?

ಬದುಕುವುದು ಸಕ ಕಷ್ಟವಾಗಬಹುದು ಅಂತೀರಾ ? ಅಚ್ಚರಿಯ ವಿಚಾರವೆಂದರೆ ಕ್ಲೈವ್​ ವೇರಿಂಗ್ (Clive Wearing)​ ಎಂಬ ವ್ಯಕ್ತಿಗೆ ಇಂತಹದೊಂದು ಕಾಯಿಲೆ ಇದೆ. ಸೂರ್ಯ​ ಗಜನಿ ಸಿನಿಮಾದಲ್ಲಿ 5 ನಿಮಿಷಗಳಿಗೊಮ್ಮೆ ಸ್ಮರಣೆ ಕಳೆದುಕೊಂಡ, ಕ್ಲೈವ್​ ವೇರಿಂಗ್‌ಗೆ 30 ನಿಮಿಷಗಳಿಗೊಮ್ಮೆ ಮೆಮೊರಿ ಲಾಸ್ (Memory Loss)​​ಆಗುತ್ತದೆ. ಹೌದು. ಕ್ಲೈವ್ ವೇರಿಂಗ್ ಎಂಬ ವ್ಯಕ್ತಿಗೆ ನಿಜ ಜೀವನದಲ್ಲಿ ಮರೆವಿನ ಖಾಯಿಲೆ ಇದೆ. ಪ್ರತಿ 30 ನಿಮಿಷಗಳಿಗೊಮ್ಮೆ ಎಲ್ಲವನ್ನೂ ಮರೆತುಬಿಡುತ್ತಾರೆ. ಇದೇ ವಿಚಾರಕ್ಕೆ ಈ ವ್ಯಕ್ತಿ ಸುದ್ದಿಯು ಆಗಿದ್ದಾನೆ, ಜೊತೆಗೆ ಸೆಕೆಂಡ್ ಮೆಮೊರಿ ಹೊಂದಿರುವ ಮನುಷ್ಯ ಎಂದು ಗುರುತಿಸಿಕೊಂಡಿದ್ದಾರೆ.

Health Tips: ಕೊರೋನಾ ನಂತ್ರ ನಿಮ್ಮ ಮೆಮೊರಿ ದುರ್ಬಲವಾಗ್ತಿದೆಯಾ ?

ಕ್ಲೈವ್ ವೇರಿಂಗ್‌ನ ಈ ಸ್ಥಿತಿಯನ್ನು ಇದುವರೆಗಿನ ವೈದ್ಯಕೀಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಪ್ರಕರಣವೆಂದು ಪರಿಗಣಿಸಲಾಗಿದೆ. ಹಿಂದಿನದನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದ ಮತ್ತು ಭವಿಷ್ಯದ ನೆನಪುಗಳನ್ನು ಮಾಡಲು ಸಾಧ್ಯವಾಗದ ಜೀವನವನ್ನು ಕ್ಲೈವ್ ವೆರಿಂಗ್ ನಡೆಸುತ್ತಿದ್ದಾರೆ. ಕ್ಲೈವ್ ಕಳೆದ 40 ವರ್ಷಗಳಿಂದ ಇಂತಹ ಜೀವನ ನಡೆಸುತ್ತಿದ್ದಾರೆ. ಅವರು ಕೆಲವು ಮೂಲಭೂತ ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ. ಉಳಿದಂತೆ ಬೇರ್ಯಾವ ಘಟನೆಯೂ ಅವರಿಗೆ ನೆನಪಿರುವುದಿಲ್ಲ.

ದೈನಂದಿನ ಕೆಲಸವನ್ನು ಮಾಡುತ್ತಾರೆ
ಕ್ಲೈವ್​ಕೆ ಕೆಲವೊಂದು ಸಂಗತಿಗಳು ನೆನಪಿನಲ್ಲಿರುತ್ತವೆ. ಆದರೆ ಅದು ಯಾವಾಗ ಸಂಭವಿಸಿತು ಎಂಬುದು ನೆನಪಿರುವುದಿಲ್ಲ. 85 ವರ್ಷ ವಯಸ್ಸಿನ ಕ್ಲೈವ್ ತನ್ನ ದೈನಂದಿನ ಕೆಲಸವನ್ನು ಮಾಡುತ್ತಾರೆ. ಆದರೆ ಏನನ್ನೂ ನೆನಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸದ್ಯ ಕ್ಲೈವ್​ ಅವರು ಡೈರಿಯನ್ನೂ ಬರೆಯುತ್ತಿದ್ದಾರೆ, ಅಚರಲ್ಲಿ ಅವರು ಕೇವಲ 30 ಸೆಕೆಂಡುಗಳಲ್ಲಿ ಏನನ್ನು ನೆನಪಿಟ್ಟುಕೊಳ್ಳಬೇಕು ಎಂಬುದನ್ನು ಬರೆಯುತ್ತಾರೆ.

ಮದುವೆ ಅಥವಾ ಮಕ್ಕಳ ಹೆಸರು ನೆನಪಿಲ್ಲ
ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುವ ಕ್ಲೈವ್ ತನ್ನ ಮದುವೆಯ ಘಟನೆಯನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ಲೈವ್​ಗೆ ಮಕ್ಕಳಿದ್ದಾರೆ ಎಂದು ತಿಳಿದಿದೆ, ಆದರೆ ಅವರ ಹೆಸರುಗಳು ನೆನಪಿಲ್ಲ. ಮಕ್ಕಳು ಸಂಗೀತಗಾರರಾಗಿದ್ದು, ಅವರು ವಾದ್ಯವನ್ನು ನುಡಿಸುತ್ತಾರೆ ಆದರೆ ಅವರು ಅದನ್ನು ಯಾವಾಗ ಕಲಿತರು ಎಂದುಬು ಕ್ಲೈವ್​ಗೆ ನೆನಪಿಲ್ಲ.

ಯೋಗಾಸನದಿಂದ ಮರೆತು ಹೋಗುವ ಸಮಸ್ಯೆಗೆ ಹೇಳಿ ಗುಡ್ ಬೈ

ಹೆಂಡತಿಯನ್ನೂ ಮರೆತುಬಿಡುತ್ತಾರೆ
ವರದಿಗಳ ಪ್ರಕಾರ, ಪ್ರತಿ ಬಾರಿ ಅವನು ತನ್ನ ಹೆಂಡತಿಯನ್ನು ನೋಡಿದಾಗ, ಅವನು ಅವಳನ್ನು ಸಂಭ್ರಮದಿಂದ ಸ್ವಾಗತಿಸುತ್ತಾನೆ. ಏಕೆಂದರೆ ಅವಳು ಒಂದು ಕ್ಷಣ ಬಿಟ್ಟು ಹೋಗಿದ್ದರೂ ಅವನು ಅವಳನ್ನು ವರ್ಷಗಳವರೆಗೆ ನೋಡಿಲ್ಲ ಎಂದು ಅವನು ಸಾಮಾನ್ಯವಾಗಿ ನಂಬುತ್ತಾನೆ. ಅದೇ ರೀತಿ, ಅವನು ತನ್ನ ಹೆಂಡತಿಯೊಂದಿಗೆ ಊಟಕ್ಕೆ ಹೋದಾಗ, ಅವನು ಆಹಾರದ ಹೆಸರನ್ನು ನೆನಪಿಸಿಕೊಳ್ಳುತ್ತಾನೆ. ಆದರೆ ಅದು ಅವನ ಬಾಯಿಗೆ ಬರುವ ಹೊತ್ತಿಗೆ ಅವನು ತಿನ್ನುವ ಆಹಾರವನ್ನು ಅವನು ಮರೆತುಬಿಡುತ್ತಾನೆ.

ನೆನಪುಗಳನ್ನು ರೂಪಿಸುವ ಸಾಮರ್ಥ್ಯವಿಲ್ಲ
ಕ್ಲೈವ್ ಹೊಸ ನೆನಪುಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ, ಮತ್ತು ಅವರು ತಮ್ಮ ಹಿಂದಿನ ನೆನಪುಗಳ ಅಂಶಗಳನ್ನು ನೆನಪಿಸಿಕೊಳ್ಳುವುದಿಲ್ಲ. ಕ್ಲೈವ್ ಹೆಂಡತಿಯ ಪ್ರಕಾರ, ಅವರ ಸ್ಮರಣೆಯು 7 ರಿಂದ 30 ಸೆಕೆಂಡುಗಳವರೆಗೆ ಇರುತ್ತದೆ. ಪ್ರತಿದಿನ, ಅವನು ನಿಮಿಷಕ್ಕೆ ಹಲವಾರು ಬಾರಿ ಎಚ್ಚರಗೊಳ್ಳುತ್ತಾನೆ ಎಂದು ಭಾವಿಸುತ್ತಾನೆ, ಏಕೆಂದರೆ ಅವನ ಪ್ರಜ್ಞೆಯು ಮೂಲಭೂತವಾಗಿ ರೀಬೂಟ್ ಆಗುತ್ತಿದೆ. ವಾಸ್ತವವಾಗಿ, ಅವರು ಕೋಮಾದಿಂದ ಎಚ್ಚರಗೊಂಡಿದ್ದಾರೆ ಎಂದು ಅವರು ಪುನರಾವರ್ತಿತವಾಗಿ ನಂಬುತ್ತಾರೆ ಎಂದು ಹೇಳಲಾಗುತ್ತದೆ.

ಅದೃಷ್ಟವಶಾತ್, ಅವನ ಸ್ನಾಯುವಿನ ಸ್ಮರಣೆಯು ಹಾನಿಗೊಳಗಾಗದ ಕಾರಣ, ಅವನು ಇನ್ನೂ ಸಂಪೂರ್ಣವಾಗಿ ಪಿಯಾನೋವನ್ನು ನುಡಿಸಬಲ್ಲನು.ವೇರಿಂಗ್ ಅವರ ಪತ್ನಿ ಡೆಬೊರಾ ಅವರು ತಮ್ಮ ಪತಿಯ ಪ್ರಕರಣದ ಕುರಿತು ಫಾರೆವರ್ ಟುಡೇ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪಠ್ಯದಲ್ಲಿ, ಅವರು ಜೀವನ ಹೇಗಿರುತ್ತದೆ ಎಂಬುದನ್ನು ವಿವರಿಸುತ್ತಾರೆ.

Follow Us:
Download App:
  • android
  • ios