ಇಷ್ಟು ಸಣ್ಣ ವಯಸ್ಸಿನಲ್ಲೇ ಅದೇನ್ ಮರೆವು (Memory Weakness) ನಿನಗೆ ಅಂತಾ ಕೆಲವರು ಹೇಳ್ತಿರುತ್ತಾರೆ. ಮಕ್ಕಳಿಂದ (Children) ಹಿಡಿದು ವೃದ್ಧರವರೆಗೆ ಅನೇಕರು ಈ ಮರೆವಿನ ಸಮಸ್ಯೆ ಎದುರಿಸ್ತಾರೆ. ಅದಕ್ಕೆ ನಮ್ಮಲ್ಲೇ ಮದ್ದಿದೆ. ಪ್ರತಿ ದಿನ ಈ ಕೆಲಸ ಮಾಡಿದ್ರೆ ಮರೆವು ಮಂಗಮಾಯ.
ಆಗಾಗ್ಗೆ ಸಣ್ಣ ವಿಷಯ (Subject) ಗಳನ್ನು ನೀವು ಮರೆತುಬಿಡ್ತೀರಾ? ಜನರ ಮುಖ (Face) ನೆನಪಿರುತ್ತೆ, ಹೆಸರು ನೆನಪಿರಲ್ಲ ಎಂಬ ಸಮಸ್ಯೆ (Problem) ನಿಮಗಿದ್ಯಾ? ಸ್ವಲ್ಪ ಸಮಯದ ನಂತರ ಓದಿದ್ದೆಲ್ಲ ಮರೆತು ಹೋಗುತ್ತಾ? ಮಾರ್ಕೆಟ್ (Market) ಗೆ ಹೋಗ್ತಿದ್ದಂತೆ ಮನೆಗೆ ತರ್ಬೇಕಿದ್ದ ಸಾಮಾನು (Luggage) ಗಳೆಲ್ಲ ಮರೆತು ಹೋಗುತ್ತಾ? ಈ ರೀತಿಯ ಸಮಸ್ಯೆ ನಿಮಗೂ ಕಾಡುತ್ತಿದೆಯಾ? ಉತ್ತರ ಹೌದು ಎಂದಾದರೆ ಸ್ವಲ್ಪ ಎಚ್ಚರದಿಂದಿರಿ. ಸಾಮಾನ್ಯವಾಗಿ ವಯಸ್ಸಾದಂತೆ, ಆಲ್ಝೈಮರ್ (Alzheimers ) ಎಂಬ ಕಾಯಿಲೆ (Disease) ಯಿಂದ ಜನರು ಮರೆತು ಹೋಗುವ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಯಾವುದೇ ವಯಸ್ಸಿನಲ್ಲಿ ಜ್ಞಾಪಕ (Memory) ದೌರ್ಬಲ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಓದುತ್ತಿರುವ ಮಕ್ಕಳ (Children) ನೆನಪಿನ ಶಕ್ತಿ ದುರ್ಬಲವಾಗಿರುತ್ತದೆ. ರಾತ್ರಿ (Night) ಪಾಠ ನೆನಪಿಸಿಕೊಂಡರೂ ಬೆಳಗ್ಗೆ (Morning ) ಎಲ್ಲವನ್ನೂ ಮರೆತು ಬಿಡುವ ಸಮಸ್ಯೆ ಅವರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ನೆನಪಿನ ಸಮಸ್ಯೆಯು ಹಲವು ಕಾರಣಗಳಿಂದ ನಿಮ್ಮನ್ನು ಕಾಡುತ್ತದೆ.
ಈ ಸಮಸ್ಯೆಯನ್ನು ನೀವು ನಿಮ್ಮ ದಿನಚರಿ ಬದಲಿಸುವ ಮೂಲಕ ಸುಧಾರಿಸಿಕೊಳ್ಳಬಹುದು. ಇದಕ್ಕೆ ಯೋಗಾಸನ ಮದ್ದು ಎನ್ನಬಹುದು. ಯೋಗಾಸನಗಳನ್ನು ನಿಯಮಿತವಾಗಿ ದಿನಚರಿಯಲ್ಲಿ ಸೇರಿಸಿದರೆ ಸಣ್ಣ ವಯಸ್ಸಿನಲ್ಲಿಯೇ ಕಾಡುವ ನೆನಪಿನ ಶಕ್ತಿ ಕೊರತೆ ಸಮಸ್ಯೆ ನಿಮ್ಮಿಂದ ದೂರವಾಗುತ್ತದೆ. ಅನೇಕ ಯೋಗಾಸನಗಳನ್ನು ನಿಯಮಿತವಾಗಿ ಮಾಡುವುದ್ರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಹಾಗೆ ಯಾವುದೇ ವಿಷ್ಯಗಳನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೇ ಯೋಗಾಸನಗಳ ಸಹಾಯದಿಂದ ವಯಸ್ಸಾದಂತೆ ಉಂಟಾಗುವ ಸ್ಮರಣಶಕ್ತಿ ದೌರ್ಬಲ್ಯದ ಸಮಸ್ಯೆಗಳನ್ನೂ ದೂರವಿಡಬಹುದು. ಇದಕ್ಕಾಗಿ ನೀವು ಯಾವ ಆಸನಗಳನ್ನು ಮಾಡಿದರೆ ಪ್ರಯೋಜನಕಾರಿ ಎಂದು ನಾವಿಂದು ಹೇಳ್ತೇವೆ.
ಮತ್ಸ್ಯಾಸನ ಯೋಗದ ಪ್ರಯೋಜನ : ಮತ್ಸ್ಯಾಸನ ಯೋಗವನ್ನು ಪ್ರತಿ ನಿತ್ಯ ಮಾಡ್ಬೇಕು. ಇದನ್ನು ನಿಯಮಿತವಾಗಿ ಮಾಡುವುದ್ರಿಂದ ಆಗಾಗ್ಗೆ ವಿಷಯಗಳನ್ನು ಮರೆತುಬಿಡುವ ಸಮಸ್ಯೆಯಿಂದ ತೊಂದರೆಗೊಳಗಾಗಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ಈ ಯೋಗಾಸನಗಳು ಕುತ್ತಿಗೆ ಮತ್ತು ಭುಜಗಳ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ಸ್ಯಾಸನ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಈ ಯೋಗಗಳು ಮೆದುಳಿಗೆ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದಾಗಿ ನರಮಂಡಲಕ್ಕೆ ವಿಶ್ರಾಂತಿ ಸಿಗುತ್ತದೆ. ಈ ಯೋಗವು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಈ ರೋಗಲಕ್ಷಣ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ತಕ್ಷಣವೇ ಆಹಾರದಲ್ಲಿ ಬದಲಾವಣೆ ಮಾಡಿ!
ಪ್ರಾಣಾಯಾಮದ ಅಭ್ಯಾಸ : ಪ್ರಾಣಾಯಾಮ ಯೋಗಾಸನಗಳನ್ನು ಅಭ್ಯಾಸ ಮಾಡುವುದು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ನೆನಪಿನ ಶಕ್ತಿ ಹೆಚ್ಚಿಸಲು ಇದು ಉತ್ತಮ ಆಯ್ಕೆಯಾಗಿದೆ. ಪ್ರಾಣಾಯಾಮಗಳು ನರಗಳನ್ನು ವಿಶ್ರಾಂತಿ ಮಾಡುವ ಮೂಲಕ ಮೆದುಳಿನ ಕಾರ್ಯಗಳನ್ನು ಸುಧಾರಿಸಲು ಸಹಾಯಕವೆಂದು ಪರಿಗಣಿಸಲಾಗಿದೆ. ಪ್ರಾಣಾಯಾಮದ ಅಭ್ಯಾಸವು ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಜೊತೆಗೆ ಒತ್ತಡ-ಆತಂಕ ಮತ್ತು ಖಿನ್ನತೆಯಂತಹ ಅಸ್ವಸ್ಥತೆಗಳ ಲಕ್ಷಣಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಜ್ಞಾಪಕಶಕ್ತಿಯನ್ನು ಸುಧಾರಿಸಬಹುದು.
ಒಂದು ಪೆಗ್ ಹಾಕಿದ್ರೆ ತಪ್ಪೇನಿಲ್ಲ..! ಅಲ್ಕೋಹಾಲ್ ಆರೋಗ್ಯ ಚೆನ್ನಾಗಿಡುತ್ತೆ ಎನ್ನುತ್ತೆ ಅಧ್ಯಯನ
ಸರ್ವಾಂಗಾಸನದಲ್ಲಿದೆ ಶಕ್ತಿ : ಸರ್ವಾಂಗಾಸನವನ್ನು ಎಲ್ಲಾ ಆಸನಗಳ ತಾಯಿ ಎಂದೂ ಕರೆಯುತ್ತಾರೆ. ಈ ಆಸನವು ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಲು ಬಯಸುವವರು ಸರ್ವಾಂಗಾಸನ ಮಾಡಬೇಕು. ಇದು ಮೆದುಳಿನ ಕಾರ್ಯಗಳನ್ನು ಸರಾಗಗೊಳಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಈ ಯೋಗವು ನಿಮ್ಮ ಮನಸ್ಸನ್ನು ಸ್ಥಿರವಾಗಿಡುತ್ತದೆ. ಅಲ್ಲದೆ ಮೆದುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ನೀವೇ ನೀವಾಗಿ ಈ ಅಭ್ಯಾಸವನ್ನು ಮಾಡ್ಬೇಡಿ. ತಜ್ಞರಿಂದ ತರಬೇತಿ ಪಡೆದ ನಂತ್ರ ಈ ಆಸನವನ್ನು ಮಾಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
