ವೀರ್ಯ ದಾನ ಮಾಡಿ..ದುಡ್ಡು ಗಳಿಸಿ, ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಕೊಟ್ಟ ಚೀನಾ

ಚೀನಾದಲ್ಲಿ ವೀರ್ಯ ದಾನ ಮಾಡುವಂತೆ ಇಲ್ಲಿನ ಸ್ಪರ್ಮ್ ಬ್ಯಾಂಕ್​ಗಳು ಮನವಿ ಮಾಡಿಕೊಳ್ಳುತ್ತಿವೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ಈ ರೀತಿಯ ಮನವಿಯನ್ನು ಮಾಡಲಾಗ್ತಿದೆ. ಅದಕ್ಕೇನು ಕಾರಣ ?

Chinese sperm bank appealing to university students to donate sperm Vin

ಚೀನಾದಲ್ಲಿ ಜನಸಂಖ್ಯೆಯು ಕಡಿಮೆಯಾಗುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಹೀಗಾಗಿ ಇದು ಚೀನಾದ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಒಟ್ಟು ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ತಿದೆ. ಹಲವಾರು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವೀರ್ಯ ದಾನ ಮಾಡುವಂತೆ ಸ್ಪರ್ಮ್‌ ಬ್ಯಾಂಕ್‌ಗಳು ಮನವಿ ಮಾಡಿಕೊಂಡಿವೆ.

ದೇಶದ ಕ್ಷೀಣಿಸುತ್ತಿರುವ ಜನನ ದರವನ್ನು ಎದುರಿಸಲು ಸಹಾಯ ಮಾಡಲು ವಿದ್ಯಾರ್ಥಿಗಳನ್ನು (Students) ಕೇಳಲಾಗುತ್ತದೆ. ಇದೇ ಅಭಿಯಾನ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು ಟಾಕ್ ಆಫ್ ಟೌನ್ ಆಗಿದೆ. ಚೀನಾದ ರಾಜಧಾನಿ ಬೀಜಿಂಗ್ ಮತ್ತು ಶಾಂಘೈ ಸೇರಿದಂತೆ ದೇಶಾದ್ಯಂತ ವೀರ್ಯ ದಾನ ಕ್ಲಿನಿಕ್‌ಗಳು ವೀರ್ಯ ದಾನಕ್ಕೆ (Sperm donate) ವಿದ್ಯಾರ್ಥಿಗಳನ್ನು ಒತ್ತಾಯಿಸಿವೆ.

ಬರ್ತಾ ಇದೆ ಗಂಡಸರಿಗೂ ಗರ್ಭ ನಿರೋಧಕ ಮಾತ್ರೆ! ಯಾವಾಗ ತಗೋಬೇಕು, ಹೇಗೆ ಕೆಲಸ ಮಾಡುತ್ತೆ?

ವೀರ್ಯ ದಾನ ಮಾಡಲು ಚೀನಾ ವಿದ್ಯಾರ್ಥಿಗಳಿಗೆ ಒತ್ತಾಯ
ಫೆಬ್ರವರಿ 2ರಂದು, ನೈಋತ್ಯ ಚೀನಾದ ಯುನ್ನಾನ್ ಹ್ಯೂಮನ್ ಸ್ಪರ್ಮ್ ಬ್ಯಾಂಕ್ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವೀರ್ಯ ದಾನಕ್ಕಾಗಿ ಮನವಿ ಮಾಡಿತು. ಮನವಿಯ ಸಮಯದಲ್ಲಿ, ಅವರು ವೀರ್ಯ ದಾನದ ಪ್ರಯೋಜನಗಳ ವಿಧಗಳು, ನೋಂದಣಿಯ ಷರತ್ತುಗಳು ಮತ್ತು ಸಬ್ಸಿಡಿಗಳ ಬಗ್ಗೆ ಚರ್ಚಿಸಿದರು. ಗ್ಲೋಬಲ್ ಟೈಮ್ಸ್‌ನ ವರದಿಯ ಪ್ರಕಾರ, ಜನರು ಈ ಕೊಡುಗೆಯ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳು ಇದನ್ನು ಚರ್ಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. 2022ರಲ್ಲಿ ಚೀನಾದ ಜನಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದು ಆರು ದಶಕಗಳಲ್ಲಿ ಮೊದಲ ಕುಸಿತವಾಗಿದೆ. 61 ವರ್ಷಗಳಲ್ಲಿ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯು (Population) 2022 ರಲ್ಲಿ 850,000 ರಷ್ಟು ಕಡಿಮೆಯಾಗಿದೆ ಎಂದು ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ (NBS) ಮಾಹಿತಿ ನೀಡಿದೆ.

ವೀರ್ಯ ದಾನಿಗಳು 20ರಿಂದ 40ರ ನಡುವಿನ ವಯಸ್ಸಿನವರಾಗಿರಬೇಕು
ಯುನ್ನಾನ್‌ನ ವೀರ್ಯ ಬ್ಯಾಂಕ್‌ನ ಪ್ರಕಾರ, ದಾನಿಗಳು 20ರಿಂದ 40ರ ನಡುವಿನ ವಯಸ್ಸಿನವರಾಗಿರಬೇಕು ಮತ್ತು 165 ಸೆಂ.ಮೀ ಗಿಂತ ಹೆಚ್ಚಿನ ಎತ್ತರವನ್ನು ಹೊಂದಿರಬೇಕು, ಯಾವುದೇ ಸಾಂಕ್ರಾಮಿಕ ಅಥವಾ ಅನುವಂಶಿಕ ಕಾಯಿಲೆಗಳನ್ನು (Disease) ಹೊಂದಿರಬಾರದು. ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ. ಆರೋಗ್ಯ ತಪಾಸಣೆಯ (Health checkup) ನಂತರ ದಾನಕ್ಕೆ ಅರ್ಹರಾಗಿರುವ ವ್ಯಕ್ತಿಯು 8-12 ದೇಣಿಗೆಗಳನ್ನು ನೀಡಬೇಕು. ಸದ್ಯಕ್ಕೆ, ಶಾಂಘೈ ವೀರ್ಯ ಬ್ಯಾಂಕ್ ಬೀಜಿಂಗ್‌ನಲ್ಲಿ ಅತ್ಯಧಿಕ ಸಬ್ಸಿಡಿಯನ್ನು ನೀಡುತ್ತದೆ.

ಅಬ್ಬಬ್ಬಾ..31ನೇ ವಯಸ್ಸಿನಲ್ಲಿ 57 ಮಕ್ಕಳ ತಂದೆ, ತಿಂಗಳಿಗೆ ಐದು ಮಹಿಳೆಯರನ್ನು ಪ್ರೆಗ್ನೆಂಟ್ ಮಾಡ್ತಾನಂತೆ!

ಚೀನಾ ಈಗಾಗಲೇ 2015 ರಲ್ಲಿ ತನ್ನ ದಶಕಗಳ ಅವಧಿಯ ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿದೆ. 2021 ರಲ್ಲಿ ದಂಪತಿಗಳಿಗೆ ಮೂರನೇ ಮಗುವನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ. ಆದರೂ ಸರ್ಕಾರ ಹಲವು ಯೋಜನೆಗಳನ್ನು ತಂದರೂ ಜನಸಂಖ್ಯೆಯಲ್ಲಿ ಯಾವುದೇ ರೀತಿಯಲ್ಲಿ ಹೆಚ್ಚಳವಾಗಿಲ್ಲ.

ಸ್ಪರ್ಮ್​ ಬ್ಯಾಂಕ್​ಗಳಿಂದ ಇಂಥದ್ದೊಂದು ಮನವಿ ಹೊರಬಿದ್ದ ಬಳಿಕ ಅಲ್ಲಿನ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಟ್ರೆಂಡಿಂಗ್ ಆಗಿದೆ. ದ ಯುನ್ನಾನ್ ಹ್ಯೂಮನ್​ ಸ್ಪರ್ಮ್ ಬ್ಯಾಂಕ್​ ಫೆ. 2ರಂದು ಈ ರೀತಿಯ ಮನವಿಯನ್ನು ಮೊದಲ ಬಾರಿಗೆ ಮಾಡಿಕೊಂಡಿತ್ತು. ಆ ನಂತರ ಚೀನಾದ್ಯಂತ ಇರುವ ಇತರ ಸ್ಪರ್ಮ್ ಬ್ಯಾಂಕ್​ಗಳೂ ಈ ಮನವಿಯನ್ನು ಮಾಡಿಕೊಂಡಿವೆ. ಜನವರಿಯಲ್ಲಿ ನ್ಯಾಷನಲ್ ಬ್ಯೂರೋ ಆಫ್​ ಸ್ಟ್ಯಾಟಿಸ್ಟಿಕ್ಸ್​ ಆಫ್ ಚೈನಾ ಬಿಡುಗಡೆ ಮಾಡಿದ ಅಂಕಿ-ಅಂಶದ ಪ್ರಕಾರ ದೇಶದ ಜನಸಂಖ್ಯೆಯಲ್ಲಿ ಕುಸಿತ ಕಂಡುಬಂದಿತ್ತು. ಇದು ಚೀನಾದ ಕಳೆದ 61 ವರ್ಷಗಳಲ್ಲೇ ಮೊದಲ ಬೆಳವಣಿಗೆಯಾಗಿದೆ.

Latest Videos
Follow Us:
Download App:
  • android
  • ios