ಪ್ರತಿ ದಿನ ಇನ್‌ಸ್ಟಾಂಟ್ ಕಾಫಿ ಕುಡಿಯುವ ಅಭ್ಯಾಸವಿದೆಯಾ? ಹೊಸ ಅಧ್ಯಯನ ವರದಿ ಪ್ರಕಾರ, ಇನ್‌ಸ್ಟಾಂಟ್ ಕಾಫಿಯಿಂದ ದೃಷ್ಟಿದೋಷ ಸಾಧ್ಯತೆ ಇದೆ ಎಂದಿದೆ. ಹಾಗಾದಾರೆ ಯಾವ ಕಾಫಿ ಕುಡಿಯಬಹುದು?

ಪ್ರತಿ ದಿನ ಕಾಫಿ ಅಥವಾ ಟೀ ಕುಡಿಯದೆ ಬಹುತೇಕರ ದಿನ ಮುಂದಕ್ಕೆ ಸಾಗುವುದಿಲ್ಲ. ಬೆಳಗ್ಗೆ ಹಾಗೂ ಸಂಜೆ ಕನಿಷ್ಠ ಬೆಳಗ್ಗೆ ಕಾಫಿ ಅಥವಾ ಟೀ ಬಹುತೇಕರ ಅಭ್ಯಾಸ. ಇನ್ನು ಕೆಲವರು ಗಂಟೆ ಗಂಟೆಗೂ ಕುಡಿಯುವವರು ಇದ್ದಾರೆ. ಕಾಫಿ ಹಾಗೂ ಟೀಯಲ್ಲಿ ಹಲವು ಬಗೆಗಳಿವೆ. ಈ ಪೈಕಿ ಇನ್‌ಸ್ಟಾಂಟ್ ಕಾಫಿ ಅತ್ಯಂತ ಜನಪ್ರಿಯ. ಆದರೆ ಹೊಸ ಅಧ್ಯಯನ ವರದಿ ಹಲವರನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ಪ್ರಮುಖವಾಗಿ ಇನ್‌ಸ್ಟಾಂಟ್ ಕಾಫಿ ಪ್ರಿಯರ ಆತಂಕ ಹೆಚ್ಚಿಸಿದೆ. ಕಾರಣ, ಹೊಸ ಅಧ್ಯಯನ ವರದಿ ಪ್ರಕಾರ ಇನ್‌ಸ್ಟಾಂಟ್ ಕಾಫಿ ದೃಷ್ಠಿ ದೋಷ ಮಾಡಲಿದೆ ಎಂದಿದೆ.

ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಸಮಸ್ಸೆ

ಚೀನಾದ ಸಂಶೋಧಕರ ತಂಡವೊಂದು ಹೊಸ ಅಧ್ಯಯನ ವರದಿ ತಯಾರಿಸಿದೆ. ಸಮೀಕ್ಷೆ, ಮಾದರಿಗಳ ಅಧ್ಯಯನ, ಆರೋಗ್ಯ ಪರೀಕ್ಷಿಸಿ ಈ ವರದಿ ತಯಾರಿಸಿದೆ. 3000 ವಯಸ್ಕರ ಮೇಲೆ ಈ ಆರೋಗ್ಯ ಅಧ್ಯಯನ ಸಂಶೋಧನೆ ಹಲವು ಅಂಶಗಳನ್ನು ಬಹಿರಂಗಪಡಿಸಿದೆ. ಈ ವರದಿ ಪ್ರಕಾರ ಪ್ರತಿ ದಿನ ಅಥವಾ ಹೆಚ್ಚು ಇನ್‌ಸ್ಟಾಂಟ್ ಕಾಫಿ ಕುಡಿಯುವ ಮಂದಿ ದೃಷ್ಟಿ ಸಮಸ್ಯೆ (AMD ) ಎದುರಿಸಲಿದ್ದಾರೆ ಎಂದಿದೆ. ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (AMD) ಸಮಸ್ಯೆಗೆ ಇನ್‌ಸ್ಟಾಂಟ್ ಕಾಫಿ ಪ್ರಮುಖ ಕಾರಣವಾಗಲಿದೆ ಎಂದು ಅಧ್ಯಯನ ಹೇಳಿದೆ.

ಸಂಸ್ಕರಿಸುವ ವಿಧಾನವೇ ಅಪಾಯ

ಇನ್‌ಸ್ಟಾಂಟ್ ಕಾಫಿಯನ್ನು ಸಂಸ್ಕರಿಸುವ ವಿಧಾನವೇ ಈ ದೃಷ್ಠಿ ದೋಷ ಸಮಸ್ಸೆಗೆ ಕಾರಣವಾಗಲಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಇನ್‌ಸ್ಟಾಂಟ್ ಕಾಫಿಯಲ್ಲಿನ ಕೆಲ ಸಂಯುಕ್ತಗಳು ದೇಹದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇನ್ನು ಕುಟುಂಬದಲ್ಲಿ ಕಣ್ಣಿನ ಸಮಸ್ಯೆ ಇತಿಹಾಸವಿದ್ದರೆ, ಅಥವಾ ದೋಷದ ಇತಿಹಾಸವಿದ್ದರೆ, ಅಂತರವಿಗೆ ಇನ್‌ಸ್ಟಾಂಟ್ ಕಾಫಿ ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ ಎಂದಿದೆ.

ಇನ್‌ಸ್ಟಾಂಟ್ ಕಾಫಿ ಏಷ್ಟು ಕುಡಿದರೆ ಅಪಾಯ

ಇನ್‌ಸ್ಟಾಂಟ್ ಕಾಫಿ ಪ್ರತಿ ದಿನ ಸೇವಿಸಿದರೆ ಅಪಾಯ ಹೆಚ್ಚು. ಪ್ರತಿ ದಿನ ನೀವು ಇನ್‌ಸ್ಟಾಂಟ್ ಕಾಫಿ ಕುಡಿಯುತ್ತಿದ್ದೀರಿ ಎಂದರೆ ನಿಮ್ಮ ಕಣ್ಣುಗಳ ಆರೋಗ್ಯ ಕ್ಷೀಣಿಸಲಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ.

ಕಾಫಿ ಪ್ರಿಯರಿಗೆ ಪರ್ಯಾಯ ಆಯ್ಕೆ ಇದೆಯಾ?

ಅಧ್ಯಯನ ವರದಿ ಪ್ರಕಾರ ಇನ್‌ಸ್ಟಾಂಟ್ ಕಾಫಿ ದೃಷ್ಠಿ ದೋಷಕ್ಕೆ ಕಾರಣವಾಗಲಿದೆ. ಆದರೆ ಫಿಲ್ಟರ್ ಕಾಫಿಯಲ್ಲಿ ಈ ಸಮಸ್ಯೆ ಇಲ್ಲ ಎಂದು ಅಧ್ಯಯನ ಹೇಳುತ್ತಿದೆ. ಫಿಲ್ಟರ್ ಕಾಫಿ, ಕುದಿಸಿದ ಕಾಫಿ ಅಥವಾ ಡಿಕಾಕ್ಷನ್ ಕಾಫಿ ಸೇವನೆಯಿಂದ ಈ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧ್ಯಯನ ವರದಿಹೇಳಿದೆ.

ಅಧ್ಯಯನ ವರದಿಗೆ ಮಿಶ್ರ ಪ್ರತಿಕ್ರಿಯೆ

ಚೀನಾ ಸಂಶೋಧಕರ ತಂಡ ನಡೆಸಿದ ಅಧ್ಯಯನ ವರದಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾರಣ ಕಾಫಿ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಇದು ಕೇವಲ ಮಾರ್ಕೆಟಿಂಗ್ ತಂತ್ರ. ಕಾಫಿ ಉತ್ತಮವಲ್ಲ ಅನ್ನೋದಾದರೆ ಹೇಗೆ ಕುಡಿದರೂ ಆರೋಗ್ಯ ಸಮಸ್ಯೆ ಕಾಡಲಿದೆ. ಹೀಗಾಗಿ ಈ ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.