ಆಸ್ಪತ್ರೆಗಳ ಸನ್ನದ್ಧತೆ ಪರಿಶೀಲಿಸಿ, ಚೀನಾ ನಿಗೂಢ ಸೋಂಕು ಬೆನ್ನಲ್ಲೇ ರಾಜ್ಯಗಳಿಗೆ ಕೇಂದ್ರ ಸೂಚನೆ!
ಚೀನಾದಲ್ಲಿ ನ್ಯೂಮೋನಿಯಾ ರೋಗ ಲಕ್ಷಣಗಳಿರುವ ನಿಗೂಢ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ವಿಶ್ವವೇ ಎಚ್ಚೆತ್ತುಕೊಂಡಿದೆ. ಈ ಸೋಂಕಿನ ಪರಿಣಾಮ ಭಾರತಕ್ಕೆ ಅಷ್ಟಿಲ್ಲ, ಆದರೆ ಎಲ್ಲಾ ಆಸ್ಪತ್ರೆಗಳು ಸನ್ನದ್ಧತೆಯನ್ನು ಆಯಾ ರಾಜ್ಯಗಳು ಪರಿಶೀಲನೆ ನಡೆಸಲು ಸೂಚಿಸಿದೆ.
ನವದೆಹಲಿ(ನ.26) ನ್ಯುಮೋನಿಯಾ ರೀತಿಯ ನಿಗೂಢ ಕಾಯಿಲೆ (ಹೆಚ್9ಎನ್2 ವೈರಸ್) ಪ್ರಕರಣ ಚೀನಾದಲ್ಲಿ ದಿನಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಸ್ಪತ್ರೆ ದಾಖಲಾಗುತ್ತಿರುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತಿದೆ. ಚೀನಾದಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಜಗತ್ತಿಗೆ ಆತಂಕ ಹೆಚ್ಚಾಗಿದೆ. ಆದರೆ ಈ ಸೋಂಕು ಪ್ರಕರಣದ ಕುರಿತು ಭಾರತ ತೀವ್ರ ನಿಗಾ ವಹಿಸಿದೆ. ಆದರೆ ಹೆಚ್9ಎನ್2 ವೈರಸ್‌ನಿಂದ ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ ಅನ್ನೋದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಯಾವುದೇ ಸಂದರ್ಭ ಎದುರಿಸಲು ಸಿದ್ದ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇಷ್ಟೇ ಅಲ್ಲ ಎಲ್ಲಾ ಆಸ್ಪತ್ರಗಳ ಸನ್ನದ್ಧತೆಯನ್ನು ಆಯಾ ರಾಜ್ಯಗಳು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ.
ಬೆಡ್, ವೆಂಟಿಲೇಟರ್, ಔಷಧಿ, ಲಸಿಕೆ, ತುರ್ತು ನಿಘಾ ಘಟಕ ವ್ಯವಸ್ಥೆಗಳು, ವೈದ್ಯಕೀಯ ಸಲಕರಣೆ, ಆಕ್ಸಿಜನ್ ಸೇರಿದಂತೆ ಆಸ್ಪತ್ರೆಯ ಸನ್ನದ್ಧತೆಯನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಪರಿಶೀಲನೆ ನಡೆಸಬೇಕು. ಭಾರತ ಯಾವುದೇ ಸವಾಲು ಎದುರಿಸಲು ಸಜ್ಜಾಗಿದೆ. ಸೋಂಕು ಭಾರತದಲ್ಲಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಆದರೆ ಮುನ್ನಚ್ಚೆರಿಕೆ ಕ್ರಮವಾಗಿ ಎಲ್ಲಾ ಆಸ್ಪತ್ರೆಗಳು ಸನ್ನದ್ಧವಾಗಿರಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಚೀನಾದಲ್ಲಿ H9n2 ಸೋಂಕು ದಿಢೀರ್ ಏರಿಕೆ, ಭಾರತದಲ್ಲಿ ತೀವ್ರ ನಿಘಾವಹಿಸಲು ಸೂಚನೆ!
ಚೀನಾದಲ್ಲಿ ಹರಡುತ್ತಿರುವ ಸೋಂಕಿನಿಂದ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಪ್ರಕರಣವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕೋವಿಡ್‌ನಿಂದ ಭಾರತದಲ್ಲಿನ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳ ಹೆಚ್ಚಿಸಲಾಗಿದೆ. ಹೀಗಾಗಿ ಯಾವುದೇ ಸಂದರ್ಭ ಎದುರಿಸಲು ಭಾರತ ತಯಾರಾಗಿದೆ. ಮೆಡಿಕಲ್ ಕಿಟ್, ಪಿಪಿಇ ಕಿಟ್, ಆಮ್ಲಜನಕ ಶೇಖರನೆ, ಸರಬರಾಜು, ರೋಗ ನಿರೋಧ ಔಷಧಿಗಳ ಸೇರಿದಂತೆ ಆಸ್ಪತ್ರೆಯಲ್ಲಿನ ತಯಾರಿ ಕುರಿತು ಆಯಾ ರಾಜ್ಯಗಳ ಆರೋಗ್ಯ ಸಚಿವಾಲಯ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ.
ಕೋವಿಡ್ ಸಂದರ್ಭದಲ್ಲಿನ ತಯಾರಿಯ ಅಗತ್ಯವಿದೆ. ಈ ಕುರಿತು ಕೋವಿಡ್ ವೇಳೆ ನೀಡಲಾಗಿದ್ದ ಮಾರ್ಗಸೂಚಿಗಳನ್ನು ಆಸ್ಪತ್ರೆಗಳು ಹಾಗೂ ಆಯಾ ರಾಜ್ಯಗಳು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಚೀನಾದಲ್ಲಿ ಕೋವಿಡ್ ನಂತ್ರ ಮತ್ತೊಂದು ನಿಗೂಢ ಸಾಂಕ್ರಾಮಿಕ, ನಮ್ ದೇಶಕ್ಕೂ ಕಾಲಿಡುತ್ತಾ?
ಹೆಚ್9ಎನ್2 ಎಂಬುದು ಮಕ್ಕಳ ಉಸಿರಾಟ ಕಾಯಿಲೆಯಾಗಿದ್ದು, ಚೀನಾ ದೇಶದಲ್ಲಿ ತುಸು ಹೆಚ್ಚಾಗಿ ಬಾಧಿಸಲು ಪ್ರಾರಂಭಿಸಿದೆ. ಇದು ಅಲ್ಪ ಪ್ರಮಾಣದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಅಂಟರೋಗವಾಗಿದ್ದರೂ ಅಪಾಯಕಾರಿಯಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಭಾರತದ ಆರೋಗ್ಯ ಸಚಿವಾಲಯ ಈ ರೋಗ ಭಾರತದಲ್ಲಿ ರೋಗ ಹರಡದಂತೆ ಹಲವು ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ, ಒಂದು ವೇಳೆ ಉಲ್ಬಣಗೊಂಡರೂ ಸಹ ಅದನ್ನು ಕ್ಲಸ್ಟರ್ ಮಟ್ಟದಲ್ಲಿ ಅದನ್ನು ಎದುರಿಸಲು ಸಕಲ ರೀತಿಯಲ್ಲೂ ‘ಒಂದು ದೇಶ ಒಂದು ಆರೋಗ್ಯ’ ಘೋಷವಾಕ್ಯದಂತೆ ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.