Asianet Suvarna News Asianet Suvarna News

ಕೊರೋನಾ ನಂತರ ವಂಚಕ ದೇಶ ಚೀನಾ ಮಾಡಿದ್ದೇನು ಗೊತ್ತಾ?

ಕಣ್ಣಲ್ಲಿ ನೆತ್ತರು ಇಲ್ಲದ ವ್ಯಕ್ತಿ- ಅಂತ ನಾವು ಕೆಲವರಿಗೆ ಬೈಯುತ್ತಾ ಇರ್ತೀವಲ್ಲ. ಅಂಥ ವ್ಯಕ್ತಿತ್ವ ಚೀನಾ ದೇಶದ್ದು. ಕಮ್ಯುನಿಸ್ಟ್ ಆಡಳಿತದ ಇಲ್ಲಿನ ಸರಕಾರಕ್ಕೆ ಹೇಗೂ ತನ್ನ ಜನರ ಹಿತಾಸಕ್ತಿಯ ಮೇಲೇ ಕಾಳಜಿ ಇಲ್ಲ. ಇನ್ನು ಇತರ ದೇಶಗಳ ಜನರ ಮೇಲೆ ಹೇಗೆ ಇರಲು ಸಾಧ್ಯ? ಹೀಗಾಗಿಯೇ ಚೀನಾ ಸಾವಿನ ಮನೆಯಲ್ಲಿ ವ್ಯಾಪಾರ ಮಾಡೋಕೆ ಮುಂದಾಗಿದೆ.

 

China encashing the deadly Covid19 situation
Author
Bengaluru, First Published Apr 16, 2020, 7:43 PM IST
ಕಣ್ಣಲ್ಲಿ ನೆತ್ತರು ಇಲ್ಲದ ವ್ಯಕ್ತಿ- ಅಂತ ನಾವು ಕೆಲವರಿಗೆ ಬೈಯುತ್ತಾ ಇರ್ತೀವಲ್ಲ. ಅಂಥ ವ್ಯಕ್ತಿತ್ವ ಚೀನಾ ದೇಶದ್ದು. ಕಮ್ಯುನಿಸ್ಟ್ ಆಡಳಿತದ ಇಲ್ಲಿನ ಸರಕಾರಕ್ಕೆ ಹೇಗೂ ತನ್ನ ಜನರ  ಹಿತಾಸಕ್ತಿಯ ಮೇಲೇ ಕಾಳಜಿ ಇಲ್ಲ. ಇನ್ನು ಇತರ ದೇಶಗಳ ಜನರ ಮೇಲೆ ಹೇಗೆ ಇರಲು ಸಾಧ್ಯ? ಹೀಗಾಗಿಯೇ ಚೀನಾ ಸಾವಿನ ಮನೆಯಲ್ಲಿ ವ್ಯಾಪಾರ ಮಾಡೋಕೆ ಮುಂದಾಗಿದೆ.

ಒಂದು ಸಿಂಪಲ್ ಉದಾಹರಣೆ. ಭಾರತದಲ್ಲಿ ಕೋವಿಡ್ ಸೋಂಕು‌ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೂ ಕಾರ್ಯಕರ್ತರಿಗೂ ತೊಡುವ ಪರ್ಸನಲ್ ಪ್ರೊಟೆಕ್ಷನ್  ಕಿಟ್‌ಗಳ ಸಂಖ್ಯೆ ಸಾಕಷ್ಟು ಇಲ್ಲ. ಹೀಗಾಗಿ ಅವುಗಳನ್ನು ಚೀನಾದಿಂದ ತರಿಸಿಕೊಳ್ಳುವುದು ಅಂತಾಯಿತು. ಚೀನಾದಿಂದ ಇತ್ತೀಚಿಗೆ ಈ ಕಿಟ್‌ಗಳ ಕಂಟೈನರ್ ಬಂದಿದೆ. ನೋಡಿದರೆ, ಅವು ಕಳುಹಿಸಿದ ಕಿಟ್‌ಗಳ ಗುಣಮಟ್ಟ, ಭಾರತೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿದ ಗುಣಮಟ್ಟದ ಅರ್ಧದಷ್ಟು ಕೂಡ ಇಲ್ಲ! ಅಂದರೆ ಇವುಗಳನ್ನು ಧರಿಸಿಕೊಂಡರೆ ವೈದ್ಯರಿಗೆ ಸುರಕ್ಷತೆಗಿಂತ ಅಪಾಯವೇ ಹೆಚ್ಚು. ಈ ಕಿಟ್‌ಗಳನ್ನು ಚೀನಾ ತರಾತುರಿಯಲ್ಲಿ ಬೇಜವಾಬ್ದಾರಿಯಿಂದ ತಯಾರು ಮಾಡಿ ಕಳಿಸಿರುವುದು ಖಂಡಿತ.

ಚೀನಾ ಮಾಡಿದ ಎಡವಟ್ಟಿದು, ಅದಕ್ಕೇ ರೋಗ ಇಷ್ಟು ಹರಡಿದ್ದು

ಇನ್ನೊಂದು ಉದಾಹರಣೆ ಇಟಲಿಯದ್ದು. ಹಲವಾರು ತಿಂಗಳುಗಳ ಮೊದಲೇ ಇಟಲಿ ಹಾಗೂ ಚೀನಾಗಳ ನಡುವೆ ಸಾವಿರಾರು ಕೋಟಿ ಡಾಲರ್ ಮೊತ್ತದ ವ್ಯಾಪಾರ ವಹಿವಾಟಿನ ಒಪ್ಪಂದ ನಡೆದಿತ್ತು. ಈ ಮಧ್ಯೆ ಕೊರೋನಾ ವೈರಸ್ ವಕ್ಕರಿಸಿ, ಚೀನಾದಲ್ಲಿ ಜನ ಸಾಯಲು ಆರಂಭಿಸಿದರು. ಆಗ ಇಟಲಿ ದೇಶ ತನ್ನಲ್ಲಿದ್ದ ಪರ್ಸನಲ್‌ ಪ್ರೊಟೆಕ್ಷನ್ ಕಿಟ್‌ಗಳನ್ನು ದೊಡ್ಡ ಪ್ರಮಾಣದಲ್ಲಿ‌ ಚೀನಾಕ್ಕೆ ಉದಾರವಾಗಿ, ಉಚಿತವಾಗಿ ಕಳುಹಿಸಿತು. ಚೀನಾ ಅದನ್ನು ಬಳಸಿಕೊಂಡಿತು. ಚೀನಾ ವೈರಸ್‌ನ ಬಾಧೆಯಿಂದ ಪಾರಾದ ಬಳಿಕ, ಇಟಲಿಯಲ್ಲಿ ಸೋಂಕು ಹಾಗೂ ಸಾವಿನ ಮೆರವಣಿಗೆ ಆರಂಭವಾಯಿತು. ಆಗ ಇಟಲಿ ತನಗೆ ವೈದ್ಯಕೀಯ ನೆರವು ನೀಡುವಂತೆ ಚೀನಾಕ್ಕೆ ಮೊರೆಯಿಟ್ಟಿತು. ಆಗ ಚೀನಾ ಮಾಡಿದ್ದೇನು ಗೊತ್ತೆ? ಇಟಲಿ ತನಗೆ ಕಳುಹಿಸಿದ ಪಿಪಿ ಕಿಟ್‌ಗಳನ್ನೇ ಅದಕ್ಕೆ ಮರಳಿ ಮಾರಾಟ ಮಾಡಿತು! ಇಟಲಿ ನೀಡಿದ್ದು ಉಚಿತವಾಗಿ, ಚೀನಾ ಅದನ್ನೇ ಇಟಲಿಗೆ ಮಾರಿತು. ಇಂಥ ಅಮಾನವೀಯ ದೇಶ ಇನ್ನೊಂದು ಇರಲಿಕ್ಕಿಲ್ಲ

ಇಟಲಿ, ಸ್ಪೇನ್ ಆಗದಿರಲಿ ಭಾರತ, ವೃದ್ಧರಿಗಿಲ್ಲಿರಲಿ ಸಮ್ಮಾನ 

 ಇದೇ ಸಂದರ್ಭ ನೋಡಿಕೊಂಡು ಚೀನಾ, ಇಟಲಿಯ ಜೊತೆಗೆ ಇನ್ನೊಂದು ವ್ಯಾಪಾರ ಕುದುರಿಸಿತು. ಮೆಡಿಕಲ್ ಕಿಟ್‌ಗಳು, ಪರೀಕ್ಷೆ ಕಿಟ್‌ಗಳು, ಜ್ವರದ ಮೆಡಿಸಿನ್, ಮಾಸ್ಕ್,, ಗ್ಲೌಸ್ ಇತ್ಯಾದಿ. ಆರ್ಥಿಕ ಹೊಡೆತದಿಂದ ತತ್ತರಿಸಿಹೋಗಿದ್ದ ಇಟಲಿಯ ಬಳಿ ಹಣವಿರಲಿಲ್ಲ. ಹೀಗಾಗಿ ಸಾಲವನ್ನೂ ನಾನೇ ಕೊಡುತ್ತೇನೆ ಎಂದಿತು ಚೀನಾ. ಹೀಗೆ ಈಗ ಚೀನಾದ ದೊಡ್ಡ ಮೊತ್ತದ ಋಣದಲ್ಲಿ ಇಟಲಿ ಬಿದ್ದಿದೆ. ಸ್ಪೇನ್ ಕತೆ ಕೂಡ ಹೀಗೇ ಆಗಿದೆ. ಇದನ್ನು ತೀರಿಸಬೇಕಿದ್ದರೆ ಇವು ಚೀನಾದ ಕೆಳಗೆ ಇನ್ನೆಷ್ಟು ವರ್ಷ ಜೀತ ಮಾಡಬೇಕೋ! ಆದರೂ ಸ್ಪೇನ್‌ ಹಾಗೂ ಜರ್ಮನಿಗಳು ಇತ್ತೀಚೆಗೆ ಚೀನಾ ಕಳುಹಿಸಿದ ಪಿಪಿಇ ಕಿಟ್‌ಗಳು ಸುರಕ್ಷಿತವಾಗಿಲ್ಲ ಅಂತ ವಾಪಸ್‌ ಕಳುಹಿಸಿವೆ. ಆದರೆ ಚೀನಾ ಮಾತ್ರ, ಅವು ಚೆನ್ನಾಗಿಯೇ ಇವೆ, ನೀವು ಮಾತ್ರ ಅದರ ಜೊತೆಗೆ ಕಳಿಸಿರುವ ಇನ್‌ಸ್ಟ್ರಕ್ಷನ್ಸ್ ಸರಿಯಾಗಿ ಓದಿಕೊಂಡಿಲ್ಲ ಅಂತ ತಿಪ್ಪೆ ಸಾರಿಸಿದೆ.

ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌! 

ಚೀನಾ ಈಗ ವೈರಸ್ ಹೆಸರಿನಲ್ಲಿ‌ ಜಗತ್ತಿನ ಹಲವಾರು ಬಡ ದೇಶಗಳ ಜೊತೆಗೆ ವ್ಯವಹಾರ ಶುರು ಹಚ್ಚಿಕೊಂಡಿದೆ. ಶ್ರೀಲಂಕಾ, ಮಾರಿಷಸ್, ಮಾಲ್ದೀವ್ಸ್, ಬಾಂಗ್ಲಾ, ಮ್ಯಾನ್ಮಾರ್, ಆಸ್ಟ್ರೇಲಿಯಾ, ಎಲ್ಲವೂ ಒಂದಲ್ಲ ಒಂದು ಅಗತ್ಯ ವಸ್ತುವಿಗಾಗಿ ಚೀನವನ್ನೇ ಅವಲಂಬಿಸಿವೆ. ಅದರಲ್ಲೂ ಕಡಿಮೆ ದರದ ಔಷಧಗಳು. ಆದರೆ ಚೀನಾ ಮಾಲ್‌ನ ಗುಣಮಟ್ಟ ಮಾತ್ರ ನಮಗೆ ಮೊದಲೇ ಗೊತ್ತಿದ್ದಂತೆ ಕಳಪೆ. ಜಗನ್ನಾಶಕನೂ ತಾನೇ, ಜಗದ್ರಕ್ಷಕನೂ ತಾನೇ ಎಂಬ ನಿಲುವಿನಲ್ಲಿ ಚೀನಾ ಬೀಗುತ್ತಿದೆ! ಆದರೆ ಯಾವ ದೇಶವೂ ಈ ವಿಚಾರದಲ್ಲಿ ಚೀನಾವನ್ನು ಪ್ರತಿಭಟಿಸುತ್ತಿಲ್ಲ. ಸದ್ಯಕ್ಕೆ ಅಮೆರಿಕದ ಅಧ್ಯಕ್ಷ ಟ್ರಂಪ್‌ ಮಾತ್ರ ಚೀನಾದ ಈ ಕ್ಷುದ್ರ ಬುದ್ಧಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಇದ್ದಾರೆ.

ಚೀನಾ ಕಳುಹಿಸಿದ ಸುರಕ್ಷತಾ ಕಿಟ್ ಪರೀಕ್ಷೆಯಲ್ಲಿ ಫೇಲ್
Follow Us:
Download App:
  • android
  • ios