ನವದೆಹಲಿ(ಏ.16): ಕೊರೋನಾ ಸೋಂಕಿತರ ಪತ್ತೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್‌ ಅನ್ನು ಕೇವಲ 13ನೇ ದಿನದಲ್ಲಿ 5 ಕೋಟಿ ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಆ ಮೂಲಕ ಅತೀ ವೇಗವಾಗಿ 5 ಕೋಟಿ ಬಳಕೆದಾರರನ್ನು ಸಂಪಾದಿಸಿದ ಮೊದಲ ಆ್ಯಪ್‌ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ ಎಂದು ನೀತಿ ಆಯೋಗ ಸಿಇಒ ಅಮಿತಾಭ್‌ ಕಾಂತ್‌ ಹೇಳಿದ್ದಾರೆ.

ಸೋಂಕಿತ ಪಕ್ಕಕ್ಕೆ ಬಂದರೆ ಅಲರ್ಟ್ ಮಾಡುತ್ತೆ ಈ ಆ್ಯಪ್!

5 ಕೋಟಿ ಬಳಕೆದಾರರನ್ನು ಸಂಪಾದಿಸಿಲು ಸ್ಥಿರ ದೂರವಾಣಿ 75 ವರ್ಷ, ರೆಡಿಯೋ 38 ವರ್ಷ, ಟಿವಿ 13 ವರ್ಷ, ಇಂಟರ್ನೆಟ್‌ 4 ವರ್ಷ, ಫೇಸ್ಬುಕ್‌ 19 ತಿಂಗಳು ತೆಗೆದುಕೊಂಡಿತ್ತು.