Asianet Suvarna News Asianet Suvarna News

ಬಳ್ಳಾರಿ: ಒಂದೇ ಬೆಡ್‌ನಲ್ಲಿ ಮೂರು ಮಕ್ಕಳನ್ನು ಮಲಗಿಸಿ ಚಿಕಿತ್ಸೆ; ವಿಮ್ಸ್ ಆಸ್ಪತ್ರೆ ಮತ್ತೊಂದು ಎಡವಟ್ಟು !

ಸದಾ ಒಂದಲ್ಲೊಂದು ವಿವಾದ ಮೈಮೇಲೆಳೆದುಕೊಳ್ಳುವ ಬಳ್ಳಾರಿ ವಿಮ್ಸ್ ಆಸ್ಪತ್ರೆ, ಇದೀಗ ಎನ್ಐಸಿಯು ಮಕ್ಕಳ ವಾರ್ಡ್ ನಲ್ಲಿ ಒಂದೇ ಬೆಡ್ ನಲ್ಲಿ(ವಾರ್ಮರ್) ಮೂವರು ಮಕ್ಕಳನ್ನು ಮಲಗಿಸಿ ಮತ್ತೆ ಎಡವಟ್ಟು ಮಾಡಿಕೊಂಡಿದೆ.

Childrens Health VIMS Hospital Negligence again at bellary rav
Author
First Published Sep 8, 2023, 2:53 PM IST

ಬಳ್ಳಾರಿ (ಸೆ.8) ಸದಾ ಒಂದಲ್ಲೊಂದು ವಿವಾದ ಮೈಮೇಲೆಳೆದುಕೊಳ್ಳುವ ಬಳ್ಳಾರಿ ವಿಮ್ಸ್ ಆಸ್ಪತ್ರೆ, ಇದೀಗ ಎನ್ಐಸಿಯು ಮಕ್ಕಳ ವಾರ್ಡ್ ನಲ್ಲಿ
ಒಂದೇ ಬೆಡ್ ನಲ್ಲಿ(ವಾರ್ಮರ್) ಮೂವರು ಮಕ್ಕಳನ್ನು ಮಲಗಿಸಿ ಮತ್ತೆ ಎಡವಟ್ಟು ಮಾಡಿಕೊಂಡಿದೆ.

ನಿಯಮದ ಪ್ರಕಾರ ಒಂದು ಬೆಡ್ (ವಾರ್ಮರ್) ನಲ್ಲಿ ಒಂದೇ ಮಗುವನ್ನು ಮಲಗಿಸಿ ಚಿಕಿತ್ಸೆ ನೀಡಬೇಕು. ಒಂದು ಬೆಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನ ಮಲಗಿಸಿದ್ರೆ  ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ಆದರೆ ವಿಮ್ಸ್ ಆಸ್ಪತ್ರೆ ಸಿಬ್ಬಂದಿಗೆ ಇದೆಲ್ಲ ಗೊತ್ತಿದ್ರೂ ಮಕ್ಕಳ ಆರೋಗ್ಯದ ಜತೆ ಚೆಲ್ಲಾಟವಾಡ್ತಿರೋ ಸಿಬ್ಬಂದಿ. ಸರಿಯಾಗಿ ಮಕ್ಕಳ ಕಾಳಜಿ ಮಾಡುತ್ತಿಲ್ಲ. ಮಕ್ಕಳಿಗೆ ಕಾಟಾಚಾರಕ್ಕೆ ಚಿಕಿತ್ಸೆ ನೀಡಲಾಗ್ತಿದೆ. ಅರವತ್ತು ವಾರ್ಮರ್ ಗಳಿದ್ರೂ ಕೇವಲ ಮೂವತ್ತು ವಾರ್ಮರ್ ಬಳಕೆ ಮಾಡಲಾಗ್ತಿದೆ.

ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ: ಉಸ್ತುವಾರಿ ಸಚಿವರಿಂದಲೇ ಚೆಕ್ ವಿತರಣೆ

ಮಕ್ಕಳ ರಕ್ಷಾ ಆಯೋಗದ ಸದಸ್ಯರ ಮುಂದೆ ಬಯಲಾದ ವಿಮ್ಸ್ ಆಸ್ಪತ್ರೆ ಕರ್ಮಕಾಂಡ. ಆಸ್ಪತ್ರೆಯ ಅವ್ಯವಸ್ಥೆ ಕಂಡು ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರಿಂದ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಕೇವಲ ಮಕ್ಕಳ ವಾರ್ಡ್ ಅಲ್ಲದೇ ಬಾಣಂತಿಯರ ವಾರ್ಡ್ ಕೂಡ ಅವ್ಯವಸ್ಥೆ ಅಗರವಾಗಿದೆ. ಈಗಾಗಲೇ ಎರಡು ಬಾರಿ ಭೇಟಿ ನೀಡಿದಾಗಲೂ ಸಿಬ್ಬಂದಿಗೆ ವಾರ್ನಿಂಗ್ ಮಾಡಲಾಗಿದೆ. ಆದರೂ ವಿಮ್ಸ್ ಆಸ್ಪತ್ರೆ ಆಡಳಿತ, ಸಿಬ್ಬಂದಿ ವರ್ಗ ದಿವ್ಯ ನಿರ್ಲಕ್ಷ್ಯ. ಇನ್ಮುಂದೆ ಹೀಗೆ ಮಾಡಿದ್ರೆ ನೋಟಿಸ್ ನೀಡೋದಾಗಿ ಎಚ್ಚರಿಸಿದ ಮಕ್ಕಳ ಆಯೋಗ. 

ಕಳೆದ ವರ್ಷ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ತೀವ್ರ ನಿಗಾ ಘಟಕದಲ್ಲಿದ್ದ ಇಬ್ಬರು ರೋಗಿಗಳು ಮೃತಪಟ್ಟಿದ್ದರು. ಆ ಪ್ರಕರಣದಿಂದ ರಾಜ್ಯದ ಗಮನ ಸೆಳೆದಿತ್ತು. ಕೊರೊನಾ ಸಮಯದಲ್ಲಂತೂ ವಿದ್ಯುತ್ ಕೊರತೆಯಿಂದ ಹಲವು ರೋಗಿಗಳು ಮೃತಪಟ್ಟಿದ್ದರು. ಸಾಮಾನ್ಯ ಜನರು ವಿಮ್ಸ್ ಆಸ್ಪತ್ರೆಗೆ ಬರುವುದಕ್ಕೆ ಹೆದರುತ್ತಿದ್ದಾರೆ. ಬಡವರು ಹೆಚ್ಚಾಗಿ ಬರುವ ವಿಮ್ಸ್ ಆಸ್ಪತ್ರೆಗೆ ಸಿಬ್ಬಂದಿಗಳ ಬೇಜವಾಬ್ದಾರಿತನ ಅಲಕ್ಷ್ಯದಿಂದಾಗ ಸಾವುನೋವುಗಳ ಸಂಭವಿಸುತ್ತಿವೆ.  

ಬಿಗ್‌ 3 ವರದಿಗೆ ಸರ್ಕಾರ ಅಲರ್ಟ್.. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಿಕ್ತು ಪರಿಹಾರ !

Follow Us:
Download App:
  • android
  • ios