Fitness Tips : ಕುರ್ಚಿಯಲ್ಲಿ ಕುಳಿತೇ ಹೊಟ್ಟೆ ಬೊಜ್ಜು ಕಡಿಮೆ ಮಾಡ್ಕೊಳ್ಳಿ
ವರ್ಕ್ ಔಟ್ ಮಾಡ್ಬೇಕು ಎನ್ನುವ ಮನಸ್ಸಿರುತ್ತೆ. ಆದ್ರೆ ಸಮಯ ಸಿಗೋದಿಲ್ಲ ಎನ್ನುವವರನ್ನು ನೀವು ಕೇಳಿರ್ತೀರಾ. ನಿಮಗೂ ಇದೇ ಸಮಸ್ಯೆ ಆಗಿರಬಹುದು. ವರ್ಕ್ ಔಟ್ ಗೆ ಜಿಮ್ ಗೆ ಹೋಗ್ಬೇಕಾಗಿಲ್ಲ. ಕಚೇರಿಯಲ್ಲೇ ನೀವು ನಿಮ್ಮ ತೂಕ ಇಳಿಸಿಕೊಳ್ಳಬಹುದು.
ಒಂದೇ ಕಡೆ ಕುಳಿತುಕೊಂಡು ಕೆಲಸ ಮಾಡೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಆದ್ರೆ ಅನಿವಾರ್ಯ ಕಾರಣಕ್ಕೆ ಜನರು 8 ಗಂಟೆಗಳ ಕಾಲ ಒಂದೇ ಕಡೆ ಕುಳಿತು ಕೆಲಸ ಮಾಡ್ತಾರೆ. ಈ ಕೆಲಸದಿಂದ ಪರ್ಸ್ ನಲ್ಲಿ ಹಣ ತುಂಬಬಹುದು. ಆದ್ರೆ ಆರೋಗ್ಯ ಹದಗೆಡುತ್ತದೆ. ಪ್ರತಿ ದಿನ 7 – 8 ಗಂಟೆ ಒಂದೇ ಕಡೆ ಕುಳಿತು ಕೆಲಸ ಮಾಡೋದ್ರಿಂದ ಬೊಜ್ಜು ಕಾಡೋದು ಸಾಮಾನ್ಯವಾಗಿದೆ. ಅನೇಕರ ಹೊಟ್ಟೆ ಊದಿಕೊಂಡಿರೋದನ್ನು ನೀವು ನೋಡಬಹುದು. ಆಹಾರದಲ್ಲಿ ಎಷ್ಟೇ ನಿಯಂತ್ರಣ ಮಾಡಿದ್ರೂ ಹೊಟ್ಟೆ ಕರಗೋದಿಲ್ಲ. ಕೆಲವರು ಬೆಳಿಗ್ಗೆ ಅಥವಾ ರಾತ್ರಿ ವಾಕಿಂಗ್, ಜಾಗಿಂಗ್ ಮಾಡ್ತಾರೆ. ಮತ್ತೆ ಕೆಲವರು ಜಿಮ್ ಗೆ ಹೋಗ್ತಾರೆ. ಆದ್ರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಅದ್ರಲ್ಲೂ ಮಹಿಳೆಯರಿಗೆ ಕಚೇರಿ ಕೆಲಸ, ಮನೆ ಕೆಲಸದ ಮಧ್ಯೆ ವ್ಯಾಯಾಮ, ಜಿಮ್ ಗೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದ್ರಿಂದಾಗಿ ಅವರು ಬೊಜ್ಜಿಗೆ ಬಲಿಯಾಗ್ತಾರೆ. ನೀವು ಕಚೇರಿಗೆ ಹೋಗ್ತಿದ್ದು, ಅಲ್ಲಿ ಸಣ್ಣಪುಟ್ಟ ಬ್ರೇಕ್ ಸಿಗುತ್ತೆ ಎಂದಾದ್ರೆ ಈ ಕೆಲ ವ್ಯಾಯಾಮ ಮಾಡಿ ಬೊಜ್ಜನ್ನು ಕರಗಿಸಿಕೊಳ್ಳಬಹುದು.
ಕಚೇರಿ (Office) ಯಲ್ಲಿ ಕುಳಿತು ಮಾಡಬಹುದು ಈ ವ್ಯಾಯಾಮ (Exercise) :
ಕುರ್ಚಿ ಸ್ಕ್ವಾಟ್ : ನಿಮಗೆ ಬಿಡುವಿನ ಸಮಯದಲ್ಲಿ ನೀವು ಕಚೇರಿಯಲ್ಲೇ ಈ ವ್ಯಾಯಾಮ ಮಾಡಬಹುದು. ನೀವು ಇದನ್ನು ಮಾಡಲು ಕುರ್ಚಿ (Chair) ಯ ಮುಂದೆ ಬೆನ್ನು ಹಾಕಿ ನೇರವಾಗಿ ನಿಲ್ಲಬೇಕು. ಕಾಲುಗಳನ್ನು ಭುಜದ ಸಮಾನಾಂತರವಾಗಿ ಇಡಬೇಕು. ಕಾಲ್ಬೆರಳುಗಳು ನೇರವಾಗಿರಲಿ. ಬೆನ್ನುಮೂಳೆ ನೇರವಾಗಿರಲಿ. ನಿಮ್ಮ ತಲೆ ಮತ್ತು ಎದೆಯನ್ನು ಮೇಲಕ್ಕೆತ್ತಿ. ಕೈ ಬೆರಳುಗಳನ್ನು ಮುಂದೆ ಚಾಚಿ ಹಿಡಿದುಕೊಳ್ಳಿ. ನಂತ್ರ ಮೊಣಕಾಲುಗಳನ್ನು ಬಗ್ಗಿಸಿ, ಸೊಂಟವನ್ನು ಕುರ್ಚಿ ಮೇಲೆ ಇಡಿ. ನಂತ್ರ ಮತ್ತೆ ನೇರವಾಗಿ ಎದ್ದು ನಿಲ್ಲಿ. ಮತ್ತೆ ಬೆನ್ನನ್ನು ಬಾಗಿಸದೆ ಕುರ್ಚಿ ಮೇಲೆ ಕುಳಿತುಕೊಳ್ಳಿ. 10 ಬಾರಿ ಮೂರು ಸೆಟ್ ನಂತೆ ಇದನ್ನು ಮಾಡಲು ಪ್ರಯತ್ನಿಸಿ.
ಸೀಟೆಡ್ ಟ್ರೈಸ್ಪ್ಸ್ : ಇದನ್ನು ಕೂಡ ನೀವು ಕಚೇರಿಯಲ್ಲಿ ಆರಾಮವಾಗಿ ಮಾಡಬಹುದು. ಮೊದಲು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಎರಡೂ ಕೈಗಳನ್ನು ಕುರ್ಚಿ ತುದಿಯಲ್ಲಿ ಇಡಿ. ಕತ್ತು ಬಾಗಬಾರದು. ಹಾಗೆಯೇ ಎದೆಯನ್ನು ಹಿಗ್ಗಿಸಬೇಕು. ಭುಜವನ್ನು ಹಿಂದಕ್ಕೆ ತಳ್ಳಬೇಕು. ಕಾಲುಗಳು ಕುರ್ಚಿಯಿಂದ ಸ್ವಲ್ಪ ದೂರದಲ್ಲಿರಬೇಕು. ಈಗ ನಿಧಾನವಾಗಿ ಕೈಗಳ ಮಡಿಸುತ್ತಾ ಸೊಂಟವನ್ನು ಕೆಳಗಿ ತೆಗೆದುಕೊಂಡು ಹೋಗಿ. ಸೊಂಟ ನೆಲಕ್ಕೆ ತಾಕಬಾರದು. ನಂತ್ರ ನಿಧಾನವಾಗಿ ಸೊಂಟವನ್ನು ಎತ್ತಿ ಕುರ್ಚಿ ಮೇಲೆ ಕುಳಿತುಕೊಳ್ಳಬೇಕು. ಇದನ್ನು ನೀವು ಪುನರಾವರ್ತಿಸಬೇಕು.
ನಿಮ್ಮನ್ನು ಕಾಡ್ತಿದೆಯಾ Emotional Addiction ? ಇಲ್ಲಿವೆ ಪರಿಹಾರ
ಕುರ್ಚಿಯಲ್ಲಿ ಪುಷ್ ಅಪ್ : ಕುರ್ಚಿಯನ್ನು ಸೂಕ್ತವಾದ ಸ್ಥಳದಲ್ಲಿ ಹಾಕಿಕೊಳ್ಳಿ. ನಿಮ್ಮ ಭಾರಕ್ಕೆ ಕುರ್ಚಿ ಚಲಿಸದಂತೆ ಎಚ್ಚರವಹಿಸಿ. ಈಗ ಕುರ್ಚಿ ಕಡೆ ನಿಮ್ಮ ಮುಖ ತಿರುಗಿಸಿ, ಕುರ್ಚಿಯಿಂದ ಸ್ವಲ್ಪ ದೂರ ನಿಂತುಕೊಳ್ಳಿ. ಕುರ್ಚಿಯ ಸೀಟನ್ನು ಕೈಗಳಿಂದ ಹಿಡಿದುಕೊಳ್ಳಿ. ನಂತ್ರ ಪುಷ್ ಅಪ್ ಮಾಡಿ. ಇದನ್ನು ಕೂಡ ನೀವು ಪುನರಾವರ್ತಿಸಬೇಕು. ಬಿಡುವಿನ ಸಮಯದಲ್ಲಿ ಇಲ್ಲವೆ ಊಟಕ್ಕಿಂತ ಮೊದಲು ನೀವು ಇದನ್ನು ಮಾಡಬಹುದು. ಇದ್ರಿಂದ ನಿಮ್ಮ ಹೊಟ್ಟೆ ಬೊಜ್ಜನ್ನು ಸುಲಭವಾಗಿ ಕಡಿಮೆ ಮಾಡಬಹುದು.
ದೇಹದ ಅತಿದೊಡ್ಡ ಅಂಗ ಯಾವ್ದು? ಅದನ್ನ ಹೇಗೆ ರಕ್ಷಿಸಿಕೊಳ್ಳಬೇಕು; ಇಲ್ಲಿದೆ ಮಾಹಿತಿ
ಮೊಣಕಾಲಿಗೆ ವ್ಯಾಯಾಮ : ಇದ್ರಲ್ಲಿ ನೀವು ಮೊದಲು ಕುರ್ಚಿ ಮೇಲೆ ಕುಳಿತುಕೊಳ್ಳಬೇಕು. ನಂತ್ರ ಎರಡೂ ಕೈಗಳಿಂದ ಕುರ್ಚಿ ಹಿಡಿದುಕೊಳ್ಳಿ. ನಿಮ್ಮ ಮೊಣಕಾಲುಗಳನ್ನು ಫೋಲ್ಡ್ ಮಾಡಿ ನಿಮ್ಮ ಹೊಟ್ಟೆಯ ಕಡೆ ಎತ್ತಬೇಕು, ನಂತ್ರ ಕಾಲುಗಳನ್ನು ಕೆಳಕ್ಕೆ ಬಿಡಬೇಕು. ಆದ್ರೆ ಪಾದಗಳನ್ನು ನೆಲಕ್ಕೆ ಇಡಬಾರದು. ಇದನ್ನು ಕೂಡ 10 ಬಾರಿ ಮಾಡಿದ್ರೆ ಒಳ್ಳೆಯದು.