Asianet Suvarna News Asianet Suvarna News

ನಿಮ್ಮನ್ನು ಕಾಡ್ತಿದೆಯಾ Emotional Addiction ? ಇಲ್ಲಿವೆ ಪರಿಹಾರ

ಜನರು ಅನೇಕ ವ್ಯಸನಕ್ಕೆ ಒಳಗಾಗಿರ್ತಾರೆ. ಮದ್ಯಪಾನ, ಧೂಮಪಾನ ಮಾತ್ರವಲ್ಲ ಮನಸ್ಸಿಗೆ ಸಂಬಂಧಿಸಿದ ಅನೇಕ ವ್ಯಸನಗಳಿವೆ. ಅದ್ರಲ್ಲಿ ಭಾವನಾತ್ಮಕ ಬಾಂಧವ್ಯ ಕೂಡ ಒಂದು. ಪ್ರೀತಿಯ ವಿಷ್ಯದಲ್ಲಿ ಅತಿ ಎನ್ನಿಸುವಷ್ಟಿರುವ ಈ ಭಾವನಾತ್ಮಕ ವ್ಯಸನ ಸಾಕಷ್ಟು ಸಮಸ್ಯೆ ತರುತ್ತದೆ. 
 

How To Get Rid Of Emotional Addiction
Author
First Published Oct 27, 2022, 4:22 PM IST

ಪ್ರತಿಯೊಬ್ಬರ ಜೀವನವೂ ಭಿನ್ನವಾಗಿರುತ್ತದೆ. ಅವರು ಬೆಳೆದ ಪರಿಸರ, ಅವರು ಕೆಲಸ ಮಾಡುವ ಜಾಗ, ಅವರ ಕುಟುಂಬ ಎಲ್ಲವೂ ಅವರ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಜನರು ಜೀವನ ನಡೆಸುವ ರೀತಿ ಕೂಡ ಭಿನ್ನವಾಗಿರುತ್ತದೆ. ಕೆಲವರು ಪ್ರಾಕ್ಟಿಕಲ್ ಆಗಿ ಜೀವನ ನಡೆಸ್ತಾರೆ. ಬಂದಿದ್ದನ್ನು ಒಪ್ಪಿಕೊಂಡು, ಯಾವುದೇ ಪೂರ್ವಾಪರಕ್ಕೆ ಗಂಟು ಬೀಳದೆ ಜೀವನ ನಡೆಸ್ತಾರೆ. ಮತ್ತೆ ಕೆಲವರ ಜೀವನದಲ್ಲಿ ಭಾವನಾತ್ಮಕ ಬಾಂಧವ್ಯ ಹೆಚ್ಚಾಗಿರುತ್ತದೆ. ಪ್ರತಿಯೊಂದು ವಿಷ್ಯವನ್ನೂ ಅವರು ಭಾವನಾತ್ಮಕವಾಗಿ ಆಲೋಚನೆ ಮಾಡ್ತಾರೆ. ಅನೇಕ ಬಾರಿ ಅವರ ಈ ಭಾವನಾತ್ಮಕ ವ್ಯಸನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಭಾವನಾತ್ಮಕ ವ್ಯಸನಿಗಳು ಮಾನಸಿಕವಾಗಿ ದುರ್ಬಲರಾಗುತ್ತಾರೆ. ಪ್ರಪಂಚದ ಸತ್ಯಗಳೊಂದಿಗೆ ಅವರಿಗೆ ಯಾವುದೇ ಸಂಬಂಧವಿರುವುದಿಲ್ಲ. ತಮ್ಮದೇ ಒಂದು ಲೋಕ ಸೃಷ್ಟಿಸಿಕೊಂಡು ಅದರಲ್ಲೇ ಜೀವನ ನಡೆಸಲು ಶುರು ಮಾಡ್ತಾರೆ.  ಪ್ರೀತಿಯ ವಿಷ್ಯದಲ್ಲಿ ಈ ಭಾವನಾತ್ಮಕ ವ್ಯಸನಕ್ಕೆ ಬಲಿಯಾಗುವವರು ಹೆಚ್ಚು ಅಂದ್ರೆ ತಪ್ಪಾಗಲಾರದು. ನಾವಿಂದು ಭಾವನಾತ್ಮಕ ವ್ಯಸನದಿಂದ ಹೇಗೆ ಹೊರಗೆ ಬರುವುದು ಎಂಬುದನ್ನು ಹೇಳ್ತೇವೆ.  

ಎಮೋಷನಲ್ ಅಡಿಕ್ಷನ್ (Emotional Addiction) ಅಂದ್ರೇನು ? : ಭಾವನಾತ್ಮಕ ವ್ಯಸನವನ್ನು ಸರಳ ಭಾಷೆಯಲ್ಲಿ ಭಾವನಾತ್ಮಕ ಬಾಂಧವ್ಯ ಎಂದು ಕರೆಯಬಹುದು. ಕೆಲವು ಭಾವನೆಗಳನ್ನು ಜನರು (People ) ತಮ್ಮ ಅಭ್ಯಾಸವನ್ನಾಗಿ ಮಾಡಿಕೊಂಡಿರುತ್ತಾರೆ. ಭಾವನೆ ನಮ್ಮೆಲ್ಲರಲ್ಲೂ ಇದೆ. ಆದರೆ ನಮ್ಮ ಭಾವನೆಗಳು ನಮ್ಮ ಅಭ್ಯಾಸವಾಗಲು ಪ್ರಾರಂಭಿಸಿದಾಗ ತೊಂದರೆ ಪ್ರಾರಂಭವಾಗುತ್ತದೆ. ಕೆಲವು ಜನರು ಮತ್ತೆ ಮತ್ತೆ ಅದೇ ಭಾವನೆಗಳನ್ನು ಅನುಭವಿಸುತ್ತಾರೆ ಅಥವಾ ಅದನ್ನು ಮಾಡಲು ಬಯಸುತ್ತಾರೆ. ಯಾವಾಗಲೂ ತಮ್ಮ ಭಾವನೆಗಳ ಮೇಲೆ ಅವಲಂಬಿತರಾಗಿರುವ ಜನರು ತಮ್ಮ ಮೇಲೆ ಕರುಣೆ ತೋರುತ್ತಾರೆ. ಇದು ಅವರ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.  ಭಾವನಾತ್ಮಕ ವ್ಯಸನದಿಂದ ಬಳಲುತ್ತಿರುವ ಹೆಚ್ಚಿನ ಜನರ ದುಃಖಕ್ಕೆ ಇದೇ ಕಾರಣವಾಗುತ್ತದೆ. ನಗುವ ವಿಷಯದಲ್ಲೂ ನೋವನ್ನು ಹುಡುಕಲು ಪ್ರಾರಂಭಿಸುತ್ತಾರೆ.  ಅವರು ಈ ಅಭ್ಯಾಸವನ್ನು ಎಂದಿಗೂ ಮರೆಯುವುದಿಲ್ಲ. ಅದನ್ನು ಬಿಡುವುದು ಅವರಿಗೆ ಕಷ್ಟವಾಗುತ್ತದೆ. ನಾವಿಂದು ಭಾವನಾತ್ಮಕ ವ್ಯಸನ ಬಿಡೋದು ಹೇಗೆ ಎಂಬುದನ್ನು ಹೇಳ್ತೇವೆ. 

ಭಾವನೆಗಳನ್ನು ನಿಯಂತ್ರಿಸಲು ಕಲಿಯಿರಿ: ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನೀವು ಕಲಿಯಬೇಕು.  ನಿಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಮೌಲ್ಯಮಾಪನ (Evaluation) ಮಾಡಬೇಕು. ಯಾವ ಅಭ್ಯಾಸಗಳಿಗೆ ವ್ಯಸನಿಯಾಗಿದ್ದೀರಿ (Addict) ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಆಗ ಮಾತ್ರ ನೀವು ಆ ಅಭ್ಯಾಸಗಳನ್ನು ಬದಲಾಯಿಸುವತ್ತ ಗಮನ ಹರಿಸಬಹುದು. 

ಐದು ಗಂಟೆಗಿಂತ ಕಡಿಮೆ ನಿದ್ದೆ ಮಾಡ್ತೀರಾ? ಕಾಯಿಲೆ ಕಾಡೋದು ಗ್ಯಾರಂಟಿ !

ನಿಮ್ಮ ಮೇಲೆ ನಿಮಗೆ ನಂಬಿಕೆ (Faith) ಇರಲಿ : ನೀವು ಮೊದಲು ನಿಮ್ಮನ್ನು ನಂಬಲು ಕಲಿಯಬೇಕು. ನಿಮ್ಮ ಬೆಳವಣಿಗೆಗೆ ಅಡ್ಡಿಯಾಗುವ ಅಡೆತಡೆಗಳನ್ನು ಜಯಿಸಲು ಏನು ಬೇಕು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಧ್ಯಾನ (medidation) ಮತ್ತು ಯೋಗದಂತಹ ವ್ಯಾಯಾಮಗಳನ್ನು ಮಾಡುವ ಮೂಲಕ ನಿಮ್ಮ ಮನಸ್ಸಿನ ಆಳವನ್ನು ನೀವು ಅರಿಯಬಹುದು.  

ಆಪ್ತರ ಸಹಾಯ ಪಡೆಯಿರಿ : ನಿಮ್ಮ ಸಮಸ್ಯೆ ಏನು ಎಂಬುದನ್ನು ನೀವು ಎಲ್ಲರಿಗೂ ಹೇಳಬೇಕಾಗಿಲ್ಲ. ನಿಮ್ಮ ಈ ಸಮಸ್ಯೆ ಬಗ್ಗೆ ನಿಮಗೆ ಆಪ್ತವೆನ್ನಿಸುವ, ನೀವು ಹೆಚ್ಚು ನಂಬುವ ವ್ಯಕ್ತಿ ಬಳಿ ಹೇಳಿಕೊಳ್ಳಬಹುದು.   

ಸ್ವಲ್ಪ ವಿಶ್ರಾಂತಿ (rest) ಮುಖ್ಯ : ಬಿಡುವಿಲ್ಲದ ಕೆಲಸ ನಿಮ್ಮ ಸಮಸ್ಯೆಯನ್ನು ಹೆಚ್ಚು ಮಾಡಬಹುದು. ಹಾಗಾಗಿ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ನಿಮಗಾಗಿ ಸಮಯವನ್ನು ನೀಡಲು ಪ್ರಾರಂಭಿಸಿ. ಆ ಸಮಯದಲ್ಲಿ ನಿಮಗೆ ಇಷ್ಟಪಡುವದನ್ನು ಮಾಡಬಹುದು.  

ಮಾತು ಮಾತಿಗೆ ಮಕ್ಕಳ ಮೇಲೆ ಸಿಟ್ಟು ಬರುತ್ತಾ ? ಕಂಟ್ರೋಲ್ ಮಾಡದಿದ್ರೆ ಕಷ್ಟ

ಟ್ರಿಪ್ (Travel) ಪ್ಲಾನ್ ಮಾಡಿ : ಜಾಗ ಬದಲಾವಣೆ ಕೂಡ ನಿಮ್ಮ ಮನಸ್ಥಿತಿಯನ್ನು ಬದಲಿಸುತ್ತದೆ. ಹಾಗಾಗಿ ನೀವು ಟ್ರಿಪ್ ಪ್ಲಾನ್ ಮಾಡಬಹುದು. ಪ್ರವಾಸಕ್ಕೆ ಹೋದಾಗ ಅಲ್ಲಿನ ಪರಿಸರವನ್ನು ಆಹ್ಲಾದಿಸಿ. ಪ್ರವಾಸದ ವೇಳೆಯೂ ನೀವು ಬೇರೆ ವಿಷ್ಯಗಳನ್ನು ಯೋಚಿಸಿದ್ರೆ ಪ್ರವಾಸಕ್ಕೆ ಹೋಗಿ ಪ್ರಯೋಜನವಿಲ್ಲ.  
 

Follow Us:
Download App:
  • android
  • ios