Asianet Suvarna News Asianet Suvarna News

ದೀರ್ಘಕಾಲ ಕಾಡುವ ಕೆಮ್ಮನ್ನು ನಿರ್ಲಕ್ಷ್ಯಿಸಿದ್ರೆ ಅಪಾಯ ಗ್ಯಾರಂಟಿ

ಆಗಾಗ ವಿಪರೀತ ಕೆಮ್ಮು ಕಾಡ್ತಿರುತ್ತದೆ. ಇವತ್ತು ಹೋಗುತ್ತೆ, ನಾಳೆ ಹೋಗುತ್ತೆ ಅಂತಾ ಅದಕ್ಕೆ ಮದ್ದು ಮಾಡೋದೇ ಇಲ್ಲ. ಆದ್ರೆ ತಿಂಗಳು,ಎರಡು ತಿಂಗಳಾದ್ರೂ ಕೆಮ್ಮು ಕಡಿಮೆಯಾಗೋದಿಲ್ಲ. ನಿಮ್ಮ ಈ ನಿರ್ಲಕ್ಷ್ಯ ದೊಡ್ಡ ಖಾಯಿಲೆಗೆ ಕಾರಣವಾಗಬಹುದು. 
 

Causes Of Chronic Cough Do Not Ignore It Can Be Very Dangerous
Author
Bangalore, First Published Jan 28, 2022, 7:01 PM IST

ಕೆಮ್ಮು (Cough), ಅತಿ ಹೆಚ್ಚು ಕಿರಿಕಿರಿ ನೀಡುವ ರೋಗ(Disease)ಗಳಲ್ಲಿ ಒಂದು. ಚಳಿಗಾಲ (Winter)ಬಂತೆಂದ್ರೆ ಕೆಮ್ಮು ಮಾಮೂಲಿ. ರಾತ್ರಿ (Night) ನಿದ್ರೆ ಕೊಡದೆ ಹಿಂಸಿಸುವ ಖಾಯಿಲೆ ಇದು. ರೋಗಿಗೆ ಮಾತ್ರವಲ್ಲ ಅಕ್ಕಪಕ್ಕದವರ ನಿದ್ರೆಗೂ ಇದು ಅಡ್ಡಿ ಮಾಡುತ್ತದೆ. ಜ್ವರದ ಹಿಂದೆ ಕೆಮ್ಮು ಬರುವುದು ಸಾಮಾನ್ಯ. ಕೆಮ್ಮು ನಾಲ್ಕೈದು ದಿನ,ಹೆಚ್ಚೆಂದ್ರೆ ಎರಡು ವಾರ ಕಾಡಬಹುದು. ಆದ್ರೆ ಇದಕ್ಕಿಂತಲೂ ಹೆಚ್ಚು ದಿನ ಕೆಮ್ಮು ಕಾಡಿದ್ರೆ ನೀವು ಎಚ್ಚೆತ್ತುಕೊಳ್ಳಬೇಕು. ಮೂರ್ನಾಲ್ಕು ವಾರವಾದ್ರೂ ಕೆಮ್ಮು ಕಡಿಮೆಯಾಗಿಲ್ಲವೆಂದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳಿತು. ಕೆಮ್ಮಿಗೆ ಅನೇಕ ಕಾರಣಗಳಿವೆ. ಅಲರ್ಜಿ,ಸೋಂಕು, ಧೂಮಪಾನ ಇತ್ಯಾದಿಗಳು ಕಾರಣವಾಗಿರಬಹುದು. ಕೆಮ್ಮಿಗೆ ಕಾರಣವೇನು ಎಂಬುದನ್ನು ತಿಳಿದುಕೊಂಡು,ಅದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಇಂದು ಕೆಮ್ಮಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಿಮಗೆ ನೀಡ್ತೆವೆ.

ಕೆಮ್ಮಿನಲ್ಲಿ ಎಷ್ಟು ವಿಧ ಗೊತ್ತಾ? :

ತೀವ್ರವಾದ ಕೆಮ್ಮು (Acute Cough) : ಇದು ಸುಮಾರು 2 ರಿಂದ 3 ವಾರಗಳವರೆಗೆ ಇರುತ್ತದೆ. ನಂತ್ರ ಇದು ತಾನಾಗಿಯೇ ಸರಿ ಹೋಗುತ್ತದೆ.

ಸಬ್ಕ್ಯೂಟ್ ಕೆಮ್ಮು : ಇದು ಸುಮಾರು 3ರಿಂದ 8 ವಾರಗಳ ಕಾಲ ನಿಮಗೆ ತೊಂದರೆ ನೀಡುತ್ತದೆ.

ದೀರ್ಘಕಾಲದ ಕೆಮ್ಮು : ಇದು 8 ವಾರಗಳಿಗಿಂತ ಹೆಚ್ಚು ಸಮಯವಿರುತ್ತದೆ. ಕೆಲವು ಪ್ರಮುಖ ಕಾಯಿಲೆಯ ಸಂಕೇತವಾಗಿರುವ ಸಾಧ್ಯತೆಯಿದೆ. 

ದೀರ್ಘಕಾಲದ ಕೆಮ್ಮಿಗೆ ಕಾರಣವೇನು ?: ದೀರ್ಘಕಾಲದ ಕೆಮ್ಮನ್ನು ನಿರ್ಲಕ್ಷ್ಯಿಸಬಾರದು. ಇದು ಅನೇಕ ರೋಗಗಳಿಗೆ ಕಾರಣವಾಗಬಹುದು. ದೀರ್ಘಕಾಲದ ಕೆಮ್ಮು ಏಕೆ ಕಾಡುತ್ತದೆ ಎಂಬುದನ್ನು ನೋಡೋಣ.

ಧೂಮಪಾನ : ದೀರ್ಘಕಾಲದವರೆಗೆ ಕಾಡುವ ಕೆಮ್ಮಿಗೆ ಧೂಮಪಾನವೂ ಒಂದು ಕಾರಣವಾಗಿರಬಹುದು. ಧೂಮಪಾನ ಮಾಡುವ ಜನರಿಗೆ ಕೆಮ್ಮು ಸಾಮಾನ್ಯವಾಗಿ ಇರುತ್ತದೆ. ಏಕೆಂದರೆ ತಂಬಾಕಿನಲ್ಲಿರುವ ರಾಸಾಯನಿಕಗಳು ಶ್ವಾಸಕೋಶದಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತವೆ. ದೇಹದಿಂದ ಹೊರಗೆ ಬರಲು ಇವು ಪ್ರಯತ್ನಿಸುತ್ತಿರುತ್ತವೆ. ಧೂಮಪಾನ ಮಾಡುವ ಜನರು ಈ ಕೆಮ್ಮಿನ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಮುಂದೆ ಅನೇಕ ದೊಡ್ಡ ಖಾಯಿಲೆಗೆ ದಾರಿ ಮಾಡಿಕೊಡುತ್ತದೆ.

ಕೊರೊನಾ : ದೀರ್ಘಕಾಲದವರೆಗೆ ಕಾಡುವ ಕೆಮ್ಮಿಗೆ ಕೊರೊನಾ ಕೂಡ ಒಂದು ಕಾರಣ. ಕೊರೊನಾ ಲಕ್ಷಣಗಳಲ್ಲಿ ಕೆಮ್ಮು ಕೂಡ ಸೇರಿದೆ. ಸಾಮಾನ್ಯ ಜ್ವರದಲ್ಲಿ ಕಾಡುವ ಕೆಮ್ಮಿಗಿಂತ ಕೊರೊನಾ ನಂತ್ರ ಬರುವ ಕೆಮ್ಮು ದೀರ್ಘಕಾಲದವರೆಗೆ ಇರುತ್ತದೆ.ಒಣ ಕೆಮ್ಮು ಇದ್ರ ಒಂದು ಲಕ್ಷಣವಾಗಿದೆ.

ಸೋಂಕು : ಜ್ವರ,ಶೀತ ಕಡಿಮೆಯಾಗಿದ್ದರೂ ಕೆಮ್ಮು ಕಡಿಮೆಯಾಗಿಲ್ಲವೆಂದ್ರೆ ಅದಕ್ಕೆ ಕಾರಣ ಸೋಂಕಾಗಿರಬಹುದು. ಸೋಂಕಿನ ಕೆಮ್ಮು ಸುಮಾರು 2 ತಿಂಗಳವರೆಗೆ ಕಾಡಬಹುದು. ಉಸಿರಾಟದ ಮಾರ್ಗಗಳಲ್ಲಿ ಕಿರಿಕಿರಿಯುಂಟಾಗುತ್ತದೆ. ಇದರಿಂದ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ.

Mental Health : ಪೋರ್ನ್ ಚಿತ್ರ ನೋಡಲು ಮನಸ್ಸು ಚಡಪಡಿಸ್ತಿದ್ಯಾ? ವ್ಯಸನ ಅತಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ

ಅಸ್ತಮಾ : ನಾವು ಉಸಿರಾಡಿದಾಗ ಗಾಳಿ, ಮೂಗು, ಗಂಟಲು ಮತ್ತು ಶ್ವಾಸಕೋಶಗಳಿಗೆ ಹೋಗುತ್ತದೆ. ಅಸ್ತಮಾದಲ್ಲಿ, ಶ್ವಾಸನಾಳದ ಸುತ್ತಲಿನ ಸ್ನಾಯುಗಳು ಸಂಕುಚಿತಗೊಳ್ಳಲು ಪ್ರಾರಂಭಿಸುತ್ತವೆ. ಇದು ಲೋಳೆಯ ರಚನೆಗೆ ಕಾರಣವಾಗುತ್ತದೆ. ಶ್ವಾಸಕೋಶಕ್ಕೆ ಆಮ್ಲಜನಕದ ಪೂರೈಕೆ ಇದ್ರಿಂದ ಕಷ್ಟವಾಗುತ್ತದೆ.ಇದ್ರಿಂದಾಗಿ ಅಸ್ತಮಾ ಜನರಿಗೆ ಹೆಚ್ಚು ಕೆಮ್ಮು ಬರುತ್ತದೆ. ಅಸ್ತಮಾ ರೋಗಿಗಳಿಗೆ ಒಣ ಹಾಗೂ ಕಫ ಎರಡೂ ರೀತಿಯ ಕೆಮ್ಮು ಬರುತ್ತದೆ. ಒಣ ಕೆಮ್ಮು ಸಾಮಾನ್ಯವಾಗಿ ಅಸ್ತಮಾ ರೋಗಿಗಳಲ್ಲಿ ಕಾಣಿಸುತ್ತದೆ.

ಜಿಇಆರ್ಡಿ : ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಜೀರ್ಣಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲ ಅಥವಾ ಹೊಟ್ಟೆಯಲ್ಲಿರುವ ಆಹಾರವು ಅನ್ನನಾಳಕ್ಕೆ ಹಿಂತಿರುಗುತ್ತದೆ. ಈ ಕಾರಣದಿಂದಾಗಿ, ಅನ್ನನಾಳದ ಒಳಗಿನ ಮೇಲ್ಮೈಯಲ್ಲಿ ಕಿರಿಕಿರಿಯಾಗುತ್ತದೆ.

Sleep Tips: ನೀವೆಷ್ಟು ಗಂಟೆ ನಿದ್ದೆ ಮಾಡಬೇಕು ಅಂದ್ರೆ..

ಶ್ವಾಸಕೋಶದ ಕ್ಯಾನ್ಸರ್ : ದೀರ್ಘ ಕಾಲದ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್ ಗೂ ಕಾರಣವಾಗಿರಬಹುದು. ಕೆಮ್ಮುವಾಗ ರಕ್ತ ಬರಲು ಶುರುವಾಗುತ್ತದೆ. ನೀವು ಧೂಮಪಾನ ಮಾಡ್ತಿಲ್ಲ ಹಾಗೂ ನಿಮ್ಮ ಕುಟುಂಬದಲ್ಲಿ ಯಾರಿಗೂ ಶ್ವಾಸಕೋಶದ ಕ್ಯಾನ್ಸರ್ ಇಲ್ಲವೆಂದಾದ್ರೆ ಇದಕ್ಕೆ ಬೇರೆ ಕಾರಣವೂ ಆಗಿರಬಹುದು. ವೇಗವಾಗಿ ಹೆಚ್ಚಾಗ್ತಿರುವ ವಾಯು ಮಾಲಿನ್ಯ ಕೂಡ ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗ್ತಿದೆ.

Follow Us:
Download App:
  • android
  • ios