ಡಾ. ನರೇಂದ್ರ ವಿ.

ಚಳಿಗಾಲದಲ್ಲೇ ಯಾಕೆ ಹೆಚ್ಚು?

- ಚಳಿಗಾಲದಲ್ಲಿ ಜೈವಿಕ ಕ್ರಿಯೆ (ಮೆಟಬಾಲಿಸಮ್‌) ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತೆ. ಏಕೆಂದರೆ ಚಳಿ ಇರುತ್ತೆ, ಹಾಗಾಗಿ ಶರೀರದ ತಾಪಮಾನ ಹೆಚ್ಚಿಸಬೇಕು. ಅಂದರೆ ದೇಹಕ್ಕೆ ಶ್ರಮ ಹೆಚ್ಚು. ಜೊತೆಗೆ ಹಾರ್ಟ್‌ಗೂ ಕೆಲಸ ಹೆಚ್ಚು. ಸಾಮಾನ್ಯವಾಗಿ ಒಂದು ಸಮತೋಲನದಲ್ಲಿ ಕೆಲಸ ಮಾಡುವ ಹೃದಯ ಈ ಸಮಯ ಹೆಚ್ಚೆಚ್ಚು ಕೆಲಸ ಮಾಡಬೇಕಾಗುತ್ತೆ. ಹಾರ್ಟ್‌ನಲ್ಲಿ ಬ್ಲಾಕೇಜ್‌ ಇಲ್ಲದವರಿಗೆ ಈ ಸಮಸ್ಯೆ ಇರಲ್ಲ. ಬಾರ್ಡರ್‌ ಲೈನ್‌ ಬ್ಲಾಕೇಜ್‌ ಇದ್ದಾಗ, ಹೆಚ್ಚಿನ ಸಲ ಗಮನಕ್ಕೇ ಬರಲ್ಲ. ವರ್ಷದಿಂದ ಹಾಗೇ ಇದ್ದದ್ದು ಚಳಿಗಾಲ ಬಂದಾಗ ಹೆಚ್ಚಾಗುತ್ತದೆ. ಇದು ಹಾರ್ಟ್‌ ಅಟ್ಯಾಕ್‌ಗೆ ಕಾರಣವಾಗುತ್ತೆ. ಈ ಕಾರಣಕ್ಕೆ ಚಳಿಗಾಲದಲ್ಲಿ ಹಾರ್ಟ್‌ ಅಟ್ಯಾಕ್‌ ಜಾಸ್ತಿ.

ಹಾರ್ಟ್ ಅಟ್ಯಾಕ್ ಆದಾಗ ಎದೆನೋವು ಬಂದೇ ಬರುತ್ತಾ?

ನೀರು ಕಡಿಮೆ ಕುಡಿಯೋದರಿಂದ ಹೃದಯ ಸ್ತಂಭನ!

ಚಳಿಗಾಲದಲ್ಲಿ ದಾಹ ಕಡಿಮೆ. ನಾವು ನೀರು ಕುಡಿಯೋದು ಕಡಿಮೆ ಇರುತ್ತೆ. ಸಾಧಾರಣವಾಗಿ ಹಾರ್ಟ್‌ ಅಟ್ಯಾಕ್‌ ಬೆಳಗಿನ ಜಾವದಲ್ಲಿ ಬರುತ್ತೆ. ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆಯೊಳಗಿನ ಅವಧಿಯಲ್ಲಿ. ಚಳಿಗಾಲದಲ್ಲಿ ಮತ್ತೂ ಜಾಸ್ತಿ. ಇದಕ್ಕೂ ನೀರು ಕಡಿಮೆ ಕುಡಿಯೋದು ಕಾರಣ.

ರಾತ್ರಿ ಸರಿಯಾಗಿ ನೀರು ಕುಡಿಯದೇ ರಕ್ತ ಮಂದವಾಗಿರುತ್ತದೆ. ಮಂದತೆ ಜಾಸ್ತಿ ಇದ್ದಾಗ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು. ಹೀಗೆ ಕ್ಲಾಟ್‌ ಫಾಮ್‌ರ್‍ ಆದಾಗ, ಶೇ.40, 50 ರಷ್ಟಿರುವ ಬ್ಲಾಕ್‌ ಇರುವುದು ರಕ್ತ ಹೆಪ್ಪುಗಟ್ಟಿದಾಗ ಶೇ.100ರಷ್ಟಾಗುತ್ತೆ. ಇದ್ರಲ್ಲಿ ಸಡನ್‌ ಹಾರ್ಟ್‌ ಅಟ್ಯಾಕ್‌ ಆಗುತ್ತೆ. ಇದರ ಗಂಭೀರತೆ ಹೆಚ್ಚು. ಆಗ ಸಾವಾಗುವುದು ಹೆಚ್ಚು.

ಚಿಕ್ಕವರಿಗೂ ಏಕೆ ಹಾರ್ಟ್ ಆಟ್ಯಾಕ್ ಆಗುತ್ತೆ?

ಹಾರ್ಟ್‌ ಕೊಡುವ ಈ ಸಿಗ್ನಲ್‌ ಗಮನಿಸಿ

ಬಾರ್ಡರ್‌ ಲೈನ್‌ನಲ್ಲಿರುವವರಿಗೆ ಸ್ವಲ್ಪ ಶರೀರದ ಶಕ್ತಿ ಕಡಿಮೆಯಾಗುತ್ತೆ. ಎಲ್ಲೋ ವಯಸ್ಸಾಗ್ತಿದೆ ಅಂದುಕೊಂಡು ಜನ ನಿರ್ಲಕ್ಷಿಸುತ್ತಾರೆ. ಚಳಿಗಾಲದಲ್ಲಿ ಜಾಸ್ತಿಯಾಗುತ್ತೆ. ಹಾಗಾಗಿ ನಿಮ್ಮ ದೈನಿಕ ಚಟುವಟಿಕೆ ಗಮನಿಸಿ. ಐದು ಕಿಲೋ ಮೀಟರ್‌ ನಡೆದಾಗ ಸುಸ್ತಾಗುತ್ತಿದ್ದದ್ದು ಈಗ ಮೂರು ಕಿಲೋಮೀಟರ್‌ಗೇ ಸುಸ್ತಾಗ್ತಿದೆ ಅಂದರೆ ಹಾರ್ಟ್‌ ಚೆಕ್‌ ಮಾಡಿಕೊಳ್ಳೋದು ಅನಿವಾರ್ಯ. ಒಂದು ವರ್ಷದಿಂದಲೋ, ಆರು ತಿಂಗಳಿಂದಲೋ ಇಂಥಾದ್ದೊಂದು ಬದಲಾವಣೆ ಆಗುತ್ತೆ ಅಂದರೆ ಅದು ಹೃದಯ ಸಮಸ್ಯೆಯ ಲಕ್ಷಣವೂ ಆಗಿರಬಹುದು.

ಹಾರ್ಟ್‌ ಚೆಕ್‌ಅಪ್‌ಗೆ ಬಂದಾಗ ನಾವು ಟ್ರೆಡ್‌ಮಿಲ್‌ನಲ್ಲಿ ಓಡಿಸ್ತೀವಿ. ಸಾಧಾರಣವಾಗಿ ಹೃದಯ ರೆಸ್ಟ್‌ನಲ್ಲಿದ್ದಾಗ ನಿಮಿಷಕ್ಕೆ ನಾಲ್ಕೂವರೆಯಿಂದ ಐದು ಲೀಟರ್‌ ರಕ್ತ ಪಂಪ್‌ ಮಾಡಬೇಕು. ಓಡಬೇಕಾದ್ರೆ ಇದು ಹೆಚ್ಚು ಕ್ರಿಯಾಶೀಲವಾಗುತ್ತೆ. ಆಗ ಮುಂದಿನ ಒಂದೆರಡು ವರ್ಷಗಳಲ್ಲಿ ಹಾರ್ಟ್‌ ಬ್ಲಾಕ್‌ ಆಗುವ ಸೂಚನೆ ಇದ್ದರೆ ಈ ಹೊತ್ತಿಗೇ ಸಿಗುತ್ತದೆ. 35 ವಯಸ್ಸು ದಾಟಿದ ಪ್ರತಿಯೊಬ್ಬರೂ ಹಾರ್ಟ್‌ ಚೆಕಪ್‌ ಮಾಡಿಕೊಂಡರೆ ಉತ್ತಮ. ಮೂರರಿಂದ ಐದು ವರ್ಷದೊಳಗೆ ಮಾಡಿಸಬೇಕು.

ಮಹಿಳೆಯನ್ನು ಕಾಡೋ ಇವು ಹೃದಯಾಘಾತದ ಲಕ್ಷಣ

ಹಾರ್ಟ್‌ ಅಟ್ಯಾಕ್‌ನ ಮುನ್ಸೂಚನೆ ಇದು

ಎದೆ ಭಾರ, ನೋವು ಬರುತ್ತೆ. ಮಾಮೂಲಿ ಗಾಯ, ಪೆಟ್ಟು ಬಿದ್ದಾಗ ಆಗುವ ನೋವಿನ ಹಾಗಲ್ಲ ಇದು. ಆನೆ ಎದೆ ಮೇಲೆ ಕಾಲಿಟ್ಟರೆ ಯಾವ ನೋವು ಬರಬಹುದೋ ಆ ಥರ ನೋವು ಬರುತ್ತೆ. ಉಸಿರಾಟ ಸಮಸ್ಯೆ ಬರುತ್ತೆ. ಕೆಲವೊಮ್ಮೆ ಗ್ಯಾಸ್ಟ್ರಿಕ್‌ನಂತೆ ಲಕ್ಷಣಗಳು ಕಾಣಿಸಿಕೊಳ್ಳೋದೂ ಇದೆ. ಕೈಯ ಒಳ ಭಾಗ ನೋವು, ಭುಜಗಳಲ್ಲಿ ನೋವು ಬರುತ್ತೆ. ಸ್ವಲ್ಪ ರೆಸ್ಟ್‌ ತಗೊಂಡ್ರೆ ಕಡಿಮೆಯಾಗುತ್ತೆ. ಇದೇ ದೊಡ್ಡ ಸಮಸ್ಯೆಯಾಗೋದು. ಉಳಿದ ಸಮಸ್ಯೆಗಳಲ್ಲಾದರೆ ನೀವು ರೆಸ್ಟ್‌ ತಗೊಂಡರೂ ನೋವು ಇದ್ದೇ ಇರುತ್ತೆ. ಆದರೆ ಇದರಲ್ಲಿ ಹಾಗಿರಲ್ಲ. ಸಾಮಾನ್ಯ ಮುಂಜಾವ 3 ಗಂಟೆಯ ಹೊತ್ತಲ್ಲಿ ಹೀಗಾದ ಕೂಡಲೇ ಏನೋ ಕಡಿಮೆ ಆಯ್ತಲ್ಲಾ, ಬೆಳಗ್ಗೆ ಎದ್ದ ಮೇಲೆ ಆಸ್ಪತ್ರೆಗೆ ಹೋದ್ರಾಯ್ತು.

40ರ ಹೆಂಗಸರು ಈ ಟೆಸ್ಟ್ ಮಾಡಿಸಿಕೊಳ್ಳಬೇಕು!

ಈಗಲೇ ಯಾಕೆ ಮನೆಯವರನ್ನ ಎಬ್ಬಿಸೋದು ಅಂದುಕೊಳ್ಳುತ್ತಾರೆ ಬಹಳ ಜನ. ಹೊರಗೆ ಸುತ್ತಾಡುತ್ತಾರೆ. ನೀರು ಕುಡೀತಾರೆ. ಅದು ನೀವು ಮಾಡುವ ಅತೀ ದೊಡ್ಡ ತಪ್ಪು. ಹೀಗಾದ ಸ್ವಲ್ಪ ಹೊತ್ತಿಗೇ ಹಾರ್ಟ್‌ ಅಟ್ಯಾಕ್‌ ಆಗಿ ಕುಸಿದು ಬಿದ್ದು ಅಸುನೀಗಿದವರು ಬಹಳ ಜನ ಇದ್ದಾರೆ. ಯಾವುದೇ ಹೊತ್ತಲ್ಲಿ ಎದೆಭಾಗದಲ್ಲಿ ತಳಮಳ ಆಯ್ತು ಅಂದಾಗ ಕೂಡಲೇ ಆಸ್ಪತ್ರಗೆ ಹೋಗಿ ಇಸಿಜಿ ಚೆಕ್‌ ಮಾಡಿ. ಹೆಚ್ಚಿನ ಸಲ ಹೀಗೆ ಅಟ್ಯಾಕ್‌ ಆದಾಗ ಹೃದಯ ರಿದಂನಲ್ಲಿ ಏರುಪೇರಾಗುತ್ತೆ. ಆಗ ಹೃದಯ ಹೊಡ್ಕೊಳಲ್ಲ. ಸುಮ್ಮನೇ ವೈಬ್ರೇಶನ್‌ ಬಂದ ಹಾಗೆ ಮಾಡುತ್ತಿರುತ್ತಷ್ಟೇ. ಐದು ನಿಮಿಷದಲ್ಲಿ ಇದು ನಾರ್ಮಲ್‌ ಹಂತಕ್ಕೆ ಬಂದಿಲ್ಲ ಅಂದರೆ ಜೀವ ಕಳಕೊಂಡು ಬಿಡ್ತಾರೆ. ಹಾಗಾಗಿ ಮನೆಯವರನ್ನು ಎಬ್ಬಿಸಿ ಕೂಡಲೇ ವೈದ್ಯರ ಬಳಿ ಮಾಡಿ.