Asianet Suvarna News Asianet Suvarna News

ಚಿಕ್ಕವರಿಗೂ ಏಕೆ ಹಾರ್ಟ್ ಆಟ್ಯಾಕ್ ಆಗುತ್ತೆ?

ಈಗೀಗ ತೀರಾ ಚಿಕ್ಕ ವಯಸ್ಸಿನವರೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸುದ್ದಿ ಕೇಳುತ್ತೇವೆ. ಒತ್ತಡದ ಬದುಕು, ಜೀವನಶೈಲಿ ಇದಕ್ಕೆ ಕಾರಣವಾದರೂ, ಇದಕ್ಕೆ ಸ್ಪಷ್ಟ ಕಾರಣವೇನೆಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ.

40 years old man likely to get affected by heart attack
Author
Bengaluru, First Published Oct 2, 2018, 4:41 PM IST

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತವಾಗುವ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲಿಯೂ ಇದಕ್ಕೆ ಬಲಿಯಾಗುವುದು ಪುರುಷರೇ ಹೆಚ್ಚು. ಶೇ.45 ಮಂದಿಗೆ ಸೈಲೆಂಟ್ ಹಾರ್ಟ್ ಆಟ್ಯಾಕ್ ಆಗುತ್ತಿದೆ. ಇದಕ್ಕೆ ಕಾರಣವೇನೆಂಬುದನ್ನು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

ಇಲೇಟ್ರೊಗ್ರಾಮ್ ಎಂಬ ಅಂಶ ಹೃದಯದ ಮಾಂಸಖಂಡಗಳ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಈ ರೀತಿಯ ಹಾರ್ಟ್ ಆಟ್ಯಾಕ್ ಸಂಭವಿಸುತ್ತದೆ.

ಇದಕ್ಕೇನು ಕಾರಣ?

  • ಹೃದಯಕ್ಕೆ ರಕ್ತ ಸಂಚಾರ ಕಡಿಮೆಯಾದರೆ ಅಥವಾ ಗಂಭೀರ ಗಾಯದಿಂದ ರಕ್ತ ಸ್ರಾವ ಹೆಚ್ಚಾದರೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ.
  • ಹೃದಯದ ಮಾಂಸಖಂಡದ ನೋವು, ತಲೆ ಸುತ್ತು, ಕಡಿಮೆ ನಿದ್ರೆ ಅಥವಾ ನಿದ್ದೆ ಬಾರದಿದ್ದರೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಬೇಗ ಪರಿಹಾರ ಕಂಡುಕೊಳ್ಳಬೇಕು.
  • ಧೂಮಪಾನ, ಅಗತ್ಯಕ್ಕಿಂತ ಹೆಚ್ಚಾದ ವ್ಯಾಯಾಮ, ರಕ್ತದೊತ್ತಡ, ಕೆಟ್ಟ ಕೊಲೆಸ್ಟರಾಲ್ ಮತ್ತು ಮಧುಮೇಹವೂ ಇಂಥ ಸೈಲೆಂಟ್ ಹಾರ್ಟ್ ಅಟ್ಯಾಕ್‌ಗೆ ಕಾರಣವಾಗಬಲ್ಲದು. 
Follow Us:
Download App:
  • android
  • ios