ಈ ಚಿಹ್ನೆಗಳು ಕಂಡುಬಂದರೆ Cancer Test ಮಾಡಿಸಲೇಬೇಕು!
ಕ್ಯಾನ್ಸರ್ ದೇಹದಲ್ಲಿ ಬೆಳೆಯೋಕೆ ಶುರುವಾದರೆ, ನಿಮಗೆ ಗೊತ್ತಿರೋ ಚಿಹ್ನೆಗಳ ಜೊತೆಗೆ ಕೆಲವು ಅಸಾಮಾನ್ಯ ಚಿಹ್ನೆಗಳನ್ನೂ ತೋರುತ್ತದೆ. ಆ ಸಂದರ್ಭದಲ್ಲಿ ಜಾಗ್ರತರಾಗಿ ಟೆಸ್ಟ್ ಮಾಡಿಸಿಕೊಳ್ಳಬೇಕು.
ಕ್ಯಾನ್ಸರ್(Cancer) ಎನ್ನುವುದು ದೇಹದ ಕೆಲವು ಜೀವಕೋಶಗಳು(body's cells) ಅನಿಯಂತ್ರಿತವಾಗಿ ಬೆಳೆದು ದೇಹದ ಇತರ ಭಾಗಗಳಿಗೆ ಹರಡುವ ಕಾಯಿಲೆ. ಕ್ಯಾನ್ಸರ್‌ನ ಲಕ್ಷಣಗಳು(symptoms) ಅಸಂಖ್ಯಾತ. ಆದರೂ ಅನೇಕ ಎಚ್ಚರಿಕೆಯ ಚಿಹ್ನೆಗಳು ಗೆಡ್ಡೆಯ ಮೂಲಕ್ಕೆ ಸಂಬಂಧಿಸಿಲ್ಲ. ಕೆಲವೊಮ್ಮೆ, ಕ್ಯಾನ್ಸರ್ ಗಡ್ಡೆಯು ಮಾರಣಾಂತಿಕವಾಗಿದ್ದಾಗ ನರಗಳು ಕೇಂದ್ರೀಕೃತವಾಗಿರುವ ದೇಹದ ಇತರ ಭಾಗಗಳಿಗೆ ಹರಡಬಹುದು. ಇದು ಸ್ನಾಯು ಸೆಳೆತಗಳು, ಅಥವಾ ಜರ್ಕಿಂಗ್(jerking)ಗೆ ಕಾರಣವಾಗುತ್ತದೆ. ಸ್ನಾಯು ಸೆಳೆತಗಳು ಅನೈಚ್ಛಿಕ ಸಂಕೋಚನಗಳಿಂದ ಉಂಟಾಗುತ್ತವೆ.
ಗೆಡ್ಡೆ( tumor) ಮೆದುಳಿನ ಮೇಲೆ ಒತ್ತಡ ಪ್ರಾರಂಭಿಸಿದಾಗ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಮೆದುಳಿನ ಗಡ್ಡೆಯು ಮೆದುಳಿನಲ್ಲಿನ ನರಕೋಶಗಳನ್ನು ಕೆರಳಿಸಬಹುದು, ಸ್ನಾಯುವಿನ(muscles) ಸಂಕೋಚನ, ಸೆಳೆತ, ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ, ಉಸಿರಾಟದ ಅಸಾಮಾನ್ಯತೆ ಮತ್ತು ಪ್ರಜ್ಞೆಯ ಮೇಲೆ ಹಿಡಿತ ಇಲ್ಲದಂತೆ ಮಾಡುತ್ತದೆ. ಟೆಂಪೋರಲ್ ಲೋಬ್(temporal lobe), ಫ್ರಂಟಲ್ ಲೋಬ್ (frontal lobe)ಮತ್ತು ಪ್ಯಾರಿಯಲ್ ಲೋಬ್(parietal lobe)ಗೆ ಹರಡುವ ಗಡ್ಡೆಗಳು ಮಾತು, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ-ಪರಿಹರಿಸುವುದು, ಏಕಾಗ್ರತೆ ಮತ್ತು ಚಿಂತನೆಯ ವೇಗಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ರೋಗಲಕ್ಷಣಗಳು ಕಾಣಿಸಿಕೊಂಡಾಗ ಅವುಗಳತ್ತ ಗಮನ ಹರಿಸುವುದು ಕಡ್ಡಾಯ. ಅಸಾಮಾನ್ಯ ದೈಹಿಕ ಬದಲಾವಣೆಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಹೃದಯಾಘಾತದ ಅಪಾಯವನ್ನು ತಪ್ಪಿಸಬೇಕೇ? ಹಾಗಿದ್ರೆ ಮಿಸ್ ಮಾಡದೆ ಇದನ್ನ ತಿನ್ನಿ
ಸ್ನಾಯುಗಳ ಸುತ್ತಲೂ ಉಂಟಾಗುವ ನೋವನ್ನು ಮಸ್ಕ್ಯುಲೋಸ್ಕೆಲಿಟಲ್ ನೋವು (musculoskeletal pain) ಎಂದು ಕರೆಯಲಾಗುತ್ತದೆ. ಸ್ನಾಯು ಸೆಳೆತವು ಸ್ನಾಯುವಿನ ಅನೈಚ್ಛಿಕ ಸಂಕೋಚನ. ಸ್ನಾಯು ಸೆಳೆತವು ಸಣ್ಣ ಸಂಕೋಚನವಾಗಿದ್ದು ಅದು ಪದೇ ಪದೇ ಸಂಭವಿಸಬಹುದು. ಅಥವಾ ದೀರ್ಘಕಾಲದ ಸಂಕೋಚನವಾಗಿದ್ದು, ತೀವ್ರವಾದ ನೋವಿಗೆ ಕಾರಣವಾಗಬಹುದು.
ಬೆನ್ನುಹುರಿ(spinal cord) ಮೇಲೆ ಪರಿಣಾಮ
ಕ್ಯಾನ್ಸರ್ ಬೆನ್ನುಹುರಿಯ ಮೇಲೆ ಪರಿಣಾಮ ಬೀರಿದರೆ, ಸ್ನಾಯುಗಳಲ್ಲಿ ತೊಂದರೆಗಳು ಉಂಟಾಗಬಹುದು. ಉದಾಹರಣೆಗೆ ಕಾಲು, ಪಾದದ ಸ್ನಾಯು ಅಂಗಾಂಶಗಳನ್ನು ಬಿಗಿಗೊಳಿಸುವುದು. ಮೊದಲ ಮತ್ತು ಎರಡನೇ ಹಂತದ ಗೆಡ್ಡೆಗಳು ಸೇರಿದಂತೆ ಬೆನ್ನುಮೂಳೆಯಲ್ಲಿ ಯಾವುದೇ ರೀತಿಯ ಗೆಡ್ಡೆ ಇರಬಹುದು.
ಬೆನ್ನುಹುರಿಗೆ ಹರಡುವ ಕೆಲವು ಪ್ರಮುಖ ಕ್ಯಾನ್ಸರ್‌ಗಳಲ್ಲಿ ಪ್ರಾಸ್ಟೇಟ್, ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ಸೇರಿವೆ. ಈ ಕ್ಯಾನ್ಸರ್‌ಗಳು ಬೆನ್ನುಮೂಳೆಯ ಒಳಗಿನ ಅಂಗಾಂಶಕ್ಕೆ ಸುಲಭವಾಗಿ ಹರಡಬಹುದು.
ಇನ್ನೂ ವಯಸ್ಸಾಗಲಿ ಅಂತ ಕಾಯ್ಬೇಡಿ, 30 ಆಗುತ್ತಿದ್ದಂತೆ ಇವನ್ನೆಲ್ಲಾ ಬಿಟ್ಬಿಡಿ!
ಮೈಲೋಮಾ ಮತ್ತು ಲ್ಯುಕೇಮಿಯಾ(myeloma and leukaemia)ದಂತಹ ಎರಡು ರೀತಿಯ ರಕ್ತದ ಕ್ಯಾನ್ಸರ್ ಕೂಡ ಬೆನ್ನೆಲುಬಿಗೆ ಹರಡುತ್ತದೆ ಎಂದು ತಿಳಿದುಬಂದಿದೆ. ಮೂಳೆ ಮಜ್ಜೆಯೊಳಗಿನ ಬಿಳಿ ಕೋಶಗಳು ಅಥವಾ ಪ್ಲಾಸ್ಮಾ ಕೋಶಗಳಲ್ಲಿ ಇದು ಸಾಮಾನ್ಯವಾಗಿ ಸಂಭವಿಸುತ್ತದೆ.
ಕ್ಯಾನ್ಸರ್ ಬೆನ್ನುಮೂಳೆಗೆ ಹರಡಿದಾಗ, ರೋಗಿಗಳು ಪ್ರಜ್ಞೆ ಅಥವಾ ದೇಹತೂಕ ನಷ್ಟವನ್ನು ಅನುಭವಿಸಬಹುದು. ಇದು ಸ್ನಾಯುವಿನ ಸೆಳೆತ ಅಥವಾ ದೇಹದ ಕಾರ್ಯಗಳ ನಿಯಂತ್ರಣದ ನಷ್ಟ ಉಂಟಾಗಿಸಬಹುದು. ಇವರು ಬೆನ್ನು ನೋವನ್ನು ಅನುಭವಿಸಬಹುದು. ಅದು ಕಾಲಾನಂತರದಲ್ಲಿ ಹದಗೆಡುತ್ತದೆ. ಸಾಮಾನ್ಯವಾಗಿ ಮಧ್ಯದಲ್ಲಿ ಅಥವಾ ಕೆಳ ಬೆನ್ನಿನಲ್ಲಿ ನೋವು ತೀವ್ರವಾಗಿರುತ್ತದೆ. ಔಷಧದಿಂದ ಪರಿಹಾರವಾಗುವುದಿಲ್ಲ. ಮಲಗಿರುವಾಗ ಅಥವಾ ಆಯಾಸಗೊಂಡಿರುವಾಗ ಈ ನೋವು ಉಲ್ಬಣಗೊಳ್ಳುತ್ತದೆ. ಸೊಂಟ ಅಥವಾ ಕಾಲುಗಳಿಗೆ ವಿಸ್ತರಿಸಬಹುದು. ಕಾಲುಗಳಲ್ಲಿ ಸ್ನಾಯು ದೌರ್ಬಲ್ಯವನ್ನು ಅನುಭವಿಸಬಹುದು. ನಡೆಯುವಾಗ ಬೀಳುವುದು, ನಡೆಯಲು ಕಷ್ಟವಾಗುವುದು, ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಇತರ ಎಚ್ಚರಿಕೆ ಚಿಹ್ನೆಗಳು
ಸ್ನಾಯು ಸೆಳೆತ ಅಥವಾ ಜರ್ಕಿಂಗ್ ಹೊರತುಪಡಿಸಿ, ದೇಹದಲ್ಲಿ ಕ್ಯಾನ್ಸರ್ ಅನ್ನು ಸೂಚಿಸುವ ಹಲವಾರು ಇತರ ಚಿಹ್ನೆಗಳು ಇವೆ. ಇವುಗಳಲ್ಲಿ ಹಸಿವಾಗದಿರುವುದು, ಮಲದಲ್ಲಿ ರಕ್ತ, ಮೂತ್ರದಲ್ಲಿ ರಕ್ತ, ಹೋಗದ ಕೆಮ್ಮು, ವಿಪರೀತ ಆಯಾಸ, ಜ್ವರ ಕಡಿಮೆಯಾಗದಿರುವುದು, ಕುತ್ತಿಗೆಯಲ್ಲಿ ಗಡ್ಡೆ, ರಾತ್ರಿ ಬೆವರುವಿಕೆ, ಚರ್ಮದ ಬದಲಾವಣೆಗಳು, ಗಂಟುಗಳು, ನುಂಗಲು ತೊಂದರೆ ಮತ್ತು ತೂಕ ನಷ್ಟ. ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು.
ಸಿಕ್ಕಾಪಟ್ಟೆ ಸಿಟ್ಟು ಬರುತ್ತಾ ? ಸರಿಯಾದ ಆಹಾರ ತಿನ್ನಿ, ಕೋಪ ಕಡಿಮೆ ಮಾಡಿಕೊಳ್ಳಿ
ನಿಮ್ಮ ಪ್ರತಿಕ್ರಿಯೆ ಹೇಗಿರಬೇಕು?
ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಸಂಬಂಧಿಸಿದ ಪ್ರತೀ ಎಚ್ಚರಿಕೆಯ ಚಿಹ್ನೆಯನ್ನೂ ನಿರ್ಲಕ್ಷಿಸಬಾರದು. ಚಿಕಿತ್ಸೆ ನೀಡದೆ ಬಿಟ್ಟರೆ, ಈ ಚಿಹ್ನೆಗಳು ಸ್ಥಿತಿಯನ್ನು ಬದಲಾಯಿಸಲಾಗದ ಹಂತಕ್ಕೆ ಉಲ್ಬಣಗೊಳಿಸಬಹುದು. 40-50 ವರ್ಷ ವಯಸ್ಸಿನ ನಂತರ ನಿಯಮಿತವಾದ ದೇಹ ತಪಾಸಣೆಗಳು, ರೋಗಲಕ್ಷಣಗಳ ಪ್ರಾರಂಭದ ನಂತರ ನಿರಂತರ ವೈದ್ಯಕೀಯ ಸಹಾಯವನ್ನು ಪಡೆಯುವುದು, ಎಲ್ಲಾ ರೋಗಲಕ್ಷಣಗಳನ್ನು ದಿನನಿತ್ಯ ಗಮನಿಸುವುದು ಒಳ್ಳೆಯದು.