Asianet Suvarna News Asianet Suvarna News

ಸಹಪಾಠಿಯ ಪೀರಿಯಡ್ಸ್ ಸಮಯದಲ್ಲಿ ಪ್ಯಾಡ್, ಐಸ್ ಕ್ರೀಂ ಕೊಡಿಸಿ ನೆಟ್ಟಿಗರ ಮನ ಗೆದ್ದ ಯುವಕ!

ಮುಟ್ಟಿನ ಗುಟ್ಟು ಹುಡುಗರಿಗೂ ಗೊತ್ತಿರಬೇಕು. ಆಗಲೇ ಅವರಲ್ಲಿ ಹೆಣ್ಣುಮಕ್ಕಳ ಬಗೆಗೆ ಸಹಾನುಭೂತಿ ಸಾಧ್ಯ. ಹೀಗೆ ಪೀರಿಯಡ್ಸ್ ನೋವಿನಿಂದ ಒದ್ದಾಡುತ್ತಿದ್ದ ತನಗೆ ಪ್ಯಾಡ್, ಐಸ್‌ಕ್ರೀಂ ಕೊಡಿಸಿದ ಯುವಕನ ಬಗ್ಗೆ ಯುವತಿ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಅದಕ್ಕೆ ನೆಟ್ಟಿಗರು ಗಂಡುಮಕ್ಕಳನ್ನು ಹೀಗೆ ಬೆಳೆಸಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Boy Buys Sanitary Pads Ice Cream For Classmate During Her Period skr
Author
First Published Jun 5, 2023, 2:05 PM IST

ಈಗ ಎಲ್ಲವೂ ಫಾಸ್ಟ್.. 8ರಿಂದ 10 ವರ್ಷಕ್ಕೇ ಹುಡುಗಿಯರು ಋತುಮತಿಯರಾಗ್ತಾರೆ. ಅದೇ ವಯಸ್ಸಿನ ಹುಡುಗರು ಬಂದು ಪೋಷಕರ ಬಳಿ ಪೀರಿಯಡ್ಸ್ ಎಂದರೇನು ಎಂದು ಪ್ರಶ್ನಿಸುತ್ತಾರೆ. ಹೆಣ್ಣು ಮಕ್ಕಳ ಬಾಯಲ್ಲಿ ಇಂಥ ಪ್ರಶ್ನೆ ಬಂದಾಗಲೇ ಉತ್ತರಿಸಲು ತಡವರಿಸುವ ಬಹುತೇಕ ಪೋಷಕರು ಇನ್ನು ಮಗನಿಂದ ಇಂಥ ಪ್ರಶ್ನೆ ಬಂದರಂತೂ ಆತ ಕೆಟ್ಟು ಹೋಗುತ್ತಿದ್ದಾನೆಂದೇ ಹೆದರುತ್ತಾರೆ, ಏನು ಉತ್ತರ ಕೊಡುವುದು ತಿಳಿಯದೆ ಗಲಿಬಿಲಿಗೊಳಗಾಗುತ್ತಾರೆ. 
ಆದರೆ, ಪೋಷಕರ ಇಂಥ ನಡೆ ಮಕ್ಕಳಲ್ಲಿ ಅದೇನು ಮಾತನಾಡಬಾರದ್ದು, ಆಗಬಾರದ್ದ ವಿಷಯ ಎಂದುಕೊಳ್ಳುವಂತೆ ಮಾಡುತ್ತದೆ. ಅವರಲ್ಲಿ ಕುತೂಹಲ ಮತ್ತೂ ಹೆಚ್ಚಾಗುತ್ತದೆ. ಮತ್ತವರು ಉತ್ತರ ಕಂಡುಕೊಳ್ಳಲು ಬೇರೆ ಬೇರೆ ಮಾರ್ಗದಲ್ಲಿ ಪ್ರಯತ್ನಿಸಬಹುದು. ಅಥವಾ ನೋವಿನಲ್ಲಿರುವ ಹುಡುಗಿಯರಿಗೆ ಮತ್ತಷ್ಟು ಬೇಡದ ಕಾಮೆಂಟ್ ನೀಡಿ ಅವಮಾನಿಸಬಹುದು. ಇಷ್ಟೆಲ್ಲಕ್ಕೆ ಆಸ್ಪದ ಕೊಡಬಾರದೆಂದರೆ, ನಿಮ್ಮ ಮಗನಿಗೂ ಗೊತ್ತಿರಬೇಕು ಮುಟ್ಟಿನ ಗುಟ್ಟು. ಹೌದು, ಈಗ ಬದಲಾದ ಪರಿಸರದಲ್ಲಿ ಬೇಗ ಪೀರಿಯಡ್ಸ್ ಎದುರಿಸುವ ಹುಡುಗಿಯರಿರುವಾಗ, ಹುಡುಗರಿಗೂ ಬೇಗವೇ ಅಂದರೆ 9-11 ವಯಸ್ಸಿನಲ್ಲಿ ಪೀರಿಯಡ್ಸ್ ಎಂದರೇನು ಎಂಬುದನ್ನು ಪೋಷಕರು ವಿವರಿಸಬೇಕು. ಅಲ್ಲದೆ, ಪೀರಿಯಡ್ಸ್ ಸಂದರ್ಭದಲ್ಲಿ ಹೆಣ್ಣುಮಕ್ಕಳು ಎದುರಿಸುವ ಕಷ್ಟಗಳನ್ನು ಹೇಳಿ ಅದಕ್ಕಾಗಿ ಗಂಡು ಮಕ್ಕಳಲ್ಲಿ ಸಹಾನುಭೂತಿ ಬೆಳೆಸಬೇಕು. ಒಂದು ವೇಳೆ ತನ್ನ ಸಹಪಾಠಿಯೋ, ಸಹೋದರಿಯೋ ಮುಟ್ಟಿನ ನೋವು ಅನುಭವಿಸುತ್ತಿದ್ದರೆ, ಹೇಗೆ ಅವರ ಜೊತೆ ವರ್ತಿಸಬೇಕು ಎಂಬುದನ್ನು ತಿಳಿಸಬೇಕು. ಆಗಲೇ ಸಮಾಜ ಸುಧಾರಣೆ ಕಾಣುವುದು.

ಹೀಗೆ ಸರಿಯಾದ ರೀತಿಯಲ್ಲಿ ಬೆಳೆಸಿದ್ದಾರೆಂದು ಯುವಕನ ಪೋಷಕರೊಬ್ಬರನ್ನು ನೆಟ್ಟಿಗರು ಹೊಗಳುತ್ತಿರುವ ಈ ವಿಷಯವೊಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. 

Health Tips: ರಕ್ತನಾಳಗಳಲ್ಲಿ ಕೊಬ್ಬು ಹೆಚ್ತಾ ಇದ್ಯಾ? ಕಾಲುಗಳಲ್ಲಿ ಗೊತ್ತಾಗುತ್ತೆ ಅಲಕ್ಷ್ಯ ಬೇಡ

ಹೌದು, ಟ್ವಿಟರ್ ಬಳಕೆದಾರ್ತಿ ಆಯುಷ್ಕಾ ಒಬ್ಬ ಯುವಕ ತನ್ನ ಪೀರಿಯಡ್ಸ್ ಕಷ್ಟದಲ್ಲಿ ಹೇಗೆ ಸಹಾಯ ಮಾಡಿದ ಎಂಬ ಕಥೆಯನ್ನು ಹಂಚಿಕೊಂಡಿದ್ದಾರೆ.

ಆಕೆಗೆ ತರಬೇತಿ ಸಂಸ್ಥೆಯಲ್ಲಿದ್ದಾಗ ಪೀರಿಯಡ್ಸ್ ಆಗಿತ್ತು. ಆದರೆ ದುರದೃಷ್ಟವಶಾತ್, ಆಕೆಯ ಕೈಯಲ್ಲಿ ಯಾವುದೇ ಸ್ಯಾನಿಟರಿ ಪ್ಯಾಡ್ ಇರಲಿಲ್ಲ. ಆಕೆಗೆ ತಿಳಿದಿದ್ದ ಯಾವ ಹುಡುಗಿಯರ ಬಳಿಯೂ ಪ್ಯಾಡ್ ಇರಲಿಲ್ಲ. ಆಕೆಯ ಒದ್ದಾಟವನ್ನು ಗಮನಿಸಿದ ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ, ಅವಳಿಗೆ ಏನಾದರೂ ಅಗತ್ಯವಿದೆಯೇ ಎಂದು ಕೇಳಿದ್ದಾನೆ. ಹತ್ತಿರದ ಯಾವುದಾದರೂ ಮೆಡಿಕಲ್ ಸ್ಟೋರ್ ಗೊತ್ತಾ ಎಂದು ಆಕೆ ಕೇಳುತ್ತಿದ್ದಂತೆ, ನಿರ್ದೇಶನ ನೀಡುವ ಬದಲು, ಸ್ವತಃ ಅವನೇ ಅವಳನ್ನು ಮೆಡಿಕಲ್ ಶಾಪಿಗೆ ಕರೆದುಕೊಂಡು ಹೋಗಿದ್ದಾನೆ. ಅವಳಿಗಾಗಿ ನ್ಯಾಪ್ಕಿನ್ ಖರೀದಿಸಿದ್ದಲ್ಲದೆ, ಅವಳ ನೋವನ್ನು ಕಡಿಮೆಗೊಳಿಸಿ ಉತ್ಸಾಹವನ್ನು ಹೆಚ್ಚಿಸಲು ಐಸ್ ಕ್ರೀಮ್ ಅನ್ನು ಕೂಡಾ ಖರೀದಿಸಿ ಕೊಟ್ಟಿದ್ದಾನೆ ಎಂದು ಆಯುಷ್ಕಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹುಡುಗನ ಈ ವರ್ತನೆಯಿಂದ ಅವರಿಗೆ ಇಡೀ ನಗರದ ಮೇಲೆ ಹಾಗೂ ಅಲ್ಲಿರುವ ಜನರ ಮೇಲೆ ಪ್ರೀತಿ ಹುಟ್ಟಿದೆ ಎಂದಿದ್ದಾರೆ.

 

ಈ ಹುಡುಗನ ವರ್ತನೆಗೆ ಟ್ವಿಟ್ಟರ್ ಬಳಕೆದಾರರು, ಅದರಲ್ಲೂ ಹುಡುಗಿಯರು ಕಳೆದು ಹೋಗಿದ್ದಾರೆ. ಅವನ ತಂದೆತಾಯಿ ಅವನನ್ನು ಸರಿಯಾಗಿ ಬೆಳೆಸಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮತ್ತೊಬ್ಬ ಬಳಕೆದಾರರು, 'ಇದು ಓದಲು ತುಂಬಾ ಚೆನ್ನಾಗಿದೆ. ಜಗತ್ತು ಹೇಗೆ ಉತ್ತಮವಾಗಿ ಬದಲಾಗುತ್ತಿದೆ ಎಂಬುದನ್ನು ನೋಡಲು ನನಗೆ ಸಂತೋಷವಾಗಿದೆ,' ಎಂದಿದ್ದಾರೆ. ಮತ್ತೊಬ್ಬರು ಇದು ತುಂಬಾ ಸಿಹಿ ವಿಷಯ ಎಂದರೆ, ಮಗದೊಬ್ಬರು, ಮುಂದಿನ ಬಾರಿ ಆ ವ್ಯಕ್ತಿಗೆ ಐಸ್ ಕ್ರೀಮ್ ಖರೀದಿಸಿ ಕೊಡಿ ಎಂದಿದ್ದಾರೆ. 

ಗರ್ಭಪಾತದಿಂದ ನೊಂದ ಮಹಿಳೆಗೆ ಮಗು ಹೆರುವಂತೆ ಒತ್ತಡ: ಆಸ್ಪತ್ರೆಯಿಂದ ಮಗು ಕದ್ದ ಮಹಿಳೆ

ಈ ಹೃದಯಸ್ಪರ್ಶಿ ಘಟನೆಯು ಹುಡುಗರು ಮುಟ್ಟಿನ ನೋವಿನಲ್ಲಿರುವ ಹುಡುಗಿಯೊಂದಿಗೆ ಹೇಗೆ ವರ್ತಿಸಬೇಕು ಎಂದು ತೋರಿಸುತ್ತದೆ. ಇಂಥ ಗಂಡುಮಕ್ಕಳ ಸಂಖ್ಯೆ ಹೆಚ್ಚಾಗಲಿ ಅಲ್ಲವೇ?
 

Follow Us:
Download App:
  • android
  • ios