Asianet Suvarna News Asianet Suvarna News

ಬೂಸ್ಟರ್ ವ್ಯಾಕ್ಸಿನ್ ಹಾಕಿದ್ರೆ Omicron ಭಯದ ಅಗತ್ಯವಿಲ್ಲ

ಎಂಆರ್‌ಎನ್‌ಎ ಕೋವಿಡ್‌ ವ್ಯಾಕ್ಸಿನ್‌ನ ಬೂಸ್ಟರ್ ಶಾಟ್‌ ಪಡೆದವರಲ್ಲಿ ಓಮಿಕ್ರಾನ್‌ ಹಾವಳಿ ಕಂಡುಬಂದೇ ಇಲ್ಲ. ಇದು ಕತಾರ್‌ನಲ್ಲಿ ನಡೆಸಿದ ಅಧ್ಯಯನದ ವರದಿ.

 

Booster Vaccine is Highly effective to prevent Omicron Covid-19
Author
Bangalore, First Published Mar 21, 2022, 4:08 PM IST

ಕೊರೊನಾ ವೈರಸ್‌ (Corona Virus) ಸಾಂಕ್ರಾಮಿಕದ ನಾಲ್ಕನೇ ಅಲೆ ಬರುತ್ತಿರುವ ಸಂದರ್ಭದಲ್ಲಿ ಈ ಒಳ್ಳೆಯ ಸುದ್ದಿ ಕೇಳಿ- ಬೂಸ್ಟರ್ ಶಾಟ್ (ಮೂರನೇ) (Booster) ವ್ಯಾಕ್ಸಿನ್ (Vaccine) ಹಾಕಿಸಿಕೊಂಡವರಿಗೆ ಓಮಿಕ್ರಾನ್ (Omicron)  ಏನೂ ಮಾಡಿಲ್ಲವಂತೆ. ಇದು ಕತಾರ್‌ನಲ್ಲಿ ನಡೆದ ಒಂದು ಅಧ್ಯಯನದ ವರದಿ. ಓಮಿಕ್ರಾನ್ ರೂಪಾಂತರಿಯ ಅಲೆಯ ಸಮಯದಲ್ಲಿ mRNA COVID-19 ಲಸಿಕೆಗಳ ಬೂಸ್ಟರ್ ಡೋಸ್‌ ಹಾಕಿಸಿಕೊಂಡವರಲ್ಲಿ ಆಸ್ಪತ್ರೆಗೆ ದಾಖಲಾದವರು ಮತ್ತು ಸಾವು ಕಂಡವರು ಅತ್ಯಂತ ಅಲ್ಪ ಸಂಖ್ಯೆಯ ಮಂದಿ. ಇದನ್ನು ಅಧ್ಯಯನ ದೃಢಪಡಿಸಿದೆ.

ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವಿದು. ಇದರಲ್ಲಿ ಕತಾರ್‌ನ 2,239,193 ಜನರ ಡೇಟಾವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇವರು ಫಿಜರ್-ಬಯೋಎನ್‌ಟೆಕ್ ಅಥವಾ ಮಾಡರ್ನಾ COVID-19 ಲಸಿಕೆಗಳ ಕನಿಷ್ಠ 2 ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. ನಂತರ ಬೂಸ್ಟರ್ ಶಾಟ್ ಪಡೆದವರೂ ಇದ್ದಾರೆ. ಡಿಸೆಂಬರ್ 19ರಿಂದ ಜನವರಿ 26ರವರೆಗಿನ ಓಮಿಕ್ರಾನ್ ಉಲ್ಬಣದ ಸಮಯದಲ್ಲಿ ಎರಡು-ಡೋಸ್ ಪ್ರಾಥಮಿಕ ಸರಣಿಯನ್ನು ಮಾತ್ರ ಪಡೆದವರಿಗೆ ಹೋಲಿಸಿದರೆ ಬೂಸ್ಟರ್‌ಗಳನ್ನು ಸ್ವೀಕರಿಸಿದವರಲ್ಲಿ ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ.

ಆಧ್ಯಾತ್ಮದ ಘಮಲಿನ ಈ ಸಸ್ಯಗಳು ಮನೆಗೆ ತರುತ್ತವೆ positivity

"ಬೂಸ್ಟರ್ ಹೊಂದುವುದರಿಂದ ಗಣನೀಯ ಲಾಭಗಳಿವೆ, ಏಕೆಂದರೆ ಇದು ಓಮಿಕ್ರಾನ್ ರೋಗಲಕ್ಷಣ ಹೊಂದುವ ಸಾಧ್ಯತೆಯನ್ನು ಸುಮಾರು 50%ರಷ್ಟು ಕಡಿಮೆ ಮಾಡುತ್ತದೆ" ಎಂದು ಅಧ್ಯಯನ ಮಾಡಿದ ತಜ್ಞರಾದ ಲೈತ್ ಜಮಾಲ್ ಅಬು-ರದ್ದಾದ್ ತಿಳಿಸಿದ್ದಾರೆ. ಆಸ್ಪತ್ರೆವಾಸ ಮತ್ತು ಸಾವಿನ ವಿರುದ್ಧ ಬೂಸ್ಟರ್‌ನ ಪರಿಣಾಮಕಾರಿತನ ಇನ್ನೂ ಉತ್ತಮವಾಗಿದೆ. ಸುಮಾರು 80%ರಷ್ಟಿದೆ. ಇತ್ತೀಚೆಗೆ ಬೂಸ್ಟರ್ ಅನ್ನು ಹೊಂದಿರುವುದು ಬಹಳ ರಕ್ಷಣಾತ್ಮಕವಾಗಿದೆ ಎಂದಿದ್ದಾರೆ.

Pfizer-BioNTech ಲಸಿಕೆಯ ಎರಡು ಡೋಸ್‌ ಪಡೆದವರಲ್ಲಿ, Omicron ರೂಪಾಂತರದ ರೋಗಲಕ್ಷಣದ ಸೋಂಕಿನ ಸಂಭವ 4.5% ಹಾಗೂ ಬೂಸ್ಟರ್ ಅನ್ನು ಪಡೆದವರಲ್ಲಿ 2.4% ಆಗಿದ್ದು ಕಂಡುಬಂದಿದೆ. Omicron ರೂಪಾಂತರಿಯ ರೋಗಲಕ್ಷಣದ ವಿರುದ್ಧ ಬೂಸ್ಟರ್‌ನ ಅಂದಾಜು ಪರಿಣಾಮಕಾರಿತ್ವ 49.4%ದಷ್ಟಿತ್ತು. ಮಾರಣಾಂತಿಕ COVID-19 ವಿರುದ್ಧ ಫೈಜರ್-ಬಯೋಎನ್‌ಟೆಕ್ ಲಸಿಕೆಯ ಪರಿಣಾಮಕಾರಿತ್ವ 76.5% ಇತ್ತು. ಡೆಲ್ಟಾ ರೂಪಾಂತರಿಯ ವಿರುದ್ಧ ಫಿಜರ್-ಬಯೋಎನ್ಟೆಕ್ ಲಸಿಕೆಯ ಪರಿಣಾಮಕಾರಿತ್ವ 86.1 ಇತ್ತು.

International Day Of Happiness: ನೀವು ಸಂತೋಷವಾಗಿದ್ದೀರಾ ? ಇಲ್ಲಾಂದ್ರೆ ಈ ಯೋಗ ಟಿಪ್ಸ್‌ ಫಾಲೋ ಮಾಡಿ

ಮಾಡರ್ನಾ ಲಸಿಕೆಯ ಬೂಸ್ಟರ್ ಪಡೆದವರಲ್ಲಿ ಓಮಿಕ್ರಾನ್ ರೂಪಾಂತರಿ ರೋಗಲಕ್ಷಣದ ಸೋಂಕಿನ ಸಂಭವ 1% ಮತ್ತು ಎರಡು ಡೋಸ್ ಮಾತ್ರ ಪಡೆದವರಲ್ಲಿ 1.9% ಆಗಿದೆ. Omicron ರೂಪಾಂತರಿಯ ರೋಗಲಕ್ಷಣದ ವಿರುದ್ಧ ಬೂಸ್ಟರ್‌ನ ಅಂದಾಜು ಪರಿಣಾಮಕಾರಿತ್ವ 47.3% ಆಗಿತ್ತು. ಮಾಡರ್ನಾ ಬೂಸ್ಟರ್ ಪಡೆದವರಲ್ಲಿ ಯಾವುದೇ ಮಾರಣಾಂತಿಕ COVID-19 ಪ್ರಕರಣಗಳು ವರದಿಯಾಗಿಲ್ಲ, ಮತ್ತು ಎರಡು ಡೋಸ್‌ ಪಡೆದವರಲ್ಲಿ ಮೂರು ತೀವ್ರ ಪ್ರಕರಣಗಳು ವರದಿಯಾಗಿವೆ.

"ಒಮಿಕ್ರಾನ್ ವಿರುದ್ಧ ಕೇವಲ 50%ರಷ್ಟಿರುವ ರಕ್ಷಣೆ ಉತ್ತಮವಾಗಿಲ್ಲ" ಎಂದು ಅಬು-ರದ್ದಾದ್ ಹೇಳಿದ್ದಾರೆ. "ಡೆಲ್ಟಾದಂತಹ ಹಿಂದಿನ ರೂಪಾಂತರಿಗಳ ವಿರುದ್ಧ ನಾವು 80%ಕ್ಕಿಂತ ಹೆಚ್ಚು ಉತ್ತಮವಾದ ರಕ್ಷಣೆಯನ್ನು ಹೊಂದಿದ್ದೇವೆ. ಇನ್ನಷ್ಟು ರೂಪಾಂತರಿಗಳ ವಿರುದ್ಧ ಹೆಚ್ಚಿನ ರಕ್ಷಣೆ ಮತ್ತು ಹೆಚ್ಚಿನ ಪರಿಣಾಮಕಾರಿತ್ವದ ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಕುರಿತು ನಾವು ಯೋಚಿಸಬೇಕು ಎಂದು ಇದು ಸೂಚಿಸುತ್ತದೆ. ಪ್ರಸ್ತುತ ಪೀಳಿಗೆಯ ಲಸಿಕೆಗಳಲ್ಲಿ ಇತ್ತೀಚಿನ ಬೂಸ್ಟರ್ ವ್ಯಾಕ್ಸಿನೇಷನ್ ಆಸ್ಪತ್ರೆಗೆ ದಾಖಲಾಗುವ ಅಪಾಯ ತಪ್ಪಿಸಲು ಮತ್ತು ಹೆಚ್ಚು ದುರ್ಬಲವಾಗಿರುವವರನ್ನು ರಕ್ಷಿಸಲು ನಿರ್ಣಾಯಕ" ಎಂದು ಅಬು-ರದ್ದಾದ್ ಹೇಳಿದ್ದಾರೆ.

ಏನೂ ಮಾಡ್ದೆ ಸಣ್ಣಗಾಗಿದ್ದೀರಾ ? ಇದು ಖುಷಿಪಡೋ ಸಮಯ ಅಲ್ಲ, ಜೀವಕ್ಕೇ ತೊಂದ್ರೆಯಾಗ್ಬೋದು..!

ಇತ್ತೀಚಿನ ಅಧ್ಯಯನಗಳು COVID-19 ವಿರುದ್ಧ mRNA ಲಸಿಕೆಗಳ ಪರಿಣಾಮಕಾರಿತ್ವ ಕಾಲಾನಂತರದಲ್ಲಿ ಕ್ಷೀಣಿಸುತ್ತಿದೆ ಎಂದು ತೋರಿಸಿದೆ. U.S. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ವರದಿ ಮಾಡಿದ ಪ್ರಕಾರ Omicron ಅಲೆಯ ಸಮಯದಲ್ಲಿ mRNA ಬೂಸ್ಟರ್‌ನ ಪರಿಣಾಮ ಎರಡು ತಿಂಗಳ ನಂತರ 91%ರಿಂದ ನಾಲ್ಕು ತಿಂಗಳ ನಂತರ 78%ಕ್ಕೆ ಇಳಿದಿದೆ.


 

Follow Us:
Download App:
  • android
  • ios