ಆಧ್ಯಾತ್ಮದ ಘಮಲಿನ ಈ ಸಸ್ಯಗಳು ಮನೆಗೆ ತರುತ್ತವೆ positivity
ಮರಗಿಡಗಳು ಯಾವತ್ತೂ ಪಾಸಿಟಿವ್ ಎನರ್ಜಿಯ ಮೂಲವೇ. ಆದರೆ, ಕೆಲವು ಸಸ್ಯಗಳು ಆಧ್ಯಾತ್ಮಿಕವಾಗಿ ಮಹತ್ವದ ಪಾತ್ರ ವಹಿಸುತ್ತಾ ಮನಸ್ಸಿಗೆ ನೆಮ್ಮದಿಯನ್ನೂ ಮನೆಗೆ ಆರೋಗ್ಯ, ಸಮೃದ್ಧಿಯನ್ನೂ ತರುತ್ತವೆ. ಅಂಥ ಸಸ್ಯಗಳು ಯಾವುವು ತಿಳಿಯಬೇಕಾ?
ಇತ್ತೀಚೆಗೆ ದೂರದ ನೆಂಟರ ಮನೆಯೊಂದಕ್ಕೆ ಹೋಗಬೇಕಾಗಿತ್ತು. ವಯಸ್ಸಾದ ಹಿರಿಯ ದಂಪತಿ ವಾಸಿಸುವ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಮನಸ್ಸಿಗಾದ ಸಂತೋಷ, ಶಾಂತತೆ ಹೇಳತೀರದು. ಅವರಿಬ್ಬರೂ ಕೊರೋನಾ ಕಾಲದಿಂದಲೂ ಆರೋಗ್ಯವನ್ನು ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದರು. ನಗುನಗುತ್ತಾ ಮಾತಾಡುತ್ತಿದ್ದರು. ಮನೆಯ ವಾತಾವರಣ ಎಂಥವರ ಮನಸ್ಸಿಗೂ ತಂಪೆರೆಯುವಂತಿತ್ತು. ಇತ್ತ ನನ್ನ ಮನೆಯಲ್ಲಿ ಇಡೀ ದಿನ ಕಚೇರಿ ಕೆಲಸ, ಮನೆಗೆಲಸ, ಮಕ್ಕಳ ಕೆಲಸ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದ ನಾನು ಒತ್ತಡ, ಜೊತೆಗೊಂದಿಷ್ಟು ಬೋರು, ಆತಂಕ ಎಲ್ಲವನ್ನೂ ಎದುರಿಸುತ್ತಿದ್ದೆ.
ಈ ಬಗ್ಗೆ ಅವರಲ್ಲಿ ಹೇಳಿದಾಗ, ಹೇಗೆ ಸದಾ ಇಷ್ಟೊಂದು ಸಂತೋಷವಾಗಿ, ಸಮಾಧಾನಚಿತ್ತರಾಗಿ ಇರುವ ಹಿಂದಿನ ಕಾರಣ ಹೇಳಿದಾಗ- ತಾವು ಸಮಯ ಸಿಕ್ಕಾಗಲೆಲ್ಲ ಗಾರ್ಡನಿಂಗ್ ಮಾಡುವುದಾಗಿ ಹೇಳಿದರು. ಈ ಹಸಿರಿನ ನಡುವೆ ಇದ್ದಿದ್ದರಿಂದ ತಾವು ಆರೋಗ್ಯವಾಗಿ, ಸಂತೋಷವಾಗಿ ಇರಲು ಸಾಧ್ಯವಾಗಿದ್ದಾಗಿ ಹೇಳಿದರು. ಅಲ್ಲದೆ, ಮನೆಗೆ ಈ ಕಳೆ ತರುವ ಸಸ್ಯಗಳ ಬಗ್ಗೆ ಬಹಳಷ್ಟು ರಿಸರ್ಚ್ ಮಾಡಿ ಮನೆಯಲ್ಲಿ ಅವನ್ನು ಬೆಳೆಸಿರುವುದಾಗಿ ಹೇಳಿದರು. ಹಾಗಾದರೆ, ಮನೆಗೆ ಧನಾತ್ಮಕತೆ ಹಾಗೂ ಆರೋಗ್ಯ ತರುವ ಸಸ್ಯಗಳು ಯಾವೆಲ್ಲ ನೋಡೋಣ.
ಮಲ್ಲಿಗೆ(Jasmine)
ಪ್ರಾಥಮಿಕವಾಗಿ ಅದರ ಹಿತವಾದ, ಆಹ್ಲಾದಕರ ಸುವಾಸನೆಗಾಗಿ ಹೆಸರಾಗಿರುವ ಮಲ್ಲಿಗೆಯನ್ನು ಒಳಾಂಗಣದಲ್ಲಿ ಬೆಳೆಸಿದರೆ ಇದು ಬಹುತೇಕ ತಕ್ಷಣವೇ ಆತಂಕವನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಶಕ್ತಿಯನ್ನು ಉತ್ತೇಜಿಸುತ್ತದೆ. ನೀವು ಖಿನ್ನತೆ(depression) ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಇದು ನಿಮಗೆ ಸೂಕ್ತವಾದ ಸಸ್ಯವಾಗಿದೆ. ಉತ್ತಮ ಫಲಿತಾಂಶಗಳಿಗಾಗಿ, ಸೂರ್ಯನ ಬೆಳಕನ್ನು ಹೊಂದಿರುವ ದಕ್ಷಿಣ(south)ದ ಕಿಟಕಿಯ ಬಳಿ ಅದನ್ನು ಒಳಾಂಗಣದಲ್ಲಿ ಇರಿಸಿ.
ಸಣ್ಣಪುಟ್ಟದ್ದಕ್ಕೂ ಅಳೋ ಅಭ್ಯಾಸ ಈ ಐದು ರಾಶಿಗಳಿಗೆ
ರೋಸ್ಮರಿ(Rosemary)
ಔಷಧೀಯ ಗುಣವುಳ್ಳ ರೋಸ್ಮರಿಯನ್ನು ಸುಗಂಧ ದ್ರವ್ಯ(perfumes)ಗಳನ್ನು ತಯಾರಿಸಲೂ ಬಳಸಲಾಗುತ್ತದೆ. ಈ ಮೂಲಿಕೆ(herb)ಯನ್ನು ಸರಿಯಾಗಿ ಬಳಸಿದಾಗ, ನಿದ್ರಾಹೀನತೆ(insomnia) ಮತ್ತು ಇತರ ನಿದ್ರೆಗೆ ಸಂಬಂಧಿಸಿದ ಅಸ್ವಸ್ಥತೆಗಳನ್ನು ಗುಣಪಡಿಸಬಹುದು. ಇದು ಸ್ಮರಣ ಶಕ್ತಿ(memory)ಯನ್ನು ಸುಧಾರಿಸುತ್ತದೆ. ಪ್ರಕಾಶಮಾನವಾದ ಕೋಣೆಯಲ್ಲಿ ಈ ಸಸ್ಯ ಬೆಳೆಸಬೇಕು.
ಅದೃಷ್ಟದ ಬಿದಿರು(Lucky bamboo)
ಬಿದಿರಿನ ಸಸ್ಯವು ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಸಸ್ಯವನ್ನು ಸೌಮ್ಯವಾದ ಬೆಳಕನ್ನು ಹೊಂದಿರುವ ಯಾವುದೇ ಕೋಣೆಯಲ್ಲಿ ಇರಿಸಬಹುದು. ಸಸ್ಯದ ಮೂರನೇ ಒಂದು ಭಾಗದಷ್ಟು ನೀರಿನಲ್ಲಿ ಮುಳುಗಿರಬೇಕು.
ಮನಿ ಪ್ಲಾಂಟ್(Money plant)
ಭಾರತೀಯ ಮನೆಗಳ ಅಚ್ಚುಮೆಚ್ಚಿನ ಸಸ್ಯ ಮನಿ ಪ್ಲಾಂಟ್ ಅನ್ನು ಪ್ರಾಯೋಗಿಕವಾಗಿ ಎಲ್ಲಿ ಬೇಕಾದರೂ ಇರಿಸಬಹುದು. ಇವು ಉತ್ತಮ ಅಲಂಕಾರದ ರೂಪಕವೂ ಆಗಿವೆ. ಈ ಗಿಡವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ.
Chanakya Niti: ವಿದ್ಯಾರ್ಥಿ ಜೀವನಕ್ಕೆ ಚಾಣಕ್ಯ ಸೂತ್ರಗಳು..
ತುಳಸಿ(Basil)
ತುಳಸಿಯು ಉತ್ಕರ್ಷಣ ನಿರೋಧಕ(antioxidant), ಪ್ರತಿಜೀವಕ ಮತ್ತು ಪವಿತ್ರ ಸಸ್ಯವಾಗಿದೆ. ಇದನ್ನು ಹಲವಾರು ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಶೀತ, ಕೆಮ್ಮು ಮತ್ತು ಜ್ವರ ನಿರ್ಮೂಲನೆಗೆ ಸಹಾಯ ಮಾಡುತ್ತದೆ. ಇವೆಲ್ಲದರ ಜೊತೆಗೆ ಸುತ್ತಲಿನ ನಕಾರಾತ್ಮಕ ಗಾಳಿಯನ್ನು ಸಹ ತೆರವುಗೊಳಿಸುತ್ತದೆ.
ಆರ್ಕಿಡ್‌ಗಳು(Orchids)
ಆರ್ಕಿಡ್‌ಗಳು ಒತ್ತಡವನ್ನು ನಿವಾರಿಸುತ್ತವೆ ಮತ್ತು ವಿಶ್ರಾಂತಿ ತರುತ್ತವೆ. ಇದರ ಹೊರತಾಗಿ, ಆರ್ಕಿಡ್‌ಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಸೂರ್ಯನ ಬೆಳಕು ಬರುವ ಯಾವುದೇ ಕೋಣೆಯಲ್ಲಿ ಅವುಗಳನ್ನು ಇರಿಸಬಹುದು.
ಲೋಳೆಸರ(Aloe Vera)
ಹೆಚ್ಚಿನ ಜನರು ತಮ್ಮ ಮುಖ, ಕೂದಲ ಸೌಂದರ್ಯ ವೃದ್ಧಿಸಲು, ದದ್ದುಗಳು, ಕಡಿತ ಮತ್ತು ಗಾಯಗಳಿಗೆ ಅಲೋವೆರಾವನ್ನು ಬಳಸುತ್ತಾರೆ. ಈ ಸಸ್ಯವು ಸುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ಈ ಸಸ್ಯವನ್ನು ನಮ್ಮ ಬೆಡ್‌ರೂಂನಲ್ಲಿಟ್ಟುಕೊಳ್ಳುವುದರಿಂದ ಲಾಭ ಹೆಚ್ಚು.