Asianet Suvarna News Asianet Suvarna News

Health Tips: ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಿಂದ ರಕ್ಷಿಸಿಕೊಳ್ಳಲು ಬ್ಲ್ಯಾಕ್ ಟೀ ಕುಡಿಯಿರಿ

ಭಾರತೀಯರಿಗೆ ಬೆಳಗ್ಗೆ, ಸಂಜೆ ಒಂದು ಕಪ್ ಟೀ (Tea) ಇರದೆ ದಿನ ಮುಗಿಯೋದೆ ಇಲ್ಲ. ಆದ್ರೆ ಹೆಚ್ಚಾಗಿ ಎಲ್ಲರೂ ಹಾಲು (Milk) ಬೆರೆಸಿದ ಚಹಾವನ್ನೇ ಕುಡಿಯುತ್ತಾರೆ. ಹಾಲು ಸೇರಿಸದ ಬ್ಲ್ಯಾಕ್ ಟೀಯನ್ನು ನೋಡಿದ್ರೆ ಮೂಗು ಮುರೀತಾರೆ. ಆದ್ರೆ ನಿಮಗೆ ಗೊತ್ತಾ, ಈ ಬ್ಲ್ಯಾಕ್ ಟೀ (Black Tea) ಸೇವನೆ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆಗೆ ರಾಮಬಾಣವಾಗಿದೆ.

Black Tea For Hypertension And Heart Disease
Author
Bengaluru, First Published Jan 11, 2022, 5:37 PM IST

ಭಾರತದಲ್ಲಿ ಬಹುಶಃ ಟೀ ಕುಡಿಯದವರು ಕಾಣಸಿಗುವುದು ವಿರಳ. ಹಾಲಿನ ಚಹಾ, ಜಿಂಜರ್ ಟೀ, ಮಸಾಲ ಟೀ ಎಂದು ಹಲವು ಬಗೆಯ ಟೀಗಳನ್ನು ಮಾಡಿ ಕುಡಿಯುತ್ತಾರೆ. ಬ್ಲ್ಯಾಕ್ ಟೀ ಸಹ ಇದರಲ್ಲೊಂದು. ಹಾಲು ಸೇರಿಸದ ಈ ಟೀ ಕಪ್ಪು ಬಣ್ಣವನ್ನು ಹೊಂದಿರುವುದರಿಂದ ಇದನ್ನು ಬ್ಲ್ಯಾಕ್ ಟೀ ಎಂದು ಕರೆಯುತ್ತಾರೆ. ಪ್ರತಿ ದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಇಲ್ಲದಾಗುತ್ತದೆ. ಇತರ ಎಲ್ಲಾ ಟೀಗಳಿಂದ ಬ್ಲ್ಯಾಕ್ ಟೀ ಸೇವನೆ ಅತ್ಯುತ್ತಮ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಬ್ಲ್ಯಾಕ್ ಟೀ ಸೇವನೆಯಿಂದ ಹೃದಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಈ ಬೆಚ್ಚಗಿನ ಪಾನೀಯದಿಂದ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ
ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದು ಸಹ ಕರೆಯುತ್ತಾರೆ. ಅಧಿಕ ರಕ್ತದೊತ್ತಡಕ್ಕೆ ಸರಿಯಾದ ಚಿಕಿತ್ಸೆ ಸಿಗದಿದ್ದರೆ, ಇದು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡದ ಕಾಯಿಲೆಗಳು, ಹೃದಯ ವೈಫಲ್ಯ ಮೊದಲಾದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಜನಸಂಖ್ಯೆಯ ಸುಮಾರು ಮೂವತ್ತು ಪ್ರತಿಶತದಷ್ಟು ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಕಂಡು ಬರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 

ಅಧಿಕ ರಕ್ತದೊತ್ತಡ ಎಂದಾಗ ಅಪಧಮನಿಗಳಲ್ಲಿ ನಿರಂತರವಾಗಿ ಹೆಚ್ಚಿನ ರಕ್ತದ ಹರಿವಿಗೆ ಕಾರಣವಾಗುತ್ತದೆ. ಇದು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಹೃದಯಕ್ಕೆ ಆಮ್ಲಜನಕ ಮತ್ತು ರಕ್ತದ ಸರಿಯಾದ ಸಾಗಣೆಯನ್ನು ತಡೆಯುತ್ತದೆ. ಇದು ಹೃದ್ರೋಗಗಳಿಗೂ ಕಾರಣವಾಗಬಹುದು. ಆದರೆ ಬ್ಲ್ಯಾಕ್ ಟೀಯಲ್ಲಿರುವ ಫ್ಲೇವನಾಯಿಡ್ಸ್ ಎಂಬ ಉತ್ಕರ್ಷಣಾ ಅಂಶ ಅಧಿಕ ರಕ್ತದೊತ್ತಡ (Hypertension)ದ ಅಪಾಯವನ್ನು ಕಡಿಮೆ ಮಾಡುತ್ತದೆ. 

Winter Drinks: ಅಜೀರ್ಣ ಸಮಸ್ಯೆಗೆ ಬೆಸ್ಟ್ ಸೊಲ್ಯೂಶನ್ ಮಸಾಲ ಟೀ

ಬ್ಲ್ಯಾಕ್ ಟೀ (Black Tea)ಯಲ್ಲಿರುವ ಎಂಡೊಥಿಲಿಯನ್ ಅಂಶ ರಕ್ತನಾಳ ಹಿಗ್ಗಿಸುವ ಅಥವಾ ಕುಗ್ಗಿಸುವ ಪ್ರಕ್ರಿಯೆಯನ್ನು ತಡೆಯುತ್ತದೆ. ಬ್ಲ್ಯಾಕ್ ಟೀಯಲ್ಲಿರುವ ಫ್ಲೆಯನೋಯಿಡ್ಸ್ ಅಂಶ ರಕ್ತ (Blood) ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಕಪ್ಪು ಚಹಾದಲ್ಲಿರುವ ಮ್ಯಾಂಗನೀಸ್ ಮತ್ತು ಫೋಲಿಫೆನಾಲ್ ಅಂಶಗಳು ಸ್ನಾಯುಗಳನ್ನು ಆರೋಗ್ಯಯುತವಾಗಿ ಇರಿಸುವುದರ ಮೂಲಕ ಹೃದಯ (Heart) ಸಂಬಂಧಿತ ರೋಗಗಳು ಬರದಂತೆ ತಡೆಯುತ್ತದೆ.

ಕಪ್ಪು ಚಹಾ ಸೇವನೆ
ಯಾವುದೇ ಆರೋಗ್ಯ (Health) ಸಮಸ್ಯೆಯನ್ನು ಬಗೆಹರಿಸಲು ಜೀವನಶೈಲಿ ಉತ್ತಮವಾಗಿರಬೇಕಾದುದು ಅಗತ್ಯವಾಗಿದೆ. ಆರೋಗ್ಯಕರ ಆಹಾರ ಮತ್ತು ನಿಯಮಿತ ತಾಲೀಮು, ಉತ್ತಮ ಜೀವನಶೈಲಿಯನ್ನು ಅನುಸರಿಸುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಒಂದು ದಿನದಲ್ಲಿ ಮೂರು ಕಪ್ ಗಳಷ್ಟು ಕಪ್ಪು ಚಹಾವನ್ನು ಸೇವಿಸುವುದು ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಕಪ್ಪು ಚಹಾ ಹೃದ್ರೋಗಗಳನ್ನು ನಿಯಂತ್ರಿಸುವಲ್ಲಿ ಸಹ ಪರಿಣಾಮಕಾರಿಯಾಗಿದೆ. ಕಪ್ಪು ಚಹಾವು ಫ್ಲೇವನಾಯ್ಡ್‌ ಅಂಶವನ್ನು ಹೊಂದಿದ್ದು, ಇದು ಅಪಧಮನಿಗಳಲ್ಲಿ ರಕ್ತ ಮುಕ್ತವಾಗಿ ಪರಿಚಲನೆ ಮಾಡಲು ಸಹಾಯ ಮಾಡುತ್ತದೆ. ಫ್ಲೇವನಾಯ್ಡ್‌ಗಳು ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ.

Black Coffee : ಬೆಳಗ್ಗಿನ ಈ ಅಭ್ಯಾಸ ಬಿಟ್ಟು ಬಿಡಿ, ಇಲ್ಲಾಂದ್ರೆ ಹೃದಯಕ್ಕೆ ಮಾರಕ

ಇವಿಷ್ಟೇ ಅಲ್ಲದೆ, ಬ್ಲ್ಯಾಕ್ ಟೀ ಕುಡಿಯುವುದರಿಂದ ಕ್ಯಾನ್ಸರ್‌ನಅಪಾಯ ಕಡಿಮೆಯಾಗುತ್ತದೆ. ಕಪ್ಪು ಚಹಾದಲ್ಲಿರುವ ಪೋಲಿಫೆನಾಲ್ ಎಂಬ ಉತ್ಕರ್ಷಣವು ಅಂಡಾಶಯ, ಶ್ವಾಸಕೋಶ, ಮೂತ್ರಕೋಶದ ಕ್ಯಾನ್ಸರ್ ಬರದಂತೆ ರಕ್ಷಿಸುತ್ತದೆ. ಕಪ್ಪು ಚಹಾದಲ್ಲಿರುವ ಟಿಎಫ್ 2 ಎಂಬ ಅಂಶವು ಕ್ಯಾನ್ಸರ್ ಕಣಗಳನ್ನು ಕೊಲ್ಲುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಈ ಬ್ಲ್ಯಾಕ್ ಟೀಯನ್ನು ಅತಿಯಾಗಿ ಕುಡಿಯವುದು ಸಹ ಒಳ್ಳೆಯದಲ್ಲ. ಕಪ್ಪು ಚಹಾವನ್ನು ಅತಿಯಾಗಿ ಸೇವಿಸುವುದರಿಂದ ಅದರಲ್ಲಿರುವ ಕೆಫೀನ್‌ನಿಂದಾಗಿ ನಿದ್ರಾಹೀನತೆಯಂತಹ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಕೆಫೀನ್ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಅತಿಯಾದ ಸೇವನೆಯು ಆತಂಕ, ತಲೆನೋವು ಮತ್ತು ತಲೆ ಸುತ್ತುವಿಕೆಗೆ ಕಾರಣವಾಗಬಹುದು. 

Follow Us:
Download App:
  • android
  • ios