ಬಾಯಿ ರುಚಿ ಅಂತ ಬ್ರೆಡ್ ಮತ್ತು ಬಿಸ್ಕೆಟ್ ತಿನ್ನುತ್ತೀರಾ? ಸ್ಲೋ ಪಾಯ್ಸನ್ ಸತ್ಯ ಬಿಚ್ಚಿಟ್ಟ ವೈದ್ಯರು
ಮಾರುಕಟ್ಟೆಯಲ್ಲಿ ಬರುತ್ತಿರುವ ವೆರೈಟಿ ಬಿಸ್ಕೆಟ್ಸ್‌ಗಳನ್ನು ಇಷ್ಟ ಪಡುವವರಿಗೆ ವೈದ್ಯರು ಕೊಟ್ಟ ಸಲಹೆ. ಶಾಕ್ ಆಗಬೇಡಿ ಇದೇ ಸತ್ಯ....
ದಿನ ಬೆಳಗ್ಗೆ ಕಾಫಿ ಜೊತೆ ಎರಡು ಬಿಸ್ಕೆಟ್, ಸಂಜೆ ಕಾಫಿ ಜೊತೆ ಎರಡು ಬಿಸ್ಕೆಟ್ ಕೇಳುವ ದೊಡ್ಡವರಿಗೂ, ಒಂದೇ ಸಮ ಮಗು ಅಳುತ್ತದೆ ಎಂದು ಸಮಾಧಾನ ಮಾಡಲು ಒಂದು ಪ್ಯಾಕೆಟ್ ಬಿಸ್ಕೆಟ್ ಕೇಳುವ ಮಕ್ಕಳಿಗೂ ಯಾವುದೇ ವ್ಯತ್ಯಾಸವಿಲ್ಲ. ವಿಷ ಸ್ವಲ್ಪ ಕುಡಿದರೂ ವಿಷನೇ ಫುಲ್ ಬಾಟಲ್ ಕುಡಿದರೂ ವಿಷನೇ. ಒಂದು ಪ್ಯಾಕೆಟ್ ಒಟ್ಟಿಗೆ ತಿಂದರೆ ಫುಲ್ ಡೇಂಜರ್, ಅದೇ ದಿನಕ್ಕೆ ಎರಡು-ನಾಲ್ಕು ಬಿಸ್ಕೆಟ್ ಎಂದು ಲೆಕ್ಕ ಮಾಡಿ ತಿನ್ನುವವರಿಗೆ ಇದು ಸ್ಲೋ ಪಾಯ್ಸನ್. ಅಯ್ಯೋ ಮಾರ್ಕೆಟ್‌ನಲ್ಲಿ ವೆರೈಟಿ ಬಿಸ್ಕೆಟ್‌ಗಳು ಇದೆ....ರಾಗಿ ಬಿಸ್ಕೆಟ್, ಗೋದಿ ಬಿಸ್ಕೆಟ್, ಫೈಬರ್ ಹೆಚ್ಚಿರುವ ಬಿಸ್ಕೆಟ್, ಕಾರ್ಬ್ಸ್ ಕಡಿಮೆ ಇರುವ ಬಿಸ್ಕೆಟ್, ಡಯಟ್ ಬಿಸ್ಕೆಟ್ ಹೀಗೆ ಲೆಕ್ಕವಿಲ್ಲ. ಮಾರ್ಕೆಟ್‌ನಲ್ಲಿ ಬಿಸ್ಕೆಟ್‌ಗೆ ಹೆಚ್ಚು ಮಾರಾಟವಾಗಲಿ ಎಂದು ಹಿಂದೆ ಮುಂದೆ ಬೇರೆ ಹೆಸರು ಇರಬಹುದು ಆದರೆ ಬಿಸ್ಕೆಟ್ ಯಾವತ್ತಿದ್ದರೂ ಒಂದೇ ಎನ್ನುತ್ತಾರೆ ವೈದ್ಯರು.
'ಬಿಸ್ಕೆಟ್‌ನಲ್ಲಿ ಏನಿರುತ್ತದೆ? ಅಮ್ಮ ಹೊಟ್ಟೆ ಹಸಿವಾಗುತ್ತಿದೆ ಎಂದು ಮಕ್ಕಳು ಬಂದರೆ ಅವರಿಗೆ ಎರಡು ಬಿಸ್ಕೆಟ್ ಕೊಟ್ಟು ಕಳುಹಿಸುತ್ತಾರೆ. ಇದೇ ಮಕ್ಕಳಿಗೆ ಅಭ್ಯಾಸ ಆಗಿ ಬೆಳಗ್ಗೆ ಎರಡು ಬಿಸ್ಕೆಟ್ ರಾತ್ರಿ ಎರಡು ಬಿಸ್ಕಟ್ ಬೇಕು ಎನ್ನುವ ಅಭ್ಯಾಸ ಶುರುವಾಗುತ್ತದೆ. ಚಾಕೊಲೇಟ್ ಕೆಟ್ಟದು ಎಂದು ಎಲ್ಲರಿಗೂ ಗೊತ್ತಿದೆ ಆದರೆ ಬಿಸ್ಕೆಟ್ ಮಾಡಿರುವುದು ಅದಕ್ಕಿಂತ ಡೇಂಜರ್ ಇರುವ ಮೂರು ಪದಾರ್ಥಗಳಲ್ಲಿ. ಅದು ಮೈದಾ, ಸಕ್ಕರೆ ಮತ್ತು ಪಾಮ್ ಎಣ್ಣೆ, ಯಾವುದೇ ಟಾಪ್ ಕಂಪನಿ ಬಿಸ್ಕೆಟ್ ಮಾಡಿದ್ದರೂ ಈ ಮೂರು ಪದಾರ್ಥಗಳನ್ನು ಬಿಟ್ಟು ಮಾಡುವುದಿಲ್ಲ. ಸುಮಾರು 30-40 ಗ್ರಾಂ ಸಕ್ಕರೆ ಒಂದು ಪ್ಯಾಕೆಟ್ ಬಿಸ್ಕೆಟ್‌ನಲ್ಲಿ ಸಿಗುತ್ತದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಡಾ. ಭಾನುಪ್ರಕಾಶ್ ಹೆಚ್‌ಎನ್ ಮಾತನಾಡಿದ್ದಾರೆ.
ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಇರ್ಲೇಬೇಕು, ಗಂಡ ಸರಿಯಾಗಿಲ್ಲ ಅಂದ್ರೆ ಬಿಟ್ಟು ಬಾ: ನಟಿ ಜ್ಯೋತಿಕಾ ತಾಯಿ ಖಡಕ್ ಮಾತು
'ಈಗ ಮಾರುಕಟ್ಟೆಯಲ್ಲಿ ಹೆಲ್ತಿ ಬಿಸ್ಕೆಟ್ ಅಂತ ಮಾಡಿದ್ದಾರೆ, ಅದರಲ್ಲಿ ಸಣ್ಣ % ಅಷ್ಟೇ ಫೈಬರ್ ಸಿಗುತ್ತದೆ. ಬಿಸ್ಕೆಟ್ ಯಾವತ್ತಿದ್ದರೂ ಸ್ಲೋ ವಿಷ. ಯಾವ ಬಿಸ್ಕೆಟ್‌ಗಳನ್ನು ಬಳಸಬೇಡಿ. ರಾಗಿ ಬಿಸ್ಕೆಟ್‌ನಲ್ಲೂ ಮೇಲೆ ಸುಮ್ಮನೆ ರಾಗಿ ಹಾಕಿರುತ್ತಾರೆ ಆದರೆ ಅದರಲ್ಲಿ ಹೆಚ್ಚಿನ ಪ್ರಾಮಾಣ ಇರುವುದ ಮೈದಾ. ಮೈದಾ ಇಲ್ಲದೆ ಯಾವತ್ತೂ ಬಿಸ್ಕೆಟ್ ಮಾಡಲು ಆಗುವುದಿಲ್ಲ' ಎಂದು ಡಾ.ಭಾನುಪ್ರಕಾಶ್ ಹೇಳಿದ್ದಾರೆ.
ಶೂ, ಚಪ್ಪಲಿಯಿಂದ ಪಾದ ವಾಸನೆ ಬರ್ತಿದ್ಯಾ? ಟೆನ್ಶನ್ ಕಮ್ಮಿ ಮಾಡುತ್ತೆ ಈ ಟ್ರಿಕ್