Asianet Suvarna News Asianet Suvarna News

ಭಗವದ್ಗೀತೆಯಿಂದ ಡಯಾಬಿಟಿಸ್ ದೂರ: ಹಾಗಂತ ಹೇಳ್ತಿದೆ ರಿಸರ್ಚು

ನಿಮ್ಮ ಡಯಾಬಿಟಿಸ್ ದೂರ ಮಾಡಲು ಭಗವದ್ಗೀತೆ ಕೂಡ ನೆರವಾಗಬಹುದಂತೆ. ಹಾಗೆಂದು ಹೊಸ ಒಂದು ಅಧ್ಯಯನ ಹೇಳಿದೆ. ನಮ್ಮ ಆರೋಗ್ಯಕ್ಕೂ, ಆಧ್ಯಾತ್ಮಿಕತೆಗೂ, ದೇಹಕ್ಕೂ ಇರುವ ಸಂಬಂಧವನ್ನು ಈ ಅಧ್ಯಯನ ಮರಳಿ ಖಚಿತಪಡಿಸಿದೆ.

 

Bhagavad geetha will help to fight your diabetes
Author
Bengaluru, First Published Oct 17, 2020, 5:32 PM IST

ಒಸ್ಮಾನಿಯಾ ಯೂನಿವರ್ಸಿಟಿಯ ತಜ್ಞರು ಒಂದು ಹೊಸ ಅಧ್ಯಯನ ನಡೆಸಿದ್ದಾರೆ. ಅದರ ಪ್ರಕಾರ, ನೀವು ನಿಮ್ಮ ಡಯಾಬಿಟಿಸ್‌ ಅನ್ನು ನಿಮ್ಮ ಆಹಾರ ಹೇಗೋ ಹಾಗೇ ಭಗವದ್ಗೀತೆಯನ್ನು ಶ್ರದ್ಧೆಯಿಂದ ಪಠಿಸಿ ಆಚರಿಸುವ ಮೂಲಕವೂ ನಿವಾರಿಸಿಕೊಳ್ಳಬಹುದಂತೆ. 

ಒಸ್ಮಾನಿಯಾ ವಿವಿಯ ತಜ್ಞರು ಈ ಬಗ್ಗೆ ಹಲವು ಮಂದಿಯ ಮೇಲೆ ವಿವರವಾದ ರಿಸರ್ಚ್‌ ನಡೆಸಿದ್ದಾರೆ. ಭಗವದ್ಗೀತೆಯಲ್ಲಿ ಯುದ್ಧವನ್ನು ಮಾಡಲು ಹಿಂಜರಿಯುವ ಅರ್ಜುನನಿಗೆ ಶ್ರೀಕೃಷ್ಣ ಯುದ್ಧಧರ್ಮ ಹಾಗೂ ಬದುಕಿನ ಧರ್ಮವನ್ನು ಬೋಧಿಸುತ್ತಾನೆ. ಇದರಲ್ಲಿ ಏಳುನೂರು ಶ್ಲೋಕಗಳಿವೆ. ಅದರಲ್ಲಿ ಹೆಚ್ಚಿನ ಶ್ಲೋಕಗಳು ಮನುಷ್ಯನ ಮನಸ್ಸು, ದೇಹದ ಸ್ಥಿರತೆ, ಆಪತ್ತಿನಲ್ಲಿ ಆತ ಕಾಪಾಡಿಕೊಳ್ಳಬೇಕಾದ ಸಮಚಿತ್ತತೆ, ಯುದ್ಧವನ್ನು ಎದುರಿಸಲು ಬೇಕಾದ ಸಮಸ್ಥಿತಿ, ಸ್ಥಿತಪ್ರಜ್ಞತೆ, ಸುಖದುಃಖಗಳನ್ನು ಎದುರಿಸುವ ಸಮಚಿತ್ತ, ಕರ್ಮವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡಬೇಕಾದ ಅಗತ್ಯ ಇತ್ಯಾದಿಗಳ ಕುರಿತು ಮಾತಾಡುತ್ತವೆ. ಇವು, ಸರಿಯಾಗಿ ಅರಿತು ಅರ್ಥ ಮಾಡಿಕೊಂಡು ಆಚರಿಸಿದರೆ, ಮನಸ್ಸಿನ ಸಮಚಿತ್ತವನ್ನು ಕಾಪಾಡುತ್ತವೆ ಹಾಗೂ ಬ್ಲಡ್‌ಪ್ರೆಶರ್ ಅನ್ನು ಸಮತೋಲನದಲ್ಲಿ ಇಡುತ್ತವೆ. ಅದರಿಂದಾಗಿಯೇ, ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಕೂಡ ಹತೋಟಿಯಲ್ಲಿಟ್ಟು ಡಯಾಬಿಟಿಸ್  ಕೂಡ ನಿಯಂತ್ರಣದಲ್ಲಿ ಇರುವಂತೆ ಮಾಡುತ್ತವಂತೆ.

ಈ ಅಧ್ಯಯನದಲ್ಲಿ ಹೈದರಾಬಾದಿನ ಒಸ್ಮಾನಿಯಾ ಯೂನಿವರ್ಸಿಟಿ ತಜ್ಞರ ಜೊತೆಗೆ ಬಾಂಗ್ಲಾದೇಶದ ಢಾಕಾ ಮೆಡಿಕಲ್ ಕಾಲೇಜ್ ಹಾಸ್ಪಿಟಲ್, ಪಾಕಿಸ್ತಾನದ ಕರಾಚಿಯ ಆಗಾ ಖಾನ್‌ ಯೂನಿವರ್ಸಿಟಿಯ ತಜ್ಞರೂ ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ತಾನು ಡಯಾಬಿಟಿಸ್ ಕಾಯಿಲೆಯುಳ್ಳವನು ಎಂದು ಗೊತ್ತಾಗುತ್ತಿದ್ದಂತೆ ವ್ಯಕ್ತಿ ನೋವು, ಶೋಕ, ಅಸಹಾಯಕತೆ ಅನುಭವಿಸಬಹುದು. ಕುರುಕ್ಷೇತ್ರದಲ್ಲಿ ಅರ್ಜುನ ಆರಂಭದಲ್ಲಿ ನಿಸ್ಸಹಾಯಕನಾದಂತೆ ಆಗಬಹುದು. ಆಗ ಶ್ರೀಕೃಷ್ಣ ಆತನಿಗೆ ಹಲವು ಧೈರ್ಯದ ಕೌನ್ಸೆಲಿಂಗ್ ಮಾತುಗಳನ್ನು ಹೇಳುತ್ತಾನೆ. ಭಗವದ್ಗೀತೆಯ ಶ್ಲೋಕಗಳಲ್ಲಿ ವ್ಯಕ್ತಿ ಜೀವನದ ಶೋಕ ನೋವುಗಳನ್ನು ಸಮಚಿತ್ತದಿಂದ ಎದುರಿಸಬೇಕಾದ ರೀತಿಯನ್ನು ಬಗೆಬಗೆಯಲ್ಲಿ ಹೇಳಲಾಗಿದೆ.
 

Bhagavad geetha will help to fight your diabetes


ಉದಾಹರಣೆಗೆ: ಕ್ರೋಧದಿಂದ ಏನಾಗುತ್ತದೆ ಎಂಬುದನ್ನು ಶ್ರೀಕೃಷ್ಣ ಹೇಳುವುದು ಹೀಗೆ:

ಶಾಲೆಯಿಲ್ಲ, ಆಟವಿಲ್ಲ, ಮಕ್ಕಳಿಗೆ ಬೊಜ್ಜು ಬರುತ್ತಿದೆಯಲ್ಲ! 

ಕ್ರೋಧಾತ್ ಭವತಿ ಸಮ್ಮೋಹ, ಸಮ್ಮೋಹಾತ್ ಸ್ಮೃತಿಭ್ರಮಃ
ಸ್ಮೃತಿಭ್ರಂಶಾತ್ ಬುದ್ಧಿನಾಶಿ, ಬುದ್ಧಿನಾಶಾತ್ ಪ್ರಣಶ್ಯತಿ
ನಚಭಾವ ಯಥಾಶಾಂತಿರ್‌, ಶಾಂತಸ್ಯ ಕುತಃ ಸುಖಮ್

ಅಂದರೆ, ಕ್ರೋಧದಿಂದ ಸಮ್ಮೋಹ ಉಂಟಾಗುತ್ತದೆ, ಸಮ್ಮೋಹದಿಂದ ನೆನಪಿಗೆ ಮಂಕು ಕವಿಯುತ್ತದೆ. ಅದರಿಂದ ಬುದ್ಧಿ ನಾಶವಾಗಿ, ಬುದ್ಧಿ ನಾಶದಿಂದ ಮನುಷ್ಯ ವಿನಾಶ ಹೊಂದುತ್ತಾನೆ. ಭಾವೋದ್ರೇಕ ಮಾಡಿಕೊಳ್ಳದವನು ಶಾಂತಿಯುತವಾಗಿರುತ್ತಾನೆ ಹಾಗೂ ಸುಖವನ್ನು ಹೊಂದುತ್ತಾನೆ. 

ಪ್ರಾಣಿಗಳ ಈ ಅಭ್ಯಾಸ ಫಾಲೋ ಮಾಡಿದ್ರೆ ಆಯಸ್ಸು ಗಟ್ಟಿಯಾಗುತ್ತಂತೆ! 
ಮನುಷ್ಯನನ್ನು ಅತ್ಯಂತ ಅನಿಶ್ಚಯ, ಅನಿಶ್ಚಿತತೆಯಲ್ಲಿ ಕೆಡವುತ್ತದೆ ಅನಾರೋಗ್ಯ. ಡಯಾಬಿಟಿಸ್‌ನಲ್ಲಿ ಇದ್ದಾಗಲಂತೂ ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲವಾಗುತ್ತದೆ. ಇಂದು ಒಂದೇ ಒಂದು ದಿನ ಸ್ವೀಟ್‌ ತಿನ್ನೋಣ, ನಾಳೆ ಸ್ವಲ್ಪ ಹೆಚ್ಚು  ವ್ಯಾಯಾಮ ಮಾಡಿದರಾಯ್ತು ಎಂದು ಮನಸ್ಸು ನಿಮ್ಮನ್ನು ಮಂಗ ಮಾಡಲು ನೋಡುತ್ತದೆ. ಆದರೆ ಅಂಥ ಆಸೆಗಳಿಗೂ ಅನಿಶ್ಚಯಗಳಿಗೂ ಬಲಿ ಬೀಳಬಾರದು ಎಂದು ಗೀತೆ ಹೇಳುತ್ತದೆ:
ಅಜ್ಞಃ ಚ ಅಶ್ರದ್ದಧಾನಃ ಚ  ಸಂಶಯಾತ್ಮಾ ವಿನಶ್ಯತಿ,
ನಾಯಂ ಲೋಕಾಸ್ತಿ ನ ಪರೋ, ನ ಸುಖಂ ಸಂಶಯಾತ್ಮನಃ

ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ. ಜ್ಞಾನ ಮತ್ತು ಶ್ರದ್ಧೆ ಇಲ್ಲದಾಗ ಅಲ್ಲಿಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ.  ಬುದ್ಧಿಗೆ ಬಂದಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಅಂತವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿ ಇಲ್ಲ. ಆರೋಗ್ಯವೇ ಮುಖ್ಯವೆಂದು ಭಾವಿಸಿದವನು, ಇಂಥ ಲೋಭಗಳನ್ನು ಮೆಟ್ಟಿನಿಂತು ಅವುಗಳನ್ನು ಗೆಲ್ಲುತ್ತಾನೆ. ಅನುಮಾನವಿಲ್ಲದೆ ಆರೋಗ್ಯ ಕಾಪಾಡಿಕೊಳ್ಳುತ್ತಾನೆ.

ಹೈಪರ್ ಟೆನ್ಶನ್‌: ಬಿಪಿ ನಿಯಂತ್ರಿಸೋಕೆ ಬೆಳ್ಳುಳ್ಳಿ ಏಕೆ ತಿನ್ಬೇಕು..? 

Follow Us:
Download App:
  • android
  • ios