Asianet Suvarna News Asianet Suvarna News

Health Tips: ಇನ್ನೊಬ್ಬರ ಮೇಲೆ ರೇಗುವ ಮುನ್ನ ನಿದ್ರೆ ಸರಿ ಮಾಡಿದ್ದೀರಾ ಯೋಚಿಸಿ..

ನಿದ್ರೆ ಸರಿಯಾಗಿ ಆಗಿಲ್ಲವೆಂದರೆ ಕಂಡವರ ಮೇಲೆಲ್ಲ ರೇಗುವಂತಾಗುತ್ತದೆ. ಮನೆಯವರು, ಮಕ್ಕಳ ಮಾತುಗಳೆಲ್ಲ ಕಿರಿಕಿರಿ ಎನಿಸಲು ಶುರುವಾಗುತ್ತದೆ. ದಿನವೂ ಹೀಗಾದರೆ ಹೇಗೆ? ನಿದ್ರಾಹೀನತೆಯ ಸಮಸ್ಯೆ ತೀವ್ರವಾಗುವ ಮುನ್ನ ನಿದ್ರೆ ಮಾಡುವುದನ್ನು ಕಲಿತುಕೊಳ್ಳಿ.

better sleep can make you happy
Author
Bangalore, First Published Dec 25, 2021, 5:46 PM IST

ಏನು ಮಾಡಿದರೂ ನಿದ್ರೆ (Sleep) ಬರೋದಿಲ್ಲ, ರಾತ್ರಿ (Night) ಎರಡು ಗಂಟೆಯಾದರೂ ನಿದ್ರೆ ಹತ್ತೋದಿಲ್ಲ, ಬೆಳಗ್ಗೆ (Morning) ಎಂದಿನಂತೆ ಆರಕ್ಕೆಲ್ಲ ಏಳಬೇಕು ಏನು ಮಾಡಲಿ? ಎನ್ನುವ ದೂರು ಅನೇಕರದ್ದು. ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲವಾದರೆ ಮಾರನೆಯ ದಿನ ಅದೇನೋ ಹಿಂಸೆ. ದಿನವೂ ಹೀಗೆಯೇ ಆದರೆ..ಬದುಕೇ ಸಾಕಪ್ಪಾ ಎನಿಸುವುದರಲ್ಲಿ ಅಚ್ಚರಿಯಿಲ್ಲ. 
ಹಲವಾರು ಅಧ್ಯಯನಗಳ (Study) ಪ್ರಕಾರ, ನಿದ್ರಾಹೀನತೆಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣವನ್ನಾಗಿ ಮೊಬೈಲ್ (Mobile) ಅಥವಾ ಸ್ಕ್ರೀನ್ ಅಡಿಕ್ಷನ್ (Screen Addiction) ಎಂದು ಗುರುತಿಸಲಾಗಿದೆ. ನೀವೇ ಒಮ್ಮೆ ಯೋಚನೆ ಮಾಡಿ. ರಾತ್ರಿ ಹಾಸಿಗೆಗೆ ಹೋದ ಬಳಿಕವೂ ಮೊಬೈಲ್ ನೋಡುವುದು, ಐದು ನಿಮಿಷ ಮಲಗಿದಂತೆ ಮಾಡಿ ನಿದ್ರೆ ಬರುತ್ತಿಲ್ಲವೆನ್ನಿಸಿದರೆ ಮತ್ತೆ ಮೊಬೈಲ್ ಹಿಡಿದುಕೊಳ್ಳುತ್ತೇವಲ್ಲವೇ?  

ನಿದ್ರಾಹೀನತೆ(Sleep Disorder) ಯಿಂದ ವ್ಯಕ್ತಿಯ ಸಾಮರ್ಥ್ಯ ಕುಂಠಿತವಾಗುತ್ತದೆ. ವರ್ತನೆ (Behaviour) ಮೇಲೆ ಪರಿಣಾಮವುಂಟಾಗುತ್ತದೆ. ರೋಗ ನಿರೋಧಕ ಶಕ್ತಿ (Immunity) ಕುಸಿಯುತ್ತದೆ. ಇಷ್ಟೆಲ್ಲ ತೀವ್ರ ಪರಿಣಾಮಗಳು ಸಂಭವಿಸುವ ತನಕ ಕಾಯದೇ, ಆರಂಭದಲ್ಲಿಯೇ ಪರಿಹಾರ (Remedy) ಕಂಡುಕೊಳ್ಳಲು ಯತ್ನಿಸಬೇಕು. 

•    ರಾತ್ರಿ ಎಂಟೂವರೆ ಒಳಗೆ ಊಟ (Dinner) ಮಾಡಬೇಕು. ತಡವಾಗಿ ಊಟ ಮಾಡುವುದರಿಂದ ತಿಂದಿದ್ದು ಜೀರ್ಣವಾಗುವುದಿಲ್ಲ. ಇದರಿಂದ ನಿದ್ರೆ ಬೇಗ ಬರುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಬೇಗ ಊಟ ಮಾಡುವುದು ಉತ್ತಮ. ಸಂಜೆ ಏಳು ಗಂಟೆಯ ಹೊತ್ತಿಗೆ ಗಡದ್ದಾಗಿ ಏನಾದರೂ ತಿಂಡಿ ತಿನ್ನುವ ಬದಲು ಬೇಗ ಊಟ ಮಾಡುವುದು ಒಳಿತು. 

Health Tips: ಚಳಿಗಾಲದ ಕಿರಿಕಿರಿ ಬೇಡವಾದ್ರೆ ಹೀಗ್ಮಾಡಿ

•    ಮಲಗುವ ಮುನ್ನ ಸ್ವಲ್ಪ ಸಮಯ ಧ್ಯಾನ (Meditation) ಮಾಡಬೇಕು. ಧ್ಯಾನದಿಂದ ದೇಹ-ಮನಸ್ಸು ರಿಲ್ಯಾಕ್ಸ್ (Relax) ಆಗುತ್ತವೆ. ಒತ್ತಡ (Tension) ನಿವಾರಣೆಯಾಗುತ್ತದೆ. ಅನುಲೋಮ-ವಿಲೋಮ ಪ್ರಾಣಾಯಾಮ (Pranayama) ಮಾಡುವುದು ಸಹ ಉತ್ತಮ. ಶಾಂತವಾದ ಉಸಿರಾಟದಿಂದ ಮನಸ್ಸು ಸಮಸ್ಥಿತಿಗೆ ಬರುತ್ತದೆ. 

•    ಹಾಸಿಗೆ(Bed) ಗೆ ಹೋಗುವ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಸಮಸ್ಯೆಗಳ (Problems) ಬಗ್ಗೆ ಚಿಂತಿಸುವುದು ಬೇಡ. ಸಮಸ್ಯೆಗಳು ಎಲ್ಲರಿಗೂ ಇದ್ದೇ ಇರುತ್ತವೆ. ಆದರೆ, ಅವುಗಳಿಂದಾಗಿ ನಿದ್ರೆ ಹಾಳು ಮಾಡಿಕೊಂಡು ಆರೋಗ್ಯ ಕೆಡಿಸಿಕೊಳ್ಳುವುದರಲ್ಲಿ ಯಾವ ಅರ್ಥವಿದೆ? ನೀವೇ ಯೋಚಿಸಿ. 

Hiccups Problem: ನಾಲಗೆಯನ್ನು ಹೊರ ಹಾಕಿದ್ರೆ ಬಿಕ್ಕಳಿಕೆ ನಿಲ್ಲುತ್ತೆ..!

•    ಸಂಗಾತಿ (Partner) ಜತೆಗೆ ಯಾವುದೇ ವಾಗ್ಯುದ್ಧ ಬೇಡ. ಅದರಿಂದ ಕಿರಿಕಿರಿ (Irritation) ಇನ್ನಷ್ಟು ಹೆಚ್ಚಾಗಬಹುದೇ ಹೊರತು ಸಮಸ್ಯೆ ಪರಿಹಾರವಾಗದು. ಸಾಧ್ಯವಾದರೆ ಮಕ್ಕಳೊಂದಿಗೆ ಆಟವಾಡುವುದು ಉತ್ತಮ. ಮಕ್ಕಳೊಂದಿಗೆ ಮಕ್ಕಳಾಗಿ ನಲಿಯಬೇಕು. ಒತ್ತಡ ನಿವಾರಣೆಗೆ ಇದು ಉತ್ತಮ ಅಭ್ಯಾಸ. ಒಬ್ಬರೇ ಇರುವವರು ನೀವಾಗಿದ್ದರೆ ಮೊಬೈಲ್ ಒಂದೇ ಸಮಯ ಕಳೆಯುವ ಸಾಧನವನ್ನಾಗಿ ಮಾಡಿಕೊಳ್ಳಬೇಡಿ. 

•    ಕೃತಜ್ಞತಾ (Gratitude) ಭಾವನೆಯನ್ನು ಜಾಗೃತ ಮಾಡಿಕೊಳ್ಳಬೇಕು. ರಾತ್ರಿ ಮಲಗುವ ಮುನ್ನ ಧನ್ಯವಾದ ಅರ್ಪಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಕೃತಜ್ಞತೆ ಅರ್ಪಿಸುವುದರಿಂದ ಕ್ರಮೇಣ ಮನಸ್ಸಿನ ಭಾರ ಕಡಿಮೆ ಆಗುವುದು ನಿಮ್ಮ ಅರಿವಿಗೇ ಬರುತ್ತದೆ. ಇದರಿಂದ ಮನುಷ್ಯನ ಈಗೋ ಕಡಿಮೆಯಾಗುತ್ತದೆ ಎನ್ನುವುದನ್ನು ಈಗಾಗಲೇ ಅಧ್ಯಯನಗಳು ಪುರಸ್ಕರಿಸಿವೆ. ಈಗೋದಿಂದ ಮನಸ್ಸಿನ ಕುದಿಯುವಿಕೆ ಹೆಚ್ಚು. ಈಗೋ ತುಂಬಿದ್ದರೆ ಇತರರ ಬಗ್ಗೆ ಒಳ್ಳೆಯ ಭಾವನೆಗಳು ಕಡಿಮೆಯಾಗಿರುತ್ತವೆ ಎನ್ನಲಾಗುತ್ತದೆ. ಅದನ್ನು ಕಡಿಮೆಗೊಳಿಸಲು ಕೃತಜ್ಞತೆಯೇ ಮದ್ದು. ಆಗ ಭಾವಕೋಶ ಜಾಗೃತವಾಗುತ್ತದೆ. 

•    ಪ್ರತಿದಿನ ನಿಗದಿತ ದೈಹಿಕ ಚಟುವಟಿಕೆ(Exersice) ಯಲ್ಲಿ ಪಾಲ್ಗೊಳ್ಳಬೇಕು. ವ್ಯಾಯಾಮದಿಂದ ದೇಹ ಹಾಗೂ ಮನಸ್ಸಿಗೆ ಆಗುವ ಲಾಭಗಳ ಬಗ್ಗೆ ನಿಮಗೆ ಗೊತ್ತೇ ಇದೆ. ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಸಂಜೆಯಲ್ಲಾದರೂ ಮಾಡಬಹುದು. ಒತ್ತಡ ನಿವಾರಣೆಗೆ ವ್ಯಾಯಾಮ ಉತ್ತಮ ಮಾರ್ಗ.

•    ರಾತ್ರಿ ಹತ್ತರ ಬಳಿಕ ಮೊಬೈಲ್ ಅನ್ನು ದೂರವಿಡಿ. ಸುಮ್ಮನೆ ವಿಡಿಯೋ, ಫೇಸ್ ಬುಕ್ ನೋಡುವುದು, ಚಾಟ್ ಮಾಡುವುದನ್ನು ಮಾಡುತ್ತಿರಬೇಡಿ. ಅನಿವಾರ್ಯ ಕಾರ್ಯಗಳ ಹೊರತಾಗಿ ಮೊಬೈಲ್ ಬಳಸಬೇಡಿ. ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಆಸೆಯಿದ್ದರೆ ಮೊಬೈಲ್ ನಲ್ಲಿ ಸಮಯ ಕಳೆಯುವುದನ್ನು ಬಿಟ್ಟುಬಿಡಬೇಕು. ಮಲಗುವ ಸಮಯದಲ್ಲಿ ಹಾಸಿಗೆ ಬಳಿ ಅಥವಾ ಕೈಗೆಟುಕುವಂತೆ ಮೊಬೈಲ್ ಅನ್ನು ಇರಿಸಿಕೊಳ್ಳಬೇಡಿ. 

Follow Us:
Download App:
  • android
  • ios