Good Health : ಪದೇ ಪದೇ ಆರೋಗ್ಯ ಕೆಡ್ತಿದೆ ಅಂದ್ರೆ ಮಾಡಿ ಈ ಆಸನ

Yogasa Tips for better health:

ಯೋಗಾಸನದ ನಿರಂತರ ಅಭ್ಯಾಸ ರೋಗದಿಂದ ನಮ್ಮ ದೇಹವನ್ನು ದೂರವಿಡುತ್ತದೆ. ಯೋಗಾಸನದಿಂದ ಅನೇಕ ಪ್ರಯೋಜನಗಳಿವೆ. ಸರಿಯಾದ ಕ್ರಮದಲ್ಲಿ ಯೋಗ ಮಾಡುವುದು ಕೂಡ ಬಹಳ ಮುಖ್ಯ. ನಿಯಮಿತವಾಗಿ ಕೆಲ ಯೋಗಾಸನ ಮಾಡಿದ್ರೆ ಹತ್ತಿರ ಸುಳಿಯಲ್ಲ ಖಾಯಿಲೆ.
 

Best Yoga For Overall Health

ವಾರದಲ್ಲಿ ಒಂದು ದಿನವೂ ಹುಷಾರಾಗಿದ್ದೇನೆ ಎಂದಿದ್ದಿಲ್ಲ. ಸಣ್ಣಪುಟ್ಟ ಕಿರಿಕಿರಿ ತಪ್ಪೋದೇ ಇಲ್ಲ. ಒಂದು ದಿನ ನೆಗಡಿ (Cold)ಯಾದ್ರೆ ಮತ್ತೊಂದು ದಿನ ಕೆಮ್ಮು (Cough). ಸಾಕಾಗಿ ಹೋಗಿದೆ ಜೀವನ ಎನ್ನುವವರಿದ್ದಾರೆ. ಆಗಾಗ್ಗ ಅನಾರೋಗ್ಯ (Illness) ಕ್ಕೊಳಗಾಗುವುದು ಅವರಿಗೆ ರೂಢಿಯಾಗಿರುತ್ತದೆ. ಬದಲಾಗುತ್ತಿರುವ ಹವಾಮಾನ, ಸುಡುವ ಬಿಸಿಲು, ವಿಪರೀತ ಮಳೆ, ಸಣ್ಣದೊಂದು ಪ್ರತಿಕೂಲ ಪರಿಸ್ಥಿತಿಗಳು ಶೀತ,ಜ್ವರದಂತಹ ಸೋಂಕಿಗೆ ಕಾರಣವಾಗುತ್ತದೆ. ಆರೋಗ್ಯ (Health) ತಜ್ಞರ ಪ್ರಕಾರ, ಪದೇ ಪದೇ ಹಾಸಿಗೆ ಹಿಡಿಯಲು ಮುಖ್ಯ ಕಾರಣ ನಿಮ್ಮ ದುರ್ಬಲ ರೋಗನಿರೋಧಕ ಶಕ್ತಿ (Immunity) . ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುವ ಅಪಾಯ ಹೆಚ್ಚಿರುತ್ತದೆ. ಈ ಕೊರೊನಾ (Corona) ಸಮಯದಲ್ಲಿ ರೋಗನಿರೋಧಕ ಶಕ್ತಿ ಎಷ್ಟು ಮುಖ್ಯ ಎಂಬುದನ್ನು ನಾವೆಲ್ಲರೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯು ಕೊರೊನಾ ಮಾತ್ರವಲ್ಲದೆ ನಿಮ್ಮಲ್ಲಿ ಇತರ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಎಲ್ಲಾ ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡ್ಬೇಕು. 

ನಿಯಮಿತ ವ್ಯಾಯಾಮ (Exercise)ದ ಜೊತೆಗೆ ದೈನಂದಿನ ಜೀವನದಲ್ಲಿ ಪೌಷ್ಠಿಕಾಂಶದ ಆಹಾರ (Food) ವನ್ನು ಸೇವಿಸುವುದ್ರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಎಂದು ಅಧ್ಯಯನಗಳು ಹೇಳಿವೆ. ರೋಗದಿಂದ ದೇಹವನ್ನು ದೂರವಿಡಲು ಅನೇಕ ಯೋಗಾಸನಗಳು ಸಹ ನಿಮಗೆ ಸಹಾಯ ಮಾಡುತ್ತವೆ. ಪ್ರತಿ ನಿತ್ಯ ಯೋಗಾಸನಗಳನ್ನು ಮಾಡ್ಬೇಕಾಗುತ್ತದೆ. ಯೋಗಾಸನಗಳು ದೇಹದ ಚಟುವಟಿಕೆ ಮತ್ತು ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ನಿಮಗೂ ರೋಗ ನಿರೋಧಕ ಶಕ್ತಿ ಕಡಿಮೆಯಿದೆ ಎಂದಾದ್ರೆ ಇಂದಿನಿಂದಲೇ ಕೆಲ ಯೋಗಗಳ ಅಭ್ಯಾಸ ಶುರು ಮಾಡಿ. ಸೂಕ್ತ ತರಬೇತುದಾರರ ಸಹಾಯದ ಮೂಲಕ ಅಭ್ಯಾಸ ಮಾಡಿ. ಇಂದು ದೇಹವನ್ನು ಆರೋಗ್ಯವಾಗಿಡಲು ಸಹಕಾರಿಯಾಗುವ ಯೋಗಾಸನಗಳ ಬಗ್ಗೆ ತಿಳಿಯೋಣ.

ರೋಗದಿಂದ ದೂರವಿಡುತ್ತೆ ಈ ಯೋಗಾಸನ : 

ಬಾಲಾಸನ :  ಬಾಲಾಸನ ಯೋಗ ಮಾಡುವುದು ಸುಲಭ. ಬಾಲಾಸನ ಯೋಗವನ್ನು ವಿಶ್ರಾಂತಿ ಭಂಗಿ ಎಂದು ಪರಿಗಣಿಸಲಾಗುತ್ತದೆ. ಇದು ದೇಹಕ್ಕೆ ಅನೇಕ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಕೆಳಗಿನ ಬೆನ್ನಿನಿಂದ ಉದ್ವೇಗವನ್ನು ಬಿಡುಗಡೆ ಮಾಡುವುದರ ಜೊತೆಗೆ, ಈ ವ್ಯಾಯಾಮವು ಆಯಾಸವನ್ನು ನಿವಾರಿಸಲು ಸಹಕಾರಿಯಾಗಿದೆ. ನಮ್ಮ ಮನಸ್ಥಿತಿಯನ್ನು ಸರಿಯಾಗಿ ಇರಿಸಿಕೊಳ್ಳಲು ಮತ್ತು ಮನಸ್ಸನ್ನು ಜಾಗರೂಕವಾಗಿರಿಸಲು ಬಾಲಾಸನವು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದರ ಅಭ್ಯಾಸವು ನಿಮಗೆ ತುಂಬಾ ಸಹಾಯಕವಾಗಬಹುದು. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವವರು ಈ ಯೋಗದಿಂದ ಸಾಕಷ್ಟು ಲಾಭ ಪಡೆಯಬಹುದು.

CHILDREN HEALTH TIPS: ಮಕ್ಕಳಲ್ಲಿ ಕಾಡುವ ವಾಂತಿ ಸಮಸ್ಯೆ ನಿವಾರಣೆಗೆ ತ್ವರಿತ ಟಿಪ್ಸ್ ಇಲ್ಲಿದೆ

ಭುಜಂಗಾಸನ : ಭುಜಂಗಾಸನ ಯೋಗವು ಅನೇಕ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಬೆನ್ನು ಮತ್ತು ಸೊಂಟದ ಸಮಸ್ಯೆಗಳನ್ನು ಹೋಗಲಾಡಿಸಲು ಇದು ಸಹಕಾರಿ. ದೇಹದ ಇತರ ಭಾಗಗಳಿಗೆ ಉತ್ತೇಜನ ನೀಡಿ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇದ್ರ ಪಾತ್ರ ದೊಡ್ಡದಿದೆ. ಶ್ವಾಸಕೋಶದ ಆರೋಗ್ಯ ವೃದ್ಧಿಸುವ ಜೊತೆಗೆ ನಿಮ್ಮ ಬೆನ್ನುಮೂಳೆಯನ್ನು ಬಲಪಡಿಸುವಲ್ಲಿ ಮತ್ತು ಶಕ್ತಿಯನ್ನು ಉತ್ತೇಜಿಸುವ ಕೆಲಸವನ್ನು ಇದು ಮಾಡುತ್ತದೆ. ಯಕೃತ್ತು ಮತ್ತು ಹೊಟ್ಟೆ ಮತ್ತು ಇತರ ಅಂಗಗಳನ್ನು ಆರೋಗ್ಯಕರವಾಗಿರಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಇದರ ಅಭ್ಯಾಸವು ನಿಮಗೆ ಪ್ರಯೋಜನಕಾರಿ.

ಕೊರೋನಾ ವೈರಸ್ Vs ಕಾಲ ಬದಲಾವಣೆಯ ಅಲರ್ಜಿ: ನೀವು ಯಾವಾಗ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಬೇಕು ?

ವೀರಭದ್ರಾಸನ : ವೀರಭದ್ರಾಸನವನ್ನು ಪ್ರತಿದಿನ ಅಭ್ಯಾಸ ಮಾಡಬೇಕು. ಇದು ಸ್ವಲ್ಪ ಕಷ್ಟಕರವಾದ ಆಸನವಾಗಿದೆ. ಆದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ. ವೀರಭದ್ರಾಸನದಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಸ್ನಾಯುಗಳು ಬಲ ಪಡೆಯುತ್ತವೆ. ವೀರಭದ್ರಾಸನ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ.

Latest Videos
Follow Us:
Download App:
  • android
  • ios