ಪ್ರತಿಯೊಂದು ಆಹಾರ ಸೇವನೆಗೂ ವಿಧಾನವಿದೆ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ಆಹಾರ ಸೇವನೆ ಮಾಡಿದ್ರೆ ಅದ್ರ ಪೋಷಕಾಂಶ ನಮ್ಮ ದೇಹ ಸೇರುವ ಬದಲು ಸಮಸ್ಯೆತರುತ್ತದೆ. ಇದಕ್ಕೆ ಹಾಲು ಕೂಡ ಉತ್ತಮ ನಿದರ್ಶನ. ಹಾಲನ್ನು ಕುಡಿಯುವ ಮೊದಲು ಅದನ್ನು ಹೇಗೆ ಕುಡಿಯಬೇಕು ಎಂಬ ವಿಧಾನ ತಿಳಿದಿರಬೇಕು.
ಚಿಕ್ಕ ಮಕ್ಕಳಿಗೆ (Children)ಗೆ ಹಾಲು (Milk) ಕುಡಿಯುವಂತೆ ನಾವು ಸದಾ ಹೇಳ್ತಿರುತ್ತೇವೆ. ದಿನ (Day)ಕ್ಕೆ ಎರಡು ಬಾರಿ ಹಾಲು ಕುಡಿಯಬೇಕೆಂದು ಸಲಹೆ ನೀಡುತ್ತಿರುತ್ತೇವೆ. ಚಿಕ್ಕ ಮಕ್ಕಳು ಮಾತ್ರವಲ್ಲ ವಯಸ್ಸಾದವರು ಕೂಡ ಪ್ರತಿದಿನ ಹಾಲು ಕುಡಿಯಬೇಕು. ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಹಾಲಿನಲ್ಲಿ ಪೊಟ್ಯಾಶಿಯಂ ಇದ್ದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹಾಲಿನಲ್ಲಿರುವ ವಿಟಮಿನ್ ಡಿ ಅಸ್ವಾಭಾವಿಕ ಜೀವಕೋಶದ ಬೆಳವಣಿಗೆಯನ್ನು ತಡೆಯುತ್ತದೆ. ಇದರಿಂದಾಗಿ ಕ್ಯಾನ್ಸರ್ (Cancer) ಅಪಾಯ ಕಡಿಮೆಯಾಗುತ್ತದೆ. ಹಾಲು ಕುಡಿಯುವುದರಿಂದ ಸಿರೊಟೋನಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ, ಇದು ಸಂತೋಷಕ್ಕೆ ಸಂಬಂಧಿಸಿದ ಹಾರ್ಮೋನ್ ಹೆಚ್ಚಿಸಿ, ಒತ್ತಡವನ್ನು (Stress) ಕಡಿಮೆ ಮಾಡುತ್ತದೆ. ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಸ್ವಾಭಾವಿಕ ಕೊಬ್ಬು ಸಿಗುತ್ತದೆ. ಹಾಲಿನಿಂದ ಇಷ್ಟೆಲ್ಲ ಪ್ರಯೋಜನವಿದೆ ನಿಜ. ಆದ್ರೆ ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ವಿಧಾನದಲ್ಲಿ ಹಾಲು ಸೇವನೆ ಮಾಡದೆ ಹೋದ್ರೆ ಈ ಪ್ರಯೋಜನಗಳು ನಮ್ಮ ದೇಹಕ್ಕೆ ಸಿಗುವುದಿಲ್ಲ. ಇಂದು ಹಾಲನ್ನು ಯಾವ ಸಮಯದಲ್ಲಿ ಕುಡಿಯಬೇಕು ಹಾಗೂ ಹೇಗೆ ಕುಡಿಯಬೇಕು ಎಂಬುದನ್ನು ಹೇಳ್ತೇವೆ.
ಹಾಲು ಕುಡಿಯುವ ವಿಧಾನ : ಹಾಲಿನ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಬಯಸಿದರೆ, ನೀವು ಅದನ್ನು ಸೇವಿಸುವ ಸರಿಯಾದ ಸಮಯ ಮತ್ತು ವಿಧಾನವನ್ನು ತಿಳಿದುಕೊಳ್ಳಬೇಕು.
ಆಯುರ್ವೇದದ ಪ್ರಕಾರ, ಸಿಟ್ರಸ್ ಹಣ್ಣುಗಳೊಂದಿಗೆ ಹಾಲನ್ನು ಎಂದಿಗೂ ಸೇವಿಸಬಾರದು. ಇದೇ ಕಾರಣಕ್ಕೆ ಆಯುರ್ವೇದದಲ್ಲಿ ಮಿಲ್ಕ್ ಶೇಕ್ ಕುಡಿಯಬಾರದು ಎನ್ನಲಾಗುತ್ತದೆ. ಆಯುರ್ವೇದದ ಪ್ರಕಾರ, ಹಾಲು ಅಥವಾ ಮೊಸರನ್ನು ಮಾವಿನ ಹಣ್ಣುಗಳು, ಬಾಳೆಹಣ್ಣುಗಳು, ಕಲ್ಲಂಗಡಿಗಳು ಮತ್ತು ಇತರ ಸಿಟ್ರಸ್ ಹಣ್ಣುಗಳೊಂದಿಗೆ ಸೇವಿಸಬಾರದು. ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸಬಾರದು. ಬಾಳೆಹಣ್ಣನ್ನು ಹಾಲಿನೊಂದಿಗೆ ಬೆರೆಸಿದಾಗ, ಗ್ಯಾಸ್ಟ್ರಿಕ್ ಆಮ್ಲವು ಅದರಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದು ಕರುಳಿಗೆ ಹೋಗುವ ಮೂಲಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸುವುದರಿಂದ ನೆಗಡಿ, ಕೆಮ್ಮು, ಅಲರ್ಜಿ ಬರುವ ಸಾಧ್ಯತೆ ಇರುತ್ತದೆ.
HEALTH TIPS : ಮಧ್ಯಾಹ್ನದ ಊಟಕ್ಕೆ ಅಪ್ಪಿತಪ್ಪಿಯೂ ಈ ಆಹಾರ ಸೇವಿಸ್ಬೇಡಿ
ಹಾಲು ಕುಡಿಯುವ ಸರಿಯಾದ ಸಮಯ : ಬೇರೆ ಬೇರೆ ಪ್ರಯೋಜನಕ್ಕಾಗಿ ಹಾಲನ್ನು ಬೇರೆ ಬೇರೆ ಸಮಯದಲ್ಲಿ ಸೇವನೆ ಮಾಡಬೇಕಾಗುತ್ತದೆ. ಆಯುರ್ವೇದದ ಪ್ರಕಾರ, ಸ್ನಾಯುಗಳನ್ನು ಬಲಪಡಿಸಲು ಬಯಸಿದರೆ ಬೆಳಿಗ್ಗೆ ಹಾಲನ್ನು ಕುಡಿಯಬೇಕು. ಉತ್ತಮ ನಿದ್ರೆ ಬೇಕೆನ್ನುವವರು ರಾತ್ರಿ ಮಲಗುವ ಮೊದಲು ಹಾಲನ್ನು ಕುಡಿಯಬೇಕು. ಹಾಲಿಗೆ ಅಶ್ವಗಂಧವನ್ನು ಬೆರೆಸಿ ಸೇವಿಸಿದ್ರೆ ಉತ್ತಮ ನಿದ್ರೆ ಬರುತ್ತದೆ. ಆಯುರ್ವೇದದ ಪ್ರಕಾರ, ಇದು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಒಳ್ಳೆಯದು.
ರಾತ್ರಿಯ ಊಟದ ನಂತರ ಮತ್ತು ಮಲಗುವ ಅರ್ಧ ಗಂಟೆ ಮೊದಲು ಹಾಲು ಕುಡಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ. ಇದರಿಂದ ದೇಹವು ಆರೋಗ್ಯಕರವಾಗಿರುತ್ತದೆ.
ಹಾಲು ಕುಡಿಯಲು ಇಷ್ಟಪಡದ ಜನರು ಬೆಳಿಗ್ಗೆ ಹಾಲು ಕುಡಿಯಬಾರದು. ಬೆಳಿಗ್ಗೆ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ. ದಿನವಿಡೀ ಆಲಸ್ಯ ನಿಮ್ಮನ್ನು ಕಾಡುತ್ತದೆ. ಹಾಗೆ ಐದು ವರ್ಷ ಮೇಲ್ಪಟ್ಟವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲನ್ನು ಕುಡಿಯಬಾರದು. ಇದು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ.
Health Tips: ಟೈಪ್-2 ಡಯಾಬಿಟಿಸ್‌ಗೆ ಬೆಸ್ಟ್ ಫುಡ್
ಯಾವ ಭಂಗಿಯಲ್ಲಿ ಹಾಲು ಕುಡಿಯಬೇಕು? : ಸಾಮಾನ್ಯವಾಗಿ ನೀರನ್ನು ಕುಳಿತು ಕುಡಿಯಬೇಕು ಎನ್ನುತ್ತಾರೆ. ಹಾಗೆಯೇ ನಾವು ಹಾಲನ್ನು ಆರಾಮವಾಗಿ ಕುಳಿತು ಕುಡಿಯುತ್ತೇವೆ. ಆದ್ರೆ ವೈದ್ಯರು ಹಾಲನ್ನು ಕುಳಿತು ಕುಡಿಯಬಾರದು ಎನ್ನುತ್ತಾರೆ. ಕುಳಿತು ಕುಡಿದಾಗ ಹಾಲು ದೇಹದ ಅರ್ಧಭಾಗಕ್ಕೆ ಮಾತ್ರ ಹೋಗುತ್ತದೆ. ನಾವು ಕುಳಿತುಕೊಂಡಾಗ ನಮ್ಮ ಭಂಗಿ ಸ್ಪೀಡ್ ಬ್ರೇಕರ್ ಆಗಿ ಕೆಲಸ ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ ನಾವು ನಿಂತುಕೊಂಡು ಹಾಲು ಕುಡಿಯಬೇಕು. ಆಗ ಹಾಲು ನೇರವಾಗಿ ಇಡೀ ದೇಹವನ್ನು ತಲುಪುತ್ತದೆ. ಇದ್ರಿಂದ ದೇಹದ ಎಲ್ಲ ಭಾಗಕ್ಕೆ ಪೋಷಕಾಂಶ ತಲುಪುತ್ತದೆ.
ಹಾಲನ್ನು ಕುಳಿತು ಕುಡಿಯುವುದ್ರಿಂದ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಸಿಂಡ್ರೋಮ್ ಕಾಡಬಹುದು. ಒಂದು ವೇಳೆ ಕುಳಿತು ಹಾಲು ಕುಡಿಯುವುದು ಅನಿವಾರ್ಯವಾದರೆ ಪೂರ್ತಿ ಹಾಲನ್ನು ಒಟ್ಟಿಗೆ ಸೇವನೆ ಮಾಡಬೇಡಿ. ನಿಧಾನವಾಗಿ ಹಾಲು ದೇಹ ಸೇರುವಂತೆ ನೋಡಿಕೊಳ್ಳಿ. ನಿಮ್ಮ ಹೊಟ್ಟೆಯು ಸ್ಥಿರವಾದ ಸಾಮರ್ಥ್ಯವನ್ನು ಹೊಂದಿದೆ. ಇದು ಒಂದು ಬಾರಿಗೆ 900 ರಿಂದ 1500 ಮಿಲಿಲೀಟರ್ಗಳನ್ನು ಮಾತ್ರ ಹಿಡಿದಿಟ್ಟುಕೊಳ್ಳುತ್ತದೆ. ಕಾಲು ಲೀಟರ್ ಹಾಲು ಕುಡಿದಾಗ,ನಮ್ಮ ಹೊಟ್ಟೆಯ ಹೆಚ್ಚಿನ ಭಾಗವು ಇದ್ದಕ್ಕಿದ್ದಂತೆ ತುಂಬುತ್ತದೆ. ಇದು ಸಮಸ್ಯೆಗೆ ಕಾರಣವಾಗುತ್ತದೆ.
