Mental Health: ಕೆಲ್ಸ ಹೇಗಿದೆ ಅಂದ್ರೆ ಸ್ಟ್ರೆಸ್ ಅಂತ ಹೇಳೋದು ಬಿಟ್ಬಿಡಿ!

ಪ್ರತಿಯೊಂದು ಕೆಲಸವನ್ನೂ ಪ್ರೀತಿಯಿಂದ ಮಾಡ್ಬೇಕು. ಆಗ್ಲೇ ಕೆಲಸ ಅಚ್ಚುಕಟ್ಟಾಗುವ ಜೊತೆಗೆ ನಮಗೂ ಸಂತೋಷ, ನೆಮ್ಮದಿ ಸಿಗುತ್ತದೆ. ಆದ್ರೆ ಈಗಿನ ಕಾಲದಲ್ಲಿ ಕಚೇರಿ ಕೆಲಸವನ್ನು ಖುಷಿಯಾಗಿ ಮಾಡೋರು ಸಿಗೋದೇ ಅಪರೂಪ. ಕಾಟಾಚಾರಕ್ಕೆ ಕೆಲಸ ಮಾಡೋರು ತಮ್ಮ ಮಾನಸಿಕ ಆರೋಗ್ಯವನ್ನೂ ಹಾಳುಮಾಡಿಕೊಳ್ತಾರೆ.
 

Best Tips For Good Mental Health In The Workplace

ಉದ್ಯೋಗ ಮಾಡುವುದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಹೊಟ್ಟೆ ತುಂಬಿಸಿಕೊಳ್ಳಲು, ಬದುಕು ನಡೆಸಲು ಕೆಲಸ ಮಾಡುವುದು ಅನಿವಾರ್ಯ. ಕೆಲಸವಿಲ್ಲದೆ, ಕೈನಲ್ಲಿ ಹಣವಿಲ್ಲದೆ ಬದುಕು ನಡೆಸುವುದು ಕಷ್ಟ. ಹಾಗಾಗಿಯೇ ಪ್ರತಿಯೊಬ್ಬರೂ ಇದಕ್ಕೆ ಮಹತ್ವ ನೀಡುತ್ತಾರೆ. ಆದ್ರೆ ಈ ಕೆಲಸ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಆನಂದವನ್ನು ನೀಡುತ್ತದೆ. ಕೆಲಸವನ್ನು ಕೆಲವರು ಉತ್ಸಾಹದಿಂದ ನೋಡ್ತಾರೆ. ಮತ್ತೆ ಕೆಲವರು ಗೌರವ, ಘನತೆ ಹೆಚ್ಚಿಸುತ್ತದೆ ಎಂಬ ದೃಷ್ಟಿಯಿಂದ ನೋಡ್ತಾರೆ. ಮತ್ತೆ ಕೆಲವರು ಬದುಕಲು ಇದೇ ಆಸರೆ ಎನ್ನುವ ದೃಷ್ಟಿಕೋನದಲ್ಲಿ ನೋಡ್ತಾರೆ. 

ಕೆಲಸ (Work) ಮಾಡುವುದ್ರಿಂದ ಧನಾತ್ಮಕ ಹಾಗೂ ಋಣಾತ್ಮಕ ಎರಡೂ ಪರಿಣಾಮ ಉಂಟಾಗುತ್ತದೆ. ಕೆಲವರಿಗೆ ಕೆಲಸ ಸಂತೋಷ ನೀಡುವ ಬದಲು ಒತ್ತಡವನ್ನುಂಟು ಮಾಡುತ್ತದೆ. ಕೆಲಸದಿಂದ ಮಾನಸಿಕ ಆರೋಗ್ಯ (Health) ವೃದ್ಧಿಸಿದೆ ಎನ್ನುವವರು ಬಹಳ ಕಡಿಮೆ. ಸಾಮಾನ್ಯವಾಗಿ ಬಹುತೇಕ ಜನರು ತಾವು ಮಾಡುವ ಕೆಲಸವನ್ನು ಅತಿ ಕಡಿಮೆ ಆನಂದಿಸುತ್ತಾರೆ. ಅವರು ಒತ್ತಡ (Stress) ಕ್ಕೆ ಒಳಗಾಗೋದೇ ಹೆಚ್ಚು. ಇದ್ರಿಂದ ನಮ್ಮ ಆರೋಗ್ಯ ಹದಗೆಡುತ್ತದೆ. ಕೆಲಸದಿಂದ ನಮ್ಮ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮವಾಗುತ್ತದೆ, ಅದ್ರಿಂದ ಹೊರಗೆ ಬರೋದು ಹೇಗೆ ಎಂಬುದನ್ನು ನಾವಿಂದು ಹೇಳ್ತೇವೆ.

Health Tips: ಬಿಪಿ, ಕೊಲೆಸ್ಟ್ರಾಲ್ ಕಂಟ್ರೋಲ್‌ನಲ್ಲಿಡಲು ಈ ಸ್ಪೆಷಲ್ ಟೀ ಕುಡೀರಿ ಸಾಕು

ಬರ್ನೌಟ್ ಸಮಸ್ಯೆ : ಕೆಲಸವನ್ನು ಎಂಜಾಯ್ ಮಾಡದೆ ಅದನ್ನು ಕೆಲಸವೆಂದು ನೋಡಿದಾಗ ಒತ್ತಡ ಹೆಚ್ಚಾಗುತ್ತದೆ. ಅದು  ಮಾನಸಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ದೇಹ ಅನೇಕ ರೋಗಕ್ಕೆ ತುತ್ತಾಗುತ್ತದೆ. ಇದನ್ನು ಎಂಪ್ಲಾಯ್ ಬರ್ನೌಟ್ ಎಂದು ಕರೆಯಲಾಗುತ್ತದೆ. ಎಂಪ್ಲಾಯ್ ಬರ್ನೌಟ್ ಅಂದ್ರೆ ಒತ್ತಡದಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆ. ಇದು ವೈಯಕ್ತಿಕ ಹಾಗೂ ವೃತ್ತಿ ಎರಡೂ ಜೀವನದ ಮೇಲೆ ಪರಿಣಾಮ ಬೀರುತ್ತದೆ. 

ಆತಂಕ ಮತ್ತು ಖಿನ್ನತೆ (anxiety and depression) ಕಾಡ್ಬಹುದು : ಕೆಲಸ ಮಾಡಲು ಮೂಡ್ ಇಲ್ಲ ಎಂದಾಗ ಅದು ನಿಮ್ಮ ಕೆಲಸವನ್ನು ಹಾಳು ಮಾಡುತ್ತದೆ. ನೀವು ಮನಸ್ಸಿಟ್ಟು ಕೆಲಸ ಮಾಡಿಲ್ಲ ಎಂದಾಗ ಅದು ನಿಮ್ಮ ಆದಾಯವನ್ನು ಕಡಿಮೆ ಮಾಡುತ್ತದೆ. ಕೆಲಸ ಸಂಬಂಧಿತ ಒತ್ತಡ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆ ಉಂಟುಮಾಡಬಹುದು. ಕಳಪೆ ಮಾನಸಿಕ ಆರೋಗ್ಯ ಹೊಂದಿರುವ ಉದ್ಯೋಗಿ ಶೇಕಡಾ 100ರಷ್ಟು ಫಲಿತಾಂಶ ನೀಡಲು ಸಾಧ್ಯವಿಲ್ಲ. 

ಊಟದ ಮಧ್ಯೆ ನೀರು ಕುಡಿಯೋದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?

ನಿಮ್ಮ ಮಾನಸಿಕ ಸ್ಥಿತಿ (Mental Health) ಹಾಳು ಮಾಡುತ್ತೆ ಇದು : ಕೆಲಸ ಸಂತೋಷ ನೀಡದೆ ಹೋದ್ರು ಸಮಸ್ಯೆಯಾಗಬಾರದು. ಅನೇಕ ಬಾರಿ ನಮ್ಮ ಮಾನಸಿಕ ಸ್ಥಿತಿ ಹದಗೆಡಲು ಕೆಲಸದ ಸ್ಥಳದಲ್ಲಿ ನಡೆಯುವ ಕೆಲ ಘಟನೆ ಕಾರಣವಾಗುತ್ತದೆ.
• ನಿಮ್ಮ ಸಮಯ ಮುಗಿದಿದ್ದರೂ ನೀವು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾದಾಗ ನೀವು ಒತ್ತಡಕ್ಕೆ ಒಳಗಾಗ್ತೀರಿ.
• ಕೆಲಸ ಮುಗಿದು ಮನೆಗೆ ಹೋದ್ಮೇಲೆ ಮತ್ತೆ ಕರೆಸಿಕೊಂಡು ಕೆಲಸ ನೀಡ್ತಿದ್ದರೆ ಅದು ಕೂಡ ನಿಮ್ಮ ಮನಸ್ಥಿತಿ ಹಾಳು ಮಾಡುತ್ತದೆ.
• ಕೆಲಸ ಮುಗಿದ ತಕ್ಷಣ ನೀವು ಕಚೇರಿ ಬಿಟ್ಟರೂ ನೀವು ಕೆಲವೊಮ್ಮೆ ಗೇಲಿಗೆ ಒಳಗಾಗ್ತೀರಾ.
• ಹೆಚ್ಚುವರಿ ಕೆಲಸ ಪಡೆಯಲು ನೀವು ಹಿಂದೇಟು ಹಾಕ್ತಿದ್ದೀರಾ ಎಂದು ಕಚೇರಿಯಲ್ಲಿ ಹೇಳಿದಾಗ ನಿಮ್ಮ ಮನಸ್ಥಿತಿ ಹಾಳಾಗುತ್ತದೆ.
• ಕಚೇರಿಯಲ್ಲಿ ನಿಮಗೆ ಸೂಕ್ತ ಸಲಹೆ ನೀಡುವ ವ್ಯಕ್ತಿ ಇಲ್ಲವೆಂದ್ರೂ ಅದು ನಿಮ್ಮನ್ನು ಒತ್ತಡಕ್ಕೆ ನೂಕುತ್ತದೆ.
• ನಿಮ್ಮ ಕಚೇರಿಯಲ್ಲಿ ಸ್ಪರ್ಧೆಯಿದ್ದು, ನಿಮ್ಮ ಕೆಲಸವನ್ನು ಗುರುತಿಸಿಲ್ಲವೆಂದ್ರೂ ನೀವು ಒತ್ತಡಕ್ಕೆ ಒಳಗಾಗೋದು ಸಹಜ.
• ಹೆಚ್ಚುವರಿ ಕೆಲಸ ಸಿಗ್ತಿದ್ದು, ಅದನ್ನು ಸರಿಯಾಗಿ ಮಾಡಿದ್ರೂ ಸಂಬಳ ಹೆಚ್ಚಾಗ್ತಿಲ್ಲ, ಬಡ್ತಿ ಸಿಕ್ಕಿಲ್ಲ ಎಂದಾಗ ನಿಮಗೆ ಕೆಲಸದ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. 

ಉದ್ಯೋಗ ಸ್ಥಳದಲ್ಲಿ ನಿಮ್ಮ ಮಾನಸಿಕ ಆರೋಗ್ಯವನ್ನು (Mental Health) ಹೀಗೆ ಕಾಪಾಡಿಕೊಳ್ಳಿ : 
• ಆತಂಕ ಹೆಚ್ಚಾಗ್ತಿದೆ ಎಂದಾದ್ರೆ ಸ್ವಲ್ಪ ಸಮಯ ಕೆಲಸಕ್ಕೆ ವಿಶ್ರಾಂತಿ ಪಡೆಯಿರಿ
• ಕಚೇರಿ ಸಮಯದ ನಂತ್ರ ಕೆಲಸ ಮಾಡಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿ. ಯಾರ ಮಾತಿಗೂ ಕಿವಿಗೊಡಬೇಡಿ. 
• ಯೋಗ, ಧ್ಯಾನ, ವ್ಯಾಯಾಮದ ಮೂಲಕ ಒತ್ತಡ ಕಡಿಮೆ ಮಾಡುವ ಪ್ರಯತ್ನನಡೆಸಿ. 
• ನಿಮ್ಮ ಕೆಲಸವನ್ನು ಗುರುತಿಸದೆ ಹೋದಾಗ ಅದನ್ನು ಪ್ರಶ್ನೆ ಮಾಡಿ.
 

Latest Videos
Follow Us:
Download App:
  • android
  • ios