Health Tips: ಲಿಚಿ ಹಣ್ಣಿನಲ್ಲಿ ಮಾತ್ರವಲ್ಲ ಎಲೆಯಲ್ಲೂ ಇದೆ ಔಷಧಿ ಗುಣ
ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಪ್ರತಿಯೊಂದು ಹಣ್ಣು ತನ್ನದೇ ವಿಶೇಷ ಗುಣವನ್ನು ಹೊಂದಿದೆ. ಇದೇ ರೀತಿ ಲಿಚಿ ಹಣ್ಣು ಸಾಕಷ್ಟು ಔಷಧಿ ಗುಣಗಳಿಂದ ಕೂಡಿದೆ. ಲಿಚಿ ಎಲೆಗಳು ಕೂಡ ಕ್ಯಾನ್ಸರ್ ಸೇರಿದಂತೆ ಕೆಮ್ಮು, ಜ್ವರದಂತಹ ಖಾಯಿಲೆಗೆ ಪರಿಹಾರ ನೀಡುತ್ತವೆ.
ಲಿಚಿ (litchi) ಹಣ್ಣನ್ನು ಅನೇಕರು ಇಷ್ಟಪಟ್ಟು ತಿನ್ನುತ್ತಾರೆ. ಲಿಚಿ ತಿನ್ನಲು ರುಚಿ (Taste) ಕರವಾಗಿರುವುದರ ಜೊತೆಗೆ ಆರೋಗ್ಯ (Health) ಕ್ಕೂ ತುಂಬಾ ಪ್ರಯೋಜನಕಾರಿ. ವಿಟಮಿನ್ ಬಿ6, ವಿಟಮಿನ್ ಸಿ, ನಿಯಾಸಿನ್, ರೈಬೋಫ್ಲಾವಿನ್, ಫೋಲೇಟ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಲಿಚಿ ಹಣ್ಣು ನಿಮ್ಮ ದೇಹ ಮತ್ತು ಹೊಟ್ಟೆಯನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಬರೀ ಲಿಚಿ ಹಣ್ಣು ಮಾತ್ರವಲ್ಲ ಲಿಚಿ ಎಲೆಗಳು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಲಿಚಿ ಎಲೆಗಳು ಯೂರಿಕ್ ಆಸಿಡ್, ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇಂದು ಲಿಚಿ ಎಲೆಗಳು ಎಷ್ಟು ಪ್ರಯೋಜನಕಾರಿ ಎಂಬ ಸಂಗತಿಯನ್ನು ನಾವು ಹೇಳ್ತೇವೆ.
ಲಿಚಿ ಎಲೆಯಲ್ಲಿದೆ ಕ್ಯಾನ್ಸರ್ ವಿರೋಧಿ ಗುಣಲಕ್ಷಣ : ಲಿಚಿ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಇದರ ಎಲೆಗಳನ್ನು ಸೇವಿಸುವುದರಿಂದ ಅನೇಕ ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರ ಎಲೆಗಳು ನಮ್ಮ ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
BELLY FAT: ಹೊಟ್ಟೆ ಕೊಬ್ಬು ಕರಗಿಸೋಕೆ ಇವುಗಳನ್ನ ತಿನ್ಲೇ ಬೇಕು!
ಹೃದಯ ರೋಗಗಳಿಗೆ ಮದ್ದು : ಹೃದಯ ಸಮಸ್ಯೆಗಳಿದ್ದರೆ ಲಿಚಿ ಎಲೆಗಳಿಂದ ಮಾಡಿದ ಚಹಾವನ್ನು ಸೇವಿಸಬೇಕು. ಇದು ನಿಮ್ಮ ರಕ್ತದೊತ್ತಡವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಲಿಚಿ ಎಲೆಗಳ ಚಹಾವು ನಿಮ್ಮ ಹೃದಯ ಬಡಿತವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಲಿಚಿ ಎಲೆಗಳ ಟೀ ಸೇವನೆ ಮಾಡಿದ್ರೆ ಹೃದಯಾಘಾತ ಮತ್ತು ಇತರ ಹೃದಯರಕ್ತನಾಳದ ಕಾಯಿಲೆಗಳಿಂದ ದೂರವಿರಬಹುದು.
ತೂಕ ಕಡಿಮೆ ಮಾಡಲು ಸಹಕಾರಿ : ಲಿಚಿ ಎಲೆಗಳಲ್ಲಿ ಬಹಳ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಇದಲ್ಲದೆ, ಅವುಗಳಲ್ಲಿ ಫೈಬರ್ ಕೂಡ ಕಂಡುಬರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಲಿಚಿ ಎಲೆಗಳನ್ನು ಸೇವಿಸಬಹುದು. ಇದು ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಇದು ಚರ್ಮವನ್ನು ಪೋಷಿಸಲು ಸಹ ಸಹಾಯ ಮಾಡುತ್ತದೆ. ಮೊಡವೆ ಮುಂತಾದ ಸಮಸ್ಯೆಗಳೂ ದೂರವಾಗುತ್ತವೆ.
ಕೆಮ್ಮಿಗೆ ಪರಿಹಾರ ನೀಡುತ್ತದೆ ಲಿಚಿ : ಲಿಚಿ ಎಲೆಗಳಲ್ಲಿ ಕಂಡುಬರುವ ಗುಣಲಕ್ಷಣಗಳು ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅದರ ಎಲೆಗಳಿಂದ ಚಹಾ ತಯಾರಿಸಿ ಸೇವಿಸಬೇಕು. ಶೀತ ಮತ್ತು ಜ್ವರದಿಂದ ನಿಮಗೆ ಪರಿಹಾರ ಸಿಗುತ್ತದೆ.
ಕೀಟ ಕಡಿತಕ್ಕೆ ಮದ್ದು : ಕೀಟ ಕಡಿತದ ಮೇಲೆ ಲಿಚಿ ಎಲೆಗಳನ್ನು ಸಹ ಬಳಸಬಹುದು. ಸಣ್ಣ ಕೀಟಗಳು ಕಚ್ಚಿದಾಗ ವಿಪರೀತ ನೋವುಂಟಾಗುತ್ತದೆ. ಜೊತೆಗೆ ಆ ಜಾಗ ಊದಿಕೊಳ್ಳುತ್ತದೆ. ಕೀಟ ಸಣ್ಣದಾದ್ರೂ ನೋವು ದೊಡ್ಡದು. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಲಿಚಿ ಎಲೆ ಬಳಸಬಹುದು. ಲಿಚಿ ಎಲೆಗಳನ್ನು ಪುಡಿಮಾಡಿ ನಂತರ ಅದರಿಂದ ಪೇಸ್ಟ್ ತಯಾರಿಸಿ. ತಯಾರಾದ ಪೇಸ್ಟ್ ಅನ್ನು ಕಚ್ಚಿದ ಪ್ರದೇಶದ ಮೇಲೆ ಅನ್ವಯಿಸಿ. ಕೆಲವೇ ಸಮಯದಲ್ಲಿ ನೋವು ಕಡಿಮೆಯಾಗುತ್ತದೆ.
ಟಿಪ್ ಟಾಪಾಗಿದ್ದರೂ ಆ ಜಾಗವನ್ನೇಕೆ ಕೆಲ ಗಂಡಸರು ತುರಿಸಿಕೊಳ್ಳುತ್ತಿರುತ್ತಾರೆ?
ಊತ ಮತ್ತು ನೋವ ಶಮನಕ್ಕೆ ಪರಿಹಾರ : ಲಿಚಿ ಎಲೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ನಿಮ್ಮ ದೇಹದಲ್ಲಿ ಸಂಭವಿಸುವ ಯಾವುದೇ ರೀತಿಯ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಜೊತೆಗೆ ವಿಟಮಿನ್ ಸಿ ಸಹ ಇದರಲ್ಲಿ ಕಂಡುಬರುತ್ತದೆ. ಇದಲ್ಲದೆ, ಸುಕ್ರೋಸ್, ಫ್ರಕ್ಟೋಸ್, ಗ್ಲೂಕೋಸ್ ಕೂಡ ಇದರಲ್ಲಿ ಕಂಡುಬರುತ್ತವೆ.
ಕರುಳಿನ ಆರೋಗ್ಯಕ್ಕೆ ಒಳ್ಳೆಯದು ಲಿಚಿ ಎಲೆ : ಲಿಚಿ ಎಲೆಗಳಲ್ಲಿ ಫೈಬರ್ ಕಂಡುಬರುತ್ತದೆ. ಇದು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್-ಬಿ ಕಾಂಪ್ಲೆಕ್ಸ್ ಇದರ ಎಲೆಗಳಲ್ಲಿ ಕಂಡುಬರುತ್ತದೆ. ನಿಮ್ಮ ದೇಹವನ್ನು ದೀರ್ಘಕಾಲದವರೆಗೆ ಚೈತನ್ಯವಾಗಿಡಲು ಇದು ನೆರವಾಗುತ್ತದೆ.