Asianet Suvarna News Asianet Suvarna News

ಟಿಪ್ ಟಾಪಾಗಿದ್ದರೂ ಆ ಜಾಗವನ್ನೇಕೆ ಕೆಲ ಗಂಡಸರು ತುರಿಸಿಕೊಳ್ಳುತ್ತಿರುತ್ತಾರೆ?

ಕೆಲವರು ಬೇಸಿಗೆಯಲ್ಲಿ, ಮತ್ತೆ ಕೆಲವರು ಮಳೆಯಲ್ಲಿ...ಹೀಗೆ ಕೆಲವರಿಗೆ ಪ್ರೈವೇಟ್ ಜಾಗದಲ್ಲಿ ಸದಾ ತುರಿಸಿಕೊಳ್ಳುವ ಅಭ್ಯಾಸವಿರುತ್ತೆ. ನೈರ್ಮಲ್ಯ ಕೊರತೆ ಒಂದು ಕಾರಣ ಹೌದು. ಆದರೆ, ಅದನ್ನು ಹೊರತು ಪಡಿಸಿ, ಇದು ಲೈಂಗಿಕ ಬಯಕೆಯನ್ನು ಎಕ್ಸ್‌ಪ್ರೆಸ್ ಮಾಡೋ ವಿಧಾನವೂ ಇರಬಹುದಾ? 

Men face itching problem due to allergy but needs counselling some times
Author
Bengaluru, First Published May 30, 2022, 10:05 AM IST

ಸರಿಯಾಗಿ ಒಗೆಯದೇ ಬಳಸುವ ಒಳ ಉಡುಪುಗಳು (Innerwear), ಚೆನ್ನಾಗಿ ಒಗೆದರೂ ಬಿಸಿಲಿನಲ್ಲಿ ಸಿರಿಯಾಗಿ ಒಣಗಿಸದೇ ಹೋದರೆ ಸಾಮಾನ್ಯವಾಗಿ ಪ್ರೈವೇಟ್ ಜಾಗದಲ್ಲಿ (Private Part) ತುರಿಕೆಯಾಗುತ್ತೆ. ಅದರಲ್ಲಿಯೂ ಬೆವರಿನಿಂದ (Sweat) ಬೇಸಿಗೆಯಲ್ಲಿ ಈ ಕಾಟ ಹೆಚ್ಚು. ಇನ್ನು ಮಳೆಗಾಲದಲ್ಲಿ (Monsoon) ಸರಿಯಾಗಿ ಒಣಗದ ಒಳ ಉಡುಪುಗಳಿಂದ ಕೆಲವರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಟಿಪ್ ಟಾಪ್ ಇರೋ ಕೆಲವರಂತೂ, ಆ ಜಾಗ ತುರಿಸಿಕೊಂಡರೆ ನೋಡಲು ಸುತ್ತಮುತ್ತಲಿನಲ್ಲಿಇರೋರಿಗೆ ಹಿಂಸೆ ಅನ್ಸುತ್ತೆ. ಅಷ್ಟಕ್ಕೂ ಕೆಲವರ ಈ ಸಮಸ್ಯೆಗೆ ಬೇರೆ ಕಾರಣಗಳೂ ಇರುತ್ತೆ ಎಂಬುವುದು ಗೊತ್ತಾ? 

ಅಲರ್ಜಿ ಇರಬಹುದು. ಏನೋ ಕಾರಣಕ್ಕೆ ತುರಿಕೆ ಶುರುವಾಗಿದೆ ಎಂದಾಗ ಅಲರ್ಟ್ ಆಗಿರಬೇಕು. ಹೆಚ್ಚು ದಿನ ಸಮಸ್ಯೆ ಕಾಡದಂತೆ ಗಮನಿಸಿಕೊಳ್ಳಬೇಕು. ಆದರೆ, ಏನೂ ಇಲ್ಲ, ಆದರೂ ತುರಿಸಿಕೊಳ್ಳುವ ಚಟ ಕೆಲವರನ್ನು ಕಾಡುತ್ತೆ. ಅದನ್ನೇ ಅಭ್ಯಾಸ ಮಾಡಿಕೊಂಡು ಬಿಡುತ್ತಾರೆ. ಬಿಡಬೇಕೆಂದರೂ ಬಿಡಲಾಗೋಲ್ಲ. ಪದೆ ಪದೇ ಅದೇ ಕೆಲಸ ಮಾಡೋದ್ರಿಂದ ಅವರ ಮನಸ್ಸಿಗೆ ಏನೋ ಮುದ ನೀಡುತ್ತಿರುತ್ತೆ. ಆದರೆ, ಇಂಥ ಅಭ್ಯಾಸಗಳಿಂದ ಪುರುಷರು ಸಹೋದ್ಯೋಗಿಗಳಿಂದಲೂ (Colleagues) ಟೀಕೆಗೆ ಗುರಿಯಾಗಬೇಕಾಗುತ್ತೆ. ತಪ್ಪು ಅಂತ ಗೊತ್ತಿದ್ದರೂ ಬಿಡಲು ಮನಸ್ಸು ಒಪ್ಪುತ್ತಿರೋಲ್ಲ. ಪದೆ ಪದೇ ಎದುರಿಸುವ ಈ ಸಮಸ್ಯೆಯಿಂದ, ಕಾಲೆಳೆಸಿ ಕೊಳ್ಳುವುದು ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಈ ಚಟದಿಂದ (Addiction) ಹೊರ ಬರಲಾಗದೇ ಮಾನಸಿಕ ತೊಳಲಾಟವನ್ನೂ ಅನುಭವಿಸುತ್ತಾರೆ. ಸಹಜವಾಗಿಯೇ ಇಂಥ ಅಭ್ಯಾಸಗಳು ಮನುಷ್ಯನ ಆತ್ಮವಿಶ್ವಾಸವನ್ನೇ (Confidence) ಕಸಿಯುವ ಸಾಧ್ಯತೆಯೂ ಇರುತ್ತೆ. 

ಹನಿಮೂನ್ ನಂತ್ರ ಮಹಿಳೆಯರು ಆಸ್ಪತ್ರೆಗೆ ಏಕೆ ಬರ್ತಾರೆ?

ತೊಡೆ ಸಂಧಿ, ಮರ್ಮಾಂಗದ ಜಾಗದಲ್ಲಿ ತುರಿಕೆ ಕಾಣಿಸಿಕೊಂಡರೆ ಮೊದ ಮೊದಲು ಬಾತ್ ರೂಮಿಗೆ ಬಾಧೆ ತೀರಿಸಿಕೊಂಡು ಬರ್ತಾರೆ. ಆದರೆ, ಬರ್ತಾ ಬತ್ತಾ ಅದೇ ಅವರಿಗೆ ಹಿತ ಅನುಭವ ನೀಡಲು ಶುರು ಮಾಡುತ್ತೆ. ಪದೆ ಪದೇ ಆ ಕೆಲಸ ಮಾಡಬೇಕು ಅನ್ಸುತ್ತೆ. ಬಾತ್ ರೂಮಿಗೆ ಎದ್ದು ಹೋಗೋದು ಕಡಿಮೆ ಆಗುತ್ತೆ. ಆದರೆ, ತುರಿಸಿಕೊಳ್ಳುವ ಚಟ ನಿಲ್ಲೋಲ್ಲ. ಎಲ್ಲಿಯಾಯಿತೂ ಅಲ್ಲಿಯೇ ತಮ್ಮಅರಿವಿಗೂ ಬಾರದಂತೆ ಆ ಭಾಗಗಳನ್ನು ತುರಿಸಿಕೊಳ್ಳಲು ಶುರು ಮಾಡುತ್ತಾರೆ. ಸಹೋದ್ಯೋಗಿಗಳು ನೋಡುವ ದೃಷ್ಟಿಯಿಂದ ತಪ್ಪೆಂದು ಗೊತ್ತಾದರೂ ಬಿಡಲು ಮನಸ್ಸು ಒಪ್ಪೋಲ್ಲ, ಅನ್ನೋದು ಹಲವರ ನೋವು. 

ತುರಿಕೆ ಸಮಸ್ಯೆಗೇನು ಪರಿಹಾರ? 
ಕೆಲವೊಮ್ಮೆ ಅಲರ್ಜಿ ಗಮನಕ್ಕೆ ಬಾರದೇ ಹೋದರೂ ಇಂಥ ತುರಿಕೆಗಳು ಶುರುವಾಗುತ್ತೆ. ಫಂಗಲ್ ಸೋಂಕು ಸಾಮಾನ್ಯವಾಗಿ ಕಾಡೋ ಸಮಸ್ಯೆ. ಆದರೆ, ಮನಸ್ಸಿಗೆ ಹಿತ ಎನಿಸುತ್ತೆ ಎಂಬ ಕಾರಣದಿಂದ ತುರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ, ಬೇರೆ ಏನೋ ಮಾನಸಿಕ ಸಮಸ್ಯೆ ಇರಬಹುದು. ಲೈಂಗಿಕ ತೃಷೆ ತೀರದಾಗಲೂ ಇಂಥ ಚಟವನ್ನು ಅಭ್ಯಾಸ ಮಾಡಿ ಕೊಳ್ಳುವ ಸಾಧ್ಯತೆ ಇರುತ್ತೆ. ಏನೇ ಮಾಡಿದರೂ ಈ ಚಟ ಬಿಡೋದು ಕಷ್ಟ ಎನಿಸುತ್ತಿದ್ದರೆ, ಮಾನಸಿಕ ತಜ್ಞರ ಸಲಹೆ ಅಗತ್ಯವಿದೆ ಎಂದರ್ಥ. ನಿಮ್ಮ ಮನಸ್ಸಿನ ದುಗುಡವನ್ನು ಪರೀಕ್ಷಿಸಿ, ಅದಕ್ಕೊಂದು ಸೂಕ್ತ ಸಲಹೆ ನೀಡಿ, ಒತ್ತಡ (stress), ತಳಮಳದಿಂದ ಹೊರ ಬರಲು ಸಹಕರಿಸುತ್ತಾರೆ. 

ತಲೆ ಹೊಟ್ಟಿಗ ೆಬೇಡ ಸಲ್ಲದ ನಿರ್ಲಕ್ಷ್ಯ

ಹಾಗೆಯೇ ಬಿಟ್ಟು ಬಿಟ್ಟರೆ ತುರಿಸಿ, ತುರಿಸಿ ಆ ಜಾಗದಲ್ಲಿ ಗಾಯವಾಗಿ, ಅಲ್ಲಿಯೇ ಸೋಂಕು ಶುರುವಾಗಿ ಮತ್ತೊಂದು ಸಮಸ್ಯೆಗೂ ಕಾರಣವಾಗುತ್ತೆ. ಆದ ಗಾಯ ಬೇಗ ಮಾಯೋಲ್ಲ. ಹಾಗಾಗಿ ಇಂಥದ್ದೊಂದು ಸಮಸ್ಯೆ ಶುರುವಾಗಿದೆ ಎನ್ನುವಾಗಲೇ ಹೆಚ್ಚು ಅಲರ್ಟ್ ಆಗಿ, ಪರಿಹಾರ (Solution) ಕಂಡು ಕೊಳ್ಳಲು ಮುಂದಾಗೋದು ಒಳ್ಳೆಯದು. ಒಟ್ಟಿನಲ್ಲಿ ಸಣ್ಣ ದೈಹಿಕ ಸಮಸ್ಯೆಯೊಂದು ಚಟವಾಗುವ ಮುನ್ನ, ದೊಡ್ಡ ಮಾನಸಿಕ ಸಮಸ್ಯೆಯಾಗಿ ಬದಲಾಗುವು ಮುನ್ನ ಸರಿ ಮಾಡಿಕೊಳ್ಳುವುದ ಒಳ್ಳೆಯದು. 

Latest Videos
Follow Us:
Download App:
  • android
  • ios