Health Tips : ಮೊಸರಿನ ಜೊತೆ ಚಪಾತಿ ತಿಂದು ಆರೋಗ್ಯ ಕಾಯ್ದುಕೊಳ್ಳಿ

ಮೊಸರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಚಪಾತಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇವೆರಡನ್ನೂ ಒಟ್ಟಿಗೆ ಸೇರಿಸಿ ತಿಂದ್ರೆ ಸಾಕಷ್ಟು ಪ್ರಯೋಜನ  ಪಡೆಯಬಹುದು. ಇಂದು ಚಪಾತಿ – ಮೊಸರು ಮಿಕ್ಸ್ ಮಾಡಿ ತಿಂದ್ರೆ ಏನೆಲ್ಲ ಆಗುತ್ತೆ ಅನ್ನೋದನ್ನು ನಾವು ಹೇಳ್ತೇವೆ.
 

Benefits Of Eating Curd And Roti

ಹಾಲು ಮತ್ತು ಹಾಲಿನ ಉತ್ಪನ್ನಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.  ಹಾಲು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿ ಒಂದು ಮೊಸರು. ಮೊಸರು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಜೊತೆಗೆ ಇದು ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 2, 6, 12, ರೈಬೋಫ್ಲಾವಿನ್‌ನಂತಹ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದರಿಂದಾಗಿ ಮೊಸರಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಜನರು ಮೊಸರನ್ನು ರೈತಾ, ಲಸ್ಸಿ, ಸ್ಮೂಥಿ ಸೇರಿದಂತೆ ಹಲವು ವಿಧಾನಗಳಲ್ಲಿ ಸೇವಿಸುತ್ತಾರೆ. ಅನ್ನದ ಜೊತೆ ಮೊಸರು ಸೇವನೆ ಮಾಡಲು ಅನೇಕರು ಇಷ್ಟಪಡ್ತಾರೆ. ಮತ್ತೆ ಕೆಲವರಿಗೆ ಚಪಾತಿ ಜೊತೆ ಮೊಸರು ಇರಬೇಕು. ಮೊಸರು, ಸಕ್ಕರೆ ಮಿಕ್ಸ್ ಮಾಡಿ ಚಪಾತಿ ಜೊತೆ ಸೇವನೆ ಮಾಡ್ತಾರೆ. ಮೊಸರನ್ನು ರೊಟ್ಟಿಯೊಂದಿಗೆ ಸೇವಿಸಿದರೆ ರುಚಿ ಮಾತ್ರ ಹೆಚ್ಚಾಗೋದಿಲ್ಲ, ಇದ್ರಿಂದ ಹಲವಾರು ಪ್ರಯೋಜನಗಳಿವೆ. ಇದ್ರಿಂದ ಹಲವಾರು ಗಂಭೀರ ಕಾಯಿಲೆಗಳು ಸಹ ದೂರವಾಗುತ್ತವೆ. ಮೊಸರು ಮತ್ತು ರೊಟ್ಟಿ ತಿನ್ನುವುದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವು ಹೇಳ್ತೇವೆ. 

ಮೊಸರು (Yogurt) ಮತ್ತು ರೊಟ್ಟಿ ತಿನ್ನುವುದರಿಂದ ಆಗುವ ಪ್ರಯೋಜನಗಳು  :  

ಜೀರ್ಣಕ್ರಿಯೆ (Digestion ) ಉತ್ತಮ :  ನೀವು ರೊಟ್ಟಿಯೊಂದಿಗೆ ಮೊಸರನ್ನು ಸೇವಿಸಿದರೆ  ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಪೋಷಕಾಂಶ (nutrient) ವನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ. ಇದು ನಿಮ್ಮ ಜೀರ್ಣ ಶಕ್ತಿಯನ್ನು ಕೂಡ ಬಲಗೊಳಿಸುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ದೂರ : ಮೊಸರನ್ನು ಅತ್ಯುತ್ತಮ ಪ್ರೋಬಯಾಟಿಕ್‌ಗಳಲ್ಲಿ ಒಂದೆಂದು ಪರಿಗಣಿಸಿದರೆ, ರೋಟಿ ಫೈಬರ್‌ನಲ್ಲಿ ಸಮೃದ್ಧವಾಗಿದೆ. ರೊಟ್ಟಿ ಹಾಗೂ ಮೊಸರು ಈ ಎರಡನ್ನೂ ಒಟ್ಟಿಗೆ ಸೇವನೆ ಮಾಡುವುದ್ರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಇದು ಹೆಚ್ಚಿಸುತ್ತದೆ. ಇದು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಅಜೀರ್ಣ, ಮಲಬದ್ಧತೆ, ಗ್ಯಾಸ್, ಹೊಟ್ಟೆ ಉಬ್ಬುವುದು, ಕರುಳಿನಲ್ಲಿ ಉಬ್ಬಿನ ಸಮಸ್ಯೆ ಇತ್ಯಾದಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

Health Tips : ಆಲೂಗಡ್ಡೆ ಜ್ಯೂಸ್ ಕುಡಿದು ಆರೋಗ್ಯ ಕಾಪಾಡ್ಕೊಳ್ಳಿ

ರೋಗನಿರೋಧಕ ಶಕ್ತಿ ಹೆಚ್ಚಳ : ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಈ ಮೊಸರು ಹಾಗೂ ರೊಟ್ಟಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಶೀತ , ಜ್ವರ, ವೈರಲ್ ಸೋಂಕುಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮಾನಸಿಕ ಆರೋಗ್ಯ ಸುಧಾರಣೆ : ಮೊಸರು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ರೊಟ್ಟಿಯೊಂದಿಗೆ ಮೊಸರಿನ ಸೇವನೆಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮಗೆ ಶಾಂತ ಮತ್ತು ಸಂತೋಷವನ್ನು ನೀಡುತ್ತದೆ.

ರಕ್ತದೊತ್ತಡ ನಿಯಂತ್ರಣ : ನೀವು ಪ್ರತಿದಿನ ರೊಟ್ಟಿಯೊಂದಿಗೆ ಮೊಸರನ್ನು ಸೇವಿಸಿದರೆ ಅದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.

ಮೂಳೆಗಳು ಬಲಗೊಳ್ಳುತ್ತವೆ : ಮೊಸರಿನಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಕಾರಣ, ಇದು ಮೂಳೆಗಳನ್ನು ಬಲಪಡಿಸಲು ತುಂಬಾ ಸಹಾಯಕವಾಗಿದೆ. ಇದು ನಿಮ್ಮ ಹಲ್ಲುಗಳನ್ನು ಬಲವಾಗಿಸಲು ತುಂಬಾ ನೆರವಾಗುತ್ತದೆ. ಮೂಳೆ ಮುರಿತ  ಮತ್ತು ಕೀಲು ನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

Gastric Headache: ಗ್ಯಾಸ್ಟ್ರಿಕ್‌ ತಲೆನೋವೇ? ಶೀಘ್ರ ಪರಿಹಾರ ಇಲ್ಲಿದೆ

ಇದನ್ನು ಗಮನಿಸಿ : ಮೊಸರು ಮತ್ತು ರೊಟ್ಟಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮೊಸರಿನ ಜೊತೆ ರೊಟ್ಟಿ ಸೇವನೆ ಮಾಡಲು ಮುಂದಾಗಿದ್ರೆ  ಮಧ್ಯಾಹ್ನದ ಸಮಯದಲ್ಲಿ ಅವುಗಳನ್ನು ಸೇವಿಸುವುದು ಉತ್ತಮ. ಊಟದಲ್ಲಿ ಮೊಸರನ್ನು ಆಹಾರದೊಂದಿಗೆ ಸೇವಿಸಬಹುದು. ಆದರೆ ರಾತ್ರಿಯ ಊಟದಲ್ಲಿ ಮೊಸರು ಸೇವಿಸುವುದನ್ನು ತಪ್ಪಿಸಬೇಕು.  ಏಕೆಂದರೆ ರಾತ್ರಿ ಮೊಸರು ಸೇವನೆ ಮಾಡಿದ್ರೆ ಇದು ಪ್ರಯೋಜನಕ್ಕಿಂತ ಆರೋಗ್ಯಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. 
 

Latest Videos
Follow Us:
Download App:
  • android
  • ios