ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ, ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ!
ರಾಜ್ಯದಲ್ಲಿ ಕೋವಿಡ್ 19 ಪ್ರಕರಣದಲ್ಲಿ ಏರಿಕೆಯಾಗಿದ್ದು, ಸಂಭಾವ್ಯ ನಾಲ್ಕನೇ ಅಲೆಯನ್ನು ಎದುರಿಸಲು ಈಗಾಗಲೇ ತಯಾರಿ ಆರಂಭವಾಗಿದೆ. ಬೆಂಗಳೂರಿನಲ್ಲಿ ಭಾನುವಾರ 291 ಪ್ರಕರಣಗಳು ಹಾಗೂ 1 ಸಾವು ದಾಖಲಾದ ಹಿನ್ನಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಬೆಂಗಳೂರು (ಜೂನ್ 6): ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೋವಿಡ್ (Covid-19 Case) ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ (Health Department ) ಅಲರ್ಟ್ ಆಗಿದೆ. ಕೋವಿಡ್-19 ಪ್ರಕರಣಗಳಲ್ಲಿ ಕೊಂಚ ಏರಿಕೆ ಹಾಗೂ ಸಂಭಾವ್ಯ ನಾಲ್ಕನೇ ಅಲೆಯ (Fourth Wave) ಆತಂಕ ಕಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನಲ್ಲಿ ಮಾಸ್ಕ್ ಅನ್ನು ಕಡ್ಡಾಯ ಮಾಡಿದೆ.
ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮೊರೆ ಹೋಗಿದೆ. ಸೋಮವಾರ ರಾತ್ರಿ ಟಾಸ್ಕ್ ಫೋರ್ಸ್ (Task Force) ಜೊತೆ ಮಹತ್ವದ ಸಭೆ ನಡೆಯಲಿದೆ. ಕೋವಿಡ್ ಕೇಸ್ ಹೆಚ್ಚಳ ಕುರಿತಾಗಿಯೂ ಚರ್ಚೆ ನಡೆಯಲಿದೆ.
ನಾಲ್ಕನೇ ಅಲೆ ಎದುರಿಸಲು ಈಗಲಿಂದಲೇ ತಯಾರಿ ಶುರುವಾಗಿದ್ದು, ನಾಲ್ಕನೇ ಅಲೆಯಲ್ಲಿ ಎದುರಾಗಬಹುದಾದ ಕಂಟಕಗಳ ಬಗ್ಗೆ ಗಮನ ನೀಡಲಾಗುತ್ತಿದೆ. ಇವೆಲ್ಲದರ ಮುನ್ನೆಚ್ಚರಿಕೆಯಾಗಿ ಕೋವಿಡ್ ತಾಂತ್ರಿಕ ಸಲಹಾ ಸಭೆ ನಡೆಯಲಿದೆ. ನೆರೆಯ ರಾಜ್ಯಗಳ ಕೋವಿಡ್ ಸ್ಥಿತಿ ಗತಿ ಚರ್ಚೆ ನಡೆಯಲಿದ್ದು, ಅದರೊಂದಿಗೆ ರಾಜ್ಯದಲ್ಲಿ ಮತ್ತೆ ಜಿನೋಮಿಕ್ ಸೀಕ್ವೆನ್ಸ್ ಹೆಚ್ಚಳದ ಬಗ್ಗೆ ಸಲಹೆ ಪಡೆಯಲಾಗುತ್ತದೆ. ಕೋವಿಡ್ ಪರೀಕ್ಷೆ ಪ್ರಮಾಣದ ಹೆಚ್ಚಳಕ್ಕೂ ಸೂಚನೆ ನೀಡುವ ಸಾಧ್ಯತೆ ಇದೆ.
ಅದರೊಂದಿಗೆ ವಿಮಾನ ನಿಲ್ದಾಣಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡುವ ಸೂಚನೆಯೂ ಸಿಕ್ಕಿದ್ದು, ವಿದೇಶಿಗರು ಹಾಗೂ ಹೊರ ದೇಶಗಳಿಂದ ಬಂದವರನ್ನು ಕಟ್ಟುನಿಟ್ಟಿನ ಪರೀಕ್ಷೆ ನಡೆಸಲಾಗುವ ಸಾಧ್ಯತೆ ಇದೆ. ಇನ್ನು ಕೋವಿಡ್ ನಿಯಮವನ್ನು ಜಾರಿಗೆ ತರಬೇಕೇ ಬೇಡವೇ ಎನ್ನುವುದರ ಬಗ್ಗೆಯೂ ಚರ್ಚೆಯಾಗಲಿದೆ. ಐಐಎಸ್ಸಿ ವರದಿ ಕುರಿತೂ ಚರ್ಚೆಯಾಗಬಹುದು ಎನ್ನಲಾಗಿದೆ.
ಕಡ್ಡಾಯ ಮಾಸ್ಕ್ ಬೆಂಗಳೂರು ಹೊರತಾಗಿ ಉಳಿದ ಯಾವ ನಗರಗಳಿಗೆ ಬೇಕು ಎನ್ನುವದರೊಂದಿಗೆ. ಕೋವಿಡ್ ಕ್ಲಸ್ಟರ್ ನಲ್ಲಿ ಸೋಂಕು ಹರಡುವಿಕೆ, ಹೊಸ ವೇರಿಯೆಂಟ್ ಬಗ್ಗೆ ಚರ್ಚೆ ಸಾಧ್ಯತೆ ಇದೆ. ನಾಲ್ಕನೇ ಅಲೆ ರಾಜ್ಯಕ್ಕೆ ಯಾವಾಗ ಕಾಲಿಡಬಹುದು ಎನ್ನುವ ಬಗ್ಗೆಯೂ ಟಾಸ್ಕ್ ಫೋರ್ಸ್ ಚರ್ಚೆ ನಡೆಲಿದೆ. ಒಟ್ಟಾರೆಯಾಗಿ ಮತ್ತೊಮ್ಮೆ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಲು ಸಲಹೆ ಸಿಗುವ ಸಾಧ್ಯತೆ ಇದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಿಶೇಷ ಆಯುಕ್ತ ಹರೀಶ್ ಕುಮಾರ್, ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕಡ್ಡಾಯ ನಿಯಮಗಳನ್ನು ವಿಧಿಸಲಾಗಿದೆ. "ಶಾಪಿಂಗ್ ಮಾಲ್‌ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಮತ್ತು ಜನರು ಸೇರುವ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಬಿಬಿಎಂಪಿ ಮಾರ್ಷಲ್‌ಗಳು ನಿಯಮವನ್ನು ಜಾರಿಗೆ ತರಲು ಕಾರ್ಯ ನಿರ್ವಹಿಸುತ್ತಾರೆ." ಎಂದು ತಿಳಿಸಿದ್ದಾರೆ.
Norovirus ಕೋವಿಡ್ ನಡುವೆ ಭಾರತಕ್ಕೆ ನೊರೋವೈರಸ್ ಆತಂಕ, ಕೇರಳದಲ್ಲಿ 2 ಪ್ರಕರಣ ಪತ್ತೆ!
ಆದರೆ ಪ್ರಸ್ತುತ ಪಾಲಿಕೆಯು ಸರ್ಕಾರದ ಆದೇಶಕ್ಕೆ ಬದ್ಧವಾಗಿದೆ ಮತ್ತು ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಸ್ತುತ 16,000 ಜನರನ್ನು ಪರೀಕ್ಷಿಸುತ್ತಿರುವ ಪಾಲಿಕೆಯು ರೋಗಲಕ್ಷಣಗಳ ಆಧಾರದ ಮೇಲೆ 20,000 ಜನರನ್ನು ಪರೀಕ್ಷಿಸಲಿದೆ. ಏತನ್ಮಧ್ಯೆ, ಕೋವಿಡ್ -19 ಕಾರಣದಿಂದಾಗಿ 72 ವರ್ಷದ ಮಹಿಳೆಯ ಸಾವು ಕಂಡಿದ್ದಾರೆ. ಮಹಿಳೆ ಸಾಯುವ ಮೊದಲು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಆಕೆ ಚಿಕಿತ್ಸೆ ಪಡೆದರೂ, ಕೋವಿಡ್ ವೈರಸ್ ಗೆ ಬಲಿಯಾಗಿದ್ದಾಳೆ ಎನ್ನಲಾಗಿದೆ.
ಶಾರುಖ್, ಕತ್ರೀನಾ, ಫಡ್ನವೀಸ್‌ಗೆ ಕೋವಿಡ್ ದೃಢ: 4ನೇ ಅಲೆ ಭೀತಿ, ಗಣ್ಯರಿಗೆ ಸೋಂಕು!
ಏತನ್ಮಧ್ಯೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತಮ್ಮ ಸರ್ಕಾರವು ದೈನಂದಿನ ಪ್ರಕರಣಗಳ ಏರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಕೆಲವು ಕೋವಿಡ್ ನಿಯಂತ್ರಣ ಕ್ರಮಗಳನ್ನು ವಿಧಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಸೂಚಿಸಿದ್ದಾರೆ.