Norovirus ಕೋವಿಡ್ ನಡುವೆ ಭಾರತಕ್ಕೆ ನೊರೋವೈರಸ್ ಆತಂಕ, ಕೇರಳದಲ್ಲಿ 2 ಪ್ರಕರಣ ಪತ್ತೆ!

  • ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳದ ನಡುವೆ ಮತ್ತೊಂದು ಆತಂಕ
  • ತಿರುವನಂತಪುರದಲ್ಲಿ ಎರಡು ನೊರೋವೈರಸ್ ಪ್ರಕರಣ ಪತ್ತೆ
  • ಇಬ್ಬರು ಮಕ್ಕಳಲ್ಲಿ ನೊರೋವೈರಸ್ ಪ್ರಕರಣ ಪತ್ತೆ
     
Kerala confirmed two cases of Norovirus infected are primary school childrens ckm

ತಿರುವನಂತಪುರಂ(ಜೂ.06): ಕೊರೋನಾ ವಕ್ಕರಿಸಿದ ಬಳಿಕ ಹಲವು ವೈರಸ್‌ಗಳ ಆತಂಕ ಹೆಚ್ಚಾಗುತ್ತಲೇ ಇದೀಗ ಭಾರತದಲ್ಲಿ ನಾಲ್ಕನೇ ಅಲೆ ಭೀತಿ ಆರಂಭಗೊಂಡಿದೆ. ಇದರ ನಡುವೆ ಮಂಕಿಫಾಕ್ಸ್ ಭೀತಿಯೂ ಕಾಡುತ್ತಿದೆ. ಇದೀಗ ಹೊಸದಾಗ ನೊರೋವೈರಸ್ ಕಾಟ ಶುರುವಾಗಿದೆ. ಕೇರಳದ ತಿರುವನಂತಪುರದಲ್ಲಿ ಎರಡು ನೊರೋವೈರಸ್ ಪ್ರಕರಣ ಪತ್ತೆಯಾಗಿದೆ.

ತಿರುವನಂತಪುರಂ ಪ್ರಾಥಮಿಕ ಶಾಲೆಯ ಇಬ್ಬುರು ಮಕ್ಕಳಲ್ಲಿ ನೊರೋವೈರಸ್ ಪತ್ತೆಯಾಗಿದೆ. ಹೊಟ್ಟೆ ಮತ್ತು ಕರಳಿಗೆ ಅಂಟಿಕೊಳ್ಳುವ ಈ ವೈರಸ್, ವಾಂತಿ, ಭೇದಿ ಕಾರಣವಾಗಲಿದೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಲಿದೆ. ಇನ್ನು ಮಕ್ಕಳು ಹಾಗೂ ವೃದ್ಧರಿಗೆ ಈ ವೈರಸ್ ಅತೀ ಬೇಗನೆ ತಗುಲಲಿದೆ.

ಕೇರಳದಲ್ಲಿ ಆತಂಕಕ್ಕೆ ಕಾರಣವಾಗ್ತಿದೆ West Nile fever, ಇದು ಮಲೇರಿಯಾಗಿಂತಲೂ ಡೇಂಜರಾ ?

ಪ್ರಾಣಿ ಹಾಗೂ ಕಲುಷಿತ ನೀರು/ಆಹಾರದ ಮೂಲಕ ಹರಡುವ ನೋರೋವೈರಸ್‌ ಕೇರಳದ ವಯನಾಡಿನ 13 ಜನರಲ್ಲಿ ಪತ್ತೆಯಾಗಿದೆ. ನೋರೋ ವೈರಸ್‌ ಬಗ್ಗೆ ಆತಂಕ ಪಡಬೇಕಿಲ್ಲ. ಆದರೆ ಈ ಬಗ್ಗೆ ಜಾಗೃತರಾಗಿರಬೇಕು. ಕುಡಿಯುವ ನೀರಿನ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಮಾಂಸವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಿ 3-4 ದಿನಗಳಲ್ಲಿ ಗುಣಮುಖ ಮಾಡಬಹುದು ಎಂದು ಆರೋಗ್ಯ ಸಚಿವೆ ವೀಣಾ ಜಾಜ್‌ರ್‍ ಶುಕ್ರವಾರ ತಿಳಿಸಿದ್ದಾರೆ.

ನೋರೋವೈರಸ್‌ ಎಂಬುದು ವೈರಸ್ಸುಗಳ ಒಂದು ಗುಂಪು. ಇದು ಹೊಟ್ಟೆಮತ್ತು ಕರುಳನ್ನು ಹೆಚ್ಚಾಗಿ ಬಾಧಿಸುತ್ತದೆ. ತೀವ್ರ ತರದ ವಾಂತಿ ಮತ್ತು ಭೇದಿಗೆ ಕಾರಣವಾಗುತ್ತದೆ. ಇದು ಆರೋಗ್ಯವಂತರನ್ನು ಹೆಚ್ಚಾಗಿ ಬಾಧಿಸುವುದಿಲ್ಲ. ಆದರೆ ಮಕ್ಕಳು ಮತ್ತು ವಿವಿಧ ಕಾಯಿಲೆ ಇರುವವರನ್ನು ಈ ವೈರಸ್‌ ಬೇಗ ಆಕ್ರಮಣ ಮಾಡುತ್ತದೆ. ಪ್ರಾಣಿಗಳ ಮೂಲಕ ಹರಡುವ ವೈರಸ್‌, ಸೋಂಕಿತರ ಮನುಷ್ಯರ ನೇರ ಸಂಪರ್ಕದ ಮೂಲಕವೂ ಹರಡುತ್ತದೆ.

ನೊರೋ ವೈರಸ್ ಕಾಣಿಸಿಕೊಂಡವರಲ್ಲಿ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಳ್ಳಲಿದೆ. ಇನ್ನು ವಾಂತಿ, ಅತಿಸಾರ ಭೇದಿ,ಜ್ವರ, ತಲೆನೋವು, ಮೈಕೈನೋವು ಕಾಣಿಸಿಕೊಳ್ಳಲಿದೆ. ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅತೀ ಅವಶ್ಯಕವಾಗಿದೆ.

ಕಳೆದ ವರ್ಷದ ಇದೇ ನೊರೋವೈರಸ್ ಬ್ರಿಟನ್‌ನಲ್ಲಿ ಪತ್ತೆಯಾಗಿತ್ತು.  ಕೊರೋನಾ ಲಾಕ್‌ಡೌನ್ ಬಳಿಕ ಲಂಡನ್‌ನಲ್ಲಿ ಒಂದೇ ಸಮನೆ 154 ನೊರೋವೈರಸ್ ಪ್ರಕರಣ ಪತ್ತೆಯಾಗಿತ್ತು. 

ಮಂಕಿಪಾಕ್ಸ್ v/s ಚಿಕನ್ ಪಾಕ್ಸ್: ಎರಡೂ ಸೋಂಕಿನ ಮಧ್ಯೆ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ ?

ನೊರೋವೈರಸ್‌ಗೆ ಕಾರಣವೇನು?
ಸ್ವಚ್ಛವಾಗಿ ತೊಳೆಯದ ತಟ್ಟೆಗಳು, ಕೊಳೆ ನೀರು, ಅಶುಚಿ ಆಹಾರದ ಮೂಲಕ ನೊರೋವೈರಸ್‌ ಹರಡುತ್ತದೆ. ಸೋಂಕು ತಾಗಿದ 12ರಿಂದ 48 ಗಂಟೆಗಳ ಅವಧಿಯಲ್ಲಿ ವಾಂತಿ, ಭೇದಿ, ಹೊಟ್ಟೆನೋವು, ತಲೆನೋವು, ಜ್ವರ ಆರಂಭವಾಗುತ್ತದೆ.

ಆದರೆ ಇನ್ನೂ ಅಪಾಯಕಾರಿ ಎಂದರೆ ನೊರೋವೈರಸ್‌ ಪೀಡಿತನ ಮಲ ಹಾಗೂ ವಾಂತಿಯಲ್ಲಿ ಕೂಡ ವೈರಾಣುಗಳಿರುತ್ತವೆ. ನೊರೋವೈರಸ್‌ ಹೊಂದಿರುವವನ ಜತೆಗೆ ಆಹಾರ ಹಂಚಿಕೊಂಡು ತಿನ್ನುವುದೂ ಅಪಾಯಕರ. ಹೀಗಾಗಿ ಶುಚಿಯಾದ ಆಹಾರ, ನೀರನ್ನು ಸೇವಿಸುವುದು, ಶುಚಿಯಾದ ತಟ್ಟೆಬಳಸುವುದು ತೀರಾ ಅಗತ್ಯ. ಸ್ಯಾನಿಟೈಸರ್‌ ಅನ್ನು ಆಗಾಗ ಕೈಗೆ ಹಚ್ಚಿಕೊಳ್ಳುವುದು ಕ್ಷೇಮ.

ವಾಂತಿ-ಭೇದಿ ಆರಂಭವಾಗುವ ಕಾರಣ ಹೆಚ್ಚು ನೀರು ಸೇವಿಸಿ ಹಾಗೂ ಮಾಮೂಲಿ ಚಿಕಿತ್ಸೆ ಪಡೆದು ಇದರಿಂದ ಗುಣವಾಗಬಹುದು. ಗುಣವಾಗಲು 1ರಿಂದ 3 ದಿನ ಸಾಕು. ಆದರೆ ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯಪೀಡಿತರಿಗೆ ಇದರಿಂದ ಅಪಾಯ ಹೆಚ್ಚು. ಇಂಥವರನ್ನು ಆಸ್ಪತ್ರೆಗೆ ದಾಖಲಿಸಲೇಬೇಕು.
 

Latest Videos
Follow Us:
Download App:
  • android
  • ios